
ಅದು 2016. ಆಗ ಈ ನಟಿಗೆ ಕೇವಲ 15ರ ಹರೆಯ. 10ನೇ ತರಗತಿಯ ಮೆಟ್ಟಿಲು ಹತ್ತಿದ್ದಷ್ಟೇ. ಆದರೆ ಆಗಲೇ 100 ಕೋಟಿ ರೂಪಾಯಿ ಚಿಂದಿ ಉಡಾಯಿಸಿದಳು ಈ ಬಾಲೆ. ಮೊದಲ ನೋಟದಲ್ಲಿಯೇ ಎಲ್ಲರ ಮನಸ್ಸು ಗೆದ್ದು, ಕದ್ದು ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಳು. ತೀರ್ಪುಗಾರರ ವಿಶೇಷ ಪ್ರಶಸ್ತಿ ಈಕೆಗೆ ಸಿಕ್ಕಿತು. ಹೌದು. ಅವಳೇ ರಿಂಕು ರಾಜಗುರು. ಸಿನಿ ಪ್ರಿಯರಿಗೆ ಇದಾಗಲೇ ಇದು ಯಾವ ಚಿತ್ರ ಎಂದು ತಿಳಿದಿರಬಹುದು. ಅದೇ ಮರಾಠಿ ಮೂಲದ ಸೈರಾಟ್. ನಟಿಸಿದ ಮೊದಲ ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದುಕೊಂಡು, ಮೊದಲ ಚಿತ್ರ 100 ಕೋಟಿಗೂ ಅಧಿಕ ಗಳಿಸುವಂತೆ ಮಾಡಿದ ಕೀರ್ತಿ ಪಡೆದವರು ರಿಂಕು. ಈ ಚಿತ್ರ 2017ರಲ್ಲಿ ಕನ್ನಡದಲ್ಲಿಯೂ ಮನಸು ಮಲ್ಲಿಗೆಯಾಗಿ ರೀಮೇಕ್ ಆಯಿತು, ಅಲ್ಲಿಯೂ ಈಕೆಯೇ ನಾಯಕಿ!
ಮರಾಠಿಯ ಸೈರಾಟ್ ಚಿತ್ರ 2016ರಲ್ಲಿ ಕೇವಲ ನಾಲ್ಕು ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಿಸಲಾಗಿತ್ತು. ಆಗ ರಿಂಕು ಅವರಿಗೆ ಕೇವಲ 15 ವರ್ಷ ವಯಸ್ಸು. ಮೊದಲ ಚಿತ್ರವೇ ನೂರು ಕೋಟಿಗೂ ಮೀರಿ ಗಳಿಕೆ ಮಾಡಿತು. ರಿಂಕು ನಟನೆಗೆ ಜನರು ಫಿದಾ ಆದರು. ಮೊದಲ ಚಿತ್ರದಲ್ಲಿ ಸ್ಟಾರ್ ಪಟ್ಟ ಸಿಗುವುದು ಅತೀ ವಿರಳರಿಗೆ ಮಾತ್ರ. ಆದರೆ ಆಪಟ್ಟ ರಿಂಕುಗೆ ದಕ್ಕಿತ್ತು. ನಂತರ ಈ ಚಿತ್ರ, ಜಾಹ್ನವಿ ಕಪೂರ್ ಮತ್ತು ಶಾಹಿದ್ ಕಪೂರ್ ಸಹೋದರ ಇಶಾನ್ ಖಟ್ಟರ್ ನಟನೆಯಲ್ಲಿ ಬಾಲಿವುಡ್ಗೆ ರೀಮೇಕ್ ಆಯಿತು. ಈ ಇಬ್ಬರೂ ನಟರಿಗೆ ಬ್ರೇಕ್ ಕೊಟ್ಟ ಚಿತ್ರ ಕೂಡ ಇದು. 2017ರಲ್ಲಿ ಕನ್ನಡದಲ್ಲಿ ರೀಮೇಕ್ ಆದಾಗ, ರಿಂಕು ಅವರನ್ನೇ ನಾಯಕಿಯಾಗಿ ಮಾಡಲಾಯಿತು. ಸೈರಾಟ್ ಚಿತ್ರವನ್ನು ಅಪ್ಪಿಕೊಂಡಿದ್ದ ಕನ್ನಡಿಗರು ಮನಸು ಮಲ್ಲಿಗೆ ಚಿತ್ರಕ್ಕೆ ಯಾಕೋ ಅಷ್ಟು ಆಸಕ್ತಿ ತೋರಿದಂತೆ ಕಾಣಿಸಲಿಲ್ಲ. ಸೈರಾಟ್ ಅಬ್ಬರದ ನಡುವೆ, ಅದೇ ಕಥೆ, ಅದೇ ನಾಯಕಿ ಇದ್ದರೂ ಮನಸು ಮಲ್ಲಿಗೆ ಸೋತಿತು.
ಅದಕ್ಕೆ 'ಕಾಂಪ್ರಮೈಸ್' ಆದ್ರೆ ಮಾತ್ರ ನೀವು ಸೆಲೆಕ್ಟ್ ಅಂತಂದ್ರು! ಲಕ್ಷ್ಮೀ ನಿವಾಸ ಚಿನ್ನುಮರಿ ಸ್ಟೋರಿ ಕೇಳಿ...
ಇದಾದ ಬಳಿಕ ಯಾಕೋ ನಟಿ ಸಿನಿಮಾದಿಂದ ಅಂತರ ಕಾಯ್ದುಕೊಂಡರು. ಶಿಕ್ಷಣದ ಕಡೆ ಮಹತ್ವ ನೀಡಿದರು. ಅದಾದ ಕೆಲ ವರ್ಷಗಳ ಬಳಿಕ ವೆಬ್ ಸಿರೀಸ್ ಮೂಲಕ ಕಮ್‌ಬ್ಯಾಕ್ ಮಾಡಿದರು. 'ಹಂಡ್ರೆಡ್' ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. ಲಾಕ್ಡೌನ್ ಸಮಯದಲ್ಲಿ, ಈ ವೆಬ್ ಸೀರಿಸ್ ಕೂಡ ಸಾಕಷ್ಟು ಜನಮನ್ನಣೆ ಗಳಿಸಿತು. ಇದರಲ್ಲಿ ರಿಂಕು ಅವರದ್ದು ನೂರು ದಿನಗಳು ಮಾತ್ರ ಬದುಕುವ ಅವಧಿ ಸಿಕ್ಕ ನಾಯಕಿಯ ಕಥೆ. ಅಧಿಕಾರಿ ಪಾತ್ರವನ್ನು ಲಾರಾ ದತ್ತ ಕಾಣಿಸಿಕೊಂಡಿದ್ದರು.
ಬಳಿಕ ಅಮಿತಾಭ್ ಬಚ್ಚನ್ ನಟನೆಯ 'ಝುಂಡ್'ನಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡರೇ ವಿನಾ ಅಲ್ಲಿ ನಾಯಕಿಯಾಗಿ ನೆಲೆಯೂರಲು ರಿಂಕು ಯಾಕೋ ಇಷ್ಟ ಪಡಲಿಲ್ಲ. ಇದಾದ ಬಳಿಕ ಮೊದಲಿಗಿಂತಲೂ ಹಾಟ್ ಆಗಿ, ಯಂಗ್ ಆಗಿ ವೇದಿಕೆಯ ಮೇಲೆ ರಿಂಕು ಕಾಣಿಸಿಕೊಂಡಿದ್ದು ಅದರ ವಿಡಿಯೋ ವೈರಲ್ ಆಗುತ್ತಿದೆ. ನಟಿಯ ಬದಲಾದ ರೂಪಕ್ಕೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಸ್ಲಿಮ್ ಹಾಗೂ ಇನ್ನಷ್ಟು ಸೌಂದರ್ಯ ಹೆಚ್ಚಿಸಿಕೊಂಡಿರುವ ನಟಿಗೆ ಇನ್ನಷ್ಟು ಅವಕಾಶ ಸಿಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.
ಜಯಂತೂ ಅಲ್ಲ, ವಿಶ್ವನೂ ಅಲ್ಲ... ರುದ್ರನ ಜೊತೆ ಲಕ್ಷ್ಮೀ ನಿವಾಸ ಚಿನ್ನುಮರಿ ರೊಮಾನ್ಸ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.