ಸೈಫ್ ಅಲಿ ಖಾನ್ ಮಕ್ಕಳಿಗೂ ರಾಷ್ಟ್ರಕವಿ ರವೀಂದ್ರನಾಥ್ ಟ್ಯಾಗೋರ್ ಅವರಿಗೂ ರಕ್ತ ಸಂಬಂಧವಿದೆ ಎನ್ನುವ ಕುತೂಹಲದ ವಿಷಯ ರಿವೀಲ್ ಆಗಿದೆ. ಇಲ್ಲಿದೆ ಇಂಟರೆಸ್ಟಿಂಗ್ ಸ್ಟೋರಿ...
ಬಾಲಿವುಡ್ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಜೋಡಿ. ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್ ಸುದ್ದಿ ಮಾಡಿದವರು. ಸೈಫ್ ಅಲಿ ಖಾನ್ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು.
ಇದೀಗ ಈ ಹಿಂದೂ-ಮುಸ್ಲಿಂ ಮದುವೆಯ ನಡುವೆಯೇ ಈಗ ಕುತೂಹಲದ ಅಂಶವೊಂದು ಬೆಳಕಿಗೆ ಬಂದಿದೆ. ಅದೇನೆಂದರೆ, ಸೈಫ್ ಅಲಿ ಖಾನ್ ಮಕ್ಕಳಾದ ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಮತ್ತು ಸಾರಾ ಅಲಿ ಖಾನ್ ಈ ನಾಲ್ವರೂ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಮರಿಮೊಮ್ಮಕ್ಕಳು ಎನ್ನುವ ವಿಷಯ! ಹೌದು. ಜನಗಣಮನವನ್ನು ಈ ನಾಡಿಗೆ ಕೊಟ್ಟು, ನೊಬೆಲ್ ಪ್ರಶಸ್ತಿ ಪಡೆದು ವಿಶ್ವಖ್ಯಾತಿ ಗಳಿಸಿರುವ ರಾಷ್ಟ್ರಕವಿ ರವೀಂದ್ರನಾಥ ಟ್ಯಾಗೋರ್ ಅವರ ಮೊಮ್ಮಗಳ ಮೊಮ್ಮಕ್ಕಳೇ ಸೈಫ್ ಅಲಿಯ ಮಕ್ಕಳು! ಎತ್ತಣತ್ತ ಸಂಬಂಧ ಎಂದು ಅಚ್ಚರಿಯಾಗುತ್ತದೆ ಅಲ್ಲವೆ? ಈ ಸಂಬಂಧ ಹೇಗೆ ಎಂದು ನೋಡಲು, ಸೈಫ್ ಅವರ ತಂದೆ ಕೂಡ ಹಿಂದೂ ಯುವತಿಯನ್ನು ಮದುವೆಯಾಗಿರುವ ಕಾಲಘಟ್ಟಕ್ಕೆ ಹೋಗಬೇಕು. ಕೆಲವು ದಶಕಗಳವರೆಗೆ ಬಾಲಿವುಡ್ ಆಳಿದ್ದ ಖ್ಯಾತ ನಟಿ ಶರ್ಮಿಳಾ ಟ್ಯಾಗೋರ್ ಸೈಫ್ ಅಲಿ ತಾಯಿ ಎನ್ನುವ ವಿಷಯ ಎಲ್ಲರಿಗೂ ತಿಳಿದದ್ದೇ. ಕ್ರಿಕೆಟ್ ದಂತಕಥೆ ಮತ್ತು ಪಟೌಡಿಯ ನವಾಬ್ ಮನ್ಸೂರ್ ಅಲಿ ಖಾನ್ ಅವರನ್ನು ಮದುವೆಯಾಗುವ ಮೊದಲು, ಶರ್ಮಿಳಾ ಇಸ್ಲಾಂಗೆ ಮತಾಂತರಗೊಂಡು ಆಯೇಷಾ ಸುಲ್ತಾನಾ ಖಾನ್ ಆದರು.
ರಾಹುಲ್ ಗಾಂಧಿಯನ್ನು ಹಾಡಿ ಕೊಂಡಾಡಿದ ನಟ ಸೈಫ್ ಅಲಿ ಖಾನ್: ಇದಕ್ಕೆ ಕಾರಣ ಹೀಗಿದೆ...
ಶರ್ಮಿಳಾ ಟ್ಯಾಗೋರ್ ಅವರು, ಬ್ರಿಟಿಷ್ ಇಂಡಿಯಾ ಕಾರ್ಪೊರೇಷನ್‌ನಲ್ಲಿ ಜನರಲ್ ಮ್ಯಾನೇಜರ್ ಆಗಿದ್ದ ಗಿತೀಂದ್ರನಾಥ ಟ್ಯಾಗೋರ್ ಮತ್ತು ಇರಾ ಅವರ ಮಗಳು. ಇವರಿಬ್ಬರೂ ರವೀಂದ್ರನಾಥ ಟ್ಯಾಗೋರ್‌ಗೆ ಸಂಬಂಧಿಕರು. ಫ್ರೀ ಪ್ರೆಸ್ ಜರ್ನಲ್ ಪ್ರಕಾರ, ಶರ್ಮಿಳಾ ಟ್ಯಾಗೋರ್ ಅವರ ತಂದೆ ಗಿತೀಂದ್ರನಾಥ್ ಅವರು ಪ್ರಸಿದ್ಧ ಬಂಗಾಳಿ ವರ್ಣಚಿತ್ರಕಾರ ಗಗನೇಂದ್ರನಾಥ ಟ್ಯಾಗೋರ್ ಅವರ ಮೊಮ್ಮಗ. ಗಗನೇಂದ್ರನಾಥ್ ಅವರ ತಂದೆ ರವೀಂದ್ರನಾಥ ಟ್ಯಾಗೋರ್ ಅವರ ಸೋದರಸಂಬಂಧಿ. ಶರ್ಮಿಳಾ ಅವರ ದೊಡ್ಡಪ್ಪ ರವೀಂದ್ರನಾಥ್ ಅವರ ಸೋದರಸಂಬಂಧಿ. ತಾಯಿಯ ಕಡೆಯಿಂದ ಹೇಳುವುದಾದರೆ, ಶರ್ಮಿಳಾ ಅವರ ತಾಯಿ ಇರಾ, ರವೀಂದ್ರನಾಥ ಟ್ಯಾಗೋರ್ ಅವರ ಸಹೋದರ ದ್ವಿಜೇಂದ್ರನಾಥ್ ಅವರ ಮೊಮ್ಮಗಳು.
ಈ ಹಿನ್ನೆಲೆಯಲ್ಲಿ ಸೈಫ್ ಅಲಿ ಖಾನ್ ಮಕ್ಕಳು, ರವೀಂದ್ರನಾಥ ಟ್ಯಾಗೋರ್ ಅವರ ಸಹೋದರ ದ್ವಿಜೇಂದ್ರನಾಥ್ ಅವರ ಮರಿಮೊಮ್ಮಕ್ಕಳು ಎಂದು ಈ ಸಂಕೀರ್ಣವಾದ ಕುಟುಂಬ ವೃಕ್ಷದಿಂದ ತಿಳಿದುಬರುತ್ತದೆ. ರವೀಂದ್ರನಾಥ್ ಟ್ಯಾಗೋರ್ ಅವರ ನಿಧನದ ಮೂರು ವರ್ಷಗಳ ನಂತರ ತಾವು ಜನಿಸಿರುವುದಾಗಿ ಶರ್ಮಿಳಾ ಹಿಂದಿನ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
50 ಸಾವಿರ ಅಡ್ವಾನ್ಸ್ ಪಡೆದು ಬಾಬಾ ಸಿದ್ದಿಕಿ ಹತ್ಯೆ! ಯಾರ ಕೈಗೂ ಸಿಗಲ್ಲ ಎಂದ ಸಲ್ಮಾನ್ ಖಾನ್