50 ಸಾವಿರ ಅಡ್ವಾನ್ಸ್ ಪಡೆದು ಬಾಬಾ ಸಿದ್ದಿಕಿ ಹತ್ಯೆ! ಯಾರ ಕೈಗೂ ಸಿಗಲ್ಲ ಎಂದ ಸಲ್ಮಾನ್ ಖಾನ್
ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಗೆ ಆರೋಪಿಗಳು 50 ಸಾವಿರ ಅಡ್ವಾನ್ಸ್ ಪಡೆದಿದ್ದರು. ಅದೇ ಇನ್ನೊಂದೆಡೆ, ಹತ್ಯೆಯ ಬೆನ್ನಲ್ಲೇ ಯಾರ ಕೈಗೂ ಸಿಗಲ್ಲ ಎಂದ ಸಲ್ಮಾನ್ ಖಾನ್.
ಹಿರಿಯ ರಾಜಕಾರಣಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಮೇಲೆ ನಡೆದ ಗುಂಡಿನ ದಾಳಿ ಇಡೀ ರಾಜಕೀಯ ಜಗತ್ತನ್ನೇ ತಲ್ಲಣಗೊಳಿಸಿದೆ. ನಿನ್ನೆ ಶನಿವಾರ ಮುಂಬೈನಲ್ಲಿ ದಾಳಿಕೋರರು ಸಿದ್ದಿಕಿ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ. ಇವರ ಕೊಲೆ ಸಂಚಿನ ಕುರಿತು ಹಲವು ಅಂಶಗಳು ಇದೀಗ ಪೊಲೀಸ್ ತನಿಖೆಯಿಂದ ಬೆಳಕಿಗೆ ಬರುತ್ತಿವೆ. ಬಾಬಾ ಸಿದ್ದಿಕಿ ಅವರನ್ನು ಕೊಲೆ ಮಾಡು ಆರೋಪಿಗಳು ಕೊಲೆ ಮಾಡಲು ತಿಂಗಳಾನುಗಟ್ಟಲೇ ಹೊಂಚು ನಡೆಸಿದ್ದರು. ಕ್ಷಣ ಕ್ಷಣಕ್ಕೂ ಬಾಬಾ ಸಿದ್ದಿಕಿಯ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದರು ಎಂಬ ಅಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಎನ್‌ಡಿಟಿವಿಗೆ ಸಿಕ್ಕ ಮಾಹಿತಿಗಳ ಪ್ರಕಾರ, ಈ ಹತ್ಯೆಗೆ ‘ಟಾರ್ಗೆಟ್ ಬಾಬಾ ಸಿದ್ದಿಕಿ’ ಎಂದು ಹೆಸರಿಡಲಾಗಿತ್ತು. ಆರೋಪಿ ಶಿವ ಕೆಲ ಸಮಯದ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕಕ್ಕೆ ಬಂದಿದ್ದ ಎಂಬ ಅಂಶವೂ ಬೆಳಕಿಗೆ ಬಂದಿದೆ.
ಮೂಲಗಳಿಂದ ಬಂದ ಮಾಹಿತಿ ಪ್ರಕಾರ, ಹರಿಯಾಣ ನಿವಾಸಿ ಗುರ್ಮೆಲ್ ಬಲ್ಜಿತ್ ಸಿಂಗ್ (23) ಮತ್ತು ಇನ್ನೊಬ್ಬ ಉತ್ತರ ಪ್ರದೇಶ ನಿವಾಸಿ ಧರ್ಮರಾಜ್ ರಾಜೇಶ್ ಕಶ್ಯಪ್ (19) ಬಂಧಿಸಲಾಗಿದೆ. ಅಲ್ಲದೆ ಮೂರನೇ ಆರೋಪಿ ಶಿವಕುಮಾರ್ ಅಲಿಯಾಸ್ ಶಿವ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹತ್ಯೆಯ ನಂತರ ತಲೆಮರೆಸಿಕೊಂಡಿರುವ ಶಿವಕುಮಾರ್ ಅಲಿಯಾಸ್ ಶಿವ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ನಿವಾಸಿ. ಆತ ಕಳೆದ ಕೆಲವು ತಿಂಗಳುಗಳಿಂದ ಪುಣೆಯ ಹಡಪ್ಸರ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಹಡಪ್ಸರ್‌ನಲ್ಲಿ ಈತ ಬಿಷ್ಣೋಯ್ ಗ್ಯಾಂಗ್‌ನ ಜನರ ಸಂಪರ್ಕಕ್ಕೆ ಬಂದಿದ್ದ. ಕಡಿಮೆ ಸಮಯದಲ್ಲಿ ಹೆಚ್ಚು ಹಣ ಗಳಿಸುವ ದುರಾಸೆಯಲ್ಲಿ ಶಿವ ಕೊಲೆಯ ಗುತ್ತಿಗೆ ಪಡೆದಿದ್ದ. ಸುಪಾರಿ ಪಡೆದು ಕುರ್ಲಾದಲ್ಲಿ ವಾಸಿಸುತ್ತಿದ್ದರು. ಮೂಲಗಳ ಪ್ರಕಾರ ಶಿವ ಮತ್ತು ಆತನ ಸಂಗಡಿಗರು ಪ್ರತಿದಿನ ಆಟೋರಿಕ್ಷಾದಲ್ಲಿ ಬಾಂದ್ರಾ ಪೂರ್ವ ಮತ್ತು ಬಾಂದ್ರಾ ಪಶ್ಚಿಮಕ್ಕೆ ರೆಸಿ ನಡೆಸಲು ಹೋಗುತ್ತಿದ್ದರು. ಈ ವೇಳೆ ಆರೋಪಿಗಳು ಬಾಬಾ ಸಿದ್ದಿಕಿ ಮತ್ತು ಅವರ ಶಾಸಕ ಪುತ್ರ ಜೀಶಾನ್ ಸಿದ್ದಿಕಿ ಎಷ್ಟು ಗಂಟೆಗೆ ಮನೆಯಿಂದ ಹೊರ ಹೋಗುತ್ತಾರೆ ಮತ್ತು ಎಷ್ಟು ಗಂಟೆಗೆ ಕಚೇರಿಗೆ ಹೋಗುತ್ತಾರೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ಆ ಜನರ ದಿನಚರಿ ಏನು ಎಂಬುದನ್ನು ಸಹ ಕಂಡುಕೊಂಡರು.
ಮೂವರು ಆರೋಪಿಗಳಿಗೆ ದೈನಂದಿನ ವೆಚ್ಚಕ್ಕಾಗಿ ತಲಾ 50 ಸಾವಿರ ರೂ.ಗಳನ್ನು ನೀಡಲಾಗಿದ್ದು, ಉಳಿದ ಹಣವನ್ನು ಕೆಲಸ ಮುಗಿದ ನಂತರ ಪಡೆಯಲು ಯೋಜನೆ ರೂಪಿಸಲಾಗಿತ್ತು. ತಲೆಮರೆಸಿಕೊಂಡಿರುವ ಶಂಕಿತ ಶಿವಕುಮಾರ್‌ನ ಕೊನೆಯ ಮೊಬೈಲ್ ಲೊಕೇಶನ್ ಪನ್ವೇಲ್‌ನಲ್ಲಿ ಪತ್ತೆಯಾಗಿದೆ. ಶಿವ ಕುರ್ಲಾದಿಂದ ಪನ್ವೇಲ್‌ಗೆ ಲೋಕಲ್ ರೈಲನ್ನು ಹಿಡಿದ. ಟ್ಯಾಕ್ಸಿ ಅಥವಾ ರೈಲಿನಲ್ಲಿ ಪುಣೆಗೆ ಹೊರಟಿರಬಹುದು ಎಂದು ನಂಬಲಾಗಿದೆ. ಮುಂಬೈ ಕ್ರೈಂ ಬ್ರಾಂಚ್‌ನ ಮೂರು ತಂಡಗಳು ಇಂದು ಬೆಳಗ್ಗೆ ಪುಣೆಗೆ ತೆರಳಿದ್ದು, ಬಿಷ್ಣೋಯ್ ಗ್ಯಾಂಗ್‌ನ ಮತ್ತೊಬ್ಬ ಶಂಕಿತ ಆರೋಪಿಗಾಗಿ ಕ್ರೈಂ ಬ್ರಾಂಚ್ ಹುಡುಕಾಟ ನಡೆಸುತ್ತಿದೆ.
ಅದೇ ಇನ್ನೊಂದೆಡೆ, ಬಿಷ್ಣೋಯಿ ಗ್ಯಾಂಗ್ ಸಲ್ಮಾನ್ ಖಾನ್ ಮನೆ ಮೇಲೆಯೂ ಈ ಮುಂಚೆ ದಾಳಿ ಮಾಡಿತ್ತು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಇದುವರೆಗೆ ಸಲ್ಮಾನ್ ಖಾನ್ ಕ್ಷಮೆ ಕೋರಲಿಲ್ಲ ಎನ್ನುವ ಕಾರಣಕ್ಕೆ ಇದಾಗಲೇ ಹಲವು ಬಾರಿ ಬೆದರಿಕೆಯನ್ನೂ ಹಾಕಲಾಗಿದೆ. ಈಗ ಬಾಬಾ ಸಿದ್ದಿಕಿ ಹತ್ಯೆ ಬಳಿಕ ತಮ್ಮ ಎಲ್ಲ ಮೀಟಿಂಗ್ಗಳನ್ನು ಸಲ್ಮಾನ್ ಖಾನ್ ರದ್ದು ಮಾಡಿದ್ದಾರೆ. ಚಿತ್ರರಂಗದ ಸ್ನೇಹಿತರು ಕೂಡ ತಮ್ಮ ನಿವಾಸಕ್ಕೆ ಭೇಟಿ ನೀಡುವುದು ಬೇಡ ಎಂದು ನಟನ ಕುಟುಂಬದವರು ತಿಳಿಸಿದ್ದಾರೆ. ಅಷ್ಟೇ ಅಲ್ಲದೇ, ಸಲ್ಮಾನ್ ಖಾನ್ ಅವರ ಗ್ಯಾಲಕ್ಸಿ ಅಪಾರ್ಟ್ಮೆಂಟ್ಗೆ ಭದ್ರತೆ ಹೆಚ್ಚಿಸಲಾಗಿದೆ. ಬಾಬಾ ಸಿದ್ಧಿಕಿ ಅವರ ಕುಟುಂಬಕ್ಕೆ ಈ ಕಷ್ಟದ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅವರು ಬೆಂಬಲವಾಗಿ ನಿಂತಿದ್ದಾರೆ. ಸಿದ್ಧಿಕಿ ಪುತ್ರ ಝೀಶಾನ್ ಜೊತೆ ಅವರು ನಿರಂತರ ಸಂಪರ್ಕದಲ್ಲಿ ಇದ್ದಾರೆ. ಸ್ನೇಹಿತನನ್ನು ಕಳೆದುಕೊಂಡಿರುವ ಸಲ್ಮಾನ್ ಖಾನ್ಗೆ ತೀವ್ರ ಆತಂಕ ಉಂಟಾಗಿದೆ. ರಾತ್ರಿ ಅವರು ನಿದ್ದೆ ಮಾಡಿಲ್ಲ. ಈ ಮೊದಲೇ ನಿಗದಿ ಆಗಿದ್ದ ಎಲ್ಲ ಮೀಟಿಂಗ್ಗಳನ್ನು ಅವರು ಕ್ಯಾನ್ಸಲ್ ಮಾಡಿಕೊಂಡಿದ್ದಾರೆ.
ನಾನು ಯಾರ ಕೈಗೆ ಉಗುಳ್ತೇನೋ ಅವರೆಲ್ಲಾ ನಂಬರ್ 1 ನಟಿ ಆಗ್ತಾರೆ! ಆಮೀರ್ ಖಾನ್ ಹೇಳಿದ್ದೇನು ಕೇಳಿ