"ಎರಡು ತಿಂಗಳ ಒಳಗೆ ನನಗೆ ದೊಡ್ಡ ಸ್ತನಗಳು ಬೇಕು" ಡಾಕ್ಟರ್‌ ಮುಂದೆ ಸಿಲಿಕಾನ್‌ ಸ್ತನ ಹಿಡಿದುಕೊಂಡು ಕುಳಿತ ಉರ್ಫಿ ಜಾವೇದ್‌!

By Bhavani Bhat  |  First Published Oct 14, 2024, 8:10 PM IST

ಉರ್ಫಿ ಜಾವೇದ್‌ ಬ್ರೆಸ್ಟ್‌ ಇಂಪ್ಲಾಂಟ್‌ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ವೈದ್ಯರೊಂದಿಗೆ ಮಾತುಕತೆ ನಡೆಸಿರುವ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಎರಡು ತಿಂಗಳಲ್ಲಿ ದೊಡ್ಡ ಸ್ತನಗಳನ್ನು ಪಡೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.


ಉರ್ಫಿ ಜಾವೇದ್‌ ಇದ್ದಲ್ಲಿ ಮಸಾಲೆಗೆ ಬರವಿಲ್ಲ. ಈಕೆಯ ಒಂದೊಂದು ಹೆಜ್ಜೆಯೂ ಸುದ್ದಿಯಾಗುತ್ತದೆ. ಹಾಗಿರುವಾಗ ಆಕೆ ಬ್ರೆಸ್ಟ್‌ ಇಂಪ್ಲಾಂಟ್‌ ಅಥವಾ ಸ್ತನ ಕಸಿ ಮಾಡಿಸಿಕೊಳ್ಳಲು ಮುಂದಾದರೆ ಗೊತ್ತಾಗದೇ ಇರುವುದುಂಟೇ? ಅದೂ ಕೂಡ ಹಾಟ್‌ ಸುದ್ದಿಯಾಗುತ್ತದೆ. ಆದರೆ ಈಗ ಸ್ವತಃ ಉರ್ಫಿಯೇ ಈ ಬಗ್ಗೆ ಒಂದು ವಿಡಿಯೋ ಹರಿಬಿಟ್ಟಿದ್ದಾಳೆ. ಅದರಲ್ಲಿ ಆಕೆ ಬ್ರೆಸ್ಟ್‌ ಇಂಪ್ಲಾಂಟ್‌ ತಜ್ಞರ ಮುಂದೆ ಕುಳಿತು ತನಗೆ ಎಂಥಾ ಸ್ತನಗಳು ಬೇಕು ಎಂಬುದನ್ನು ಹೇಳುತ್ತಿದ್ದಾಳೆ.

ಈ ಡಾಕ್ಟರ್‌ ಯಾರು ಎಂಬುದು ಗೊತ್ತಾಗಿಲ್ಲ. ಉರ್ಫಿ ತಮ್ಮ ಸ್ತನಗಳನ್ನು ಇಂಪ್ಲಾಂಟ್‌ ಮಾಡಿಸಿಕೊಂಡು ದೊಡ್ಡದು ಮಾಡಿಸಿಕೊಳ್ಳಲು ಹೊರಟಿದ್ದಾಳೆ ಎಂಬುದು ಖಚಿತವಾಗಿತ್ತು. ಆದ್ರೆ ಯಾವಾಗ ಮಾಡಿಸ್ತಾಳೆ ಎಂಬುದು ಗೊತ್ತಾಗಿಲಿಲ್ಲ. ಈ ವಿಡಿಯೋದಲ್ಲಿ ಅದೂ ಗೊತ್ತಾಗಿದೆ. ಇನ್ನು ಎರಡು ತಿಂಗಳ ಒಳಗೆ ಆಕೆಗೆ ಸ್ತನಗಳು ದೊಡ್ಡದಾಗಬೇಕಂತೆ. ಹಾಗಂತ ಡಾಕ್ಟರ್‌ಗೆ ಆಕೆ ಡಿಮ್ಯಾಂಡ್‌ ಮಾಡ್ತಿದಾಳೆ. ಇದರ ನಡುವೆ ಬ್ರೆಸ್ಟ್‌ ಇಂಪ್ಲಾಂಟ್‌ನ ಸೈಡ್‌ ಎಫೆಕ್ಟ್‌ಗಳ ಬಗ್ಗೆ ಡಾಕ್ಟರ್‌ ಆಕೆಗೆ ವಿವರಿಸ್ತಾ ಇರುವುದೂ ಕಂಡುಬಂದಿದೆ.

Tap to resize

Latest Videos

ವಿಡಿಯೋದಲ್ಲಿ ಅವರ ಮಾತುಕತೆ ಹೀಗಿದೆ: 

ಡಾಕ್ಟರ್:‌ ಎದೆಯನ್ನು ಅನಗತ್ಯವಾಗಿ ಕತ್ತರಿಸುವುದು ಬೇಡ ಎಂದು ಅನಿಸುತ್ತದೆ. ಸಾಮಾನ್ಯವಾಗಿ ನಾವು ಬದಿಯಲ್ಲಿ ಸ್ವಲ್ಪ ಕತ್ತರಿಸುತ್ತೇವೆ. ಎಲ್ಲಿ ಬ್ರಾದ ಸ್ಟ್ರಾಪ್‌ ಬರುತ್ತದೋ ಅಲ್ಲಿ. ಮುಂದೆ ನಿಮ್ಮ ಸಂಗಾತಿಗೆ ಕೂಡ ಅದು ಗೊತ್ತಾಗುವುದಿಲ್ಲ, ಹಾಗಿರುತ್ತದೆ ಅದು. ಹಾಗೆ ಕತ್ತರಿಸಿದ್ದನ್ನು ನಾವು ಅತ್ಯಂತ ಜಾಗರೂಕತೆಯಿಂದ ಬಂದ್‌ ಮಾಡುತ್ತೇವೆ. ಆರು ತಿಂಗಳ ಬಳಿಕ ಅದರ ಗುರುತು ಕೂಡ ಕಾಣುವುದಿಲ್ಲ.

ಉರ್ಫಿ: ಸಿಲಿಕನ್‌ ಬೇಡ ಎಂದರೆ ಏನು ಹಾಕಬಹುದು?

ಡಾಕ್ಟರ್:‌ ಸಿಲಿಕಾನ್‌ ಬೇಡ ಎಂದರೆ ನಿಮ್ಮದೇ ದೇಹದ ಕೊಬ್ಬು ಕೂಡ ಬಳಸಬಹುದು. ಲೈಪೋಸಕ್ಷನ್‌ ಮೂಲಕ ನಿಮ್ಮ ದೇಹದ ಕೊಬ್ಬನ್ನು ತೆಗೆದು ಅದನ್ನು ಇಂಪ್ಲಾಂಟ್‌ ಮಾಡುತ್ತೇವೆ. 

ಉರ್ಫಿ: ನಮ್ಮ ದೇಹದಲ್ಲಿ ಕೊಬ್ಬು ಇಲ್ಲವಾದರೆ ಬೇರೆಯವರದ್ದನ್ನು ಕೊಯ್ದು ಜೋಡಿಸಬಹುದಾ? ನನ್ನ ಸೋದರ- ಸೋದರಿಯರದ್ದು? ಅವರು ಅದಕ್ಕೆ ಸಿದ್ಧರಾಗಿದ್ದಾರೆ.

ಡಾಕ್ಟರ್:‌ ಇಲ್ಲ ಹಾಗೆ ಮಾಡೋದಕ್ಕಾಗೋದಿಲ್ಲ. ನಿಮ್ದೇ ಆಗಬೇಕು. ಮತ್ತೆ ಬ್ರೆಸ್ಟ್‌ ಇಂಪ್ಲಾಂಟ್‌ನಿಂದ ಸೈಡ್‌ ಎಫೆಕ್ಟ್‌ಗಳು ಇರೊಲ್ಲ. ಆದರೆ ಬ್ಯಾಕ್ಟೀರಿಯಗಳು ಎಲ್ಲ ಕಡೆ ಇರುತ್ತವೆ. ಎಲ್ಲಾದರೂ ಇನ್‌ಫೆಕ್ಷನ್‌ ಉಂಟಾದರೆ, ಅದು ಅನಾಹುತವೇ ಆಗುತ್ತದೆ. ಅಂದರೆ ಇಂಪ್ಲಾಂಟ್‌ ತೆಗೆಯಬೇಕಾಗಬಹುದು. 

ಉರ್ಫಿ: ಅದರಿಂದ ಯಾರಾದರೂ ಸತ್ತಿದಾರ?

ಡಾಕ್ಟರ್:‌ ನನ್ನ 23 ವರ್ಷದ ಅನುಭವದಲ್ಲಿ ಯಾರೂ ಸತ್ತಿಲ್ಲ. ಅದಂತೂ ಗ್ಯಾರಂಟಿ. ಅಂದ ಹಾಗೆ ಯಾವಾಗ ಇಂಪ್ಲಾಂಟ್‌ ಮಾಡಿಸಿಕೊಳ್ಳಬೇಕೆಂದಿದ್ದೀರಿ? 

ಉರ್ಫಿ: ಎರಡು ತಿಂಗಳಲ್ಲಿ ನನಗೆ ದೊಡ್ಡ ಸ್ತನಗಳು ಬೇಕು!

ಗೊತ್ತಾಯಿತಲ್ಲ. ಇನ್ನೆರಡು ತಿಂಗಳಲ್ಲಿ ನೀವು ಉರ್ಫಿಯ ದೊಡ್ಡ ಸ್ತನಗಳನ್ನು ನೋಡಬಹುದು; ಅಯ್ಯೋ ಹಾಗಲ್ಲ. ನೀವು ನೋಡೋಕಾಗೋಲ್ಲ. ಆಕೆ ಎರಡು ತಿಂಗಳಲ್ಲಿ ಬ್ರೆಸ್ಟ್‌ ಇಂಪ್ಲಾಂಟ್‌ ಮಾಡಿಸಿಕೊಳ್ತಾಳೆ. ನಂತರ ಅದು ಹೇಗಾಯ್ತು ಎಂದೆಲ್ಲ ಇನ್‌ಸ್ಟಗ್ರಾಂನಲ್ಲೂ ಹಾಕಿಯೇ ಹಾಕ್ತಾಳೆ ಅದರಲ್ಲಿ ಅನುಮಾನವಿಲ್ಲ. ತನ್ನ ಡ್ರೆಸ್‌ ಸೆನ್ಸ್‌ನಿಂದಾಗಿ, ಹೊಸ ಹೊಸ ಫ್ಯಾಷನ್‌ಗಳಿಂದಾಗಿ ಮನೆಮಾತಾಗಿರುವ ಉರ್ಫಿ, ಸ್ತನ ಗಾತ್ರ ಹೆಚ್ಚಿಸಿಕೊಂಡ ಬಳಿ ಅವುಗಳನ್ನು ಪ್ರದರ್ಶಿಸದೇ ಇರುತ್ತಾಳಾ? ಖಂಡಿತಾ ಇಲ್ಲ! 

ಸಿಲಿಕಾನ್ ಇಂಪ್ಲಾಂಟ್ಸ್ ಸಂಪೂರ್ಣ ಸುರಕ್ಷಿತ ಎಂದು ಹೇಳುತ್ತಾರೆ. ಆದರೆ ಇದು ಪೂರ್ತಿ ನಿಜವೂ ಅಲ್ಲ. ಅನೇಕ ಮಹಿಳೆಯರು ಯಶಸ್ವಿಯಾಗಿ ಇಂಪ್ಲಾಂಟ್‌ ಮಾಡಿಸಿಕೊಂಡಿದ್ದಾರೆ. ಆದರೆ ದೀರ್ಘಾವಧಿಯ ಆರೋಗ್ಯ ದುಷ್ಪರಿಣಾಮಗಳನ್ನು ಎದುರಿಸಿದವರೂ ಇದ್ದಾರೆ. ಶಸ್ತ್ರಚಿಕಿತ್ಸೆಯ ನಂತರದ ಸೋಂಕುಗಳು ಸಂಭವಿಸಬಹುದು. ಆಗ ಹೆಚ್ಚುವರಿ ವೈದ್ಯಕೀಯ ಹಸ್ತಕ್ಷೇಪದ ಅಗತ್ಯವಿರುತ್ತದೆ ಮತ್ತು ಕೆಲವೊಮ್ಮೆ ಇಂಪ್ಲಾಂಟ್‌ಗಳನ್ನು ತೆಗೆದುಹಾಕಲಾಗುತ್ತದೆ.

ಇನ್ನೊಂದು ಅಪಾಯ, ಕ್ಯಾಪ್ಸುಲರ್ ಸಂಕೋಚನ. ಅಂದರೆ ಇದು ಇಂಪ್ಲಾಂಟ್ ಸುತ್ತಲೂ ಗಾಯದ ಅಂಗಾಂಶವನ್ನು ಗಟ್ಟಿಯಾಗುವುದನ್ನು ಒಳಗೊಂಡಿರುತ್ತದೆ. ಇದು ನೋವು ಮತ್ತು ವಿರೂಪ ಉಂಟುಮಾಡುತ್ತದೆ. ಇದಲ್ಲದೆ, ಸಿಲಿಕೋನ್ ಇಂಪ್ಲಾಂಟ್‌ಗಳು ಛಿದ್ರವಾಗಬಹುದು. ಇದು ಸಿಲಿಕೋನ್ ಜೆಲ್ ಸೋರಿಕೆಗೆ ಕಾರಣವಾಗುತ್ತದೆ. ಇದು ಉರಿಯೂತ ಮತ್ತು ಇತರ ತೊಡಕುಗಳಿಗೆ ಕಾರಣವಾಗಬಹುದು. ಕೆಲವರು ಆಯಾಸ, ಕೀಲು ನೋವು ಮತ್ತು ಅರಿವಿನ ಸಮಸ್ಯೆಗಳಂತಹ ವ್ಯವಸ್ಥಿತ ರೋಗಲಕ್ಷಣಗಳನ್ನು ಅನುಭವಿಸಬಹುದು. ಇದನ್ನು ಸ್ತನ ಇಂಪ್ಲಾಂಟ್ ಕಾಯಿಲೆ (BII) ಎಂದು ಕರೆಯಲಾಗುತ್ತದೆ.

ನನ್ನ ಗಂಡನಿಗೆ ಮೆಹಂದಿ ವಾಸನೆ ಅಂದ್ರೆ ಆಗಲ್ಲ ಅದಿಕ್ಕೆ ಮದುವೆಯಲ್ಲಿ ಹಾಕಿಕೊಂಡಿಲ್ಲ; ಸೋನಾಕ್ಷಿ ಸಿನ್ಹಾ

ಬಹು ಮುಖ್ಯವಾಗಿ, ಇಂಪ್ಲಾಂಟ್‌ಗಳು ಮ್ಯಾಮೊಗ್ರಾಮ್ ಚಿತ್ರಗಳನ್ನು ಅಸ್ಪಷ್ಟಗೊಳಿಸಬಹುದು. ಅಂದರೆ ಸ್ತನ ಕ್ಯಾನ್ಸರ್ ಅನ್ನು ಮೊದಲೇ ಪತ್ತೆಹಚ್ಚಲು ಇದು ಹೆಚ್ಚು ಸವಾಲಿನ ಸಂಗತಿ. ಸ್ತನ ಇಂಪ್ಲಾಂಟ್-ಸಂಬಂಧಿತ ಅನಾಪ್ಲಾಸ್ಟಿಕ್ ದೊಡ್ಡ ಕೋಶ ಲಿಂಫೋಮಾ (BIA-ALCL) ಎಂದು ಕರೆಯಲ್ಪಡುವ ಒಂದು ರೀತಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ವಿರಳ ಅಪಾಯವೂ ಇದೆ. 

ಹೆಚ್ಚಿನ ಇಂಪ್ಲಾಂಟ್‌ಗಳನ್ನು ಪ್ರತಿ 10-15 ವರ್ಷಗಳಿಗೊಮ್ಮೆ ಬದಲಾಯಿಸಬೇಕಾಗುತ್ತದೆ. ತೊಡಕುಗಳನ್ನು ಮೊದಲೇ ತೆಗೆದುಹಾಕುವ ಅಗತ್ಯವಿರುತ್ತದೆ. ಪುನರಾವರ್ತಿತ ಅಳವಡಿಕೆ ಮತ್ತು ಕಸಿ ತೆಗೆಯುವುದು ಆರೋಗ್ಯದ ಅಪಾಯಗಳನ್ನು ಇನ್ನಷ್ಟು ಉಲ್ಬಣಗೊಳಿಸಬಹುದು. ಆಗಾಗ್ಗೆ ಶಸ್ತ್ರಚಿಕಿತ್ಸೆಗಳು ಸ್ತನ ಅಂಗಾಂಶ ಮತ್ತು ಚರ್ಮವನ್ನು ಹಾನಿಗೊಳಿಸಬಹುದು. ಇದು ಸ್ತನದ ಆಕಾರದಲ್ಲಿ ಬದಲಾವಣೆಗಳಿಗೆ ಕಾರಣವಾಗುತ್ತದೆ. ಪ್ರತಿಯೊಂದು ಶಸ್ತ್ರಚಿಕಿತ್ಸೆಯು ಗಾಯದ ಅಂಗಾಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದು ದೀರ್ಘಕಾಲದ ನೋವು ಮತ್ತು ವಿಕಾರಕ್ಕೆ ಕಾರಣವಾಗಬಹುದು.

ಸಿನಿಮಾ ಪೈಪೋಟಿಯನ್ನು ಫ್ಯಾಮಿಲಿ ದ್ವೇಷಕ್ಕೆ ಮಾರ್ಪಡಿಸಿದ್ದ ನಂದಮೂರಿ ಬಾಲಕೃಷ್ಣ!
 

ಅನೇಕ ಶಸ್ತ್ರಚಿಕಿತ್ಸೆಗಳ ಭಾವನಾತ್ಮಕ ಗಾಯ ಮತ್ತು ದೇಹದ ಚಿತ್ರಣದ ಏರಿಳಿತ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಇದು ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ.

ಇದೆಲ್ಲ ಉರ್ಫಿಗೆ ಗೊತ್ತಿಲ್ಲದೇ ಏನಲ್ಲ. ಆದರ ಆಕೆಗೆ ದೊಡ್ಡ ಎದೆಯ ಆಕರ್ಷಣೆ. ಏನು ಮಾಡೋಣ! ಹುಷಾರಾಗಿರಲಿ ಎಂದು ಹೇಳಬಹುದಷ್ಟೇ.

 

 

 
 
 
 
 
 
 
 
 
 
 
 
 
 
 

A post shared by Prime Flicks (@primeflickss)

click me!