
ಮುಂಬೈ(ಜ.18) ಬಾಲಿವುಡ್ ನಟ ಸೈಫ್ ಆಲಿ ಖಾನ್ ಮೇಲೆ ಅನಾಮಿಕನ ದಾಳಿ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ. ಅನಾಮಿಕನ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಸೈಫ್ ಆಲಿ ಖಾನ್‌ಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎರಡು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಯ ಸೈಫ್ ನಿಧನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಸೈಫ್ ಆಲಿ ಖಾನ್ ಚಿಕಿತ್ಸೆ ನೀಡಿರುವ ಆರೋಗ್ಯ ವಿಮೆ ದಾಖಲೆಗಳು ಬಹಿರಂಗವಾಗಿದೆ. ಇದುವರೆಗಿನ ಚಿಕಿತ್ಸೆಯ ವೆಚ್ಚ ಬರೋಬ್ಬರಿ 35.95 ಲಕ್ಷ ರೂಪಾಯಿ. ಆರೋಗ್ಯ ವಿಮೆ ಮೂಲಕ ಈ ಮೊತ್ತಕ್ಕೆ ಮನವಿ ಮಾಡಲಾಗಿದೆ. ಆದರೆ ಆರೋಗ್ಯ ವಿಮಾ ಸಂಸ್ಥೆ 25 ಲಕ್ಷ ರೂಪಾಯಿಗೆ ಅಪ್ರೋವಲ್ ನೀಡಿದೆ.
ಸೈಫ್ ಆಲಿ ಖಾನ್ ಆರಂಭಿಕ ಚಿಕಿತ್ಸೆಗಾಗಿ 25 ಲಕ್ಷ ರೂಪಾಯಿ ಸದ್ಯ ಅಪ್ರೋವಲ್ ಮಾಡಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಚಿಕಿತ್ಸೆ ಅಂತಿಮ ಬಿಲ್ ಬಳಿಕ ಬಾಕಿ ಮೊತ್ತದ ಅಪ್ರೋವಲ್ ಮಾಡಲಾಗುತ್ತದೆ. ಆದರೆ ಸದ್ಯ ಸೈಫ್ ಆಲಿ ಖಾನ್ ಕುರಿತು ಆರೋಗ್ಯ ವಿಮೆ ದಾಖಲೆ ಬಹಿರಂಗವಾಗಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಸೈಫ್ ಆಲಿ ಖಾನ್ ಚೇತರಿಸಿಕೊಳ್ಳುತ್ತಿದ್ದಾರೆ. ಕುಟುಂಬ ಆಘಾತಗೊಂಡಿದೆ. ಈ ವೇಳೆ ಸೈಫ್ ಆಲಿ ಖಾನ್ ಆರೋಗ್ಯ ವಿಮೆ ದಾಖಲೆಗಳನ್ನು ಬಹಿರಂಗಪಡಿಸುವ ಮೂಲಕ ಖಾಸಗಿತನಕ್ಕೆ ಧಕ್ಕೆ ತರಲಾಗಿದೆ ಅನ್ನೋ ಮಾತಗಳು ಕೇಳಿಬಂದಿದೆ.
ಸೆಲೆಬ್ರೆಟಿಗಳ ಆತಂಕ ಹೆಚ್ಚಿಸಿದ ದಾಳಿಕೋರರ ಎನ್‌ಕೌಂಟರ್‌ಗೆ ಮುಂದಾದ್ರಾ ಕನ್ನಡಿಗ?
ಸೈಫ್ ವಿಮೆ ದಾಖಲೆಯಲ್ಲಿ ಹಲವು ಮಾಹಿತಿಗಳು ಬಹಿರಂಗವಾಗಿದೆ. ಆಸ್ಪತ್ರೆ ಐಡಿ, ಕೊಠಡಿ, ಚಿಕಿತ್ಸಾ ವಿವರ ಸೇರಿದಂತೆ ಹಲವು ಮಾಹಿತಿಗಳು ಈ ದಾಖಲೆಯಲ್ಲಿ ಬಹಿರಂಗವಾಗಿದೆ. ಈ ಮಾಹಿತಿಗಳು ಬಹಿರಂಗವಾದ ಬೆನ್ನಲ್ಲೇ ವಿಮಾ ಕಂಪನಿ ನುವಾ ಬುಪಾ ಹೆಲ್ತ್ ಇನ್ಶುರೆನ್ಸ್ ಕಂಪನಿ ತೀವ್ರ ಬೇಸರ ವ್ಯಕ್ತಪಡಿಸಿದೆ. ಈ ವೈಯುಕ್ತಿತ ದಾಖಲೆಗಳು ಹೇಗೆ ಬಹಿರಂಗವಾಯಿತು ಎಂದು ಪ್ರಶ್ನಿಸಿದೆ. ಸೈಫ್ ಆಲಿ ಖಾನ್ ಆರೋಗ್ಯ ವಿಮೆ ಕುರಿತು ಆಸ್ಪತ್ರೆಯಿಂದ ಕ್ಲೈಮ್ ಸಲ್ಲಿಕೆ ಮಾಡಿದ್ದಾರೆ. ಸೈಫ್ ಆಲಿ ಖಾನ್ ನಮ್ಮ ಕಂಪನಿಯಲ್ಲಿ ಕ್ಯಾಶ್‌ಲೆಸ್ ಇನ್ಶೂರೆನ್ಸ್ ಸೇವೆ ಪಡೆದುಕೊಂಡಿದ್ದಾರೆ. ಆದರೆ ದಾಖಲೆ ಬಹಿರಂಗವಾಗುವ ಮೂಲಕ ಸೈಫ್ ಖಾಸಗಿತನಕ್ಕೆ ಧಕ್ಕೆಯಾಗಿದೆ. ಈ ರೀತಿಯ ಸೂಕ್ಷ್ಮ ಮಾಹಿತಿಗಳು ಬಹಿರಂಗಪಡಿಸುವುದು ತಪ್ಪು ಎಂದು ನುವಾ ಬುಪಾ ಆರೋಗ್ಯ ವಿಮೆ ಕಂಪನಿ ಹೇಳಿದೆ.
ಸದ್ಯ ಆಸ್ಪತ್ರೆ ಕಳುಹಿಸಿದ ಕ್ಲೈಮ್ ಮಾಹಿತಿ ಪರಿಶೀಲಿಸಿ ಅಪ್ರೂವಲ್ ನೀಡಲಾಗಿದೆ. ಇದು ಆರಂಭಿಕ ಚಿಕಿತ್ಸೆಗಾಗಿ ಅಪ್ರೂವಲ್ ಮಾಡಲಾಗಿದೆ. ಆಸ್ಪತ್ರೆ ಅಂತಿಮ ಬಿಲ್ ಕಳುಹಿಸಲಿದೆ. ಈ ಬಿಲ್ ಕುರಿತು ಪರಾಮರ್ಶಿಸಿ ಅಪ್ರೂವಲ್ ನೀಡಲಾಗುತ್ತದೆ ಎಂದು ಆರೋಗ್ಯ ವಿಮೆ ಕಂಪನಿ ಹೇಳಿದೆ.
ಇತ್ತ ಸೈಫ್ ಆಲಿ ಖಾನ್ ಪ್ರಕರಣದ ತನಿಖೆ ಚುರುಕುಗೊಂಡಿದೆ. ಆರೋಪಿಯ ಬಂಧನವಾಗಿದೆ. ಇದೀಗ ಮುಂಬೈ ಪೊಲೀಸರು ಆರೋಪಿ ವಶಕ್ಕೆ ಪಡೆಯಲು ರಾಯ್‌ಪುರಕ್ಕೆ ತೆರಳಿದ್ದಾರೆ. ಎಲ್ಲಾ ಆಯಾಮದಲ್ಲಿ ತನಿಖೆ ಮುಂದುವರಿದಿದೆ.
ಸೈಫ್ ಆಲಿ ಖಾನ್ ಪ್ರಕರಣ, ಮಗುವಿನೊಂದಿಗೆ ಆಸ್ಪತ್ರೆಗೆ ಆಗಮಿಸಿ ದಾಳಿಗೆ ಕಾರಣ ಬಿಚ್ಚಿಟ್ಟ ಮಹಿಳೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.