
ಬಾಲಿವುಡ್ ನ ಪ್ರಸಿದ್ಧ ಕೋರಿಯೋಗ್ರಫರ್ (Bollywood Famous choreographer) ಹಾಗೂ ಚಿತ್ರ ನಿರ್ಮಾಪಕಿ ಫರಾ ಖಾನ್ (film producer Farah Khan). ಅದ್ಭುತ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಓಂ ಶಾಂತಿ ಓಂ, ಮೈ ಹೂ ನಾ ಹಾಡುಗಳು ಈಗ್ಲೂ ಫ್ಯಾನ್ಸ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿವೆ. ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಸಾಕಷ್ಟು ಚರ್ಚೆಯಲ್ಲಿರ್ತಾರೆ ಫರಾ ಖಾನ್. ಮೂರು ಮಕ್ಕಳ ತಾಯಿಯಾಗಿರುವ ಫರಾ ಖಾನ್ ಪತಿ ಶಿರೀಶ್ ಕುಂದರ್ (Shirish Kunder), ಶಾಂತ ಸ್ವಭಾವದವರು. ಅವರು ಕ್ಯಾಮರಾ ಮುಂದೆ ಬರೋದು ಬಹಳ ಅಪರೂಪ. ಶಿರೀಶ್ ಕುಂದರ್ ವೃತ್ತಿಯಲ್ಲಿ ಸಿನಿಮಾ ಎಡಿಟರ್. ಪತಿ ಶಿರೀಶ್ ಬಗ್ಗೆ ಫರಾ ಖಾನ್ ಸಂದರ್ಶನವೊಂದರಲ್ಲಿ ಆಸಕ್ತಿಕರ ವಿಷ್ಯವನ್ನು ಹೊರಗೆ ಹಾಕಿದ್ದಾರೆ.
ಫರಾ ಖಾನ್ ಹಾಗೂ ಶಿರೀಶ್ ಕುಂದರ್ ಮೊದಲು ಭೇಟಿಯಾಗಿದ್ದು ಮೈ ಹೂ ನಾ ಸಿನಿಮಾ ವೇಳೆ. ಇದು ಫರಾ ಖಾನ್ ನಿರ್ದೇಶನದ ಚಿತ್ರ. ಇದ್ರಲ್ಲಿ ಎಡಿಟರ್ ಆಗಿದ್ರು ಶಿರೀಶ್ ಕುಂದರ್. ಅರ್ಚನಾ ಪುರಾನ್ ಸಿಂಗ್ ಅವರ ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಫರಾ ಖಾನ್ ತಮ್ಮ ಪತಿ ಬಗ್ಗೆ ಹೇಳಿಕೊಂಡಿದ್ದಾರೆ. ಆರಂಭದಲ್ಲಿ ಶಿರೀಶ್ ರನ್ನು ಫರಾ ಇಷ್ಟಪಟ್ಟಿರಲಿಲ್ಲವಂತೆ. ಅವರನ್ನು ದ್ವೇಷಿಸುತ್ತಿದ್ದ ಫರಾ ಖಾನ್, ಶಿರೀಶ್ ಸಲಿಂಗಕಾಮಿ (gay) ಎಂದು ಭಾವಿಸಿದ್ದರಂತೆ. ಆರು ತಿಂಗಳ ಕಾಲ ಶಿರೀಶ್ ಸಲಿಂಗಕಾಮಿ ಅಂದ್ಕೊಂಡಿದ್ದರಂತೆ ಫರಾ ಖಾನ್. ಆದ್ರೆ ದಿನ ಕಳೆದಂತೆ ಫರಾ ಖಾನ್, ಶಿರೀಶ್ ಪ್ರೀತಿಯಲ್ಲಿ ಬಿದ್ರು. ಪರಸ್ಪರ ಒಂದಾಗಿ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರು ಮದುವೆಯಾಗಿ 20 ವರ್ಷ ಕಳೆದಿದೆ. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಮಗನಿಗೆ ಪಾಲಕರಾಗಿದ್ದಾರೆ ಫರಾ ಖಾನ್ ಹಾಗೂ ಶಿರೀಶ್ ಕುಂದರ್. 2008ರಲ್ಲಿ ಐವಿಎಫ್ ಮೂಲಕ ಮಕ್ಕಳನ್ನು ಈ ಜೋಡಿ ಪಡೆದಿದೆ.
ಮೊದಲ ದಿನವೇ ಆಜಾದ್ ಸಿನಿಮಾ ಕಲೆಕ್ಷನ್ ಹಿಂದಿಕ್ಕಿದ ಕಂಗನಾ ನಟನೆಯ ಎಮರ್ಜೆನ್ಸಿ!
ಇಬ್ಬರ ಮಧ್ಯೆ ಹೊಂದಾಣಿಕೆ ಗಟ್ಟಿಯಾಗಿದೆ. ಈವರೆಗೂ ಶಿರೀಶ್ ಒಮ್ಮೆಯೂ ಫರಾ ಖಾನ್ ಕ್ಷಮೆ ಕೇಳಿಲ್ಲವಂತೆ. ಶಿರೀಶ್ ಎಂದೂ ನನ್ನ ಕ್ಷಮೆ ಕೇಳಿಲ್ಲ. ಅವರು ಅಂಥ ತಪ್ಪನ್ನು ಎಂದೂ ಮಾಡೋದಿಲ್ಲ ಎಂದಿದ್ದಾರೆ ಫರಾ ಖಾನ್. ಶಿರೀಶ್ ಗೆ ಮೊದಲು ಕೋಪ ಬರ್ತಿತ್ತು. ಕೋಪ ಬಂದಾಗ ಅವರನ್ನು ಸಂಭಾಳಿಸೋದು ಕಷ್ಟ. ಸುಮ್ಮನಿದ್ದು, ಮಾತು ಬಿಡುವ ವ್ಯಕ್ತಿಯನ್ನು ಸಹಿಸೋದು ಕಷ್ಟ ಎಂದು ಫರಾ ಖಾನ್ ತಮಾಷೆ ಮಾಡಿದ್ದಾರೆ. ಇಬ್ಬರ ಮಧ್ಯೆ ಸಣ್ಣಪುಟ್ಟ ಸಮಸ್ಯೆ ಬಂದ್ರೂ ಅದನ್ನು ಇಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಪರಿಹರಿಸಿಕೊಂಡಿದ್ದಾಗಿ ಫರಾ ಖಾನ್ ಹೇಳಿದ್ದಾರೆ.
42ನೇ ವಯಸ್ಸಿಗೆ IVF ಚಿಕಿತ್ಸೆಯಿಂದ ತ್ರಿವಳಿಗೆ ಜನ್ಮ ನೀಡಿದ ಫರಾ ಖಾನ್; ನೋವಿನ ಕಥೆ ಬಿಚ್ಚಿಟ್ಟ ನಿರ್ದೇಶಕಿ
ಅರ್ಚನಾ ಜೊತೆ ನಡೆಸಿದ ಸಂದರ್ಶನದಲ್ಲಿ ಫರಾ ಖಾನ್, ತಮ್ಮ ಆಪ್ತ ಸ್ನೇಹಿತ ಶಾರುಕ್ ಖಾನ್ ಬಗ್ಗೆಯೂ ಮಾತನಾಡಿದ್ದಾರೆ. ಪ್ರತಿ ಸಿನಿಮಾ ನಂತರ ಫರಾ ಖಾನ್ ಗೆ ಶಾರುಕ್ ಖಾನ್ (Shah Rukh Khan) ಕಾರು ಗಿಫ್ಟ್ ನೀಡುತ್ತಾರೆ ಎಂಬ ವಿಷ್ಯವನ್ನು ಬಹಿರಂಗಪಡಿಸಿದ್ದಾರೆ. ಫರಾ ಖಾನ್ ಜೊತೆ ಮಾಡಿದ ಎಲ್ಲ ಸಿನಿಮಾ ನಂತ್ರ ಶಾರುಕ್ ಖಾನ್, ಫರಾ ಖಾನ್ ಗೆ ಕಾರ್ ಉಡುಗೊರೆ ನೀಡ್ತಾರಂತೆ. ಫರಾ ಖಾನ್ ಮತ್ತು ಶಾರುಖ್ ಖಾನ್ ಓಂ ಶಾಂತಿ ಓಂ, ಹ್ಯಾಪಿ ನ್ಯೂ ಇಯರ್ ಮತ್ತು ಮೈ ಹೂ ನಾ ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಶೀಘ್ರದಲ್ಲೇ ಇನ್ನೊಂದು ಸಿನಿಮಾ ಮಾಡ್ಬೇಕು, ಹೊಸ ಕಾರ್ ಖರೀದಿ ಮಾಡುವ ಸಮಯ ಬಂದಿದೆ ಎಂದು ಫರಾ ಖಾನ್, ಸಂದರ್ಶನದ ವೇಳೆ ತಮಾಷೆ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.