ಹಾಲಿವುಡ್ ಆಕ್ಷನ್ ಸೀನ್ ಟ್ರೇನಿಂಗ್ ಪಡೆದರೂ ಪ್ರಿಯಾಂಕಾಗೆ ಆಕ್ಸಿಡೆಂಟ್ ಆಗಿದ್ದೇಕೆ?

By Shriram Bhat  |  First Published Nov 2, 2024, 4:38 PM IST

ಸದ್ಯ ಹಾಲಿವುಡ್ ಸಿನಿಮಾಗಳತ್ತ ದೃಷ್ಟಿ ಇಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ, ಅದಕ್ಕಾಗಿ ಅಗತ್ಯವಿರುವ ಎಲ್ಲ ಸಾಹಸ ದೃಶ್ಯಗಳ ತರಬೇತಿ ಪಡೆದಿದ್ದಾರಂತೆ. ಬಾಲಿವುಡ್ ನಟಿಯಾಗಿದ್ದಾಗಲೇ ಅವರಿಗೆ ಭಾರತೀಯ ಚಿತ್ರರಂಗಕ್ಕೆ ಬೇಕಾದ ಎಲ್ಲ ರೀತಿಯ ಟ್ರೇನಿಂಗ್ ಆಗಿತ್ತು. ಆದರೆ..


ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಸದ್ಯ ಭಾರತದಲ್ಲಿಲ್ಲ, ಅಮೆರಿಕಾದಲ್ಲಿ ಇದ್ದಾರೆ. ಹಾಲಿವುಡ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿರುವ ಅವರು  ಅವಕಾಶಕ್ಕಾಗಿ ಬರೋಬ್ಬರಿ ಹತ್ತು ವರುಷ ಕಾದಿದ್ದಾರಂತೆ. ಅಮೆರಿಕಾದ ಪಾಪ್ ಸಿಂಗರ್ ನಿಕ್ ಜೊನಾಸ್ (Nick Jonas) ಅವರನ್ನು ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದು 2018ರಲ್ಲಿ. ಆದರೆ, ಅದಕ್ಕೂ ಮೊದಲು ಅವರು ವಿಶ್ವ ಸುಂದರಿ ಪಟ್ಟ ಪಡೆದವರಾದ್ದರಿಂದ ಅದೂ ಇದೂ ಶೋಗೆ ಅಥವಾ ಪ್ರಶಸ್ತಿ ಸಮಾರಂಭಗಳಿಗೆ ವಿದೇಶಗಳಿಗೆ ಭೇಟಿ ಮಾಡುತ್ತಿದ್ದುದು ಸಾಮಾನ್ಯವಾಗಿತ್ತು. 

ಬಾಲಿವುಡ್‌ ಚಿತ್ರರಂಗದಲ್ಲಿ ಅವರು ಸ್ಟಾರ್ ನಟಿಯಾಗಿದ್ದಾಗಲೇ, ಅಲ್ಲಿ ಹಾಲಿವುಡ್ ಚಿತ್ರರಂಗದ ಮೇಲೆ ಅವರೊಂದು ಕಣ್ಣು ಇಟ್ಟಿದ್ದರು. ಆದರೆ, ಸಾಕಷ್ಟು ಪ್ರಯತ್ನದ ಬಳಿಕವಷ್ಟೇ ಅವರಿಗೆ ಹಾಲಿವುಡ್ ಚಿತ್ರರಂಗ ಬಾಗಿಲು ತೆರೆದಿದೆ. ಅಷ್ಟರಲ್ಲಾಗಲೇ ಅವರು ಅಮೆರಿಕಾದ ಹುಡುಗ ನಿಕ್ ಜೊನಾಸ್ ಲವ್ವಲ್ಲಿ ಬಿದ್ದಾಗಿತ್ತು. ಬಳಿಕ ಮದುವೆಯಾಗಿ ಅವರು ಯುಎಸ್‌ ಸೊಸೆ ಕೂಡ ಆಗಿಬಿಟ್ಟರು. 

Tap to resize

Latest Videos

undefined

ನಂಗೆ ಧಾರಾವಾಹಿಗಳಲ್ಲಿ ನಟಿಸುವ ಉತ್ಸಾಹವೇ ಇಲ್ಲ; ಹೀಗಂದಿದ್ಯಾಕೆ ಅರುಂಧತಿ ನಾಗ್?

ಸದ್ಯ ಹಾಲಿವುಡ್ ಸಿನಿಮಾಗಳತ್ತ ದೃಷ್ಟಿ ಇಟ್ಟಿರುವ ನಟಿ ಪ್ರಿಯಾಂಕಾ ಚೋಪ್ರಾ, ಅದಕ್ಕಾಗಿ ಅಗತ್ಯವಿರುವ ಎಲ್ಲ ಸಾಹಸ ದೃಶ್ಯಗಳ ತರಬೇತಿ ಪಡೆದಿದ್ದಾರಂತೆ. ಬಾಲಿವುಡ್ ನಟಿಯಾಗಿದ್ದಾಗಲೇ ಅವರಿಗೆ ಭಾರತೀಯ ಚಿತ್ರರಂಗಕ್ಕೆ ಬೇಕಾದ ಎಲ್ಲ ರೀತಿಯ ಟ್ರೇನಿಂಗ್ ಆಗಿತ್ತು. ಆದರೆ, ಹಾಲಿವುಡ್ ಆಕ್ಷನ್‌ ಬೇಸ್ಡ್‌ ಚಿತ್ರಗಳಿಗೆ ಅದಷ್ಟೇ ಸಾಕಾಗುವುದಿಲ್ಲ, ಇನ್ನೂ ಏನೇನೋ ಬೇಕಾಗುತ್ತದೆ ಎನ್ನಲಾಗಿದೆ. ಹೀಗಾಗಿ ನಟಿ ಪ್ರಿಯಾಂಕಾ ಚೋಪ್ರಾ ಮತ್ತೊಂದಷ್ಟು ಟ್ರೇನಿಂಗ್ ಪಡೆದುಕೊಂಡಿದ್ದಾರೆ. ಆದರೂ ಕೂಡ ಆಕ್ಸಿಡೆಂಟ್ ಆಗಿ ರೆಸ್ಟ್ ತೆಗೆದುಕೊಂಡಿದ್ದಾರೆ ಅದು ಬೇರೆ ಮಾತು!

ಸಾಕಷ್ಟು ಆಕ್ಷನ್ ಸೀನ್‌ಗಳ ಟ್ರೇನಿಂಗ್ ಪಡೆದುಕೊಂಡಿದ್ದರೂ ನಟಿ ಪ್ರಿಯಾಂಕಾ ಚೋಪ್ರಾಗೆ ಅಪಘಾತ ಆಗಿದ್ದು ಹೇಗೆ ಎಂದು ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಅದಕ್ಕೆ ಉತ್ತರ ಹೇಳುವುದು ಸ್ವಲ್ಪ ಕಷ್ಟವೇ. ಏಕೆಂದರೆ, ಅಪಘಾತ ಆಗುವುದು ಯಾಕೆ ಎಂದರೆ ಅಜಾಗರೂಕತೆ ಕಾರಣಕ್ಕೆ ಎನ್ನಲಾಗುವುದು. ಅಜಾಗರೂಕತೆ ಯಾಕೆ ಎಂದರೆ ಕೆಲವೊಮ್ಮೆ ಎಂಥವರಿಗೂ ಅದು ಆಗುತ್ತದೆ ಎನ್ನಲಾಗುವುದು. ಆದರೆ, ಕೆಲವೊಮ್ಮೆ ಯಾರದೋ ಅಜಾಗರೂಕತೆ ಕಾರಣಕ್ಕೆ ಯಾರಿಗೋ ಸಮಸ್ಯೆ ಆಗುವುದು. ಇದನ್ನೇ ದುರಾದೃಷ್ಟ ಎನ್ನವುದು..!

ಡಾ ರಾಜ್‌ ಭಾರೀ ಅಪರೂಪದ ವಿಡಿಯೋ; ಬಂದವರೆದುರು ಅಣ್ಣಾವ್ರು ಹೇಳಿದ್ದೇನು?

ಮೂರು ವರ್ಷಗಳ ಡೇಟಿಂಗ್ ಹಾಗು ಲವ್‌ ಬಳಿಕವಷ್ಟೆ ಪರಸ್ಪರ ಮದುವೆಯಾಗಲು ಒಪ್ಪಿ ಸಪ್ತಪದಿ ತುಳಿದಿದ್ದಾರೆ ಪ್ರಿಯಾಂಕಾ ಹಾಗೂ ನಿಕ್ ಜೋಡಿ. ಅವರಿಬ್ಬರ ವಯಸ್ಸು ಕೂಡ ಮ್ಯಾಚ್ ಆಗುತ್ತಿರಲಿಲ್ಲ. ಪ್ರಿಯಾಂಕಾ ಚೋಪ್ರಾ ನಿಕ್‌ಗಿಂತ ಹತ್ತು ವರ್ಷ ದೊಡ್ಡವರು ಎನ್ನಲಾಗಿದೆ. ಅದೇನೇ ಇರಲಿ, ಅವರಿಬ್ಬರ ಮದುವೆಯಾಗಿದೆ. 

click me!