ಮ್ಯಾನೇಜರ್ ಆಯ್ತು, ಸುಶಾಂತ್ ಸಿಂಗ್ ಆಯ್ತು, ಇದೀಗ ವರ್ಣಚಿತ್ರಕಾರನೂ ಆತ್ಮಹತ್ಯೆ; ಏನಿದು ಟ್ಟೀಟ್?

By Suvarna News  |  First Published Jun 16, 2020, 4:14 PM IST

ಬಾಲಿವುಡ್ ನಟ ಸುಶಾಂತ್ ಸಿಂಗ್ ಟ್ಟೀಟ್ಟರ್ ಖಾತೆ ಕವರ್‌ ಫೋಟೋ ಮಾಡಿರುವ ವರ್ಣಚಿತ್ರಕಾರನೂ ಆತ್ಮಹತ್ಯೆ ಮಾಡಿಕೊಂಡಿರುವ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ....
 


ಬಾಲಿವುಡ್‌ ಹ್ಯಾಂಡ್ಸಂ ಬಾಯ್ ಸುಶಾಂತ್ ಸಿಂಗ್ ಹಾಗೂ ಅತನ ಮುಗುಳು ನಗೆ ಇನ್ನು ನೆನಪುಗಳು ಮಾತ್ರ. ಆತ್ಮಹತ್ಯೆಗೆ  ಶರಣಾದ ಸುಶಾಂತ್ ಸುತ್ತಲೂ  ಸೃಷ್ಟಿಯಾಗಿರುವ ಅನುಮಾನದ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ ಹೊರತು ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಇದರಿಂದ ಇಡೀ ಬಿ-ಟೌನ್‌ ಕಂಗಾಲಾಗಿದೆ. 

ಮ್ಯಾನೇಜರ್‌ ಆತ್ಮಹತ್ಯೆ:

Tap to resize

Latest Videos

ಹೌದು! ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಎಕ್ಸ್ ಮ್ಯಾನೇಜರ್‌ ಆಗಿದ್ದ 28 ವರ್ಷದ ಬಾಲಿವುಡ್‌ ಸೆಲೆಬ್ರಿಟಿ ಮ್ಯಾನೇಜರ್‌ ದಿಶಾ ನೋನಾಲಿ ಮಲಾಡ್‌ ಹೈರೈಸ್‌ ಕಟ್ಟಡದ 12ನೇ ಅಂತಸ್ತಿನಿಂದ ಬಿದ್ದು ಮೃತಪಟ್ಟಿದ್ದರು.ದಿಶಾ ಸಾಲಿಯಾನ್‌ ತನ್ನ ಆತ್ಮೀಯರೊಂದಿಗೆ ಮಲಾಡ್‌ಗೆ ಬಂದಿದ್ದರು ಎನ್ನಲಾಗಿತ್ತು. ನಟ ರೋಹಿತ್ ರೈ ಮನೆಯಲ್ಲಿ ಡಿನ್ನರ್‌ಗಾಗಿ ಸೇರಿಕೊಂಡಿದ್ದರು ಆನಂತರ  ಒಟ್ಟು 6 ಸ್ನೇಹಿತರು ಡ್ರಿಂಕ್ಸ್ ಮಾಡಿದ್ದಾರೆ. 

ಸುಶಾಂತ್‌ ಸಾವಿಗೆ ಆಲಿಯಾ ಕಂಬನಿ: ಟೀಕಿಸಿದವಳಿಗೆ ಫ್ಯಾನ್ ತರಾಟೆ!

ಅಪಾರ್ಟ್‌ಮೆಂಟ್‌ ಕಿಟಕಿ ಸಮೀಪಕ್ಕೆ  ನಡೆದು ಬಂದ ದಿಶಾ ಸುಮಾರು 1 ಗಂಟೆಗೆ ಅಲ್ಲಿಂದ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

ಸುಶಾಂತ್ ಸಿಂಗ್ ಆತ್ಮಹತ್ಯೆ:

ಮ್ಯಾನೇಜರ್‌ ಆತ್ಮಹತ್ಯೆ ಮಾಡಿಕೊಂಡ 4 ದಿನಗಳ ನಂತರ ನಟ ಸುಶಾಂತ್ ಸಿಂಗ್ ತನ್ನ ಮುಂಬೈ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಾವುದೇ ಸುಳಿವು ಅಥವಾ ಸಾಕ್ಷಿಗಳು ಲಭ್ಯವಾಗಿಲ್ಲ ಆದರೆ ಸುಂಶಾತ್ ಆಪ್ತರು ಮಾತ್ರ ಇದನ್ನು ಕೊಲೆ ಎಂದು ಹೇಳುತ್ತಿದ್ದಾರೆ. 

ಬಾಲಿವುಡ್‌ ಒತ್ತಡದಿಂದಾಗಿ ಸುಶಾಂತ್‌ ಆತ್ಮಹತ್ಯೆ? ಕಣ್ಣೀರಿಟ್ಟಿದ್ದ ನಟ! ...

ಕೆಲವರ ಪ್ರಕಾರ ಸುಶಾಂತ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ, ಕೆಲವರು ಬಾಲಿವುಡ್‌ ಮಂದಿ ಸುಶಾಂತ್‌ನನ್ನು ನಿರಾಕರಿಸಿದ್ದರು ಎನ್ನಲಾಗಿದೆ ಇನ್ನು ಕೆಲವರು ಪ್ರೀತಿ-ಪ್ರೇಮ ಎಂಬ ಹೆಸರು ಕಟ್ಟುತ್ತಿದ್ದಾರೆ.

ವರ್ಣಚಿತ್ರಕಾರನೂ ಆತ್ಮಹತ್ಯೆ:

ಕೆಲ ತಿಂಗಳುಗಳ ಹಿಂದೆ ಟ್ಟಿಟರ್‌ ಖಾತೆಯ ಕವರ್ ಫೋಟೋ ಬದಲಾಯಿಸಿದ ನಟ ಸುಶಾಂತ್ ಸಿಂಗ್ ಅಯ್ಕೆಯನ್ನು ಜನರು ಮೆಚ್ಚಿಕೊಂಡರು. ವಾ! ಎಂಥಾ ಪೇಂಟಿಂಗ್ ಎಂದು ಕೊಂಡಾಡಿದ್ದರು. 

ಒಂದು ಅನ್ ಟೋಲ್ಡ್ ಡೆತ್ ಸ್ಟೋರಿ ಜೀವನ, ಅವಕಾಶ, ರೈಲು ಮತ್ತು ಸುಶಾಂತ್ ಸಿಂಗ್ ...

ವರ್ಣಚಿತ್ರಕಾರ ವಿನ್ಸೆಂಟ್‌ ಗೋ ಮಾಡಿರುವ ಈ 'ಸ್ಟಾರಿ  ನೈಟ್ಸ್‌'  ಎಂಬ ಪ್ರಸಿದ್ಧ ಕಲೆಯನ್ನು ಸುಶಾಂತ್ ಅಪ್ಲೋಡ್‌ ಮಾಡಿದ್ದರು. ಆದರೆ ಈ ಡಚ್‌ ಮೂಲದ ವರ್ಣಚಿತ್ರಕಾರನ ಸಾವು ಈಗ ಎಲ್ಲೆಡೆ ಮಾತಾಗಿದೆ. 1889ರಲ್ಲಿ ಸ್ಟಾರ್ ನೈಟ್‌ ಚಿತ್ರಿಸುವ ವಾನ್‌ ಗೋ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಇದಾದ ಒಂದು ವರ್ಷ ಅಂದ್ರೆ 1890ರಲ್ಲಿ ವಾನ್‌ ಗೋ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಚಾರ ಈಗ ಬಾರಿ ಚರ್ಚೆಯಾಗುತ್ತಿದೆ.

click me!