'ರೇಪ್, ಕೊಲೆ ಬೆದರಿಕೆ ಹಾಕಲು ಹೇಸದ ಸಲ್ಮಾನ್ ಖಾನ್ ಕುಟುಂಬ'

By Suvarna News  |  First Published Jun 16, 2020, 3:07 PM IST

ಬಾಲಿವುಡ್ ನಲ್ಲಿ ಎಲ್ಲವೂ ಸರಿ ಇಲ್ಲ/ ಸಲ್ಮಾನ್ ಖಾನ್ ಕುಟುಂಬದ ವಿರುದ್ಧ ನಿರ್ದೇಶಕನ ಆರೋಪ/ ಕೊಲೆ ಬೆದರಿಕೆ ಹಾಕಲು ಸಲ್ಮಾನ್ ಕುಟುಂಬ ಅಂಜಲ್ಲ/ ಕಳೆದ ಹತ್ತು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದೇನೆ


ಮುಂಬೈ(ಜೂ. 16)  ಬಾಲಿವುಡ್ ನಲ್ಲಿ ಎಲ್ಲವೂ ಸರಿ ಇಲ್ಲ. ಸುಶಾಂತ್ ಅವರನ್ನು ಬ್ಯಾನ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿತ್ತು. ಇದೇ ಕಾರಣಕ್ಕೆ ನಟ ಆತ್ಮಹತ್ಯೆ ಮಾಡಿಕೊಂಡರು ಎಂಬ ಸುದ್ದಿ ಹರಿದಾಡುತ್ತಿರುವಾಗ  ನಿರ್ದೇಶಕರೊಬ್ಬರು ಸಲ್ಮಾನ್ ಖಾನ್ ಮತ್ತು ಅವರ ಕುಟುಂಬದ ಮೇಲೆ ಗುಡುಗಿದ್ದಾರೆ.

ದಬಾಂಗ್ ಚಿತ್ರದ ಮುಖೇನ ಸಲ್ಮಾನ್ ಖಾನ್ ಗೆ ಹೊಸ ಅವತಾರ ಕೊಟ್ಟಿದ್ದ ನಿರ್ದೇಶಕ ಅಭಿನವ್‌ ಕಶ್ಯಪ್‌ ಅವರು ಸಲ್ಮಾನ್‌ ಖಾನ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

Tap to resize

Latest Videos

ಸಲ್ಮಾನ್ ಖಾನ್ ಕುಟುಂಬದ ಅಸಲಿ ಮುಖವೇ ಬೇರೆ ಇದೆ. ಕಳೆದ ಹತ್ತು ವರ್ಷಗಳಿಂದ ಸಲ್ಮಾನ್ ನನ್ನೆಲ್ಲ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಗಟ್ಟಿ ದನಿಯಲ್ಲಿ ಆರ್ಭಟಿಸಿದ್ದಾರೆ. ಈ ಹೇಳಿಕೆಗಳ ಬಾಳಿವುಡ್ ನಲ್ಲಿ ಅಲ್ಲೋಲ ಕಲ್ಲೋಲ ಎಬ್ಬಿಸಿವೆ.

ಬಾಲಿವುಡ್ ಒತ್ತಡದಿಂದಲೇ ಸುಶಾಂತ್ ಆತ್ಮಹತ್ಯೆ; ಕಣ್ಣೀರಿಟ್ಟ ನಟ

ಕೊಲೆ ಮತ್ತು ರೇಪ್‌ ಬೆದರಿಕೆ ಹಾಕುವ ಮಟ್ಟಕ್ಕೂ ಸಲ್ಲು ಕುಟುಂಬದವರು ಇಳಿಯುತ್ತಾರೆ ಎಂಬ  ಆರೋಪ ಅಭಿನವ್‌ ಮಾಡಿದ್ದಾರೆ. ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಅಭಿನವ್ ಅನೇಕ ವಿಚಾರಗಳನ್ನು ಬರೆದುಕೊಂಡಿದ್ದಾರೆ.

ಹತ್ತು ವರ್ಷಗಳಿಂದ ನೋವು ಅನುಭವಿಸುತ್ತಿದ್ದೇನೆ, ಕೆಲವರು ನಿಜವಾಗಿಯೂ ನನ್ನ ಬಗ್ಗೆ ಕಾಳಜಿ ಮಾಡುತ್ತಿದ್ದಾರೆ.  ನಾನು ಕಷ್ಟ ಎದುರಿಸಿದ ಮಾತ್ರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ ಎಂದು ಬರೆದಿದ್ದಾರೆ. 

#BoycottSalmanKhan ಎಂಬ ಹ್ಯಾಷ್ ಟ್ಯಾಗ್ ಬಳಸಿದ್ದು ಖಾನ್ ಮೇಲಿನ ಆರೋಪ ಪಟ್ಟಿ ಮುಂದೆ ಇಟ್ಟಿದ್ದಾರೆ. ಬಾಲಿವುಡ್ ನ್ನು ಖಾನ್ ಗಳಿಂದ ಕಾಪಾಡಬೇಕು ಎಂಬ ಅರ್ಥದಲ್ಲಿಯೂ ಬರೆದಿದ್ದಾರೆ.

ಸಲ್ಮಾನ್‌ ಖಾನ್‌ ನಟನೆಯ ದಬಾಂಗ್‌ ಸಿನಿಮಾ 2010ರಲ್ಲಿ ತೆರೆಕಂಡಿತು, ಅಭಿನವ್‌ ಕಶ್ಯಪ್‌ ನಿರ್ದೇಶನ ಮಾಡಿದ್ದರು. ನಂತರ 'ದಬಾಂಗ್‌ 2' ಸೆಟ್ಟೇರಿತು. ಆದರೆ ಅದಕ್ಕೆ ಅಭಿನವ್‌ ಕಶ್ಯಪ್‌ ನಿರ್ದೇಶಕ ಆಗಿರಲಿಲ್ಲ.  ಅಷ್ಟೊತ್ತಿಗಾಗಲೇ ಖಾನ್‌ ಕುಟುಂಬದವರು ಕಿರುಕುಳ ನೀಡಲು ಆರಂಭಿಸಿದ್ದರು. ಸಲ್ಮಾನ್‌ ಖಾನ್‌ ಸಹೋದರರಾದ ಸೊಹೈಲ್‌ ಖಾನ್‌, ಅರ್ಬಾಜ್‌ ಖಾನ್‌ ಕಾರಣವಿಲ್ಲದೇ ನನ್ನ ಮೇಲೆ ಹಕ್ಕು ಸ್ಥಾಪಿಸಲು ಬಂದಿದ್ದರು ಎಂದು ನಿರ್ದೇಶಕ ಹೇಳಿದ್ದಾರೆ. 

ಇದಾದ ಮೇಲೆ ಬೇರೆ ಸಂಸ್ಥೆಯೊಂದಿಗೆ ಕೆಲಸ ಮಾಡಲು ಮುಂದಾದರೆ ಅಲ್ಲಿಯೂ ಮೂಗು ತೂರಿಸಿದರು.  ಇನ್ನೊಂದು ಸಂಸ್ಥೆ ಜತೆ ಸೇರಿ ಕೆಲಸ ಮಾಡಿದರೂ ಅಲ್ಲಿಯೂ ಬಂದು ಕಿರುಕುಳ ಕೊಟ್ಟರು ಎಂದು ಆರೋಪಿಸಿದ್ದಾರೆ.  ಇದಕ್ಕೂ ಮೊದಲು ನಟಿ ಕಂಗನಾ ರಣಾವತ್ ಸಹ  ಸೆಲೆಬ್ರಿಟಿಗಳ ವಿರುದ್ಧ ಆರೋಪ ಹೊರಹಾಕಿದ್ದರು.

click me!