ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ; ಕಾರಣವೇನು?

Published : May 29, 2022, 01:04 PM IST
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ; ಕಾರಣವೇನು?

ಸಾರಾಂಶ

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಸದ್ಯ ಪುಷ್ಪ-2(Pushpa-2) ಸಿನಿಮಾದ ಚಿತ್ರೀಕರಣಕ್ಕಾಗಿ ಸಜ್ಜಾಗುತ್ತಿದೆ. ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್ ಎರಡನೇ ಭಾಗದ ಮೇಲೆ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಮೊದಲ ಭಾಗ ರಿಲೀಸ್ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಇನ್ನು 2ನೇ ಭಾಗದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಇದಕ್ಕೆ ಕಾರಣ ಇನ್ನು ಸ್ಕ್ರಿಪ್ಟ್ ಕೆಲಸ ಮುಗಿದಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್(Allu Arjun) ಸದ್ಯ ಪುಷ್ಪ-2(Pushpa-2) ಸಿನಿಮಾದ ಚಿತ್ರೀಕರಣಕ್ಕಾಗಿ ಸಜ್ಜಾಗುತ್ತಿದೆ. ಮೊದಲ ಭಾಗದ ದೊಡ್ಡ ಮಟ್ಟದ ಸಕ್ಸಸ್ ಎರಡನೇ ಭಾಗದ ಮೇಲೆ ನಿರೀಕ್ಷೆ ದುಪ್ಪಟ್ಟು ಮಾಡಿದೆ. ಮೊದಲ ಭಾಗ ರಿಲೀಸ್ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಆದರೂ ಇನ್ನು 2ನೇ ಭಾಗದ ಚಿತ್ರೀಕರಣ ಪ್ರಾರಂಭವಾಗಿಲ್ಲ. ಇದಕ್ಕೆ ಕಾರಣ ಇನ್ನು ಸ್ಕ್ರಿಪ್ಟ್ ಕೆಲಸ ಮುಗಿದಿಲ್ಲ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹೌದು, ಇದೀಗ ಪುಷ್ಪ-2 ಸಿನಿಮಾದ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದ್ದು ನಿರ್ದೇಶಕ ಸುಕುಮಾರ್(Sukumar) ಪುಷ್ಪ-2 ಚಿತ್ರದ ಸ್ಕ್ರಿಪ್ಟ್ ಸಂಪೂರ್ಣವಾಗಿ ಬದಲಾಯಿಸುತ್ತಿದ್ದಾರೆ ಎನ್ನಲಾಗಿದೆ.

ಪುಷ್ಪ ಸಕ್ಸಸ ಬಳಿಕ ಪುಷ್ಪ-2 ಮೇಲೆ ಒತ್ತಡ ಹೆಚ್ಚಾಗಿದೆ. ಹಾಗಾಗಿ ಅದ್ಭುತವಾಗಿ ಸಿನಿಮಾವನ್ನು ಕಟ್ಟಿಕೊಡುವ ಉದ್ದೇಶದಿಂದ ಸ್ಕ್ರಿಪ್ಟ್‌ನಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡಲು ಸಿನಿಮಾತಂಡ ನಿರ್ಧರಿಸಿದಿಯಂತೆ. ಕೆಜಿಎಫ್-2 ಸಿನಿಮಾದ ದೊಡ್ಡ ಮಟ್ಟದ ಯಶಸ್ಸು ಅನೇಕ ನಿರ್ದೇಶಕರ ನಿದ್ದೆ ಗೆಡಿಸಿದೆ. ಅದರಲ್ಲಿ ಸುಕುಮಾರ್ ಕೂಡ ಒಬ್ಬರು. ಹಾಗಾಗಿ ಪುಷ್ಪ-2 ಸಿನಿಮಾ ಕಥೆಯನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮತ್ತು ತೀವ್ರವಾಗಿ ಕಟ್ಟಿಕೊಡಲು ನಿರ್ಧರಿಸಿದ್ದಾರೆ. ಹಾಗಾಗಿ ಕಥೆಯಲ್ಲಿ ಸಂಪೂರ್ಣ ಬದಲಾವಣೆ ಮಾಡಲು ಸುಕುಮಾರ್ ನಿರ್ಧರಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

ಈಗಾಗಲೇ ರೆಡಿ ಮಾಡಿರುವ ಹಳೆ ಕಥೆಯನ್ನೇ ಬಳಸುವ ಬದಲು ಹೊಸ ಕಥೆ ರೂಪಿಸುತ್ತಿದ್ದಾರಂತೆ. ಇದು ಸಿನಿಮಾದ ಬಜೆಟ್ ಕೂಡ ದುಪ್ಪಟ್ಟು ಆಗಲಿದೆಯಂತೆ. ಅಲ್ಲದೆ ಸಿನಿಮಾ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆಯಂತೆ. ಆದರೂ ಉತ್ತಮ ಸಿನಿಮಾ ಕಟ್ಟಿಕೊಡಬೇಕೆನ್ನುವ ಕಾರಣಕ್ಕೆ ಹೊಸ ಕಥೆಯಲ್ಲಿ ನಿರತರಾಗಿದ್ದಾರಂತೆ ನಿರ್ದೇಶಕ ಸುಕುಮಾರ್. ಸಿನಿಮಾದ ಚಿತ್ರೀಕರಣ ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.

ವರದಕ್ಷಿಣೆ ತಗೊಂಡಿದ್ರಾ ಅಲ್ಲು ಅರ್ಜುನ್‌; ಬನ್ನಿ ಪತ್ನಿ ಸ್ನೇಹಾ ರೆಡ್ಡಿ ತಂದೆ ಹೇಳಿದ್ದೇನು?

ಪುಷ್ಪ-2, ಮೊದಲ ಭಾಗಕ್ಕಿಂತ ಮತ್ತಷ್ಟು ಕುತೂಹಲ ಮತ್ತು ಅದ್ದೂರಿಯಾಗಿ ಇರಲಿದೆಯಂತೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರ್ತಿರುವ ಪುಷ್ಪ-2 ಸಿನಿಮಾ ಹೇಗಿರಲಿದೆ ಎಂದು ಅಭಿಮಾನಿಗಳು ಈಗಾಗಲೇ ಕಾತರದಿಂದ ಕಾಯುತ್ತಿದ್ದಾರೆ. ಹಿಂದಿಯಲ್ಲಿ ಈ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿ ಬೀಗಿತ್ತು. ಹಾಗಾಗಿ ಉತ್ತರ ಭಾರತದಲ್ಲೂ ಪುಷ್ಪ-2 ಕ್ರೇಜ್ ಹೆಚ್ಚಾಗಿದೆ. ಅಭಿಮಾನಿಗಳ ನಿರೀಕ್ಷೆಗೂ ಮೀರಿ ಸಿನಿಮಾ ಕಟ್ಟಿಕೊಡುವ ಒತ್ತಡದಲ್ಲಿದೆ ಸಿನಿಮಾತಂಡ.

ಅಲ್ಲು ಅರ್ಜುನ್ ಸಿನಿಮಾಗೆ ಭಾರಿ ಬೇಡಿಕೆ; OTT ರೈಟ್ಸ್‌ಗಾಗಿ ಇಬ್ಬರ ನಡುವೆ ಬಿಗ್ ಫೈಟ್

ಸಿನಿಮಾದಲ್ಲಿ ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ರಶ್ಮಿಕಾ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಿದರು. ಈ ಸಿನಿಮಾದಲ್ಲಿ ರಶ್ಮಿಕಾ ಡಿ ಗ್ಲಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಇನ್ನು ವಿಶೇಷ ಎಂದರೆ ಸಿನಿಮಾದಲ್ಲಿ ಮಲಯಾಳಂ ಖ್ಯಾತ ನಟ ಫಹಾದ್ ಫಾಸಿಲ್ ಕಾಣಿಸಿಕೊಂಡಿದ್ದಾರೆ. ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಫಹಾದ್ 2ನೇ ಭಾಗದಲ್ಲಿ ಸಂಪೂರ್ಣವಾಗಿ ಇರಲಿದ್ದಾರೆ. ಹಾಗಾಗಿ ಪುಷ್ಪ-2 ಮತ್ತಷ್ಟು ಕುತೂಹಲ ಹಚ್ಚಿಸಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಯಾವುದೇ ಹಿನ್ನೆಲೆ ಇಲ್ಲದೆ ಸ್ಟಾರ್ ಆದ ನಟ.. ಮಗ ಹುಟ್ಟಿದಾಗ ಜಾತಕ ಹೇಳಿದ್ರು ಚಿರಂಜೀವಿ: ಅಷ್ಟಕ್ಕೂ ಯಾರು ಆ ಹೀರೋ?
ಮದುವೆ ಬಳಿಕ ಹನಿಮೂನ್ ಕ್ಯಾನ್ಸಲ್ ಮಾಡಿದ ಸಮಂತಾ? ಈ ಹೊಸ ನಿರ್ಧಾರ ತಗೊಂಡು ಶಾಕ್ ಕೊಟ್ಟಿದ್ಯಾಕೆ?