'ನನ್ನರಸಿ ರಾಧೆ'ಗೆ ಮತ್ತೆ ವಾಪಾಸ್ ಆಗ್ತಾರಾ ತೇಜಸ್ವಿನಿ; ಲಾವಣ್ಯ ಎಂಟ್ರಿ ಸೀಕ್ರೆಟ್ ಇಲ್ಲಿದೆ

Published : May 29, 2022, 11:41 AM IST
'ನನ್ನರಸಿ ರಾಧೆ'ಗೆ ಮತ್ತೆ ವಾಪಾಸ್ ಆಗ್ತಾರಾ ತೇಜಸ್ವಿನಿ; ಲಾವಣ್ಯ ಎಂಟ್ರಿ ಸೀಕ್ರೆಟ್ ಇಲ್ಲಿದೆ

ಸಾರಾಂಶ

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ)(Nannarasi Radhe ಕೂಡ ಒಂದು. ಅಗಸ್ತ್ಯ ಮತ್ತು ಇಂಚರ ಪಾತ್ರ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಧಾರಾವಾಹಿ ಈಗಾಗಲೇ ಅನೇಕ ಟ್ವಿಸ್ಟ್ ಅಂಡ್ ಟರ್ನ್‌ಗಳೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಾ ಮುನ್ನುಗ್ಗುತ್ತಿದೆ. ಇದೀಗ ಈ ಧಾರಾವಾಹಿ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಬಹಿರಂಗವಾಗಿದೆ. 

ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ನನ್ನರಸಿ ರಾಧೆ)(Nannarasi Radhe ಕೂಡ ಒಂದು. ಅಗಸ್ತ್ಯ ಮತ್ತು ಇಂಚರ ಪಾತ್ರ ಕನ್ನಡ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಧಾರಾವಾಹಿ ಈಗಾಗಲೇ ಅನೇಕ ಟ್ವಿಸ್ಟ್ ಅಂಡ್ ಟರ್ನ್‌ಗಳೊಂದಿಗೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಾ ಮುನ್ನುಗ್ಗುತ್ತಿದೆ. ಅಂದಹಾಗೆ ಮುಂದಿನ ದಿನಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಪ್ರೇಕ್ಷಕರ ಗಮನ ಸೆಳೆದ ಪಾತ್ರಗಳಲ್ಲಿ ಲಾವಣ್ಯ ಪಾತ್ರ ಕೂಡ ಒಂದು. ಈ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದ ಲಾವಣ್ಯ ಪಾತ್ರ ಕೆಳವು ತಿಂಗಳಿಂದ ನಾಪತ್ತೆಯಾಗಿತ್ತು. ಲಾವಣ್ಯ ಆಗಿ ನಟಿ ತೇಜಸ್ವಿನಿ ಪ್ರಕಾಶ್(Tejaswini Prakash) ನಟಿಸಿದ್ದರು.

ನಟಿ ತೇಜಸ್ವಿನಿ ಧಾರಾವಾಹಿಯಿಂದ ಹೊರ ನಡೆದ ಮೇಲೆ ಲಾವಣ್ಯ ಪಾತ್ರ ಅಲ್ಲಿಗೆ ಕೊನೆಯಾಯಿತು ಅಂತ ಪ್ರೇಕ್ಷಕರು ಅಂದ ಕೊಂಡಿದ್ದರು. ಆದರೀಗ ಈ ಪಾತ್ರಕ್ಕೆ ಮತ್ತೆ ಜೀವ ಕೊಡಲು ನಿರ್ಧರಿಸಿದ್ದಾರೆ ನಿರ್ದೇಶಕರು. ಹಾಗಾದ್ರೆ ತೇಜಸ್ವಿನಿ ಪ್ರಕಾಶ್ ಮತ್ತೆ ವಾಪಾಸ್ ಆಗ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆಯಾ. ತೇಜಸ್ವಿನಿ ಮತ್ತೆ ನನ್ನರಸಿ ರಾಧೆ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಶೀಘ್ರದಲ್ಲೇ ತೇಜಸ್ವಿನಿ ಲಾವಣ್ಯ ಆಗಿ ಪ್ರತಿದಿನ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಸುಮಾರು ಮೂರು ತಿಂಗಳ ಅಂತರದ ಬಳಿಕ ತೇಜಸ್ವಿನಿ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಮೂಲಗಳ ಪ್ರಕಾರ ತೇಜಸ್ವಿನಿ ಈಗಾಗಲೇ ಚಿತ್ರೀಕರಣ ಪ್ರಾರಂಭ ಮಾಡಿದ್ದಾರಂತೆ. ಇತ್ತೀಚಿಗಷ್ಟೆ ನಟಿ ತೇಜಸ್ವಿನಿ ಧಾರಾವಾಹಿ ತಂಡದ ಜೊತೆ ಕಾಣಿಸಿಕೊಂಡಿದ್ದರು. ಹಾಗಾಗಿ ನಟಿ ತೇಜಸ್ವಿನಿ ಲಾವಣ್ಯ ಆಗಿ ಮತ್ತೆ ಬರಲಿದ್ದಾರೆ ಎನ್ನಲಾಗಿದೆ. ಅಂದಹಾಗೆ ಇತ್ತೀಗಷ್ಟೆ ನಟಿ ತೇಜಸ್ವಿನಿ ಸಾಮಾಜಿಕ ಜಾಲತಾಣದಲ್ಲಿ ಸದ್ಯದಲ್ಲೇ ಧಾರಾವಾಹಿಗೆ ಮರಳುವ ಬಗ್ಗೆ ಸುಳಿವು ನೀಡಿದ್ದರು. 

ಕಿರುತೆರೆ ಕಲಾವಿದರ ಮದುವೆ ಸಂಭ್ರಮ; ನಟ ಶಶಿ ಹೆಗ್ಡೆ ಜೊತೆ ಸಪ್ತಪದಿ ತುಳಿದ ದಾಸ ಪುರಂದರ ನಟಿ ಲಾವಣ್ಯ

ಲಾವಣ್ಯ ಪಾತ್ರ ದೊಡ್ಡ ಮಟ್ಟದ ಖ್ಯಾತಿಗಳಿಸಿತ್ತು. ಪ್ರಾರಂಭದಲ್ಲಿ ಲಾವಣ್ಯ ಒಳ್ಳೆಯವಳ ಹಾಗೆ ನಾಟಿಸುತ್ತಾ ಮನೆಯ ಆಸ್ತಿ ಹೊಡೆಯುವ ಸಂಕು ರೂಪಿಸುತ್ತಿದ್ದಳು. ಬಳಿಕ ಲಾವಣ್ಯ ಕರಾಳ ಮುಖ ಬಲಯಾದ ಬಳಿಕ ಮನೆಯವರೇ ಹೊರಹಾಕುತ್ತಾರೆ. ನಂತರ ಲಾವಣ್ಯ ಪಾತ್ರ ಧಾರಾವಾಹಿಯಿಂದ ನಾಪತ್ತೆಯಾಗಿತ್ತು. ಇದೀಗ ಮತ್ತೆ ಎಂಟ್ರಿ ಕೊಟ್ಟ ಬಳಿಕ ಧಾರಾವಾಹಿ ಯಾವೆಲ್ಲ ಟ್ವಿಸ್ಟ್ ಪಡೆದುಕೊಳ್ಳಲಿದೆ ಎಂದು ಪ್ರೇಕ್ಷಕರು ಕಾತರರಾಗಿದ್ದಾರೆ.

Doresani serial : ಪುರುಷೋತ್ತಮ್ ಅವರೇ ಅದೆಷ್ಟು ಬಾರಿ ಎದೆ ಹಿಡ್ಕೊಂಡು ಕೂರ್ತೀರಾ?

ಇತ್ತೀಚಿಗಷ್ಟೆ ನಟಿ ತೇಜಸ್ವಿನಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತನ್ನ ಮದುವೆ ವಿಚಾರವಾಗಿ ತೇಜಸ್ವಿನಿ ಧಾರಾವಾಹಿಯಿಂದ ಬ್ರೇಕ್ ಪಡೆದಿದ್ದರು ಎನ್ನಲಾಗಿದೆ. ಇದೀಗ ಮದುವೆ ಮುಗಿದ ಬಳಿಕ ಮತ್ತೆ ಬಣ್ಣ ಹಚ್ಚಲು ಸಿದ್ಧರಾಗಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?