Prabhas: ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಟ್ರೋಲ್: 500 ಕೋಟಿ ಬಜೆಟ್‌ನ ಆದಿಪುರುಷ್ ರೀಶೂಟ್‌ಗೆ ನಿರ್ಧಾರ

By Shruthi Krishna  |  First Published Nov 4, 2022, 3:35 PM IST

500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಆದಿಪುರುಷ್ ಸಿನಿಮಾ ಮತ್ತೆ ರೀಶೂಟ್ ಮಾಡಲು ನಿರ್ಧರಿಸಿದೆ ಎನ್ನುವ ಮಾತು ಕೇಳಿಬಂದಿದೆ. ಈಗಾಗಲೇ ಕೋಟಿ ಕೋಟಿ ಸುರಿದಿರುವ ಸಿನಿಮಾತಂಡಕ್ಕೆ ರೀಶೂಟ್ ಮತ್ತಷ್ಟು ಹೊರೆಯಾಗಲಿದೆ.


ಟಾಲಿವುಡ್ ಸ್ಟಾರ್ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಹಾಕಿತ್ತು. ಆದರೆ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ  ಅಷ್ಟೇ ನಿರಾಸೆ ಮೂಡಿಸಿದೆ. ಕಳಪೆ ಗ್ರಾಫಿಕ್ಸ್, ರಾವಣ ಪಾತ್ರ ಸೇರಿದಂತೆ ಅನೇಕ ವಿಚಾರಗಳಿಗೆ ಆದಿಪುರುಷ್ ಹಿಗ್ಗಾಮುಗ್ಗಾ ಟ್ರೋಲ್ ಆಗಿತ್ತು. ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆ ಸಿನಿಮಾತಂಡಕ್ಕೆ ಭಯ ಹುಟ್ಟಿಸಿದೆ. ಕೋಟಿ ಕೋಟಿ ವೆಚ್ಚದಲ್ಲಿ ತಯಾರಾದ ಆದಿಪುರುಷ್ ಟ್ರೋಲ್ ಆದ ಪರಿಗೆ ಚಿತ್ರತಂಡ ರಿಲೀಸ್ ಡೇಟ್ ಅನ್ನೇ ಮುಂದಕ್ಕೆ ಹಾಕಲು ನಿರ್ಧರಿಸಿದೆ ಎನ್ನುವ ಮಾತು ಕೇಳಿಬರುತ್ತಿದೆ. ಈ ಸುದ್ದಿ ಬೆನ್ನಲ್ಲೇ ಮತ್ತೊಂದು ವಿಚಾರ ಬಹಿರಂಗವಾಗಿದೆ. ಆದಿಪುರುಷ್ ಸಿನಿಮಾದ ಕೆಲವು ದೃಶ್ಯಗಳನ್ನು ರೀಶೂಟ್ ಮಾಡಲು ಸಿನಿಮಾತಂಡ ಪ್ಲಾನ್ ಮಾಡಿದೆ ಎನ್ನಲಾಗಿದೆ. 

500 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾದ ಆದಿಪುರುಷ್ ಸಿನಿಮಾ ಮತ್ತೆ ರೀಶೂಟ್ ಮಾಡಿದರೆ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಾಗಲಿದೆ. ಇದರಿಂದ ಸಿನಿಮಾತಂಡಕ್ಕೆ ದೊಡ್ಡ ಹೊಡೆತ ಬಿದ್ದಂತೆ ಆಗಿದೆ. ಆದರೂ ಹೇಗಾದರೂ ಮಾಡಿ ಈ ಟ್ರೋಲ್​ಗಳಿಂದ ತಪ್ಪಿಸಿಕೊಳ್ಳಬೇಕು ಎಂದು ನಿರ್ಧರಿಸಿ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಿ ಕೆಲ ಭಾಗದ ಶೂಟ್ ಅನ್ನು ಮರು ಚಿತ್ರೀಕರಿಸಲು ಪ್ಲಾನ್ ಮಾಡಿದೆ. ಕೆಲ ದೃಶ್ಯಗಳಲ್ಲಿ ವಿಎಫ್​ಎಕ್ಸ್​ಗಳ ಮೇಲೆ ಮರು ಕೆಲಸ ಮಾಡಲು ಚಿತ್ರತಂಡ ನಿರ್ಧರಿಸಿದೆ. ಜಿಲ್ಜಿಯ ಹಾಗೆ ಚಿತ್ರೀಕರಿಸಿದ್ದ ರಾವಣ ಪಾತ್ರವನ್ನು ಬದಲಾಯಿಸುತ್ತಾರಾ ಎನ್ನುವ ಕುತೂಹಲ ಹೆಚ್ಚಾಗಿದೆ. ಒಂದು ವೇಳೆ ರಾವಣನ ಪಾತ್ರ ಸಂಪೂರ್ಣ ಬದಲಾಯಿಸಿದ್ದೇ ಆದರೆ ಮತ್ತಷ್ಟು ಕೋಟಿ ಖರ್ಚಾಗಲಿದೆ.  ಇದರಿಂದ ಸಿನಿಮಾದ ಬಜೆಟ್ ಮತ್ತಷ್ಟು ಹೆಚ್ಚಲಿದೆ.

ರೇಸ್‌ನಿಂದ ಹಿಂದೆ ಸರಿದ ಪ್ರಭಾಸ್; ಬಿಗ್ ಬಜೆಟ್ ಚಿತ್ರಗಳಿಗೆ ಹೆದರಿ 'ಆದಿಪುರುಷ್' ರಿಲೀಸ್ ಮುಂದಕ್ಕೆ?

Tap to resize

Latest Videos

ಅಂದುಕೊಂಡಂತೆ ಆಗಿದ್ದರೆ ಆದಿಪುರುಷ್ ಸಿನಿಮಾ ಮುಂದಿನ ವರ್ಷ ಜನವರಿ 12ಕ್ಕೆ ಚಿತ್ರಮಂದಿರಕ್ಕೆ ಬರಲು ಸಜ್ಜಾಗಿತ್ತು. ಆದರೆ ಆದಿಪುರುಷ್ ಸಿನಿಮಾದ ಟ್ರೈಲರ್‌ಗೆ ಸಿಕ್ಕ ಪ್ರತಿಕ್ರಿಯೆಯಿಂದ ರಿಲೀಸ್ ಡೇಟ್ ಮುಂದೂಡುವ ನಿರ್ಧಾರ ಮಾಡಿದೆ. ಸಂಕ್ರಾಂತಿಗೆ ಅನೇಕ  ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ. ಹಾಗಾಗಿ ಆ ಸಿನಿಮಾಗಳ ಜೊತೆ ಫೈಟ್ ಮಾಡಲು ಹಿಂದೇಟು ಹಾಕಿದೆ ಅದಿಪುರುಷ್. ಟ್ರೋಲ್ ಗಳಿಂದ ಹೆದರಿದ ಆದಿಪುರುಷ್ ತಂಡ ತಮ್ಮ ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಹಾಕುವ ಪ್ಲಾನ್ ಮಾಡಿದೆ. ಜೊತೆಗೆ ರೀಶೂಟ್ ಕೂಡ ಮಾಡುತ್ತಿರುವುದರಿಂದ ಇನ್ನಷ್ಟು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಆದಿಪುರುಷ್ ಸಂಕ್ರಾಂತಿಗೆ ಬರುವುದು ಬಹುತೇಕ ಅನುಮಾನವಾಗಿದೆ. 

Prabhas ಹುಟ್ಟು​ಹಬ್ಬಕ್ಕೆ ಥಿಯೇಟರಲ್ಲಿ ಪಟಾಕಿ: ಸೀಟುಗಳ ಸುಟ್ಟು ಭಸ್ಮ

ಅಂದಹಾಗೆ ಆದಿಪುರುಷ್ ಓಂ ರಾವುತ್ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಚಿತ್ರದಲ್ಲಿ ಪ್ರಭಾಸ್ ರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾವಣನಾಗಿ ಸೈಫ್ ಅಲಿ ಖಾನ್ ಮಿಂಚಿದ್ದಾರೆ. ಸೀತೆಯ ಪಾತ್ರದಲ್ಲಿ ಕೃತಿ ಸನೂನ್ ನಟಿಸಿದ್ದಾರೆ. ಸಾಕಷ್ಟು ದೊಡ್ಡ ಸ್ಟಾರ್ ಕಾಸ್ಟ್ ಇರುವ ಆದಿಪುರುಷ್ ಯಾವಾಗ ರಿಲೀಸ್ ಆಗಲಿದೆ? ಟ್ರೋಲ್ ಕಾಟದಿಂದ ತಪ್ಪಿಸಿಕೊಳ್ಳಲು ಇನ್ನೆಷ್ಟು ಕೋಟಿ ಖರ್ಚು ಮಾಡಲಿದೆ ಎಂದು ಕಾದುನೋಡಬೇಕು.  


 


 


 

click me!