65 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ ಜಾನ್ವಿ ಕಪೂರ್ ಕುಟುಂಬ; ಇಲ್ಲಿದೆ ಸಂಪೂರ್ಣ ವಿವರ

Published : Nov 04, 2022, 02:13 PM IST
 65 ಕೋಟಿ ರೂ. ಮೌಲ್ಯದ ಬಂಗಲೆ ಖರೀದಿಸಿದ ಜಾನ್ವಿ ಕಪೂರ್ ಕುಟುಂಬ; ಇಲ್ಲಿದೆ ಸಂಪೂರ್ಣ ವಿವರ

ಸಾರಾಂಶ

ಜಾನ್ವಿ ಕಪೂರ್ ಮತ್ತು ಕುಟುಂಬ  ಮುಂಬೈನ ಪ್ರತಿಷ್ಠಿತ ಪ್ರದೇಶ ಬಾಂದ್ರಾದ ಪಾಲಿ ಹಿಲ್ಸ್‌ನಲ್ಲಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬರೋಬ್ಬರಿ 65 ಕೋಟಿ ರೂ. ಮೌಲ್ಯದ ಅಪಾರ್ಟ್ಮೆಂಟ್ ಇದಾಗಿದೆ ಎನ್ನಲಾಗಿದೆ. 

ಬಾಲಿವುಡ್‌ನಲ್ಲಿ ಕಪೂರ್ ಕುಟುಂಬ ನೇಮ್ ಜೊತೆಗೆ ಆರ್ಥಿಕ ವಿಚಾರದಲ್ಲೂ ಒಂದು ಕೈ ಮೇಲಿದ್ದಾರೆ ಎಂದರೆ ತಪ್ಪಾಗಲ್ಲ. ಕೋಟಿ ಕೋಟಿ ಆಸ್ತಿಯ ಒಡೆಯರಾಗಿದ್ದಾರೆ. ಅದೇ ಕಪೂರ್ ಕುಟುಂಬ ಕುಡಿ ಜಾನ್ವಿ ಕಪೂರ್. ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿರುವ ನಟಿ.  ದಕ್ಷಿಣ ಭಾರತದ ಮೂಲದ ಖ್ಯಾತ ನಟಿ ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಯ ಪುತ್ರಿ. ಸಿನಿಮಾ ವಿಚಾರಕ್ಕೆ ಸದ್ದು ಮಾಡುತ್ತಿದ್ದ ಜಾನ್ವಿ ಇದೀಗ ಕೋಟಿ ಮೌಲ್ಯದ ಆಸ್ತಿ ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಹೌದು,ಜಾನ್ವಿ ಕಪೂರ್ ಮತ್ತು ಕುಟುಂಬ  ಮುಂಬೈನ ಪ್ರತಿಷ್ಠಿತ ಪ್ರದೇಶ ಬಾಂದ್ರಾದ ಪಾಲಿ ಹಿಲ್ಸ್‌ನಲ್ಲಿ ಡ್ಯೂಪ್ಲೆಕ್ಸ್ ಅಪಾರ್ಟ್‌ಮೆಂಟ್ ಖರೀದಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಬರೋಬ್ಬರಿ 65 ಕೋಟಿ ರೂ. ಮೌಲ್ಯದ ಅಪಾರ್ಟ್ಮೆಂಟ್ ಇದಾಗಿದೆ ಎನ್ನಲಾಗಿದೆ. 

8,669 ಚದರ ಅಡಿ ವಿಸ್ತೀರ್ಣದ ಅಪಾರ್ಟ್‌ಮೆಂಟ್ ಇದಾಗಿದ್ದು ಸುತ್ತಲೂ ಸುಂದರವಾದ ಉದ್ಯಾನ ಪ್ರದೇಶವನ್ನು ಮತ್ತು ಮೊದಲ ಮಹಡಿಯಲ್ಲಿ ವಿಶೇಷವಾದ ಈಜುಕೊಳವನ್ನು ಒಳಗೊಂಡಿದೆ. ಜಾನ್ವಿ ಕಪೂರ್, ಖುಷಿ ಮತ್ತು ಬೋನಿ ಕಪೂರ್ ಸೇರಿ ಈ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ ಎನ್ನಲಾಗಿದೆ. ಇದರಲ್ಲಿ ಐದು ಕಾರ್ ಪಾರ್ಕಿಂಗ್ ಸ್ಲಾಟ್‌ಗಳಿವೆ. ಅಕ್ಟೋಬರ್ 12 ರಂದು ನಡೆದ ಒಪ್ಪಂದದಲ್ಲಿ ನೋಂದಣಿಗಾಗಿ 3.90 ಕೋಟಿ ರೂಪಾಯಿ ರಿಜಿಸ್ಟ್ರೇಶನ್ ಫೀಸ್ ಪಾವತಿಸಿದ್ದಾರೆ.  

ಸೌತ್ ಸಿನಿರಂಗದ ಕಡೆ ಜಾನ್ವಿ ಕಪೂರ್ ಒಲವು; ತೆಲುಗಿನ ಈ ಸ್ಟಾರ್ ಜೊತೆ ನಟಿಸಬೇಕೆಂದ ಶ್ರೀದೇವಿ ಪುತ್ರಿ

ಅಂದಹಾಗೆ ಈ ಹಿಂದೆ ಅಂದರೆ ಜೂನ್ ತಿಂಗಳಲ್ಲಿ ಜಾನ್ವಿ ಕಪೂರ್ ಕುಟುಂಬ ವಾಸವಿದ್ದ ಜುಹುವಿನಾ ಐಷಾರಾಮಿ ಟ್ರಿಪ್ಲೆಕ್ಸ್ ಅಪಾರ್ಟ್ಮೆಂಟ್ ಅನ್ನು ಮಾರಾಟ ಮಾಡಿದ್ದರು. ಬಾಲಿವುಡ್‌ನ ಖ್ಯಾತ ನಟ ರಾಜ್ ಕುಮಾರ್ ರಾವ್ ಆ ಮನೆಯನ್ನು ಖರೀದಿಸಿದ್ದರು. ಬರೋಬ್ಬರಿ 44 ಕೋಟಿ ರೂಪಾಯಿಗೆ ಖರೀದಿಸಿದ್ದರು ಎಂದು ವರದಿಯಾಗಿತ್ತು. 

Janhvi Kapoor ಏನೇ ಸಾಧನೆ ಮಾಡಿದ್ದರೂ ಅವಮಾನ ತಪ್ಪಿದಲ್ಲ: ಕಷ್ಟ ದಿನಗಳನ್ನು ನೆನೆದು ಜಾನ್ವಿ ಕಣ್ಣೀರು

ಸದ್ಯ 65 ಕೋಟಿ ಮೊತ್ತದ ಬಂಗಲೇ ಖರೀದಿಸಿರುವ ಜಾನ್ವಿ ಕುಟುಂಬ ಪಾಲಿ ಹಿಲ್ಸ್ ನಲ್ಲಿ ವಾಸವಿರಲಿದ್ದಾರೆ. ಜಾನ್ವಿ ಸದ್ಯ ಮಿಲಿ ಸಿನಿಮಾದ ರಿಲೀಸ್ ನಲ್ಲಿದ್ದಾರೆ. ನವೆಂಬರ್ 4ರಂದು ಮಿಲಿ ಸಿನಿಮಾ ಅದ್ದೂರಿಯಾಗಿ ರಿಲೀಸ್ ಆಗಿದೆ. ಈ ಸಿನಿಮಾಗಾಗಿ ಜಾನ್ವಿ ಸಿಕ್ಕಾಪಟ್ಟೆ ಪ್ರಚಾರ ಮಾಡಿದ್ದರು. ಅಂದಹಾಗೆ ಇದು ಮಲಯಾಳಂ ಸೂಪರ್ ಹಿಟ್ ಹೆವೆನ್ ಸಿನಿಮಾದ ರಿಮೇಕ್ ಆಗಿದೆ. ಇನ್ನು ಜಾನ್ವಿ ಸಹೋದರಿ ಖುಷಿ ಕಪೂರ್ ಕೂಡ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ. ವೆಬ್ ಸೀರಿಸ್ ಮೂಲಕ ಖುಷಿ ಕಪೂರ್ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಶೂಟಿಂಗ್ ನಡೆಯುತ್ತಿದೆ. ಖುಷಿ ಕಪೂರ್ ಮೊದಲ ಸೀರಿಸ್ ನೆಟ್‌ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ.  


 


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

3 idiots 2 : ಬಾಕ್ಸ್ ಆಫೀಸ್ ನಲ್ಲಿ ಸುನಾಮಿ, ಬರ್ತಿದೆ 3 ಈಡಿಯಟ್ಸ್ ಸೀಕ್ವೆಲ್
ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!