KGF 2 ವೀಕ್ಷಿಸಿದ ರಾಮ್ ಚರಣ್; ಯಶ್ ಅಭಿನಯಕ್ಕೆ RRR ಸ್ಟಾರ್ ಫಿದಾ

Published : Apr 23, 2022, 05:01 PM IST
KGF 2 ವೀಕ್ಷಿಸಿದ ರಾಮ್ ಚರಣ್; ಯಶ್ ಅಭಿನಯಕ್ಕೆ RRR ಸ್ಟಾರ್ ಫಿದಾ

ಸಾರಾಂಶ

ತೆಲುಗು ಸ್ಟಾರ್ ರಾಮ್ ಚರಣ್(Ram Charan) ಸಿನಿಮಾ ವೀಕ್ಷಿಸಿ ಹಾಡಿಹೊಗಳಿದ್ದಾರೆ. ಅಲ್ಲು ಅರ್ಜುನ್ ಕೆಜಿಎಫ್-2 ವೀಕ್ಷಿಸಿದ ಬೆನ್ನಲ್ಲೇ ರಾಮ್ ಚರಣ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಯಶ್ ಅಭಿನಯಕ್ಕೆ ರಾಮ್ ಚರಣ್ ಫಿದಾ ಆಗಿದ್ದಾರೆ. ಈ ಬಗ್ಗೆ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಬಗ್ಗೆ ವಿಮರ್ಶೆ ಬರೆದಿದ್ದಾರೆ.  

ರಾಕಿಂಗ್ ಸ್ಟಾರ್ ಯಶ್(Yash) ನಟನೆಯ ಕೆಜಿಎಫ್-2 (KGF 2)ಬ್ಲಾಕ್ ಬಸ್ಟರ್ ಕೆಜಿಎಫ್-2 ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸ ಬರೆದಿದೆ. ಎಲ್ಲಾ ದಾಖಲೆಗಳನ್ನು ದೂಳಿಪಟ ಮಾಡಿರುವ ಕೆಜಿಎಫ್-2 ಸಿನಿಮಾ ಬಿಡುಗಡೆಯಾಗಿ ವಾರ ಕಳೆದರೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದ್ದು ಪ್ರೇಕ್ಷಕರು ರಾಕಿ ಭಾಯ್ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ದಾಖಲೆ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಮಂದಿಯನ್ನು ಬೆಚ್ಚಿಬೀಳಿಸಿರುವ ಕೆಜಿಎಫ್-2 ಬಿಡುಗಡೆಯಾಗಿ 7 ದಿನಗಳಲ್ಲಿ ಬರೋಬ್ಬರಿ 250 ರೂಪಾಯಿಗೂ ಕೋಟಿ ಕಲೆಕ್ಷನ್ ಮಾಡಿದೆ. ಪ್ರೇಕ್ಷಕರು ಮಾತ್ರವಲ್ಲದೆ ಸಿನಿಮಾ ನೋಡಿ ಬೇರೆ ಬೇರೆ ಭಾಷೆಯ ಸ್ಟಾರ್ ಕಲಾವಿದರು ಸಹ ಹಾಡಿ ಹೊಗಳಿದ್ದಾರೆ.

ಇದೀಗ ತೆಲುಗು ಸ್ಟಾರ್ ರಾಮ್ ಚರಣ್(Ram Charan) ಸಿನಿಮಾ ವೀಕ್ಷಿಸಿ ಹಾಡಿಹೊಗಳಿದ್ದಾರೆ. ಅಲ್ಲು ಅರ್ಜುನ್ ಕೆಜಿಎಫ್-2 ವೀಕ್ಷಿಸಿದ ಬೆನ್ನಲ್ಲೇ ರಾಮ್ ಚರಣ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಯಶ್ ಅಭಿನಯಕ್ಕೆ ರಾಮ್ ಚರಣ್ ಫಿದಾ ಆಗಿದ್ದಾರೆ. ಈ ಬಗ್ಗೆ ರಾಮ್ ಚರಣ್ ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಬಗ್ಗೆ ವಿಮರ್ಶೆ ಬರೆದಿದ್ದಾರೆ.

ನನ್ನ ಸಹೋದರ ಪ್ರಶಾಂತ್ ನೀಲ್(Prashanth Neel) ಮತ್ತ ಹೊಂಬಾಳೆ ಫಿಲ್ಮ್ಸ್ ಹಾಗೂ ಇಡಿ ಕೆಜಿಎಫ್-2 ತಂಡಕ್ಕೆ ಅಭಿನಂದನೆಗಳು. ಪ್ರೀತಿಯ ಸಹೋದರ ಯಶ್ ನಿಮ್ಮ ಅಭಿನಯ ಅದ್ಭುತವಾಗಿದೆ. ತೆರೆಮೇಲೆ ನಿಮ್ಮ ಪ್ರದರ್ಶನ ಶ್ಲಾಘನೀಯವಾಗಿದೆ. ಸಂಜಯ್ ದತ್ ಅವರು, ರವೀನಾ ಟಂಡನ್ ಮತ್ತು ಪ್ರಕಾಶ್ ರಾಜ್ ಇಲ್ಲಿಯವರೆಗಿನ ನಿಮ್ಮ ಉತ್ತಮ ಪಾತ್ರವನ್ನು ನೋಡಿದ್ದೇನೆ. ಶ್ರೀನಿಧಿ ಶೆಟ್ಟಿ ಅಭಿಮಾನಿಗಳು. ಮಾಳವಿಕಾ, ಈಶ್ವರಿ ರಾವ್, ಅರ್ಚನಾ ಜೋಯಿಸ್ ಮತ್ತು ರವಿ ಬಸ್ರೂರ್ ಅದ್ಭುತ. ಎಲ್ಲಾ ತಂತ್ರಜ್ಞರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ. ರಾಮ್ ಚರಣ್ ಟ್ವೀಟ್ ಗೆ ನಟಿ ಶ್ರೀನಿಧಿ ಶೆಟ್ಟಿ ಧನ್ಯವಾದ ತಿಳಿಸಿದ್ದಾರೆ.

KGF 2ಗೆ ಅಲ್ಲು ಅರ್ಜುನ್ ಫಿದಾ; ಯಶ್, ಪ್ರಶಾಂತ್ ನೀಲ್ ಬಗ್ಗೆ ಹೇಳಿದ್ದೇನು?

ಅಲ್ಲು ಅರ್ಜುನ್ ಹೇಳಿದ್ದೇನು?

'ಪ್ರಶಾಂತ್ ನೀಲ್ ಅವರಿಂದ ಅದ್ಭುತ ಪ್ರದರ್ಶನ. ಅವರ ದೃಷ್ಟಿ ಮತ್ತು ನಂಬಿಕೆಗೆ ಹ್ಯಾಟ್ಸಾಪ್. ಭಾರತೀಯ ಸಿನಿಮಾರಂಗದ ಬಾವುಟವನ್ನು ಅತೀ ಎತ್ತರಕ್ಕೆ ಹಾರಿಸಿದ ಇಡಿ ಕೆಜಿಎಫ್-2 ತಂಡಕ್ಕೆ ಧನ್ಯವಾದಗಳು' ಎಂದು ಹೇಳಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್ ಗೆ ನಟಿ ಶ್ರೀನಿಧಿ ಶೆಟ್ಟಿ ಪ್ರತಿಕ್ರಿಯೆ ನೀಡಿ ಧನ್ಯವಾದ ತಿಳಿಸಿದ್ದಾರೆ. ಈ ಮೊದಲು ಅಲ್ಲು ಅರ್ಜುನ್ ಆರ್ ಆರ್ ಆರ್ ಸಿನಿಮಾವನ್ನು ಕೊಂಡಾಡಿದ್ದರು. ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದರು. ಇದೀಗ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿರುವ ಕನ್ನಡ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ.

ಅಂದಹಾಗೆ ಕೆಜಿಎಫ್-2 ಈಗಾಗಲೇ ಎಲ್ಲಾ ದಾಖಲೆಗಳನ್ನು ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ. ಬಾಹುಬಲಿ-2, ಆರ್ ಆರ್ ಆರ್ ಕಲೆಕ್ಷನ್ ಬೀಟ್ ಮಾಡಿ ಕೆಜಿಎಫ್-2 ನಂಬರ್ 1 ಆಗಿ ಅಬ್ಬರಿಸುತ್ತಿದೆ. 1000 ಕೋಟಿ ರೂಪಾಯಿ ನತ್ತ ದಾಪುಗಾಲಿಟ್ಟಿರುವ ಕೆಜಿಎಫ್-2 ಸದ್ಯದಲ್ಲೇ 1000 ಕೋಟಿ ಕ್ಲಬ್ ಸೇರಲಿದೆ.

KGF 2 ಯಶ್ ಕಾಸ್ಟ್ಯೂಮ್ ಡಿಸೈನ್ ಮಾಡ್ತಿರೋದು ಈ ಹೆಣ್ಮಗಳು! ಯಾರೀಕೆ?

ಪ್ರಶಾಂತ್ ನೀಲ್ ನಿರ್ದೇಶನ, ಯಶ್ ಅಭಿನಯ, ಸಂಜಯ್ ದತ್ ಆರ್ಭಟ, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ, ಅರ್ಚನಾ ಜೋಯಿಶ್, ಪ್ರಕಾಶ್ ರೈ ಹೀಗೆ ಪ್ರತಿಯೊಂದು ಪಾತ್ರಗಳು ಅಭಿಮಾನಿಗಳ ಹೃದಯ ಗೆದ್ದಿದೆ. ಅದ್ದೂರಿ ಮೇಕಿಂಗ್, ಆಕ್ಷನ್, ಸಂಗೀತ, ಮಾಸ್ ಎಲಿಮೆಂಟ್, ತಾಯಿ ಸೆಂಟಿಮೆಂಟ್ ಪ್ರತಿಯೊಂದು ವಿಭಾಗದಲ್ಲೂ ಕೆಜಿಎಫ್-2 ಅಭಿಮಾನಿಗಳ ಹೃದಯ ಗೆದ್ದಿದೆ. ವಾರದ ಬಳಿಕವೂ ಪ್ರೇಕ್ಷಕರು ಮುಗಿಬಿದ್ದು ಸಿನಿಮಾ ನೋಡಿ ಸಂಭ್ರಮಿಸುತ್ತಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್