ಕ್ಯಾನ್ಸರ್‌ ಪೀಡಿತ ಅಭಿಮಾನಿಯನ್ನು ಭೇಟಿ ಮಾಡಿದ ರಾಮ್ ಚರಣ್; 9 ವರ್ಷದ ಹುಡುಗನ ಕೈಗಿಟ್ಟ ಸ್ಪೆಷಲ್ ಗಿಫ್ಟ್‌ ಏನು??

Published : Feb 10, 2023, 04:50 PM ISTUpdated : Feb 10, 2023, 04:56 PM IST
ಕ್ಯಾನ್ಸರ್‌ ಪೀಡಿತ ಅಭಿಮಾನಿಯನ್ನು ಭೇಟಿ ಮಾಡಿದ ರಾಮ್ ಚರಣ್; 9 ವರ್ಷದ ಹುಡುಗನ ಕೈಗಿಟ್ಟ ಸ್ಪೆಷಲ್ ಗಿಫ್ಟ್‌ ಏನು??

ಸಾರಾಂಶ

 ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ ನಟ ರಾಮ್ ಚರಣ್. ಕ್ಯಾನ್ಸರ್‌ನಿಂದ ಬಳಲುತ್ತಿರುವ ಮಗುವಿಗೆ ಧೈರ್ಯ ತುಂಬಿ ಸಹಾಯ ಮಾಡಿದ ಸ್ಟಾರ್ ನಟ........

ತೆಲುಗು ಚಿತ್ರರಂಗದ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಪುಟ್ಟ ಅಭಿಮಾನಿಯನ್ನು ಭೇಟಿ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರಾಮ್‌ ಚರಣ್ ಆಸ್ಪತ್ರೆಯಿಂದ ಹೊರ ಬರುತ್ತಿರುವ ವಿಡಿಯೋ ಮತ್ತು ಫೋಟೋ ಸಖತ್ ವೈರಲ್ ಆಗಿತ್ತು. ರಾಮ್ ಆರೋಗ್ಯ ಸಮಸ್ಯೆ ಅಥವಾ ಜೆನರಲ್ ಚೆಕಪ್ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿರುವಾಗ ಗೊಂದಲ ಬೇಡ ಎಂದು ಶಿವ ಚೆರಿ ಟ್ವಿಟರ್‌ನಲ್ಲಿ ನಾಲ್ಕು ಫೋಟೋಗಳನ್ನು ಅಪ್ಲೋಡ್ ಮಾಡಿ ಕ್ಲಾರಿಟಿ ಕೊಟ್ಟಿದ್ದಾರೆ. ರಾಮ್ ಚರಣ್ ರಿಯಲ್ ಹೀರೋ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

'ಮೇಕ್‌ ವಿಶ್‌ ಫೌಂಡೇಷನ್‌ ಮೂಲಕ ಮ್ಯಾನ್ ಆಫ್ ಮಾಸ್‌ ಮೆಗಾ ಪವರ್ ಸ್ಟಾರ್ ರಾಮ್‌ ಚರಣ್‌ ಗಾರು 9 ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕನನ್ನು ಭೇಟಿ ಮಾಡಿದ್ದಾರೆ. ಜೀವನದಲ್ಲಿ ಒಮ್ಮೆಯಾದರು ರಾಮ್‌ ಚರಣ್‌ನ ಭೇಟಿ ಮಾಡಬೇಕು ಅವರೊಟ್ಟಿಗೆ ಸಮಯ ಕಳೆಯಬೇಕು ಎಂದು ಪುಟ್ಟ ಬಾಲಕ ಆಸೆ ಪಟ್ಟಿದ್ದ. ಅದರಂತೆ ರಾಮ್ ಭೇಟಿ ಮಾಡಿದ್ದಾರೆ' ಎಂದು ಬರೆದುಕೊಂಡಿದ್ದಾರೆ. ಅಪ್ಲೋಡ್ ಮಾಡಿರುವ 4 ಫೋಟೋಗಳಲ್ಲೂ ರಾಮ್‌ ಮಗುವನ್ನು ಆತ್ಮೀಯತೆಯಿಂದ ಮುದ್ದಾಡುತ್ತಿರುವುದನ್ನು ನೋಡಬಹುದು. ಜೊತೆ ಗಿಫ್ಟ್‌ ಹಿಡಿದುಕೊಂಡು ಬಂದಿದ್ದಾರೆ. ಪೋಷಕರ ಹೆಗಲೆ ಮೇಲೆ ಕೈ ಹಾಕಿ ಧೈರ್ಯ ಹೇಳಿದ್ದಾರೆ. ಮೇಕ್ ವಿಶ್‌ ಸಂಸ್ಥೆಯನ್ನು ನಂದಿನಿ ರೆಡ್ಡಿ ನಡೆಸುತ್ತಿರುವುದು. 

ಆಡಿ ಇ-ಟ್ರಾನ್ ಎಲೆಕ್ಟ್ರಿಕ್ ಕಾರು ಖರೀದಿಸಿದ ರಾಮ್‌ಚರಣ್‌ ಪತ್ನಿ ಉಪಾಸನಾ!

'ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆಯೂ ರಾಮ್ ರಿಯಲ್ ಹೀರೋ. ತಂದೆ ಗುಣ ಹೊತ್ತುಕೊಂಡು ಬೆಳೆದಿರುವ ನಾಯಕ' ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. 

ರಾಮ್‌ ಲೈಫ್‌ ಅಪ್ಡೇಟ್‌: 

ಸದ್ಯ ರಾಮ್‌ ಚರಣ್‌ ಆರ್‌ಆರ್‌ಆರ್‌ ಸಿನಿಮಾ ನಾಟು ನಾಟು ಹಾಡಿಗೆ ಪಡೆದಿರುವ ಆಸ್ಕರ್‌ ಪ್ರಶಸ್ತಿಯನ್ನು ಮತ್ತು ಯಶಸ್ಸನ್ನು ಫೀಲ್ ಮಾಡುತ್ತಿದ್ದಾರೆ. ಮುಂದಿನ ಸಿನಿಮಾ ಯಾವುದು ಎನ್ನುವ ಸುಳಿವು ನೀಡಿಲ್ಲ ಬದಲಿಗೆ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ. 

ರಾಮ್ ಚರಣ್ ಮತ್ತು ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಿಹಿ ಸುದ್ದಿಯನ್ನು ಚಿರಂಜೀವಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಉದ್ಯಮಿ ಉಪಾಸನಾ ಕೂಡ ಸಾಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವವರು. ಪ್ರೆಗ್ನೆನ್ಸಿ ಪ್ರತಿಯೊಂದು ಹಂತವನ್ನು ಎಂಜಾಯ್ ಮಾಡುತ್ತಿದ್ದಾರೆ, ಪುಡ್‌ ಕ್ರೇವಿಂಗ್ ಟು ಫೋಟೋ ಶೂಟ್‌ ಪ್ರತಿಯೊಂದನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ರಾಮ್ ಚರಣ್ ಮತ್ತು ಉಪಾಸನಾ ಪೋಷಕರಾಗುತ್ತಿರುವ ವಿಚಾರ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಇವರಿಬ್ಬರ ಲವ್ ಸ್ಟೋರಿ, ಮ್ಯಾರೇಜ್ ಫೋಟೋ ಮತ್ತು ರೊಮ್ಯಾಂಟಿಕ್ ಫೊಟೋ ಹುಡುಕಲು ಶುರು ಮಾಡಿದ್ದಾರೆ. 

ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ ಆಕ್ಟಿಂಗ್ ಬಗ್ಗೆ ನಟ ರಾಮ್‌ ಚರಣ್‌ ಮಾತುಗಳಿದು!

ಉದ್ಯಮಿಗಳ ಕುಟುಂಬದಿಂದ ಬಂದಿರುವ ಉಪಾಸನಾ ಅವರು ತಮ್ಮ ಮಾವ ಚಿರಂಜೀವಿ ಮತ್ತು ಪತಿ ರಾಮ್‌ ಚರಣ್‌ ಅವರನ್ನು ಮೊದಲು ಭೇಟಿ ಮಾಡಿದ್ದು ಸ್ಪೂರ್ಟ್ಸ್‌ ಕ್ಲಬ್‌ನಲ್ಲಿ ಎಂದಿದ್ದಾರೆ. ಆರಂಭದಲ್ಲಿ ರಾಮ್ ಮತ್ತು ಉಪಾಸನಾ ತುಂಬಾನೇ ಜಗಳವಾಡುತ್ತಿದ್ದರಂತೆ. ಅಪರಿಚಿತರು ಸ್ನೇಹಿತರಾಗಿ ಆನಂತರ ಪ್ರೀತಿಸಲು ಆರಂಭಿಸಿದ್ದರು.

ಡಿಸೆಂಬರ್ 11, 2011ರಂದು ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡರು. ಜೂನ್ 14, 2012ರಲ್ಲಿ ಗುರು ಹಿರಿಯ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ತೆಗುಲು ಚಿತ್ರರಂಗದಲ್ಲಿ ದುಬಾರಿ ಮದುವೆ ಇದಾಗಿತ್ತು.  ಜೀವನಶೈಲಿ ಹಾಗೂ ಆರೋಗ್ಯ ನಿಯತಕಾಲಿಕ B Positive Magazineನ ಮುಖ್ಯ ಸಂಪಾದಕರು ಉಪಾಸನಾ ಹಾಗೂ ಅಪೊಲೋ ಲೈಫ್‌ನ ಚಾರಿಟಿ ವೈಸ್‌ ಪ್ರೆಸಿಡೆಂಟ್.2019ರಲ್ಲಿ philanthropist of the year ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪಡೆದಿದ್ದಾರೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!
ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?