ಇಷ್ಟು ಬಿಳಿಯಾಗಿದ್ದು ಹೇಗೆ? ಟ್ರೋಲಿಗರ ಪ್ರಶ್ನೆಗೆ ಕಾಜೊಲ್ ಕೊಟ್ಟ ಉತ್ತರ ವೈರಲ್

Published : Feb 10, 2023, 02:37 PM ISTUpdated : Feb 10, 2023, 02:38 PM IST
ಇಷ್ಟು ಬಿಳಿಯಾಗಿದ್ದು ಹೇಗೆ? ಟ್ರೋಲಿಗರ ಪ್ರಶ್ನೆಗೆ ಕಾಜೊಲ್ ಕೊಟ್ಟ ಉತ್ತರ ವೈರಲ್

ಸಾರಾಂಶ

ಇಷ್ಟು ಬಿಳಿಯಾಗಿದ್ದು ಹೇಗೆ ಎಂದು ಪ್ರಶ್ನಿಸುತ್ತಿದ್ದವರಿಗೆ ಬಾಲಿವುಡ್ ಖ್ಯಾತ ನಟಿ ಕಾಜೊಲ್ ಕೊಟ್ಟ ಉತ್ತರ ವೈರಲ್ ಆಗಿದೆ. 

ಬಾಲಿವುಡ್ ಖ್ಯಾತ ನಟಿ ಕಾಜೊಲ್ ಅಪರೂಪಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇಂದಿಗೂ ಅದೇ ಚಾರ್ಮ್ ಹೊಂದಿರುವ ಕಾಜೊಲ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಜೊಲ್ ಅವರನ್ನು ತೆರೆಮೇಲೆ ನೋಡಲು, ಅಭಿನಯ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇತ್ತೀಚಿಗೆ ಕಾಜೊಲ್ ಸಿನಿಮಾಗಳ ತೀರ ವಿರಳವಾಗಿದೆ. ಹಾಗಂತ ಕಾಜೊಲ್ ಸಿನಿಮಾ ರಂಗದಿಂದ ದೂರ ಉಳಿದಿಲ್ಲ. ಚಿತ್ರರಂಗದ ಜೊತೆಗಿನ ನಂಟನ್ನು ಹಾಗೆ ಉಳಿಸಿಕೊಂಡಿದ್ದಾರೆ. ಆಗಾಗ ಸುದ್ದಿಯಲ್ಲಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಕಾಜೊಲ್ ಆಸಕ್ತಿದಾಯಕ ಪೋಸ್ಟ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ. ಆಗಾಗ ಟ್ರೋಲ್‌ಗಳಿಗೂ ಖಡಕ್ ಉತ್ತರ ನೀಡುತ್ತಾರೆ. 

ನಟಿ ಕಾಜೊಲ್ ಕೂಡ ಟ್ರೋಲ್‌ಗಳಿಂದ ತಪ್ಪಿಸಿಕೊಂಡಿಲ್ಲ. ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಕಾಜೊಲ್‌ಗೆ ಅನೇಕರು ಪ್ರಶ್ನೆ ಇಷ್ಟು ಬಿಳಿಯಾಗಿದ್ದು ಹೇಗೆ ಅಂತ. ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಪ್ರಾರಂಭದ ದಿನಗಳಲ್ಲಿ ಕಾಜೊಲ್ ಗೋಧಿ ಬಣ್ಣ ಹೊಂದಿದ್ದರು. ನಂತರದ ದಿನಗಳಲ್ಲಿ ಕಾಜೊಲ್ ಫುಲ್ ಬಿಳಿಯಾದರು. ಕಾಜೊಲ್ ಹೊಳಪು ಕಂಡು ಅಭಿಮಾನಿಗಳು ಬೆರಗಾದರು. ಅಲ್ಲಿಂದ ಕಾಜೊಲ್ ಇಷ್ಟು ಬಿಳಿಯಾಗಿದ್ದು ಹೇಗೆ ಎನ್ನುವ ಪ್ರಶ್ನೆ ಎದುರಾಗಲೇ ಇರುತ್ತಿತ್ತು. ಈ ಪ್ರಶ್ನೆಗೆ ಇದೀಗ ಕಾಜೊಲ್ ಕೊಟ್ಟ ಉತ್ತರ ವೈರಲ್ ಆಗಿದೆ. 

ಶಾರುಖ್ ಖಾನ್ ಜೊತೆ ಮತ್ತೆ ತೆರೆ ಹಂಚಿಕೊಳ್ಳುತ್ತಿದ್ದಾರಾ ಕಾಜೋಲ್‌?

'ನಾನು ಹೇಗೆ ಬಿಳಿಯಾಗಿದ್ದೇನೆ ಎಂದು ನನ್ನನ್ನು ಕೇಳುವ ಎಲ್ಲರಿಗೂ' ಎಂದು ಕ್ಯಾಪ್ಷನ್ ನೀಡಿ ಫೋಟೋ ಶೇರ್ ಮಾಡಿದ್ದಾರೆ. ಫೋಟೋದಲ್ಲಿ ಕಾಜೊಲ್ ಸಂಪೂರ್ಣವಾಗಿ ಮುಖವನ್ನು ಮುಚ್ಚಿಕೊಂಡಿದ್ದಾರೆ. ಕಪ್ಪು ಬಣ್ಣದ ಬಟ್ಟೆಯಿಂದ ಮುಖವನ್ನು ಮುಚ್ಚಿಕೊಂಡಿದ್ದು ಕಣ್ಣಿಗೆ ಸನ್‌ಗ್ಲಾಸ್ ಹಾಕಿದ್ದಾರೆ. ಈ ಪೋಟೋವನ್ನು ಶೇರ್ ಮಾಡಿ ಬಿಳಿಯಾಗಲು ಕಾರಣ ಇದೆ ಎಂದು ಹೇಳಿದ್ದಾರೆ. ಕಾಜೊಲ್ ರಿಯಾಕ್ಷನ್ ವೈರಲ್ ಆಗಿದೆ.

  
ಮದುವೆಯಾದ ಎರಡು ತಿಂಗಳಲ್ಲಿ 8 ಕೆಜಿ ತೂಕ ಹೆಚ್ಚಾದ ನಟಿ ಕಾಜೋಲ್; ಕಾರಣ ಕೇಳಿ ನೆಟ್ಟಿಗರು ಶಾಕ್

ಮೈ ಬಣ್ಣದ ವಿಚಾರದಲ್ಲಿ ಕಾಜೊಲ್ ಅನೇಕ ಬಾರಿ ಟ್ರೋಲ್ ಆಗಿದ್ದಾರೆ. ಆದರೆ ತನ್ನ ಬಣ್ಣದ ಬಗ್ಗೆ ಕಾಜೊಲ್ ಹೆಮ್ಮೆ ಹೊಂದಿದ್ದರು. ಅನೇಕ ಸಂದರ್ಶನಗಳಲ್ಲಿ ಕಾಜೊಲ್ ತನ್ನ ಮೈ ಬಣ್ಣದ ಬಗ್ಗೆ ಮಾತನಾಡಿದ್ದಾರೆ. ಒಂದು ಕಾಲದ ಟಾಪ್ ನಟಿ ಕಾಜೊಲ್ ಈಗಲೂ ಅದೇ  ಬೇಡಿಕೆ ಉಳಿಸಿಕೊಂಡಿದ್ದಾರೆ. ಸದ್ಯ ಕಾಜೊಲ್ ಗುಡ್ ವೈಫ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಅಂದಹಾಗೆ ಇದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಇದು ಕಾಜೊಲ್ ಅವರ ಮೊದಲ ಒಟಿಟಿ ಸಿನಿಮಾವಾಗಿದೆ. ಕೊನೆಯದಾಗಿ ಕಾಜೊಲ್ ಸಲಾಮ್ ವೆಂಕಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆ ಸಿನಿಮಾ ದೊಡ್ಡ ಹೇಳಿಕೊಳ್ಳುವಂತ  ಸಕ್ಸಸ್ ಕಂಡಿಲ್ಲ. ಹಾಗಾಗಿ ಸದ್ಯ ರಿಲೀಸ್‌ಗೆ ರೆಡಿಯಾಗಿರುವ ಗುಡ್ ವೈಫ್ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಅಂದಹಾಗೆ ಈ ಸಿನಿಮಾ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ರಿಲೀಸ್ ಆಗುತ್ತಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!