ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ; ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು

Published : Feb 10, 2023, 03:32 PM ISTUpdated : Feb 10, 2023, 03:33 PM IST
ನಾನು ಇಸ್ಲಾಂ ಧರ್ಮ ಅನುಸರಿಸುತ್ತಿಲ್ಲ; ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು

ಸಾರಾಂಶ

ಧರ್ಮವನ್ನು ಟಾರ್ಗೇಟ್ ಮಾಡಿದವರಿಗೆ ಉರ್ಫಿ ಖಡಕ್ ತಿರುಗೇಟು ನೀಡಿದ್ದಾರೆ. ತಾನು ಇಸ್ಲಾಂ ಅಥವಾ ಯಾವುದೇ ಧರ್ಮ ಫಾಲೋ ಮಾಡುತ್ತಿಲ್ಲ ಎಂದು ಹೇಳಿದ್ದಾರೆ. 

ನಟಿ, ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ವಿಚಿತ್ರ ಬಟ್ಟೆಗಳ ಮೂಲಕವೇ ಹೆಚ್ಚು ಫೇಮಸ್ ಆದವರು. ಉರ್ಫಿಯ ಅವತಾರಗಳ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಆದರೆ ಉರ್ಫಿ ಕೇವಲ ವಿಚಿತ್ರ ಬಟ್ಟೆ ಮೂಲಕ ಮಾತ್ರವಲ್ಲದೇ ಟ್ರೋಲಿಗರಿಗೆ ಹಾಗೂ ತನ್ನು ಟೀಕಿಸಿದವರಿಗೆ ಖಡಕ್ ಉತ್ತರ ನೀಡುವ ಮೂಲಕವೂ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಉರ್ಫಿ ವಿಚಿತ್ರ ಬಟ್ಟೆಗಳನ್ನು ನೋಡಿ ಇಸ್ಲಾಂ ಧರ್ಮದಲ್ಲಿ ಇಂಥ ಬಟ್ಟೆಗಳನ್ನು ಧರಿಸಿ ರಸ್ತೆಯಲ್ಲಿ ಓಡಾಡಲು ಅನುಮತಿ ಇದಿಯಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದರು. ಜೀನ್ಸ್ ಕೂಡ ಧರಿಸಲು ಅನುಮತಿಸದ ಸಂಪ್ರದಾಯವಾದಿ ಕುಟುಂಬದಿಂದ ಬಂದ ಉರ್ಫಿ ಹೀಗೆಲ್ಲ ವಿಚಿತ್ರವಾಗಿ ಬಟ್ಟೆ ಧರಿಸಿ ಮುಂಬೈ ಬೀದಿ ಸುತ್ತಾಡುತ್ತಿರುವುದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. 

ಧರ್ಮವನ್ನು ಟಾರ್ಗೆಟ್ ಮಾಡಿದ ಟ್ರೋಲಿಗರಿಗೆ ಉರ್ಫಿ ಈಗ ಖಡಕ್ ಉತ್ತರ ನೀಡಿದ್ದಾರೆ. ತಾನು ಇಸ್ಲಾಂ  ಧರ್ಮ ಅನುಸರಿಸುತ್ತಿಲ್ಲ ಅಲ್ಲದೆ ಯಾವುದೇ ಧರ್ಮವನ್ನು ಫಾಲೋ ಮಾಡಲ್ಲ ಎಂದು ಉರ್ಫಿ ಖಡಕ್ ಆಗಿ ಹೇಳಿದ್ದಾರೆ. ಹಿಂದು ಉಗ್ರವಾದಿಗಳು ತನ್ನನ್ನು ಟಾರ್ಗೇಟ್ ಮಾಡುವ ಮೊದಲು ಇದನ್ನು ಹೇಳುತ್ತಿದ್ದೀನಿ ಕೇಳಿ ಎಂದು ಉರ್ಫಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

'ಹಿಂದಿ ಉಗ್ರವಾದಿಗಳು ನನನ್ನು ಅಟ್ಯಾಕ್ ಮಾಡುವ ಮೊದಲು ನಾನು ಇದನ್ನು ನಿಮ್ಮೆಲ್ಲರಿಗೂ ಹೇಳುತ್ತೇನೆ. ನಾನು ಇಸ್ಲಂ ಧರ್ಮವನ್ನು ಫಾಲೋ ಮಾಡುತ್ತಿಲ್ಲ, ಯಾವುದೇ ಧರ್ಮವನ್ನು ಅನುಸರಿಸುತ್ತಿಲ್ಲ. ಜನರು ತಮ್ಮ ಧರ್ಮದ ಕಾರಣಕ್ಕಾಗಿ ಕಿತ್ತಾಡುವುದು ಬೇಡ.' ಎಂದು ಹೇಳಿದ್ದಾರೆ. ಉರ್ಫಿ ಮಾತಿಗೆ ತರಹೇವಾರಿ ಕಾಮೆಂಟ್ ಹರಿದು ಬಂದಿದೆ. ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, ಉರ್ಫಿ ಅಥವಾ ಇಂಥ ಮಹಿಳೆಯರು ಅಫ್ಘಾನಿಸ್ತಾನದಲ್ಲಿ ಇರಬೇಕಿತ್ತು' ಎಂದು ಹೇಳಿದ್ದಾರೆ. ಅಭಿಮಾನಿಗಳ ಕಾಮೆಂಟ್ ಗಳಿಗೂ ಉರ್ಫಿ ತಿರುಗೇಟು ನೀಡಿದ್ದಾರೆ. 

ಪ್ಯಾಂಟ್‌ನ್ನು ಶರ್ಟ್‌ನಂತೆ ಧರಿಸಿದ ಉರ್ಫಿ, ಇದೇನಮ್ಮಾ ಅವತಾರ ಅಂತಿದ್ದಾರೆ ನೆಟ್ಟಿಗರು

ಮತ್ತೋರ್ವ ನೆಟ್ಟಿಗ ಕಾಮೆಂಟ್ ಮಾಡಿ, 'ಮೊಹಮ್ಮೊದ್ ಮೇಲೆ ಜೋಕ್ ಮಾಡಬೇಡಿ ಅಥವಾ ಅವರ ಬಗ್ಗೆ ಮಾತನಾಡಬೇಡಿ' ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಉರ್ಫಿ, 'ನಾನು ಇಸ್ಲಾಂ ಧರ್ಮ ಅನುಸರಿಸಿಲ್ಲ ಎಂದರೆ ಮೊಹಮ್ಮೊದ್‌ನ ಹೇಗೆ ಜೋಕ್ ಮಾಡಿದ ಹಾಗೆ ಆಗುತ್ತದೆ. ಈಗ ನಾವು ದೊಡ್ಡ ಜೋಕ್ ಆಗಿದ್ದೀರಿ' ಎಂದು ಹೇಳಿದ್ದಾರೆ.

ಈ ಮೊದಲು ಉರ್ಫಿ ಧರ್ಮದ ಬಗ್ಗೆ ಮಾತನಾಡಿ, 'ನಾನು ಮುಸ್ಲಿಂ ಹುಡುಗಿ, ಹಾಗಾಗಿ ನಾನು ಏನೇ ಮಾಡಿದರು ಅಥವಾ ಕೆಲವು ರೀತಿಯ ಬಟ್ಟೆಗಳನ್ನು ಧರಿಸಿದಾಗ ಅದು ಬಹಳಷ್ಟು ಜನರಿಗೆ ಇಷ್ಟವಾಗುವುದಿಲ್ಲ. ನನ್ನ ಧರ್ಮವು ಪ್ರತಿ ಬಂಧಕವಾಗಿದೆ' ಎಂದು ಹೇಳಿದ್ದರು.

ಹುಷಾರಮ್ಮ ಚುಚ್ಚತ್ತೆ; ಉರ್ಫಿಯ ಹೊಸ ಅವತಾರ ಕಂಡು ಹೌಹಾರಿದ ನೆಟ್ಟಿಗರಿಂದ ಸಖತ್ ಟ್ರೋಲ್

ಯಾರ್ ಏನೇ ಹೇಳಲಿ, ಎಷ್ಟೇ ಟ್ರೋಲ್ ಮಾಡ್ಲಿ, ಕೇಸ್ ಕೂಡ ಹಾಕಲಿ ನಾನು ಮಾತ್ರ ಹೀಗೆ ಇರೋದು ಎನ್ನುವುದು ಉರ್ಫಿ ಪಾಲಿಸಿ. ಯಾಕೆಂದ್ರೆ ಎಷ್ಟೇ ಟ್ರೋಲ್ ಆದರೂ, ಕೇಸ್ ದಾಖಲಾದರು ಉರ್ಫಿ ತನ್ನ ವಿಚಿತ್ರ ಅವತಾರ ಮಾತ್ರ ಬಿಟ್ಟಿಲ್ಲ. ಬಿಚ್ಚೋಲೆಯಾಗಿ ದಿನಕ್ಕೊಂದು ವೇಷದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಾನೆ ಡಿಸೈನ್ ಮಾಡಿರುವ ಬಟ್ಟೆಯಲ್ಲಿ ಉರ್ಫಿ ದಿನಕ್ಕೊಂದು ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದಾ ಸುದ್ದಿಯಾಗುತ್ತಲೇ ಇರುತ್ತಾರೆ. ಸಂಪೂರ್ಣವಾಗಿ ಬಟ್ಟೆ ಧರಿಸುವುದು ಅಲರ್ಜಿ ಎನ್ನುವ ಉರ್ಫಿ ಅರ್ಧಂಬರ್ಧ ಬಟ್ಟೆಯಲ್ಲೇ ಓಡಾಡುತ್ತಿರುತ್ತಾರೆ. ಕ್ಯಾಮರಾ ಮುಂದೆ ಪೋಸ್ ನೀಡುತ್ತಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?