ಲಲಿತ್‌ ಮೋದಿ ಬಿಟ್ಟು ಮತ್ತೆ ಮಾಜಿ ಬಾಯ್‌ಫ್ರೆಂಡ್‌ ಹಿಂದೆ ಬಿದ್ದ ಸುಶ್ಮಿತಾ ಸೇನ್; ಮದುವೆ ಫೋಟೋ ವೈರಲ್?

Published : Jan 10, 2023, 12:12 PM IST
ಲಲಿತ್‌ ಮೋದಿ ಬಿಟ್ಟು ಮತ್ತೆ ಮಾಜಿ ಬಾಯ್‌ಫ್ರೆಂಡ್‌ ಹಿಂದೆ ಬಿದ್ದ ಸುಶ್ಮಿತಾ ಸೇನ್; ಮದುವೆ ಫೋಟೋ ವೈರಲ್?

ಸಾರಾಂಶ

ಮಾಜಿ ಬಾಯ್‌ಫ್ರೆಂಡ್ ರೋಹ್ಮನ್ ಶಾಲ್ ಜೊತೆಗಿರುವ ಸುಶ್ಮಿತಾ ಸೇನ್ ಫೋಟೋ ವೈರಲ್. ಲವ್ ಮತ್ತು ಕುಟುಂಬದ ಬಗ್ಗೆ ಸ್ಪೀಚ್...

ಮಾಜಿ ವಿಶ್ವಸುಂದರಿ, ನಟಿ ಸುಶ್ಮಿತಾ ಸೇನ್ ಕೆಲವು ದಿನಗಳ ಹಿಂದೆ ಕೋಲ್ಕತಾದಲ್ಲಿ ನಡೆದ ಸಹೋದರನ ಮದುವೆಯಲ್ಲಿ ಭಾಗಿಯಾಗಿದ್ದರು. ಈ ಮದುವೆ ಸಮಾರಂಭದಲ್ಲಿ ಮಾಜಿ ಬಾಯ್‌ಫ್ರೆಂಡ್‌ ರೋಹ್ಮನ್‌ ಶಾಲ್‌ ಕೂಡ ಇದ್ದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.  ಸಹೋದರ ರಾಜೇವ್ ಸೇನ್ ಅಪ್ಲೋಡ್ ಮಾಡುತ್ತಿದ್ದ ಯೂಟ್ಯೂಬ್‌ ವಿಡಿಯೋಗಳನ್ನು ನಾವು ಅನೇಕ ಮದುವೆ ಕ್ಲಿಪ್‌ಗಳನ್ನು ನೋಡಬಹುದು. ಈ ವೇಳೆ ಸುಶ್ಮಿತಾ ವಿಡಿಯೋವನ್ನು ರೋಹ್ಮನ್‌ ರೆಕಾರ್ಡ್‌ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. 

'ಬೇರೆ ಜಾಗಗಳಿಂದ ಬಂದು ನಮ್ಮ ಬಾಲಿವುಡ್‌ ಹಾಡುಗಳನ್ನು ಕೇಳಿಸಿಕೊಂಡು ಪ್ರತಿಯೊಂದು ಹೆಜ್ಜೆಗೂ ಮ್ಯಾಚ್‌ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ನಾವು ಡ್ಯಾನ್ಸ್‌ ಮಾಡಬೇಕು ಅಂದ್ರೆ ವಾರಗಳ ಕಾಲ ಅಭ್ಯಾಸ ಮಾಡಬೇಕು. ಮದುವೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರು 2 ದಿನಗಳಲ್ಲಿ ಮಾಡಿರುವುದು ಗ್ರೇಟ್. ಸೇನ್ ಫ್ಯಾಮಿಲಿ ಅತಿ ಹೆಚ್ಚು ಪ್ರೀತಿ ತುಂಬಿರುವ ಫ್ಯಾಮಿಲಿ ಎಂದು ಇದರ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕುಟುಂಬದಲ್ಲಿ ಏನೇ ಸಮಸ್ಯೆಗಳು ಇರಲಿ ನಾವು ಒಬ್ಬರನ್ನೊಬ್ಬರು ಬಿಟ್ಟು ಕೊಡುವುದಿಲ್ಲ. ಸಂಬಂಧ ಉಳಿಸಿಕೊಳ್ಳಲು ಏನು ಬೇಕಿದ್ದರು ಮಾಡುತ್ತೇವೆ. ಹುಡುಗನ ಕುಟುಂಬದವರನ್ನು ಭೇಟಿ ಮಾಡಿ ನನಗೆ ಅವರು ನಮ್ಮವರ ರೀತಿ ಅನಿಸುತ್ತದೆ' ಎಂದು ಸುಶ್ಮಿತಾ ವಿಡಿಯೋದಲ್ಲಿ ಮಾತನಾಡುವಾಗ ರೋಹ್ಮನ್‌ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡುತ್ತಿರುವುದನ್ನು ಕಾಣಬಹುದು.

'ಲವ್ ಮತ್ತು ಪ್ರಾಮಿಸ್‌ ಎರಡು ತುಂಬಾ ಶಕ್ತಿ ಹೊಂದಿದೆ. ಅದಕ್ಕಿಂತ ಸೆಕ್ಸಿಯರ್‌ ಏನೆಂದರೆ ನಾವು ಹೊಂದಿರುವ ಕಮಿಟ್‌ಮೆಂಟ್‌. ಅದು ಲೈಫ್‌ಟೈಂ ತೆಗೆದುಕೊಳ್ಳುತ್ತದೆ. ಮಾನಿಟರಿಂಗ್, ಫನ್, ರೊಮ್ಯಾನ್ಸ್‌ ಎಲ್ಲಾ ರೋಲ್‌ ಪ್ಲೇ ಮಾಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ' ಎಂದು ಹೇಳಿದ್ದಾರೆ. 

ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್‌ ಸುಶ್ಮಿತಾ ಸೇನ್ ಅವರ ಲೈಫ್‌

ರೋಹ್ಮನ್‌ ಜೊತೆ ಬ್ರೇಕಪ್:

ಸುಶ್ಮಿತಾ ಸೇನ್ (Sushmita Sen) ಡಿಸೆಂಬರ್ 2021 ರಲ್ಲಿ ಗೆಳೆಯ ರೋಹ್ಮನ್ ಶಾಲ್ (Rohman Shawl) ಜೊತೆ ಬ್ರೇಕಪ್‌ ಮಾಡಿಕೊಂಡರು. ಬ್ರೇಕಪ್ ವಿಚಾರವನ್ನು ಸುಶ್ಮಿತಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು. ಆದರೀಗ ಬ್ರೇಕ್‌ ನಂತರವೂ ಕಾಣಿಸಿಕೊಳ್ಳುತ್ತಿರುವುದಕ್ಕೆ ನೆಟ್ಟಿಗರು ಶಾಕ್ ಆಗಿದ್ದಾರೆ. ಇವರು ಬೇರೆಯಾಗಿದ್ದರು ಅಲ್ಲವೇ? ಎಂದು ಒಬ್ಬ ಯೂಸರ್‌ ಕಾಮೆಂಟ್‌ ಮಾಡಿದ್ದಾರೆ. ಅದೇ ಸಮಯದಲ್ಲಿ, ಇನ್ನೊಬ್ಬ ವ್ಯಕ್ತಿ 'ಇದು ಚೆನ್ನಾಗಿದೆ ಫ್ರೆಂಡ್‌ ವಿಥ್‌ ಬೆನಿಫಿಟ್‌' ಎಂದು ಕಾಮೆಂಟ್‌ ಮಾಡಿದ್ದಾರೆ.ಮತ್ತೆ ಒಟ್ಟಿಗೆ ಈಗ ಈ ಕಥೆ ಏನು? ಎಂದು ಮತ್ತೊಬ್ಬರು ಕೇಳಿದರೆ, 'ಅವರು ನಿಜವಾಗಿಯೂ ಬ್ರೇಕಪ್‌ ಆಗಿದ್ದಾರೆ ಅಥವಾ ಪ್ರಚಾರಕ್ಕೆ ಬರಲು ಅವರು ಹಾಗೆ ಹೇಳಿದ್ದಾರೆಯೇ?' ಎಂದು ಇನ್ನೊಬ್ಬರು ಅಪಹಾಸ್ಯ ಮಾಡಿದರು.

ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ಅವರ ವಯಸ್ಸಿನಲ್ಲಿ 15 ವರ್ಷಗಳ ಅಂತರವಿದೆ. ಸುಶ್ಮಿತಾ ಸೇನ್‌ಗೆ 46 ವರ್ಷವಾಗಿದ್ದರೆ, ರೋಹ್ಮನ್‌ಗೆ ಈಗ 31 ವರ್ಷ. ಫ್ಯಾಷನ್ ಗಾಲಾ ಸಂದರ್ಭದಲ್ಲಿ ಇಬ್ಬರೂ ಮೊದಲ ಬಾರಿಗೆ ಭೇಟಿಯಾದರು. ರೋಹ್ಮನ್ ಶಾಲ್ ನೋಯ್ಡಾ ನಿವಾಸಿ. ಅವರು ವೃತ್ತಿಯಲ್ಲಿ ಸ್ವತಂತ್ರ ಮಾಡೆಲ್‌. ನೋಯ್ಡಾದಲ್ಲಿ  ಓದಿದ ನಂತರ,ರೋಹ್ಮನ್ ಮುಂಬೈಗೆ ತೆರಳಿದರು ಮತ್ತು ಮಾಡೆಲಿಂಗ್ ವೃತ್ತಿಯಲ್ಲಿ ತೊಡಗಿದರು. ಸುಶ್ಮಿತಾ ಸೇನ್ ಮತ್ತು ರೋಹ್ಮನ್  ಫ್ಯಾಷನ್ ಶೋ ವೇಳೆ ಭೇಟಿಯಾಗಿದ್ದರು ಎನ್ನಲಾಗಿದೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?