ಮಲೈಕಾ ಅರೋರಾಗೆ ಅವಕಾಶ ಬಿಟ್ಟು ಕೊಟ್ಟ ಶಿಲ್ಪಾ ಶಿರೋಡ್ಕರ್. ಈಗ ಸಿನಿಮಾ ಮಾಡ್ತೀನಿ ಅವಕಾಶ ಕೊಡಿ ಅಂದ್ರೆ ಖಂಡಿತಾ ಗೇಲಿ ಮಾಡ್ತಾರೆ ಎಂದ ನಟಿ.....
90ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸೂಪರ್ ಡೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತ ಸಖತ್ ಬ್ಯುಸಿಯಾಗಿದ್ದ ನಟಿ ಶಿಲ್ಪಾ ಶೆರೋಡ್ಕರ್ ಆಗ ನಡೆದ ಬಾಡಿ ಶೇಮಿಂಗ್ ಘಟನೆ ಬಗ್ಗೆ ಮಾತನಾಡಿದ್ದಾರೆ. ಕಿಶನ್ ಕನ್ಹಯ್ಯಾ, ಪ್ರತೀಕ್ಷಾ, ಆಂಖೇನ್, ಖುದಾ ಗವಾ, ಗೋಪಿ ಕಿಶನ್, ಬೇವಫಾ ಸನಮ್, ಮೃತ್ಯುದಂಡ್ ಮತ್ತು ಗಜ ಗಾಮಿನಿ ಸಿನಿಮಾಗಳಲ್ಲಿ ಶಿಲ್ಪಾ ಅಭಿನಯಿಸಿದ್ದಾರೆ. ಚಯ್ಯ ಚಯ್ಯ ಹಾಡಿಗೆ ನಾನು ಡುಮ್ಮಿ ಎಂದು ಮಲೈಕಾಗೆ ಅವಕಾಶ ಕೊಟ್ಟ ಘಟನೆ ಕೇಳಿ ಎಂದಿದ್ದಾರೆ. ಈ ಹಾಡಲ್ಲಿ ಮಲೈಕಾ ಇರಲಿಲ್ಲ ಅಂದ್ರೆ ವೃತ್ತಿ ಜೀವನವೇ ಕುಸಿಯುತ್ತಿತ್ತಾ?
ತೆಲುಗು ಸ್ಟಾರ್ ಮಹೇಶ್ ಬಾಬು ಪತ್ನಿ ನಟಿ ನಮ್ರತಾ ಶಿರೋಡ್ಕರ್ ಸಹೋದರಿ ಶಿಲ್ಪಾ ಶಿರೋಡ್ಕರ್ 2000ರಲ್ಲಿ ಯುಕೆ ಮೂಲತಃ ಬ್ಯಾಂಕರ್ ಅಪರೇಶ್ ರಂಜಿತ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಸಿನಿಮಾರಂಗಕ್ಕೆ ಗುಡ್ ಬೈ ಹೇಳಿದ್ದರು. ಇವರಿಗೆ 19 ವರ್ಷದ ಮಗಳಿದ್ದಾಳೆ. ಲಂಡನ್‌ನಲ್ಲಿ ನೆಲೆಸಿರುವ ನಟಿ ಆಗಾಗ ಫ್ಯಾಮಿಲಿಯನ್ನು ಭೇಟಿ ಮಾಡುತ್ತಾರೆ. ಬಾಡಿ ಶೇಮಿಂಗ್‌ನಿಂದ ಶಿಲ್ಪಾ ಎಷ್ಟು ಅವಕಾಶಗಳನ್ನು ಕಳೆದುಕೊಂಡರು ಎಂದು ಮೊದಲ ಸಲ ಮಾತನಾಡಿದ್ದಾರೆ.
'ಫರಾನ್ ಖಾನ್ ಚಯ್ಯ ಚಯ್ಯ ಹಾಡಿನ್ನು ಹಿಡಿದುಕೊಂಡು ಬಂದು ನನಗೆ ಕೊಡುವುದಾಗಿ ಹೇಳಿದ್ದರು ಆದರೆ ನಾನು ದಪ್ಪ ಇದ್ದೀನಿ ಎಂದು ಮಲೈಕಾ ಅರೋರಾಗೆ ಅವಕಾಶ ಕೊಟ್ಟರು. ಸೂಪರ್ ಹಿಟ್ ಹಾಡನ್ನು ನಾನು ಮಿಸ್ ಮಾಡಿಕೊಂಡೆ. 2023ರಲ್ಲಿ ಸಿನಿಮಾ ರಂಗಕ್ಕೆ ಕಾಲಿಡುತ್ತೀನಿ ಎಂದು ತೀರ್ಮಾನ ಮಾಡಿದ್ದರೆ ಬಹುಶ ನನಗೆ ಯಾರೂ ಅವಕಾಶ ಕೊಡುವುದಿಲ್ಲ ಏಕೆಂದರೆ 90ರ ದಶದಲ್ಲಿ ಡುಮ್ಮಿ ಎನ್ನುತ್ತಿದ್ದರು ಈಗ ಸುಮ್ಮನಿರುತ್ತಾರಾ? ಏನ್ ಏನ್ ಕರೆಯುತ್ತಿದ್ದರು ಗೊತ್ತಿಲ್ಲ' ಎಂದು ಟೈಮ್ಸ್ ಆಫ್ ಇಂಡಿಯಾ ಸಂದರ್ಶನದಲ್ಲಿ ಶಿಲ್ಪಾ ಮಾತನಾಡಿದ್ದಾರೆ
ವೇಟ್‌ಲಾಸ್‌ನಿಂದ ಲಕ್ಷಗಟ್ಟಲೆ ಹಣ ಕಳೆದುಕೊಂಡೆ; ಬಾಡಿ ಶೇಮಿಂಗ್ ಬಗ್ಗೆ ಮೌನ ಮುರಿದ ಪ್ರಥಮಾ ಪ್ರಸಾದ್
'ನನಗೆ ನಿಜಕ್ಕೂ ನೆನಪಿಲ್ಲ ನನ್ನ ದೇಹ ಅಥವಾ ನಾನು ಕಾಣಿಸುತ್ತಿದ್ದ ರೀತಿ ಮೇಲೆ ನನ್ನ ಯಶಸ್ಸು ಅಥವಾ ಅಭಿಮಾನಿಗಳ ಪ್ರೀತಿ ಪಡೆದೆ ಎಂದು. 90ರ ದಶಕದಲ್ಲಿ ಇದ್ಯಾವುದು ಮ್ಯಾಟರ್ ಆಗಲಿಲ್ಲ. ಒಂದೇ ಸಮಯಕ್ಕೆ ನಾವು ಮೂರ್ನಾಲ್ಕು ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದೆವು. ಸಮಯ ಲೆಕ್ಕ ಮಾಡದೆ ಶಿಫ್ಟ್‌ಗಳಲ್ಲಿ ಕೆಲಸ ಮಾಡಿದ್ದೀವಿ. ಹೀಗಾಗಿ ದಪ್ಪ ಸಣ್ಣ ಅನ್ನೋದು ಆ ಸಮಯದಲ್ಲಿ ಮುಖ್ಯವಾಗಿರಲಿಲ್ಲ. ಆಗಿನ ಕಾಲದಲ್ಲಿ ದಿನ ಹೊಸ ಹೊಸ ಪಾಠ ಕಲಿಯುವುದಕ್ಕೆ ಅವಕಾಶವಿತ್ತು. ನಿರ್ದೇಶಕರು, ನಿರ್ಮಾಪಕರು ಮತ್ತು ಸಹಕಲಾವಿದರು ಹೊಸಬರಿಗೆ ಮುಜುಗರವಿಲ್ಲದೆ ಪಾಠ ಹೇಳಿಕೊಡುತ್ತಿದ್ದರು. ಈಗ ಎಲ್ಲರೂ ಕಾಂಪಿಟೇಷನ್ ಮಾಡುತ್ತಾರೆ ಎರಡನೇ ಅವಕಾಶ ಕೊಡುವುದಿಲ್ಲ' ಎಂದು ಶಿಲ್ಪಾ ಹೇಳಿದ್ದಾರೆ.
'ನನ್ನ ಅಜ್ಜಿ ಮೀನಾಕ್ಷಿ ಶಿರೋಡ್ಕರ್ ಟಾಪ್ ಮಾರಾಠಿ ನಟಿಯಾಗಿದ್ದರು. ನನ್ನ ತಾಯಿ ಮಾಡಲಿಂಗ್ ಮಾಡಿಕೊಂಡು ಹೆಚ್ಚಿನ ಹಣ ಸಂಪಾದಿಸುತ್ತಿದ್ದರು. ನಾಯಕಿಯಾಗಿ ವೃತ್ತಿ ಜೀವನ ಆಯ್ಕೆ ಮಾಡಿಕೊಳ್ಳುವುದು ಒಂದೇ ಆಯ್ಕೆ ಅಲ್ಲ. ಶಾಲೆಯಲ್ಲಿ ನಾನು ಸರಿಯಾಗಿ ಓದುತ್ತಿರಲಿಲ್ಲ ಹೀಗಾಗಿ ತಾಯಿ ಜೊತೆ ಶೂಟಿಂಗ್‌ಗಳಲ್ಲಿ ಭಾಗಿಯಾಗುತ್ತಿದ್ದೆ ಅಲ್ಲಿದ್ದ ಎನರ್ಜಿ ನನಗೆ ತುಂಬಾ ಇಷ್ಟವಾಗುತ್ತಿತ್ತು. ಬಾಲ್ಯ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿರುವೆ. ಮಹೇಶ್ ಭಟ್ ಸಿನಿಮಾದಲ್ಲೂ ನಾನು ಅಭಿನಯಿಸಿರುವೆ. ನನಗೆ ಸಿನಿಮಾ ಅವಕಾಶ ಬಂದಾಗ ತಾಯಿ ನನ್ನನ್ನು ಕೇಳಿದ್ದರು ಒಂದು ನಿಮಿಷವೂ ಯೋಚನೆ ಮಾಡದೆ ಒಪ್ಪಿಕೊಂಡೆ. ಓದುವುದು ಬಿಟ್ಟು ಬೇರೆ ಏನೇ ಹೇಳಿದ್ದರು ಮಾಡುತ್ತಿದ್ದೆ'ಎಂದಿದ್ದಾರೆ ಶಿಲ್ಪಾ.