ಕೈಯಲ್ಲಿ ರುದ್ರಾಕ್ಷಿ ಮಾಲೆ ಹಿಡಿದಿದ್ದೇಕೆ ಸಮಂತಾ? ದಿನಕ್ಕೆ 10,008 ಬಾರಿ ಜಪಿಸುತ್ತಾರಂತೆ ಸ್ಯಾಮ್

By Suvarna NewsFirst Published Jan 10, 2023, 12:09 PM IST
Highlights

ಸಮಂತಾ ಅನಾರೋಗ್ಯದ ಬಳಿಕ ರುದ್ರಾಕ್ಷಿ ಮಾಲೆ ಹಿಡಿದು ಓಡಾಡುತ್ತಿದ್ದಾರೆ. ಈ ಬಗ್ಗೆ ಸಮಂತಾ ಮಾತನಾಡಿದ್ದಾರೆ. 

ಸೌತ್ ಸ್ಟಾರ್ ಸಮಂತಾ ಅನಾರೋಗ್ಯದ ಬಳಿಕ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಹುನಿರೀಕ್ಷೆಯ ಶಾಕುಂತಲಂ ಸಿನಿಮಾದ ಟ್ರೈಲರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಕೇವಲ ಫಸ್ಟ್ ಲುಕ್ ಮೂಲಕವೇ ಭಾರಿ ಕುತೂಹಲ ಮೂಡಿಸಿದ್ದ ಶಾಕುಂತಲಂ ಈಗ ಟ್ರೈಲರ್ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡುತ್ತಿದೆ. ಅಂದಹಾಗೆ ಟ್ರೈಲರ್ ರಿಲೀಸ್ ಈವೆಂಟ್‌ನಲ್ಲಿ ಸಮಂತಾ ಕೂಡ ಹಾಜರಿದ್ದರು. ಅನಾರೋಗ್ಯದ ಬಳಿಕ ಸಮಂತಾ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಇದಾಗಿದೆ. ಅನೇಕ ತಿಂಗಳುಗಳ ಬಳಿಕ ಸಮಂತಾ ಅವರನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. 

ಸಮಂತಾ ಅನಾರೋಗ್ಯದ ಬಳಿಕ ರುದ್ರಾಕ್ಷಿ ಮಾಲೆ ಹಿಡಿದು ಓಡಾಡುತ್ತಿದ್ದಾರೆ. ಸ್ಯಾಮ್ ಕೈಯಲ್ಲಿ ಯಾವಾಗಲೂ ರುದ್ರಾಕ್ಷಿ ಮಾಲೆ ಇರುವುದು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದರು. ಈ ಬಗ್ಗೆ ಸ್ವತಃ ಸಮಂತಾ ಅವರೇ ಬಹಿರಂಗ ಪಡಿಸಿದ್ದಾರೆ. ಇತ್ತೀಚಿಗಷ್ಟೆ ಶಾಕುಂತಲಂ ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಭಾಗಿಯಾಗಿದ್ದ ಸಮಂತಾ ರುದ್ರಾಕ್ಷಿ ಮಾಲೆಯ ಸೀಕ್ರೆಟ್ ರಿವೀಲ್ ಮಾಡಿದ್ದಾರೆ. ಪತ್ರಕರ್ತರೊಬ್ಬರ ಜೊತೆ ಮಾತನಾಡಿದ ಸಮಂತಾ ರುದ್ರಾಕ್ಷಿ ಮಾಲೆ ಯಾಕೆ ಹಿಡಿದಿರುತ್ತಾರೆ ಮತ್ತು ಅದನ್ನು ಎಷ್ಟು ಬಾರಿ ಪಠಿಸುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. 

Shakuntalam Trailer; ಶಾಕುಂತಲೆಯಾಗಿ ಕನ್ನಡಕ್ಕೆ ಬಂದ ಸಮಂತಾ; ಅದ್ಭತ ಎಂದ ಫ್ಯಾನ್ಸ್

ಆರೋಗ್ಯ ಮತ್ತು ಶಾಂತಿಗಾಗಿ ಪ್ರತಿದಿನ 10,008 ಜಪವನ್ನು ಪಠಿಸುವುದಾಗಿ ಸಮಂತಾ ಹೇಳಿದ್ದಾರೆ. ಕ್ರಿಶ್ಚಿಯನ್ನರು ಕೂಡ ಜಪಮಾಲೆ ಬಳಸುತ್ತಾರೆ. ಇದೀಗ ಸಮಂತಾ ಕೂಡ ಆರೋಗ್ಯ ಮತ್ತು ಶಾಂತಿಗಾಗಿ ರುದ್ರಾಕ್ಷಿ ಮಾಲೆ ಹಿಡಿದಿದ್ದಾರೆ. ಅಂದಹಾಗೆ ಸಮಂತಾ ವರ್ಷಗಳ ಹಿಂದೆಯೇ ಹಿಂದೂ ಧರ್ಮಕ್ಕೆ ಮತಾಂತರ ಹೊಂದಿದ್ದಾರೆ.  ಇದೀಗ ರುದ್ರಾಕ್ಷಿ ಮಾಲೆ ಹಿಡಿದು ಜಪ ಮಾಡುತ್ತಿದ್ದಾರೆ. ಪ್ರತಿ ದಿನ ಸಮಯ ಸಿಕ್ಕಾಗಲೆಲ್ಲಾ ಜಪ ಮಾಡುತ್ತಿರುತ್ತಾರೆ. ಹಾಗಾಗಿ ದಿನವಿಡಿ ಜಪಮಾಲೆ ಹಿಡಿದುಕೊಂಡಿರುತ್ತಾರೆ ಎನ್ನಲಾಗಿದೆ. 

ಎಷ್ಟೇ ಕಷ್ಟ ಬಂದರೂ ಸಿನಿಮಾ ಪ್ರೀತಿ ಕಳೆದುಕೊಂಡಿಲ್ಲ; ಟ್ರೈಲರ್ ಲಾಂಚ್ ಈವೆಂಟ್‌ನಲ್ಲಿ ಕಣ್ಣೀರಿಟ್ಟ ಸಮಂತಾ

ಮಯೋಸೈಟಿಸ್ ರೋಗದ ಬಳಿಕ ಸಮಂತಾ ತನ್ನನ್ನು ತಾನು ಗುಣಪಡಿಸಿಕೊಳ್ಳಲು ಸ್ಟ್ಟಾಂಗ್ ಆಗಲು ಆಧ್ಯಾತ್ಮಿಕ ಮಾರ್ಗವನ್ನು ಅನುಸರಿಸಿದ್ದಾರೆ. ಈ ಜಪಗಳ ಜೊತೆಗೆ ಹಲವಾರು ಹೋಮಗಳನ್ನು ಮತ್ತು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಸದ್ಗುರು ಎಂದೂ ಕರೆಯಲ್ಪಡುವ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಅವರ ಭಕ್ತೆ ಕೂಡ ಹೌದು. ಹಾಗಾಗಿ ಪ್ರತಿದಿನ ಈ ಅನೇಕ ದೇವರ ಆಚರಣೆಗಳಲ್ಲಿ ತೊಡಗಿಕೊಂಡಿರುತ್ತಾರೆ. 

ಈವೆಂಟ್‌ನಲ್ಲಿ ಸಮಂತಾ ಕಣ್ಣೀರು

ಟ್ರೈಲರ್ ರಿಲೀಸ್ ಈವೆಂಟ್ ನಲ್ಲಿ ಸಮಂತಾ ಕಣ್ಣೀರಿಟ್ಟರು. ಕಷ್ಟದಲ್ಲೂ ಒಂದೊಳ್ಳೆ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಿರುವ ಸಮಂತಾ ದುಃಖದ ಜೊತೆ ಸಂತೋಷದ ಕಣ್ಣೀರು ಹಾಕಿದ್ರು. ನಿರ್ದೇಶಕ ಗುಣಶೇಖರ್ ಸಮಂತಾ ಅವರ ಬಗ್ಗೆ ಮಾತನಾಡುವಾಗ ಸಮಂತಾ ಕಣ್ಣೀರು ಹಾಕಿದರು. ನಿರ್ದೇಶಕ ಗುಣ ಶೇಖರ್ ಅವರು ಸಮಂತಾ ಅವರನ್ನು ಈ ಸಿನಿಮಾದ ರಿಯಲ್ ಹೀರೋ ಎಂದು ಹೇಳಿದರು.  ಬಳಿಕ ಸಮಂತಾ ಮಾತನಾಡಿ, 'ಈ ಕ್ಷಣಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದ. ನಿರೀಕ್ಷೆಯಂತೆ ಚಿತ್ರ ಬಿಡುಗಡೆಯಾಗಲಿ ಎಂಬುದು ಎಲ್ಲರ ಆಶಯ. ಎಷ್ಟೇ ಕಷ್ಟಗಳು ಬಂದರೂ ಸಿನಿಮಾ ಮೇಲಿನ ಪ್ರೀತಿಯನ್ನು ಕಳೆದುಕೊಂಡಿಲ್ಲ. ಸಿನಿಮಾ ನನ್ನನ್ನು ಪ್ರೀತಿಸುತ್ತಿದೆ' ಎಂದು ಸಮಂತಾ ಭಾವುಕರಾದರು. 


 

click me!