ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್

Published : Apr 10, 2022, 11:16 AM IST
ಧರ್ಮಸ್ಥಳದಲ್ಲಿ KGF 2 ತಂಡ; ಶ್ರೀ ಮಂಜುನಾಥನ ಆಶೀರ್ವಾದ ಪಡೆದ ಯಶ್

ಸಾರಾಂಶ

ಕೆಜಿಎಫ್ 2 ಸಿನಿಮಾ ಬಿಡುಗಡೆಗೂ ಮೊದಲು ಸಿನಿಮಾತಂಡ ಶ್ರೀಮಂಜುನಾಥನ ದರ್ಶನ ಪಡೆಯುತ್ತಿದೆ. ಯಶ್ ಮತ್ತು ಕೆಜಿಎಫ್ 2 ತಂಡ ಇಂದು (ಏಪ್ರಿಲ್ 10) ಧರ್ಮಸ್ಥಳಕ್ಕೆ ಭೇಟಿ ನೀಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ತಂಡವರು ವಿಶೇಷ ವಿಮಾನದಲ್ಲಿ ಇಂದು ಧರ್ಮಸ್ಥಳಕ್ಕೆ ತೆರಳಿದ್ದಾರೆ.

ಪ್ಯಾನ್ ಇಂಡಿಯಾ ಸ್ಟಾರ್ ಯಶ್(Yash) ಸದ್ಯ ಬಹುನಿರೀಕ್ಷೆಯ ಕೆಜಿಎಫ್-2 ಸಿನಿಮಾ (KGF 2) ಬಿಡುಗಡೆಯ ಬ್ಯುಸಿಯಲ್ಲಿದ್ದಾರೆ. ಸದ್ಯ ಸಿನಿಮಾದ ಪ್ರಚಾರದಲ್ಲಿ ಯಶ್ ಮತ್ತು ತಂಡ ತೊಡಗಿಕೊಂಡಿದೆ. ಈಗಾಗಲೇ ಕೆಜಿಎಫ್ 2 ಟೀಂ ಉತ್ತರ ಭಾರತ ಸೇರಿದಂತೆ ಭಾರತದ ಎಲ್ಲಾ ಕಡೆ ಪ್ರಚಾರ ನಡೆಸಿದೆ. ದಕ್ಷಿಣ ಭಾರತ ಮಾತ್ರವಲ್ಲದೆ ಉತ್ತರದಲ್ಲೂ ಭರ್ಜರಿ ಹವಾ ಸೃಷ್ಟಿಸಿರುವ ಯಶ್ ನೋಡಿ ಬಾಲಿವುಡ್ ಕೂಡ ದಂಗ್ ಆಗಿದೆ. ಭಾರತದಾದ್ಯಂತ ಯಶ್ ಮತ್ತು ಕೆಜಿಎಫ್-2 ತಂಡಕ್ಕೆ ಸಿಕ್ಕ ಸ್ವಾಗತಕ್ಕೆ ಇಡೀ ಸಿನಿಮಾತಂಡ ಫುಲ್ ಖುಷ್ ಆಗಿದೆ.

ಸದ್ಯ ಎಲ್ಲಾ ಕಡೆ ಪ್ರಚಾರ ನಡೆಸಿ ಕರ್ನಾಟಕಕ್ಕೆ ವಾಪಸ್ ಆಗಿರುವ ಕೆಜಿಎಫ್-2 ಟೀಂ ಇದೀಗ ದೇವರ ದರ್ಶನಕ್ಕೆ ಹೊರಟಿದೆ. ಸಿನಿಮಾ ಬಿಡುಗಡೆಗೂ ಮೊದಲು ಶ್ರೀಮಂಜುನಾಥನ ದರ್ಶನ ಪಡೆಯುತ್ತಿದೆ. ಯಶ್ ಮತ್ತು ಕೆಜಿಎಫ್ 2 ತಂಡ ಇಂದು (ಏಪ್ರಿಲ್ 10) ಧರ್ಮಸ್ಥಳಕ್ಕೆ(Dharmasthala) ಭೇಟಿ ನೀಡಿದೆ. ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ತಂಡವರು ವಿಶೇಷ ವಿಮಾನದಲ್ಲಿ ಇಂದು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಯಶ ಮತ್ತು ತಂಡ ಶ್ರೀಮಂಜುನಾಥನ ದರ್ಶನಕ್ಕೆ ಹೊರಟಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಅಂದಹಾಗೆ ಯಶ್ ಮತ್ತು ವಿಜಯ್ ಕಿರಗಂದೂರು ಬಿಳಿ ಪಂಚೆ ಮತ್ತು ಶರ್ಟ್ ಧರಿಸಿದ್ದಾರೆ. ಯಶ್ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಟೈಲಿಶ್ ಲುಕ್ ನಲ್ಲಿ ಸಿನಿಮಾ ಪ್ರಚಾರ ಮಾಡುತ್ತಿದ್ದ ಯಶ್ ದೇವರ ದರ್ಶನಕ್ಕೆ ಹೋಗುವಾಗ ಸಾಂಪ್ರದಾಯಿಕ ಧರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಂದು ಧರ್ಮಸ್ಥಳದ ವಿಶೇಷ ಪೂಜೆಯಲ್ಲಿ ಯಶ್ ಭಾಗಿಯಾಗಲಿದ್ದಾರೆ. ಸುಮಾರು 11.30 ರ ಸಮಯದಲ್ಲಿ ಯಶ್ ಮತ್ತು ತಂಡ ಶ್ರೀಮಂಜುನಾಥನ ದರ್ಶನ ಪಡೆದು ಆಶೀರ್ವಾದ ಪಡೆಯಲಿದ್ದಾರೆ.

KGF 2 ಫಸ್ಟ್ ಡೇ ಫಸ್ಟ್ ಶೋ ನೋಡಲು ಬಯಸುತ್ತಿರೋರಿಗೆ ಇಲ್ಲಿದೆ ಸಖತ್ ನ್ಯೂಸ್!

ಕೆಜಿಎಫ್-2 ಬಿಡುಗಡೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಏಪ್ರಿಲ್ 14ರಂದು ಸಿನಿಮಾ ದೇಶದಾದ್ಯಂತ ತೆರೆಗೆ ಬರಲಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿರುವ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ.

KGF Chapter 2: ಗ್ರೀಸ್ ಚಿತ್ರಮಂದಿರಗಳಲ್ಲಿ ರಾಕಿ ಭಾಯ್ ಹವಾ!

ಕೆಜಿಎಫ್ ಮೊದಲ ಭಾಗಕ್ಕಿಂತ 2ನೇ ಭಾಗ ಮತ್ತಷ್ಟು ರೋಚಕವಾಗಿದ್ದು ರಾಕಿ ಭಾಯ್ ಅನ್ನು ಕಣ್ತುಂಬಿಕೊಳ್ಳಲು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್, ನಟಿ ರವೀನಾ ಟಂಡನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಧೀರಾ ಎನ್ನುವ ಭಯಾನಕ ಪಾತ್ರ ನಿರ್ವಾಹಿಸಿರುವ ಸಂಜಯ್ ದತ್ ಅವರನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಪ್ರಿಲ್ 14ರಂದು ಎಲ್ಲಾ ಕುತೂಹಲ, ನಿರೀಕ್ಷೆ ಗಳಿಗೆ ತೆರೆ ಬೀಳಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?