Ramayana Event: ದೆಹಲಿ ನೆಲದಲ್ಲಿ ನಿಂತು ಕನ್ನಡದಲ್ಲೇ ಮಾತು ಆರಂಭಿಸಿದ ಯಶ್ 'ರಾಮಾಯಣ ಈವೆಂಟ್'ನಲ್ಲಿ ಹೇಳಿದ್ದೇನು?

Published : Jul 18, 2026, 09:55 PM IST
Yash

ಸಾರಾಂಶ

ದೆಹಲಿಯ ರಾಮಾಯಣ (Pratham Sankalp) ಈವೆಂಟ್‌ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಮಾತು ಆರಂಬಿಸಿ, ಬಳಿಕ ಉಳಿದ ಭಾಷೆಗಳಲ್ಲಿ ನಮಸ್ಕಾರ ಹೇಳಿ, ನಂತರ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.

ಜಗತ್ತೇ ನಿರೀಕ್ಷಿಸುತ್ತಿರುವ 'ರಾಮಾಯಣ' ಸಿನಿಮಾದ ಪ್ರಚಾರ ಕಾರ್ಯಕ್ರಮ ಜೋರಾಗಿ ನಡೆಯುತ್ತಿರುವುದು ಗೊತ್ತೇ ಇದೆ. ಇಂದು ದೆಹಲಿಯಲ್ಲಿ ನಡೆದ ಕಾರ್ಯಕ್ರಮ 'ಪ್ರಥಮ್ ಸಂಕಲ್ಪ್' ಸುದ್ದಿಗೋಷ್ಟಿಯಲ್ಲಿ 'ರಾಮಾಯಣ' ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ, ನಿರ್ದೇಶಕ ನಿತೇಶ್ ತಿವಾರಿ ಸೇರಿದಂತೆ ಇಡೀ ತಂಡ ದೆಹಲಿ ಕಾರ್ಯಕ್ರಮದಲ್ಲಿ ನೆರೆದಿತ್ತು. ಅಲ್ಲಿ ಕನ್ನಡದ ನಟ, 'ರಾಮಾಯಣ'ದಲ್ಲಿನ ರಾವಣ ಪಾತ್ರಧಾರಿ ಯಶ್ (Yash) ಬಹಳಷ್ಟು ಗಮನ ಸೆಳೆದರು. ರಾಮಾಯಣದ 'ರಾಮ' ರಣಬೀರ್ ಕಪೂರ್ ಹಾಗೂ 'ಸೀತೆ' ಸಾಯಿ ಪಲ್ಲವಿ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾದರು.

ಇನ್ನು, ದೆಹಲಿಯ ರಾಮಾಯಣ (Pratham Sankalp) ಈವೆಂಟ್‌ನಲ್ಲಿ ಮಾತನ್ನಾಡಿದ ನಟ ಯಶ್, ಕನ್ನಡದಲ್ಲಿಯೇ ಮಾತು ಶುರು ಮಾಡಿದ್ದಾರೆ. 'ಎಲ್ಲರಿಗೂ ನಮಸ್ಕಾರ; ಎಂದು ಕನ್ನಡದಲ್ಲೇ ಹೇಳಿ ಬಳಿಕ ಅವರು ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಮಸ್ಕಾರ ಹೇಳಿ ಬಳಿಕ, ಈ ಈವೆಂಟ್ ಹಾಗೂ ರಾಮಾಯಣದ ಬಗ್ಗೆ ಮಾತನ್ನಾಡಿದ್ದಾರೆ.

ರಾಮಾಯಣದ ಬಗ್ಗೆ ಯಶ್ ಹೇಳಿದ್ದೇನು?

ಮೊದಲನೆಯದಾಗಿ, ರಾಮಾಯಣ ಸಿನಿಮಾದ ನಿರ್ಮಾಪಕರಾದ ನಮಿತ್ ಮಲ್ಹೋತ್ರಾ ಅವರಿಗೆ ಯಶ್ ಥ್ಯಾಂಕ್ಸ್ ಹೇಳಿದ್ದಾರೆ. ಯಶ್ ಕೂಡ ಈ ಚಿತ್ರದ ನಿರ್ಮಾಣಕ್ಕೆ ಕೈ ಜೋಡಿಸಿದ್ದು, ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು ಎಂಬುದನ್ನು ಸ್ವತಃ ಯಶ್‌ಗೂ ಮೊದಲು ಮಾತನ್ನಾಡಿದ್ದ ನಮಿತ್ ಮಲ್ಹೋತ್ರಾ ಸ್ಪಷ್ಟಪಡಿಸಿದ್ದರು. ಅದನ್ನು ಫಾಲೋ ಮಾಡುವ ಮೂಲಕ ನಟ ಯಶ್ ಅವರು, 'ನನಗೆ ಈ ಸಿನಿಮಾದ ಬಗ್ಗೆ ಹೇಳಿ ನನ್ನಿಂದ ಈ ಸಿನಿಮಾಗೆ ಬೇಕಾದ ಎಲ್ಲವನ್ನೂ ಪಡೆದುಕೊಂಡಿರುವ ನಮಿತ್ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ' ಎಂದಿದ್ದಾರೆ.

ನಮಿತ್ ಅವರು ಯಶ್ ಅವರಿಗಿಂತ ಮೊದಲು ಮಾತನ್ನಾಡಿ, 'ಈ ಸಿನಿಮಾ ಮೂಡಿಬರಲು ಮುಖ್ಯ ಕಾರಣವೇ ಯಶ್ ಅವರು' ಎಂದಿದ್ದಾರೆ. ಆದರೆ, ಆ ಕ್ರೆಡಿಟ್ ಪೂರ್ಣವಾಗಿ ತೆಗೆದುಕೊಳ್ಳದ ಯಶ್ ಅವರು, ಅವರ ಮಾತಿಗೆ ಸಹಮತ ವ್ಯಕ್ತಪಡಿಸುತ್ತ, 'ಹೌದು, ಈ ಸಿನಿಮಾ ಆಗೋದಕ್ಕೆ ನನಗೆ, ನನ್ನ ಮಾತಿಗೆ ಸಂಪೂರ್ಣ ಸಹಕಾರ ನೀಡಿದ ನಮಿತ್ ಮಲ್ಹೋತ್ರಾ ಕಾರಣ' ಎಂದಿದ್ದಾರೆ. ಈ ಮೂಲಕ ತಮ್ಮ ಹಾಗೂ ನಮಿತ್ ಅವರ ಸಹಮತ-ಸಹಪಥದಿಂದ ಈ ಸಿನಿಮಾ ನಿರ್ಮಾಣ ಆಗಿದೆ ಎಂದಿದ್ದಾರೆ ಯಶ್. ನಮಿತ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ರಾಮಾಯಣ ಸಿನಿಮಾದ ದೆಹಲಿ ವಿಶೇ‍ಷ ಕಾರ್ಯಕ್ರಮದಲ್ಲಿ ಮಾತನ್ನಾಡಿದ ಯಶ್, ತಮ್ಮ ಸಹನಟ ರಣಬೀರ್ ಕಪೂರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ರಣಬೀರ್ ಕಪೂರ್ ಈ ಪಾತ್ರಕ್ಕಾಗಿ ತಕ್ಕ ಸಿದ್ಧತೆ ಮಾಡಿಕೊಂಡು ಚೆನ್ನಾಗಿ ನಟಿಸಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ನಟನೆ ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ' ಎಂದಿದ್ದಾರೆ. ಜೊತೆಗೆ ರಣಬೀರ್ ಕಪೂರ್‌ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇನ್ನು ನಟಿ ಸಾಯಿ ಪಲ್ಲವಿ ಬಗ್ಗೆ ಕೂಡ ನಟ ಯಶ್ ಮಾತನ್ನಾಡಿದ್ದಾರೆ. 'ಸಾಯಿ ತುಂಬಾ ಪ್ರತಿಭಾನ್ವಿತ ನಟಿ ಎಂಬುದು ಎಲ್ಲರಿಗೂ ಗೊತ್ತು. ಅವರು ಯಾಮಾಯಣದಲ್ಲಿ 'ಸೀತೆ'ಯಾಗಿ ಅಮೋಘ ಅಭಿನಯ ನೀಡಿದ್ದಾರೆ. ಅವರಿಗೂ ಥ್ಯಾಂಕ್ಸ್' ಎಂದಿದ್ದಾರೆ.

ನಿರ್ದೇಶಕ ನಿತೇಶ್ ತಿವಾರಿ

ನಿರ್ದೇಶಕ ನಿತೇಶ್ ತಿವಾರಿ ಬಗ್ಗೆ ಕೂಡ ನಟ ಯಶ್ ಅವರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸಿ 'ನಮ್ಮ ರಾಮಾಯಣ' ಸಿನಿಮಾದ ನಿರ್ದೇಶಕರಾದ ನಿತೇಶ್ ತಿವಾರಿ ಅವರು ಈ ಚಿತ್ರವನ್ನು ಹಗಲು-ರಾತ್ರಿ ಜೀವಿಸಿದ್ದಾರೆ. ಈ ಸಿನಿಮಾಗೆ ಅದೇನು ಬೇಕೋ ಎಲ್ಲವನ್ನೂ ಕೊಟ್ಟಿದ್ದಾರೆ. ಆದ್ದರಿಂದ ಈ ರಾಮಾಯಣ ಸಿನಿಮಾ ಚೆನ್ನಾಗಿ ಮೂಡಿಬಂದಿದೆ' ಎಂದಿದ್ದಾರೆ.

ಜೊತೆಗೆ, ರಾಮಾಯಣದಲ್ಲಿ ನಟಿಸಿದ ನಟಿ ಶೋಭನಾ, ಲಕ್ಷ್ಮಣ ಪಾತ್ರಧಾರಿ ಹೀಗೆ ಎಲ್ಲವರ ಬಗ್ಗೆಯೂ ಸೂಚ್ಯವಾಗಿ ಮಾತನ್ನಾಡಿರುವ ಯಶ್, ಅಲ್ಲಿ ಭಾರೀ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಾರೆ. ಜಗತ್ತಿನ ಎಲ್ಲೇ ನಿಂತರೂ ತಮ್ಮ ಮಾತೃಭಾಷೆ ಕನ್ನಡವನ್ನು ಮರೆಯದೇ ಮೊಟ್ಟಮೊದಲು ಕನ್ನಡದಲ್ಲೇ ಮಾತನ್ನಾಡಿ ಕನ್ನಡವನ್ನು ಜಗತ್ತಿನೆಲ್ಲೆಡೆ ಮೆರೆಸುವ ಯಶ್‌ ಬಗ್ಗೆ ಕನ್ನಡಗರು ಸೋಷಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ ಮಂದಣ್ಣ ಸ್ಕ್ರೀನ್ ಲುಕ್‌ಗಳೇ ಟ್ರೆಂಡ್: ಯಾವ ಸಿನಿಮಾ ಲುಕ್ ನಿಮಗೆ ಫೇವರಿಟ್?
ಪವಿತ್ರ ಲೋಕೇಶ್ ಈ ರೀತಿ ಕಾಣಿಸಿಕೊಂಡಿದ್ದನ್ನು ನೋಡಿದ್ರೆ ನಂಬೋದು ಕಷ್ಟ: ಈ ಸಿನಿಮಾದ ಕಥೆಯೇ ವಿಚಿತ್ರ