ಅಪ್ಪನೇ ಹೆಂಡ್ತಿನ ಸರಿ ನೋಡ್ಕೊಂಡಿಲ್ಲ ಅಂದ್ರೆ ಮಗ ಸರಿ ಇರ್ತಾನಾ?: ದೌರ್ಜನ್ಯದ ಬಗ್ಗೆ ಸಾಯಿ ಪಲ್ಲವಿ ಮಾತು

Published : Mar 07, 2023, 11:27 AM ISTUpdated : Mar 07, 2023, 02:08 PM IST
 ಅಪ್ಪನೇ ಹೆಂಡ್ತಿನ ಸರಿ ನೋಡ್ಕೊಂಡಿಲ್ಲ ಅಂದ್ರೆ ಮಗ ಸರಿ ಇರ್ತಾನಾ?: ದೌರ್ಜನ್ಯದ ಬಗ್ಗೆ ಸಾಯಿ ಪಲ್ಲವಿ ಮಾತು

ಸಾರಾಂಶ

ಸಾಮಾಜಿಕ ಜಾಲತಾಣದಲ್ಲಿ ಸಾಯಿ ಪಲ್ಲವಿ ಜನಪ್ರಿಯ ಸಂದರ್ಶನ ವಿಡಿಯೋಗಳು ವೈರಲ್‌ ಆಗುತ್ತಿದೆ. ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂದು ಮನೆಯಲ್ಲಿ ಹೇಳಿಕೊಡಬೇಕು ಎಂದ ನಟಿ.... 

2005 ಕಸ್ತೂರಿ ಮಾನ್ ಮತ್ತು ಧಾಮ್ ಧೂಮ್ ತಮಿಳು ಸಿನಿಮಾ ಮೂಲಕ ಸಾಯಿ ಪಲ್ಲವಿ ಬಣ್ಣದ ಜರ್ನಿ ಆರಂಭಿಸುತ್ತಾರೆ. 2015ರಲ್ಲಿ ಪ್ರೇಮಂ ಸಿನಿಮಾ ಬಿಗ್ ಹಿಟ್ ತಂದು ಕೊಡುತ್ತದೆ. ಅಲ್ಲಿಂದ ಪಲ್ಲವಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿ ಹತ್ತಾರು ಅವಾರ್ಡ್‌ಗಳನ್ನು ಬಾಚಿಕೊಂಡರು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಪಲ್ಲವಿ ಮುಖದಲ್ಲಿ ಮೊಡವೆಗಳು ಹೆಚ್ಚಿತ್ತು ಹೀಗಾಗಿ ಕಡಿಮೆ ಮೇಕಪ್ ಬಳಸಿ ನಟಿಸುತ್ತಿದ್ದರು. ಆರಂಭದಲ್ಲಿ ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಿದ್ದವರು ಪಲ್ಲವಿ ನ್ಯಾಚುರಲ್ ಬ್ಯೂಟಿನ ಇಷ್ಟ ಪಡಲು ಶುರು ಮಾಡಿದ್ದರು. ಯೂಟ್ಯೂಬ್‌ನಲ್ಲಿ ಪಲ್ಲವಿ ವೈರಲ್ ಸಂದರ್ಶನಗಳಲ್ಲಿ ನೀಡಿರುವ ಹೇಳಿಕೆಗಳಿದು...

ಮಹಿಳೆಯರಿಗೆ ಗೌರವ:  

'ನಿಮ್ಮ ಮನೆಯಲ್ಲಿ ಮಹಿಳೆಯರನ್ನು ನೀವು ಹೇಗೆ ಗೌರವಿಸುತ್ತೀರಾ ಅದನ್ನು ಮಕ್ಕಳು ನೋಡಿ ಕಲಿಯುತ್ತಾರೆ. ಬೆಳೆಯುತ್ತಾ ಬೆಳೆಯುತ್ತಾ ಹೌದು ಅಪ್ಪ ಹೀಗೆ ನೋಡಿಕೊಳ್ಳುತ್ತಿದ್ದರು ನಾವು ಹಾಗೆ ಮಾಡಬೇಕು ಎಂದು ಕಲಿಯುತ್ತಾರೆ. ಅದೇ ಮನೆಯಲ್ಲಿ ಅವರನ್ನು ಅಗೌರವಿಸಿದರೆ ಅವರು ಕೂಡ ಹಾಗೆ ಮಾಡುತ್ತಾರೆ ದೊಡ್ಡವರು ಮಾಡುತ್ತಿರುವುದು ಸರಿ ಎಂದು ಒಳ್ಳೆ ಬುದ್ದಿ ಇದ್ದರೂ ಕೆಟ್ಟದನ್ನು ಕಲಿಯುತ್ತಾರೆ. ಮನೆಯಲ್ಲಿ ಒಳ್ಳೆಯ ಬುದ್ಧಿ ಕಲಿಸಬೇಕು ದೊಡ್ಡವರಾದ ಮೇಲೆ ಜೀವನ ಕಟ್ಟಿಕೊಳ್ಳುವುದು ಮಕ್ಕಳ ಕೈಯಲ್ಲಿದೆ' ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಡಾಕ್ಟರ್ ಆದ್ರೆ ಫ್ರೀ ಸರ್ವಿಸ್‌ ಮಾಡುವುದಿಲ್ಲ, ಯಾರಿಂದ ಹಣ ಪಡೆಯಬೇಕೆಂದು ಗೊತ್ತಿದೆ: ಸಾಯಿ ಪಲ್ಲವಿ

'ನನಗೆ 27 ವರ್ಷ ಈವರೆಗೂ ದೌರ್ಜನ್ಯಕ್ಕೆ ಒಳಗಾಗದೆ ಇರುವ ಒಬ್ಬ ಮಹಿಳೆಯನ್ನು ನಾನು ನೋಡಿಲ್ಲ. ಇದು ಹೇಳುವುದಕ್ಕೆ ಬೇಸರವಾಗುತ್ತದೆ. ಎಲ್ಲರೂ ಮುಖದಲ್ಲಿ ನಗು ಹಾಕಿಕೊಂಡು ಓಡಾಡುತ್ತಾರೆ ಆದರೆ ಸತ್ಯ ಬೇರೆ ಇರುತ್ತದೆ. ಹೀಗಾಗಿ ಮಹಿಳೆಯರ ಬಗ್ಗೆ ಹೆಚ್ಚು ಸತ್ಯ ಹೇಳುವ ಕಥೆಗಳನ್ನು ನಾನು ಆಯ್ಕೆ ಮಾಡಿಕೊಳ್ಳುವೆ' ಎಂದು ಪಲ್ಲವಿ ಹೇಳಿದ್ದಾರೆ.

 

ಇಬ್ಬರಲ್ಲಿ ಯಾರು ಕ್ಯೂಟ್?; ಹೊಸ ಪಪ್ಪಿ ಖರೀದಿಸಿದ ನಟಿ ಸಾಯಿ ಪಲ್ಲವಿ

ಫೇರ್‌ನೆಸ್‌: 

'ನಾವು ಟಿವಿಗಳಲ್ಲಿ ಹೆಚ್ಚಿಗೆ ಪರ್ಫೆಕ್ಟ್‌ ಫೀಚರ್‌ಗಳು ಇರುವ ವ್ಯಕ್ತಿಗಳನ್ನು ನೋಡಿದ್ದೀವಿ ಹೀಗಾಗಿ ಅದೇ ಪರ್ಫೆಕ್ಟ್‌ ಲುಕ್‌ ಎಂದು ನಾವು ಕಲ್ಪಿಸಿಕೊಂಡು ಅದೇ ರೀತಿ ಇರಬೇಕು ಎಂದು ಮನಸ್ಸಿನಲ್ಲಿ ಇಷ್ಟ ಪಟ್ಟಿದ್ದೀವಿ. ನಟಿ ತ್ರಿಷಾ ಮತ್ತು ಸಿಮ್ರನ್‌ರನ್ನು ನೋಡಿ ಬೆಳೆದವಳು ನಾನು. ನಾನು ನಾಯಕಿ ಅಗಬೇಕು ಎಂದು ಪ್ಲ್ಯಾನ್ ಮಾಡಿರಲಿಲ್ಲ. ವಿದೇಶದಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಮಾಡುವಾಗ ಎಲ್ಲರೂ ಸುಂದರವಾಗಿದ್ದರು ಆದರೆ ನನ್ನ ಮುಖದ ತುಂಬಾ ಮೊಡವೆಗಳಿತ್ತು. ಸಿನಿಮಾ ಆಫರ್‌ ಬಂದಾಗ ಒಪ್ಪಿಕೊಳ್ಳಬೇಕಾ ಇಲ್ವಾ ಅನ್ನೋ ಗೊಂದಲದಲ್ಲಿದೆ. ಸಿನಿಮಾ ರಿಲೀಸ್ ಆದ್ಮೇಲೆ ಜನರು ಇಷ್ಟ ಪಟ್ಟರು. ರಿಯಲ್ ಆಗಿರುವುದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದ್ದರು. ಈಗ ನಾನು ಮೇಕಪ್ ಧರಿಸಿದ್ದರೂ ನಿರ್ದೇಶಕರು ಬೇಡ ಎನ್ನುತ್ತಾರೆ. ನನ್ನ ಮೂಲಕ ನ್ಯಾಚುರಲ್ ಲುಕ್‌ನಲ್ಲಿ ನಾಯಕಿಯರು ಕಾಣಿಸಿಕೊಳ್ಳಬಹುದು ಎನ್ನುವ ಸಂದೇಶ ಸಾರಲು ಮುಂದಾಗಿರುವೆ. ಒಬ್ಬರು ಮತ್ತೊಬ್ಬರ ನೋಡಿ ಈಗಲೂ ಬಣ್ಣ ತಾರತಮ್ಯ ಮಾಡುತ್ತಿದ್ದಾರೆ. ಸ್ಕೂಲ್‌ನಲ್ಲಿ ನನ್ನ ಸ್ನೇಹಿತರು ಕಪ್ಪಿರುವ ಹುಡುಗರನ್ನು ಲವ್ ಮಾಡುತ್ತಿದ್ದರು ಆಗ ಅನೇಕರು ಇಲ್ಲ ನಿನಗೆ ಸೂಟ್ ಆಗುವುದಿಲ್ಲ ಕಲರ್‌ ಇರುವ ಹುಡುಗನನ್ನು ಪ್ರೀತಿ ಮಾಡಿ ಎನ್ನುತ್ತಿದ್ದರು. ಒಂದಲ್ಲ ಒಂದು ದಿನ ನಾವು ಕೂಡ ಒಬ್ಬರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿರುತ್ತೀವಿ ಹಿರಿಯರು ಕರ್ಮದ ಬಗ್ಗೆ ಹೇಳುತ್ತಿದ್ದರು ಅದು ನಿಜ ನಮ್ಮ ಬಗ್ಗೆ ಕೂಡ ಒಂದಲ್ಲ ಒಂದು ದಿನ ಮಾತನಾಡುತ್ತಾರೆ' ಎಂದಿದ್ದಾರೆ ಸಾಯಿ ಪಲ್ಲವಿ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!