ಮನೋಜ್ಞ ಅಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದಿದ್ದ, ಬಹುಭಾಷೆ ಸಿನಿಮಾಗಳ ದಿಗ್ಗಜ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ಹಿರಿಯ ನಟಿ ಲೀಲಾವತಿ ಇಂದು ವಯೋಸಹಜ ಕಾಯಿಲೆಗೆ ತುತ್ತಾಗಿ 'ದೇವರ ಗುಡಿ' ಸೇರಿದ್ದಾರೆ. ಲೀಲಾವತಿ ಅಮ್ಮನವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ನಿಜಕ್ಕೂ ಇಂದು ಅನಾಥವಾಗಿದೆ.
ಅತ್ಯಂತ ಸಹಜ ಅಭಿನಯದ ಮೂಲಕ ಚಿತ್ರಪ್ರೇಮಿಗಳ ಮನಗೆದ್ದಿದ್ದ, ಕನ್ನಡ, ತೆಲುಗು, ತಮಿಳು, ಮಲಯಾಳಂ ಚಿತ್ರರಂಗದ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದ ಅಭಿನೇತ್ರಿ ಸ್ಫೂರದ್ರೂಪಿ ನಟಿ ಲೀಲಾವತಿ ಅಮ್ಮ ಇಂದು ವಯೋಸಹಜ ಕಾಯಿಲೆಗೆ ತುತ್ತಾಗಿ ಬದುಕಿನ ಪಾತ್ರ ಮುಗಿಸಿ 'ದೇವರ ಗುಡಿ' ಸೇರಿದ್ದಾರೆ. ನಿಜಕ್ಕೂ ಈಗ ಅನಾಥವಾಗಿರುವುದು ಮುದ್ದಿನ ಮಗ ವಿನೋದ್ ರಾಜ್ ಮಾತ್ರ ಅಲ್ಲ, ಇಡೀ ಕನ್ನಡ ಚಿತ್ರರಂಗವೇ ಅನಾಥವಾದಂತಾಗಿದೆ.
ಭಾರತೀಯ ಚಿತ್ರರಂಗದ ಜನಪ್ರಿಯ ನಾಯಕಿಯರಲ್ಲಿ ಅತ್ಯಂತ ಬಹುಕಾಲದ ಬಾಳಿದ, ಬಹುಕಷ್ಟ ಅನುಭವಿಸಿದ ನಟಿಯೆಂದರೆ ಅದು ಲೀಲಾವತಿ ಅಮ್ಮ. ಮಡಿಲಲ್ಲಿ ಮಗು ವಿನೋದರಾಜರನ್ನು ಕಟ್ಟಿಕೊಂಡು ಬದುಕಿನುದ್ದಕ್ಕೂ ಒಂಟಿಯಾಗಿ ಹೋರಾಟದ ಜೀವನ ನಡೆಸಿದ ರೀತಿಯೇ ರೋಚಕ. ಎಷ್ಟೇ ಕಷ್ಟಕಾರ್ಪಣ್ಯಗಳ ಬಂದರೂ ಮುಗ್ಗರಿಸದೆ 'ರಾಣಿ ಹೊನ್ನಮ್ಮ'ರಂತೆ ಎಲ್ಲವನ್ನೂ ಎದುರಿಸಿ ವೀರಮರಣ ಹೊಂದಿದಾಕೆ.
undefined
ಲೀಲಾವತಿ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ; ಕಲಾ ಸಾಧನೆ ಅಜರಾಮರ
ಬೆಳ್ತಂಗಡಿ ಬೆಡಗಿ ಲೀಲಾ:
ಲೀಲಾವತಿ ಅಮ್ಮನವರದು ಸಿನಿಮಾಗಳಲ್ಲಿ ತೋರಿಸಿದಕ್ಕಿಂತ ಹೆಚ್ಚು ಕಷ್ಟದ ಬದುಕು. 1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ನಟಿ ಲೀಲಾವತಿ ಆರು ವರ್ಷದ ಮಗುವಾಗಿದ್ದಾಗಲೇ ತಂದೆ ತಾಯಿ ಕಳೆದುಕೊಂಡು ಅನಾಥವಾದರು. ತಾಯಿ ಪ್ರೀತಿ ವಾತ್ಸಲ್ಯದಿಂದ ವಂಚಿತರಾದರು. ಬಾಲ್ಯದಿಂದಲೂ ಅನಾಥವಾಗಿ ಬೆಳೆದ ನತದೃಷ್ಟ ನಟಿ ಎಂದರೆ ಲೀಲಾವತಿ. ಚಿಕ್ಕಂದಿನಿಂದಲೇ ನಾಟಕ, ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಲೀಲಾವತಿ. ಹೇಗೋ ವಿದ್ಯಾಭ್ಯಾಸ ಮುಗಿಸಿ ಮೈಸೂರಿನಲ್ಲಿ ವೃತ್ತಿ ಜೀವನವನ್ನಾಗಿ ರಂಗಭೂಮಿಯನ್ನೇ ಆಯ್ದುಕೊಂಡರು. ಆ ಕಾಲಕ್ಕೆ ರಂಗಭೂಮಿ ಕಲಾವಿದರ ಕಷ್ಟ ಏನು ಅಂತಾ ಗೊತ್ತಿದ್ದುದ್ದೇ. ರಂಗಭೂಮಿ ನಂಬಿಕೊಂಡು ಜೀವನ ಮಾಡುವುದು ಕಷ್ಟದ ಮಾತಾಗಿತ್ತು. ಅಂಥ ಸಂದರ್ಭದಲ್ಲಿ ಬೇರೆಯವರ ಮನೆಗಳಲ್ಲಿ ಮನೆಗೆಲಸ ಮಾಡಿ ಬದುಕು ಸಾಗಿಸಿದರು.
ನಾಗಕನ್ನಿಕೆಯಾಗಿ ಚಿತ್ರರಂಗ ಪ್ರವೇಶ:
ಸುಬ್ಬಯ್ಯ ನಾಯ್ಡು ಅವರು ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿಯವರ ಮನೋಜ್ಞ ಅಭಿನಯ, ಸೌಂದರ್ಯ ಅವರನ್ನು ಕನ್ನಡ ಚಿತ್ರರಂಗ ಕೈಬಿಸಿ ಕರೆಯಿತು. 1949ರಲ್ಲಿ ತೆರೆಕಂಡ 'ನಾಗಕನ್ನಿಕಾ' ಚಿತ್ರದ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದಲ್ಲಿ ಲೀಲಾವತಿ ಅಮ್ಮ ಸಖಿಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಪೂರ್ಣ ಪ್ರಮಾಣದ ನಾಯಕಿಯಾಗಿ ಲೀಲಾವತಿ ಅವರು ಅಭಿನಯಿಸಿದ ಪ್ರಥಮ ಚಿತ್ರ 'ಮಾಂಗಲ್ಯ ಯೋಗ.' ಡಾ. ರಾಜ್ ಕುಮಾರ್ ಅವರೊಂದಿಗೆ ನಟಿಸಿದ ಮೊದಲ ಚಿತ್ರ 'ರಣಧೀರ ಕಂಠೀರವ.' ಆ ಕಾಲಕ್ಕೆ ದಕ್ಷಿಣ ಭಾರತದಲ್ಲ ಬಹುಬೇಡಿಕೆ ನಟಿಯಾಗಿದ್ದ ಲೀಲಾವತಿ, ದಿಗ್ಗಜ ನಟ, ನಿರ್ದೇಶಕರೆಲ್ಲ ತಮ್ಮ ಚಿತ್ರಗಳಲ್ಲಿ ಲೀಲಾವತಿ ನಟಿಸುವುದಕ್ಕೆ ಹೆಮ್ಮೆ ಪಡುತ್ತಿದ್ದರು. ಬಹುತೇಕ ಕೌಟುಂಬಿಕ ಪಾತ್ರಗಳಲ್ಲಿ ನಟಿಸಿದ ಲೀಲಾವತಿ. ಅವರ ಮನೋಜ್ಞ ಅಭಿನಯಕ್ಕೆ ಪ್ರೇಕ್ಷಕರೇ ಕಣ್ಣೀರ ಕಡಲಲ್ಲಿ ಮುಳುಗಿಸಿಬಿಡುತ್ತಿದ್ದರು. ಆಯ್ಯೋ ದೇವ್ರೇ... ಅಂತಾ ಅಳುವ ದೃಶ್ಯವಂತೂ ಎಂಥ ಕಲ್ಲು ಹೃದಯವನ್ನು ಕರಗಿಸಿಬಿಡುತ್ತಿತ್ತು. ಮದುವೆ ಮಾಡಿ ನೋಡು, ಸಿಪಾಯಿ ರಾಮು, ಡಾಕ್ಟರ್ ಕೃಷ್ಣ, ಸಂತ ತುಕಾರಂ, ಗೆಜ್ಜೆ ಪೂಜೆ, ಕನ್ನಡದ ಕಂದ' ಸೇರಿದಂತೆ ಬಹುಭಾಷೆಯಲ್ಲಿ ಸುಮಾರು ಆರು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲೇ ನಾಲ್ಕುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅಷ್ಟೊಂದು ಸಿನಿಮಾಗಳಲ್ಲಿ ನಟಿಸಿ ಬಹುಕಾಲ ಉಳಿದ ಜನಪ್ರಿಯ ನಟಿಯರಿದ್ದರೆ ಅದು ಲೀಲಾವತಿ ಅಮ್ಮನವರು ಮಾತ್ರ.
ಡಾ.ರಾಜ್ ಅಂದ್ರೆ ಬೆಟ್ಟದಷ್ಟು ಅಭಿಮಾನ:
ಬೆಳ್ತಂಗಡಿ ಬೆಡಗಿ ಲೀಲಾವತಿ ಡಾ.ರಾಜ್ ಕಂಡರೆ ಸಾಕು ಬೆಟ್ಟದಷ್ಟು ಪ್ರೀತಿ ಅಭಿಮಾನ. ಡಾ.ರಾಜಕುಮಾರ ಅವರೊಂದಿಗೆ 'ರಣಧೀರ ಕಂಠೀರವ' ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಡಾ.ರಾಜ್‌ಗೆ ಜೋಡಿಯಾಗಿ ಜನಪ್ರಿಯತೆ ಪಡೆದುಕೊಂಡು. ಡಾ.ರಾಜ್ ಲೀಲಾ ಜೋಡಿಯಾಗಿ ನಟಿಸಿದ ಸಿನಿಮಾಗಳೆಂದರೆ ಆ ಕಾಲಕ್ಕೆ ಅಭಿಮಾನಿಗಳು ಮುಗಿಬಿದ್ದು ನೋಡುತ್ತಿದ್ದರು. ಈ ಇಬ್ಬರು ನಟಿಸಿದ ಯಾವ ಸಿನಿಮಾವೂ ಹಿಂದೆ ಬಿದ್ದಿದ್ದೇ ಇಲ್ಲ. 'ರಾಣಿ ಹೊನ್ನಮ್ಮ' ಚಿತ್ರದ ಯಶಸ್ಸಿನ ಬಳಿಕ ಲೀಲಾವತಿ ಚಿತ್ರರಂಗದಲ್ಲಿ ಯಶಸ್ಸಿನ ತುತ್ತತುದಿ ತಲುಪಿದ್ದರು. ಆ ಕಾಲಕ್ಕೆ ಸ್ಟಾರ್ ನಟಿಯಾಗಿ ಮೆರೆದಿದ್ದ ಲೀಲಾವತಿ ಅವರು ಎಂದೂ ಸರಳತೆ, ನಯ ವಿನಯ ಮರೆಯಲಿಲ್ಲ. ಈ ಕಾರಣಕ್ಕೆ ಲೀಲಾವತಿ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಡಾ ರಾಜಕುಮಾರ್ ಮತ್ತು ಲೀಲಾವತಿ ಕನ್ನಡ ಚಿತ್ರರಂಗದ ನಂಬರ್ 1 ಜೋಡಿ. ಅವರ ಮೊದಲ ಚಿತ್ರ ರಣಧೀರ ಕಂಠೀರವ ಆ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹಿಟ್ ಆಗಿದ್ದ ಸಿನಿಮಾಗಳಲ್ಲಿ ಒಂದಾಗಿತ್ತು. ಆ ಸಿನಿಮಾ ಅವರನ್ನು ರಾಜ್-ಲೀಲಾರನ್ನು ಸೂಪರ್ ಜೋಡಿಯನ್ನಾಗಿ ಮಾಡಿತ್ತು. ‘ಕರುಣೆಯೇ ಕುಟುಂಬದ ಕಣ್ಣು’, ‘ಪ್ರೇಮಮಯಿ’, ‘ತುಂಬಿದ ಕೊಡ’, ‘ಜೀವನ ತರಂಗ’ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಸಿನಿಮಾಗಳು ಸೂಪರ್ ಹಿಟ್ ಆದವು. ಇಬ್ಬರು ಒಟ್ಟಿಗೆ ನಟಿಸಿದ್ದ ಸಿನಿಮಾಗಳೆಂದರೆ ಅಪಾರ ಅಭಿಮಾನಿಗಳನ್ನು ಸೇರುತ್ತಿದ್ದರು.
ಕನ್ನಡದ ದಿಗ್ಗಜ ನಟರ ಜೊತೆ ನಟಿಸಿದ್ದ ಲೀಲಾವತಿ ಹಳೆಯ ಫೋಟೋಸ್ ನೋಡಿ
ಮೆಲ್ಲುಸಿರೇ ಸವಿಗಾನ:
ಅದು 2014 ನವೆಂಬರ್ 29. ಅಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಣ್ಣಾವ್ರ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮ ನಡೆದಿತ್ತು. ಕನ್ನಡ ಚಿತ್ರರಂಗ 'ಡಾ.ರಾಜ್ ಹಬ್ಬ' ಕಾರ್ಯಕ್ರಮ ಆಯೋಜಿಸಿತ್ತು. ಅಂದು ಇಡೀ ಚಿತ್ರರಂಗವೇ ನೆರೆದಿತ್ತು. ಹಲವಾರು ಮನರಂಜನಾ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ 'ವೀರ ಕೇಸರಿ' ಪ್ರಿಯತಮೆಯಾಗಿ ನಟಿ ಲೀಲಾವತಿ ಭಾಗಿಯಾಗಿದ್ದರು. ಲೀಲಾವತಿ ಅಂದು ಅನಾರೋಗ್ಯಕ್ಕೀಡಾಗಿದ್ದರೂ ಅದ್ಯಾವುದನ್ನು ಲೆಕ್ಕಿಸದೇ ಕಾರ್ಯಕ್ರಮಕ್ಕೆ ಆಗಮಿಸಿದ್ದರು. 'ಮೆಲ್ಲುಸಿರೇ ಸವಿಗಾನ ಎದೆ ಝಲ್ಲನೆ ಹೂವಿನ ಬಾಣ...' ಹಾಡುತ್ತಿದ್ದರೆ ಅಲ್ಲಿ ನೆರೆದಿದ್ದ ಪ್ರೇಕ್ಷಕರು, ಕಲಾವಿದರ ಮೈಯೆಲ್ಲ ವಿದ್ಯುತ್ ಸಂಚಾರವಾದಂತಾಗಿತ್ತು. ಹಾಡುತ್ತಲೇ 25ರ ವಯಸ್ಸಿನ ನಟಿಯಂತೆ ಹೆಜ್ಜೆ ಹಾಕಿದ್ದು ಚಿತ್ರರಂಗ ಎಂದೂ ಮರೆಯುವುದಿಲ್ಲ.
ಸದ್ಗತಿ