ದೇಶಭಕ್ತಿ ಮೆರೆವ ಚಿತ್ರಕ್ಕೂ ನಟಿ ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್' ಚಿತ್ರದ ಟೀಸರ್ ನೋಡಿ ಪ್ರೇಕ್ಷಕರು ಹೇಳ್ತಿರೋದೇನು?
ಅನಿಮಲ್ ಚಿತ್ರದಲ್ಲಿ ರಶ್ಮಿಕಾ ಮಂದಣ್ಣನವರ ಅರೆ ಬೆತ್ತಲೆ, ನಟಿ ತೃಪ್ತಿ ಡಿಮ್ರಿಯ ಪೂರ್ಣ ಬೆತ್ತಲೆಯ ವಿಷಯ ಇನ್ನು ಚರ್ಚೆಗೆ ಗ್ರಾಸವಾಗುತ್ತಿರುವ ನಡುವೆಯೇ, ಅನಿಮಲ್ ಭರ್ಜರಿ ಯಶಸ್ಸಿನತ್ತ ಸಾಗಿದೆ. ಆದರೆ ನಟಿಯರು ಪೈಪೋಟಿಗೆ ಬಿತ್ತವರಂತೆ ಬೆತ್ತಲಾಗುತ್ತಿದ್ದಾರಾ ಎನ್ನುವ ಪ್ರಶ್ನೆಯೀಗ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೇಳುತ್ತಿದ್ದಾರೆ. ಇದಕ್ಕೆ ಕಾರಣ, ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆಯವರ ಫೈಟರ್ ಚಿತ್ರದ ಟೀಸರ್. ಈ ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಪಠಾಣ್ಗಿಂತಲೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಇಬ್ಬರೂ ಏರ್‌ಫೋರ್ಸ್ ಆಫೀಸರ್ ಪಾತ್ರಗಳಲ್ಲಿ ನಟಿಸಿದ್ದಾರೆ. ಏರ್‌ಫೋರ್ಸ್ ಆಫೀಸರ್ ಆಗಿರುವ ದೀಪಿಕಾಳ ಬಹುತೇಕ ಬೆತ್ತಲೆ ವೇಷಕ್ಕೆ ಹಲವರು ಛೀಮಾರಿ ಹಾಕುತ್ತಿದ್ದಾರೆ.
ಇದೀಗ ಬಿಡುಗಡೆಯಾಗಿರುವ ಟೀಸರ್ನಲ್ಲಿ ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಅವರ ರೊಮ್ಯಾನ್ಸ್ ಸೀನ್ ಹೇರಳವಾಗಿದೆ. ಫೈಟರ್ ಜೆಟ್‌ನ ಸಾಹಸವೇನೋ ರೋಮಾಂಚನಗೊಳಿಸುವಂತಿದೆ. ಹೃತಿಕ್, ದೀಪಿಕಾ ಮತ್ತು ಅನಿಲ್ ಕಪೂರ್ ಸರತಿಯಲ್ಲಿ ಪ್ಯಾಟಿ, ಮಿನ್ನಿ ಮತ್ತು ರಾಕಿ ಸ್ಕ್ವಾಡ್ರನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊನಾಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಲಿಪ್‌ಲಾಕ್ ಕೂಡ ನೋಡಬಹುದು. ಅನಿಮಲ್ ಚಿತ್ರದಲ್ಲಿನ ಇಂಥ ದೃಶ್ಯಗಳಿಗೆ ಅಡಲ್ಟ್ ಸರ್ಟಿಫಿಕೇಟ್ ಸಿಕ್ಕಿತ್ತು. ಆದರೆ ಅಸಲಿಗೆ ಫೈಟರ್ ಚಿತ್ರ ದೇಶ ಭಕ್ತಿ ಮೆರೆಯುವ ಚಿತ್ರ ಎನ್ನಲಾಗಿದೆ. ಟೀಸರ್ ಕೊನೆಯಲ್ಲಿ ಹೃತಿಕ್ ರಾಷ್ಟ್ರಧ್ವಜ ಹಿಡಿದು ಬರುತ್ತಾರೆ. ಅಲ್ಲಿಗೆ ದೇಶದ ಬಗ್ಗೆ ಇರುವ ಚಿತ್ರ ಇದಾಗಿದೆ. ಆ್ಯಕ್ಷನ್, ರೊಮ್ಯಾನ್ಸ್, ಎಮೋಷನ್, ದೇಶಭಕ್ತಿ ಎಲ್ಲಾ ಅಂಶಗಳನ್ನು ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ರೊಮ್ಯಾನ್ಸ್ ಹೆಸರಿನಲ್ಲಿ ಇಷ್ಟು ಕಳಪೆ ಮಟ್ಟದ ದೃಶ್ಯಗಳನ್ನು ತೋರಿಸುವ ಉದ್ದೇಶವೇನು ಎಂದು ಪ್ರಶ್ನಿಸಲಾಗುತ್ತಿದೆ. ಇಂಥ ದೃಶ್ಯಗಳು ಇದ್ದರೆ ಮಾತ್ರ ಚಿತ್ರ ಸಕ್ಸಸ್ ಆಗುತ್ತಾ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಹೃತಿಕ್ ರೋಷನ್, ದೀಪಿಕಾ ಪಡುಕೋಣೆ ಮತ್ತು ಅನಿಲ್ ಕಪೂರ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ 2024ರ ಜನವರಿ 26ರ ಗಣರಾಜ್ಯೋತ್ಸವದ ಪ್ರಯುಕ್ತ ಬಿಡುಗಡೆಯಾಗಲಿದೆ. ಇನ್ನುಳಿದಂತೆ ಕರಣ್ ಸಿಂಗ್ ಗೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜಿಜ್ ತಾರಾಗಣದಲ್ಲಿದ್ದಾರೆ. ಸದ್ಯ ಬಿಡುಗಡೆಯಾಗಿರುವ ಟೀಸರ್‌ನ ಕಿರು ಝಲಕ್ ನೋಡುಗರ ಗಮನ ಸೆಳೆದಿದೆ. ಈಗಾಗಲೇ ಪಠಾಣ್ ಮೂಲಕ 1000 ಕೋಟಿಯ ಹಿಟ್ ಸಿನಿಮಾ ನೀಡಿರುವ ಸಿದ್ಧಾರ್ಥ್ ಆನಂದ್, ಫೈಟರ್ ಮೂಲಕ ಮತ್ತೊಂದು ಹಿಟ್ ನೀಡುವ ಕಾತರದಲ್ಲಿದ್ದಾರೆ. ಐಮ್ಯಾಕ್ಸ್ ತ್ರೀಡಿ ವರ್ಷನ್‌ನಲ್ಲೂ ಈ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು.
'ವಾರ್' ಸಿನಿಮಾ ಶೂಟಿಂಗ್ ಸಮಯದಲ್ಲೇ ನಿರ್ದೇಶಕ ಸಿದ್ದಾರ್ಥ್ ಆನಂದ್ ಫೈಟರ್ ಜೆಟ್ ಸುತ್ತಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ತಡವಾಯಿತು. ಜನವರಿ 10, 2021ರಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿತ್ತು. ಇದು ಸರಣಿಯ ಮೊದಲ ಸಿನಿಮಾ. ಇದೇ ಜಾನರ್‌ನಲ್ಲಿ ಮತ್ತೊಂದು ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ 'ಫೈಟರ್' ಸಿನಿಮಾ ನಿರ್ಮಾಣವಾಗಿದೆ. ಕಳೆದ ವರ್ಷ ಅಸ್ಸಾಂನಲ್ಲಿ 'ಫೈಟರ್' ಚಿತ್ರೀಕರಣ ಶುರುವಾಗಿತ್ತು. ನಂತರ ಕಾಶ್ಮೀರದಲ್ಲಿಯೂ ಚಿತ್ರೀಕರಣ ನಡೆದಿದೆ. ಹೈದರಾಬಾದ್‌ನ ಡಂಡಿಗಲ್ ಏರ್‌ಫೋರ್ಸ್ ಅಕಾಡೆಮಿಯಲ್ಲಿ 3ನೇ ಶೆಡ್ಯೂಲ್ ಚಿತ್ರೀಕರಣ ನಡೀತು.
Animal: ಹೆಣ್ಣಿನ ಮೇಲೆ ದೌರ್ಜನ್ಯ, ಕ್ರೌರ್ಯ ನೋಡೋದೆಂದ್ರೆ ಅಷ್ಟು ಇಷ್ಟನಾ? ಇದೆಂಥ ಮನಸ್ಥಿತಿ? ನಟಿ ದೀಪಿಕಾ ಹೇಳಿದ್ದೇನು?