ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

Published : Dec 08, 2023, 05:57 PM IST
ಬೆತ್ತಲೆ ಸೀನ್​ ವೇಳೆ ನಾಲ್ವರು ಇದ್ವಿ, ರಣಬೀರ್​ ನರ್ವಸ್​ ಆಗಿದ್ರು: ಶೂಟಿಂಗ್ ಸಮಯದ ಘಟನೆ ವಿವರಿಸಿದ ನಟಿ ತೃಪ್ತಿ

ಸಾರಾಂಶ

ಅನಿಮಲ್​ ಚಿತ್ರದಲ್ಲಿ ಬೆತ್ತಲೆ ದೃಶ್ಯಗಳ ಶೂಟಿಂಗ್​ ಸಮಯದಲ್ಲಿ ನಡೆದ ಘಟನೆಗಳ ಕುರಿತು ನಟಿ ತೃಪ್ತಿ ಡಿಮ್ರಿ ವಿವರಣೆ ನೀಡಿದ್ದು ಹೀಗೆ...   

ರಣಬೀರ್​ ಕಪೂರ್​ ನಟನೆಯ ‘ಅನಿಮಲ್​’ ಸಿನಿಮಾ  ಸೂಪರ್​ ಹಿಟ್​ ಆಗಿದೆ. ಹಲವು ಬಾಲಿವುಡ್​ ಚಿತ್ರಗಳ ದಾಖಲೆಗಳನ್ನು ಉಡೀಸ್​ ಮಾಡಿದೆ. ಈಗ ಬಿ-ಟೌನ್​ನಲ್ಲಿ ನಟಿ ತೃಪ್ತಿ ದಿಮ್ರಿಯದ್ದೇ ಹವಾ. ಕೆಲ ದಿನಗಳ ಹಿಂದೆ ಹೀಗೊಬ್ಬ ನಟಿ ಇದ್ದಳೆಂದು ತಿಳಿಯದವರೂ ಇದೀಗ ಈಕೆಯ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಶುರುವಿಟ್ಟುಕೊಂಡಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ ಸೋಷಿಯಲ್​ ಮೀಡಿಯಾದಲ್ಲಿ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಿಕೊಳ್ಳಲು ಸಾಧ್ಯವಾಗದಿದ್ದ  ತೃಪ್ತಿ ರಾತ್ರೋರಾತ್ರಿ 20 ಲಕ್ಷ ಫಾಲೋವರ್ಸ್​ ಅಭಿಮಾನಿಯಾಗಿದ್ದಾರೆ.  ಇದಕ್ಕೆಲ್ಲಾ ಕಾರಣ, ಮೊನ್ನೆಯಷ್ಟೇ ಬಿಡುಗಡೆಯಾದ ರಣಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್​ ಚಿತ್ರ. ಈ ಚಿತ್ರದಲ್ಲಿ ರಶ್ಮಿಕಾ ಅರೆಬೆರೆ ಬೆತ್ತಲಾಗಿ ಕಾಣಿಸಿಕೊಂಡಿದ್ದರೆ, ತೃಪ್ತಿ ದಿಮ್ಮಿ ಸಂಪೂರ್ಣ ಬೆತ್ತಲಾಗಿದ್ದರಿಂದ ರಸಿಕರು ಜೊಲ್ಲು ಸುರಿಸುತ್ತಿದ್ದಾರೆ. ಈಕೆಯ ಕೆಲವು ದೃಶ್ಯಗಳನ್ನು ಸೆನ್ಸಾರ್​  ಮಂಡಳಿ ಕತ್ತರಿ ಹಾಕಿದ್ದರೂ, ಸೋಷಿಯಲ್​  ಮೀಡಿಯಾದಲ್ಲಿ ಕತ್ತರಿ ಹಾಕಿರುವ ದೃಶ್ಯಗಳ ವಿಡಿಯೋ ವೈರಲ್​ ಆಗುತ್ತಿರುವ ಕಾರಣ, ಫಾಲೋವರ್ಸ್​ ಸಂಖ್ಯೆ ದಿಢೀರ್​ ಏರಿಕೆಯಾಗಿದೆ. ಸಾಲದು ಎಂಬುದಕ್ಕೆ,  ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರಿದ್ದ ನ್ಯಾಷನಲ್​ ಕ್ರಷ್​ ಪಟ್ಟವೂ ಇದೀಗ ಸಂಪೂರ್ಣ ಬೆತ್ತಲಾದ ತೃಪ್ತಿ ದಿಮ್ಮಿ ಪಾಲಾಗಿದೆ.
 
 ಚಿತ್ರದಲ್ಲಿ ನಟಿ ರಶ್ಮಿಕಾ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ನಟಿ ತೃಪ್ತಿ ಸಂಪೂರ್ಣ ನಗ್ನಳಾಗಿದ್ದ ವಿಡಿಯೋ ವೈರಲ್​ ಆಗಿತ್ತು.  ಸೆನ್ಸಾರ್​ ಮಂಡಳಿ ಹಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೂ ರಶ್ಮಿಕಾ ಮಂದಣ್ಣ ಜೊತೆಗಿನ ಬೆಡ್​ರೂಮ್​ ಸೀನ್​ ಲೀಕ್​ ಆಗಿರುವ ಬೆನ್ನಲ್ಲೇ,  ತೃಪ್ತಿ ಡಿಮ್ರಿಯ ವಿಡಿಯೋ ಕೂಡ ವೈರಲ್​ ಆಗಿದೆ. 2017 ರಲ್ಲಿ ಶ್ರೀದೇವಿ ಅಭಿನಯದ ಮಾಮ್ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡ ತೃಪ್ತಿ ಡಿಮ್ರಿ ಇದೀಗ ರಣಬೀರ್​ ಕಪೂರ್​ ಜೊತೆ ಬೆತ್ತಲಾಗಿ ಚಿತ್ರೀಕರಣ ಮಾಡಿದ್ದಾರೆ. ಅಂದಹಾಗೆ, ಈ ಹಿಂದೆ ತೃಪ್ತಿ ನಾಗಿನ್ ಸೀರೀಸ್ 3ರಲ್ಲಿ ಕಾಣಿಸಿಕೊಂಡಿದ್ದರು. ಈಗ ಬೆಳ್ಳಿತೆರೆ ಮೇಲೆ ಆಫರ್ ಗಳು ಬರುತ್ತಿವೆ. ಆದರೆ ಸೆನ್ಸಾರ್‌ ಬಿಡುಗಡೆಗೂ ಮುನ್ನ ಅತಿಯಾದ ರೋಮ್ಯಾಂಟಿಕ್ ಬೋಲ್ಡ್ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಸೂಚಿಸಲಾಗಿತ್ತು. ಆದರೂ ಇದೆಲ್ಲದರ ಹೊರತಾಗಿ ತೃಪ್ತಿ ಅವರ ಗ್ಲಾಮರ್ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 

ಸಂಪೂರ್ಣ ಬೆತ್ತಲಾಗಿ ರಶ್ಮಿಕಾರ 'ನ್ಯಾಷನಲ್​ ಕ್ರಷ್'​ ಪಟ್ಟ ಕಿತ್ತುಕೊಂಡ ತೃಪ್ತಿ: ಬೂಟು ನೆಕ್ಕುವ ದೃಶ್ಯ ನೆನಪಿಸಿಕೊಂಡ ನಟಿ

ಇದೀಗ ಈ ನಗ್ನ ದೃಶ್ಯಗಳ ಶೂಟಿಂಗ್​ ಮಾಡುವಾಗ ಏನಾಗಿತ್ತು ಎಂಬ ಬಗ್ಗೆ ನಟಿ ತೃಪ್ತಿ ದಿಮ್ರಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ರೀತಿಯ ದೃಶ್ಯಗಳಲ್ಲಿ ನಟಿಸುವಾಗ ಸಾಕಷ್ಟು ಧೈರ್ಯ ಬೇಕಾಗುತ್ತದೆ. ನಿಜವಾಗಿ ಹೇಳಬೇಕು ಎಂದರೆ ಇದರ ಶೂಟಿಂಗ್​ ಸಮಯದಲ್ಲಿ ರಣಬೀರ್​ ಕಪೂರ್​ ತುಂಬಾ ನರ್ವಸ್​ ಆಗಿದ್ರು. ಈ ದೃಶ್ಯಗಳೆಲ್ಲಾ ಹೀಗೆಯೇ ಇರುತ್ತವೆ ಎಂದು ನಿರ್ದೇಶಕ ಸಂದೀಪ್ ವಂಗಾ ಅವರು ಮೊದಲೇ ಚರ್ಚಿಸಿದ್ದರಿಂದ ನಾನು ಸ0ಪೂರ್ಣವಾಗಿ ರೆಡಿ ಆಗಿದ್ದೆ ಎಂದು ನಟಿ ತೃಪ್ತಿ ಹೇಳಿದ್ದಾರೆ. ಚಿತ್ರ ಬಿಡುಗಡೆಯಾದ ಎರಡನೇ ದಿನದಿಂದಲೇ ಜನರು ನನ್ನ ಬಗ್ಗೆ ಮಾತನಾಡಲು ಶುರು ಮಾಡಿದ್ದಾರೆ.  ಈ ದೃಶ್ಯಕ್ಕೆ ಸಂಬಂಧಿಸಿದಂತೆ ತಮಗೆ ಹಲವಾರು ಸಂದೇಶಗಳು ಮತ್ತು ಫೋನ್ ಕರೆಗಳು ಬಂದಿವೆ ಎಂದು ಸಂತೋಷದಿಂದಲೇ ನುಡಿದಿರುವ ತೃಪ್ತಿ ಅವರು,  ಕಥೆಗೆ ಈ ದೃಶ್ಯಗಳು ಬಹಳ ಮುಖ್ಯ ಎಂಬ ಕಾರಣದಿಂದ ಇದನ್ನು ತಾವು ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.  

ಇದೇ ವೇಳೆ, ಬೆತ್ತಲೆ ದೃಶ್ಯದ ಶೂಟಿಂಗ್​ ಸಮಯದ ಕುರಿತು ಮಾತನಾಡಿದ ನಟಿ, ಬೋಲ್ಡ್​ ದೃಶ್ಯಗಳ ಶೂಟಿಂಗ್​ ವೇಳೆ  ಕೋಣೆಯಲ್ಲಿ  ನಾಲ್ಕು ಜನ ಮಾತ್ರ ಇದ್ವಿ.  ನಾನು, ರಣಬೀರ್ ಕಪೂರ್, ನಿರ್ದೇಶಕ ಸಂದೀಪ್ ಮತ್ತು ಕ್ಯಾಮೆರಾ ಪರ್ಸನ್​ ಮಾತ್ರ ಇದ್ದರು. ನನಗೆ ಈ ಸೀನ್​ಗಳನ್ನು ಶೂಟ್​ ಮಾಡಲು ಸಂದರ್ಭದಲ್ಲಿ ನಾನು ಕಂಫರ್ಟ್​ ಇದ್ದೇನೆಯೇ ಎಂದು  ನಿರ್ದೇಶಕರು ಆಗಾಗ ಕೇಳುತ್ತಿದ್ದರು. ರಣಬೀರ್ ಕಪೂರ್​ ಹೆದರಿಕೊಂಡಿದ್ದರು.  ಶೂಟಿಂಗ್​ ಸಮಯದಲ್ಲಿ ವೃತ್ತಿಪರರಾಗಿ ನಡೆದುಕೊಂಡರು ಎಂದು ತೃಪ್ತಿ ಹೇಳಿದ್ದಾರೆ.  ಇದೇ ವೇಳೆ ಶಾರುಖ್​ ಖಾನ್​ ಬಗ್ಗೆಯೂ ಮಾತನಾಡಿರುವ ನಟಿ, ಅವರು ನನ್ನ ಮೊದಲ ಕ್ರಶ್​ ಹಾಗೂ ರಣಬೀರ್​ ಎರಡನೆಯವರು ಎಂದಿದ್ದಾರೆ.
 

ದೇಶಭಕ್ತಿ ಮೆರೆವ ಚಿತ್ರಕ್ಕೂ ನಟರು ಬೆತ್ತಲಾಗೋದು ಅನಿವಾರ್ಯನಾ? 'ಫೈಟರ್'​ ಟೀಸರ್ ನೋಡಿ ಛೀ ಅಂತಿದ್ದಾರೆ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!