ಜೀವದ ಗೆಳೆಯ ಅಮಿತಾಭ್ ಸಿಗದಿದ್ರೂ ಸೊಸೆ, ಮೊಮ್ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ ರೇಖಾ

By Suvarna News  |  First Published Apr 3, 2023, 12:33 PM IST

ತಾವು ಪ್ರೀತಿಸಿದ ನಟ ಅಮಿತಾಭ್​ ಬಚ್ಚನ್​ ತಮಗೆ ಸಿಗದಿದ್ದರೂ ನಟಿ ರೇಖಾ ಬಿಗ್​ ಬಿ ಸೊಸೆ ಐಶ್ವರ್ಯ ರೈ ಹಾಗೂ ಮೊಮ್ಮಗಳು ಆರಾಧ್ಯ ಅವರನ್ನು ಅಪ್ಪಿಕೊಂಡಿರುವ ಫೋಟೋ ಸಕತ್​ ಸೌಂಡ್​ ಮಾಡುತ್ತಿದೆ. 
 


'ಬಿಗ್ ಬಿ' ಅಮಿತಾಭ್ ಬಚ್ಚನ್ ಮತ್ತು ರೇಖಾ ಅವರ ಲವ್​ ಸ್ಟೋರಿ (Love story) ಎಲ್ಲರಿಗೂ ತಿಳಿದದ್ದೇ. ಇದೊಂದು ದುರಂತ ಲವ್​ ಸ್ಟೋರಿ. ಕೊನೆಗೂ ರೇಖಾ ಅವರಿಗೆ ಅಮಿತಾಭ್​ ಸಿಗಲೇ ಇಲ್ಲ. ಇದೇ  ನೋವಿನಲ್ಲಿಯೇ ಏಕಾಂಗಿ ಉಳಿದವರು ರೇಖಾ. 1990ರಲ್ಲಿ ಇವರು ಮುಖೇಶ್​ ಅಗರ್​ವಾಲ್​ (Mukhesh Agarwal) ಅವರನ್ನು ಮದುವೆಯಾಗಿದ್ದರು ಎಂಬ ಸುದ್ದಿಯಾಗಿದ್ದರೂ ಅದೇ ವರ್ಷ ಅವರು ಸಾವನ್ನಪ್ಪಿದರು. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನೂ ರಹಸ್ಯವಾಗಿಯೇ ಉಳಿದಿದೆ. ಮನಸ್ಸಿನ ತುಂಬೆಲ್ಲಾ ಅಮಿತಾಭ್​ ಅವರನ್ನೇ ನೆಚ್ಚಿಕೊಂಡಿದ್ದ ನಟಿ ಕೊನೆಗೂ ಒಂಟಿಯಾಗಿಯೇ ಉಳಿದರು. 'ಇಮಾನ್ ಧರಂ', 'ಖೂನ್ ಪಸಿನ' , 'ಗಂಗಾ ಕಿ ಸೌಗಂಧ್', 'ಮುಕದ್ದರ್ ಕ ಸಿಕಂದರ್' , 'ಮಿಸ್ಟರ್ ನಟವರ್‌ಲಾಲ್', 'ಸುಹಾಗ್', ' ರಾಮ್ ಬಲರಾಮ್' ಸೇರಿದಂತೆ ಹಲವು ಚಿತ್ರಗಳಲ್ಲಿ ತೆರೆ ಹಂಚಿಕೊಂಡ ಈ ಜೋಡಿ ಅಭಿಮಾನಿಗಳ ಹಿಟ್​ ಜೊಡಿಯಾಗಿತ್ತು.  ದೋ ಅಂಜಾನೆ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗಿನಿಂದಲೂ ಇವರಿಬ್ಬರ ಸುದ್ದಿ ಬಿ-ಟೌನ್​ದಲ್ಲಿ ಹರಿದಾಡುತ್ತಲೇ ಇತ್ತು. ಇದು ಕೇವಲ ಗಾಸಿಪ್​  ಆಗಿರಲಿಲ್ಲ, ಬದಲಿಗೆ ಇಬ್ಬರೂ ಪ್ರೀತಿಸುತ್ತಿದ್ದುದು ಕೂಡ ನಿಜವೇ ಆಗಿತ್ತು. ಬೆಳ್ಳಿ ಪರದೆಯ ಮೇಲೆ ಈ ಜೋಡಿಯ ಕೆಮೆಸ್ಟ್ರಿಯನ್ನು ಹಾಡಿ ಕೊಂಡಾಡಿದ್ದ ಅಭಿಮಾನಿಗಳು, ನಿಜ ಜೀವನದಲ್ಲಿಯೂ ಇವರಿಬ್ಬರು ಜೋಡಿಯಾಗಲಿ ಎಂದೇ ಹಾರೈಸಿದ್ದರು. 

ಆದರೆ ವಿಧಿಯ ಲೀಲೆಯೇ ಬೇರೆಯಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರದ ಜೋಡಿ ಕೊನೆಗೆ ಹಾವು-ಮುಂಗುಸಿಯಾಗಿತ್ತು. ಇವರಿಬ್ಬರ ನಡುವೆ ಜಯಾ ಬಾಧುರಿ (Jaya Badhuri) ಎಂಟ್ರಿ ಕೊಟ್ಟಿದ್ದರು. ಅಮಿತಾಭ್ ಬಚ್ಚನ್ (Amitabh Bhacchan) ಹಾಗೂ ಜಯಾ ಅವರು 1973ರಲ್ಲಿ ಮದುವೆಯಾದರು. ಅಮಿತಾಭ್​ ಬಚ್ಚನ್​ ಅವರ ಮದುವೆ ಜಯಾ ಅವರ ಜೊತೆಗೆ ಆದ ನಂತರ ರೇಖಾ ಜರ್ಜರಿತರಾಗಿದ್ದರು. ಈ ಲವ್​ ಸ್ಟೋರಿ ಬಹುತೇಕ ಎಲ್ಲರಿಗೂ ತಿಳಿದೇ ಇದ್ದರೂ, ರೇಖಾ ಮಾತ್ರ ಅಮಿತಾಭ್​ ಬಚ್ಚನ್​ ಹಾಗೂ ಅವರ ಕುಟುಂಬದ ಬಗ್ಗೆ ಇನ್ನೂ ಗೌರವ, ಪ್ರೀತಿ ಇಟ್ಟುಕೊಂಡಿದ್ದಾರೆ. ನಟ ರಿಷಿ ಕಪೂರ್, ನೀತು ಕಪೂರ್ ಮದುವೆಯಲ್ಲಿ ರೇಖಾ ದೊಡ್ಡ ಸಿಂಧೂರ ಇಟ್ಟುಕೊಂಡು ಕಾಣಿಸಿಕೊಂಡಿದ್ದರು. ಸಿಂಧೂರ ಇಟ್ಟುಕೊಂಡಿದ್ದು ನೋಡಿ ರೇಖಾ ರಹಸ್ಯವಾಗಿ ಮದುವೆ ಆಗಿದ್ದಾರಾ ಎಂದೂ ಗುಸುಗುಸು ಪ್ರಶ್ನೆ ಮಾಡತೊಡಗಿದ್ದರು. ಅಮಿತಾಭ್​ ಮತ್ತು ರೇಖಾ (Rekha) ಗುಟ್ಟಾಗಿ ಮದುವೆಯಾಗಿದ್ದಾರೆ ಎನ್ನುವ ಸುದ್ದಿಯೂ ಗುಲ್ಲಾಗಿತ್ತು. ನಂತರ ಅಮಿತಾಭ್​ ಬಚ್ಚನ್​ ಅವರ ಶೂಟಿಂಗ್​ (Shotting) ವೇಳೆ ಜಯಾ ಮತ್ತು ಅವರ ತಾಯಿ ಬರುತ್ತಿದ್ದರು. ರೇಖಾ ಜೊತೆಗಿನ  ಲವ್ ದೃಶ್ಯಗಳು ಇದ್ದಾಗ ಜಯಾ ಅವರು ಕಣ್ಣೀರು  ಹಾಕುತ್ತಿದ್ದರು. ಆಮೇಲೆ ರೇಖಾ ಜೊತೆಗೆ ನಟಿಸೋದಿಲ್ಲ ಅಂತ ಅಮಿತಾಭ್ ಹೇಳಿಕೆ ನೀಡಿಬಿಟ್ಟರು. ಈ ಬಗ್ಗೆ ಸಂದರ್ಶನವೊಂದರಲ್ಲಿ ಖುದ್ದು ರೇಖಾ ಹೇಳಿಕೊಂಡಿದ್ದರು. 

Tap to resize

Latest Videos

ಅಮಿತಾಭ್​ ಪ್ರೀತಿ ತೊರೆದ ಮೇಲೆ... ನೋವಿನ ಸರಮಾಲೆ ತೆರೆದಿಟ್ಟ ನಟಿ ರೇಖಾ!

ಇಂತಿಪ್ಪ ರೇಖಾ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ,  ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್​ನ ಕಾರ್ಯಕ್ರಮದಲ್ಲಿ (NMACC) ಬಾಲಿವುಡ್​ ನಟ-ನಟಿಯರ ದಂಡೇ ಬಂದಿದ್ದು, ರೇಖಾ ಕೂಡ ಬಂದಿದ್ದರು. ಅದೇ ಇನ್ನೊಂದೆಡೆ  ಐಶ್ವರ್ಯಾ ರೈ ಮತ್ತು ಮಗಳು ಆರಾಧ್ಯ ಕೂಡ ಬಂದಿದ್ದರು. ಸಹಜವಾಗಿ ರೇಖಾ ಅವರನ್ನು ನೋಡಿದಾಗ ಹೇಗೆ ರಿಯಾಕ್ಟ್​ ಮಾಡಬಹುದು ಎಂಬ ಕುತೂಹಲ ಜನರಿಗೆ ಇತ್ತು. ಮನಸ್ಸಿನಲ್ಲಿ ಅಷ್ಟೆಲ್ಲಾ ನೋವು ತುಂಬಿಕೊಂಡಿದ್ದರೂ ರೇಖಾ ಏನೂ ಆಗದವರಂತೆ ಮುಗುಳ್ನಗುತ್ತಲೇ ಇದ್ದರು. ಅದೇ ಪ್ರೀತಿ ತುಂಬಿದ ಭಾವದಿಂದ ಬಿಗ್​-ಬಿ ಸೊಸೆ ಐಶ್ವರ್ಯ ರೈ (Aishwarya Rai) ಮತ್ತು ಮೊಮ್ಮಗಳು ಆರಾಧ್ಯಳನ್ನು ಆತ್ಮೀಯವಾಗಿ ಬಿಗಿದಪ್ಪಿಕೊಂಡರು. ಇದು ಹಲವರ ಶ್ಲಾಘನೆಗೆ ಕಾರಣವಾಗಿದೆ. ಈ ಫೊಟೋ ಸುಂದರವಾಗಿ ಮೂಡಿಬಂದಿದೆ. ಅದೇ ರೀತಿ ಈ ಪೋಟೋ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗಿದೆ. ಇನ್ನೊಂದು ಫೋಟೋದಲ್ಲಿ ರೇಖಾ ಅವರು ತಮ್ಮ ಆರಾಧ್ಯ ಬಚ್ಚನ್ (Aradhya Bacchan) ಅವರನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದನ್ನು ನೋಡಬಹುದು. ಮನೀಷ್ ಮಲ್ಹೋತ್ರಾ ಕ್ಲಿಕ್ ಮಾಡಿದ ಸೆಲ್ಫಿಯಲ್ಲಿ ಸೆಲೆಬ್ರಿಟಿಗಳ ನಗು, ಖುಷಿ ಹಾಗು ಪ್ರೀತಿಯನ್ನು ಒಂದೇ ಫ್ರೇಮ್​ನಲ್ಲಿ ಕಾಣಬಹುದು.

ನಟಿ ರೇಖಾ ಅವರು ಹಳೆದ ಪ್ರೀತಿ, ಬ್ರೇಕಪ್, ನೋವು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ಬಿಗ್​ ಬಿ ಕುಟುಂಬವನ್ನು ಇಷ್ಟು ಆತ್ಮೀಯವಾಗಿ ನಡೆಸಿಕೊಂಡಿರುವ ರೀತಿಗೆ ನೆಟ್ಟಿಗರು ಕೂಡ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.  ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ರೇಖಾ ಅಮಿತಾಭ್​ ಅವರ ಹೆಸರನ್ನು ಹೇಳದೇ, ತಮ್ಮ ಪ್ರೀತಿ ಕಳೆದುಕೊಂಡ ಮೇಲೆ ತಮ್ಮ ಜೀವನ ಹೇಗೆ ಹಾಳಾಗಿ ಹೋಯಿತು ಎಂಬುದನ್ನು ಹೇಳಿಕೊಂಡಿದ್ದರು.  ನಾನು ಮದ್ಯ ಸೇವಿಸುತ್ತಿದ್ದೆ, ಡ್ರಗ್ಸ್ ಕೂಡ ಸೇವಿಸಿದ್ದೇನೆ.  ನಿಜವಾಗಿಯೂ ಪ್ರೀತಿಸುತ್ತಿರುವ ವ್ಯಕ್ತಿಯ ಅಗಲಿಕೆಯಿಂದ ಆಗುವ ನೋವು ಎಂಥದ್ದು ಎಂದು ನನಗೆ ತಿಳಿದಿದೆ. ಅದರಿಂದ ಹೊರಕ್ಕೆ ಬರುವುದು ಕಷ್ಟ. ನಾನು ಕೂಡ ಎಲ್ಲಾ ಕೆಟ್ಟ ಅಭ್ಯಾಸಗಳ ದಾಸನಾಗಿದ್ದೆ ಎಂದಿದ್ದರು. 

Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

click me!