Varun Dhawan: ನಿಮ್​ ಹೆಂಡ್ತಿಗೂ ಕಿಸ್​ ಕೊಟ್ರೆ ಸುಮ್ಮನಿರ್ತೀರಾ? ನಟನ ವಿರುದ್ಧ ಕಿಡಿಕಿಡಿ

Published : Apr 03, 2023, 11:03 AM IST
Varun Dhawan: ನಿಮ್​ ಹೆಂಡ್ತಿಗೂ ಕಿಸ್​ ಕೊಟ್ರೆ ಸುಮ್ಮನಿರ್ತೀರಾ? ನಟನ ವಿರುದ್ಧ ಕಿಡಿಕಿಡಿ

ಸಾರಾಂಶ

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್  ಉದ್ಘಾಟನೆ ಕಾರ್ಯಕ್ರಮದಲ್ಲಿ ನಟ ವರುಣ್​ ಧವನ್​ ಎಡವಟ್ಟು ಮಾಡಿಕೊಂಡಿದ್ದಾರೆ. ಏನದು?   

ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ (NMACC) ಉದ್ಘಾಟನೆ ಕಾರ್ಯಕ್ರಮ ಭಾರಿ ಅದ್ಧೂರಿಯಾಗಿ ನಡೆಯುತ್ತಿದೆ. ಉದ್ಘಾಟನಾ ಸಮಾರಂಭದ ಎರಡನೇ ದಿನ ಬಾಲಿವುಡ್ ಮತ್ತು ಹಾಲಿವುಡ್ ತಾರೆಯರ ಮೇಳವೇ ನೆರೆದಿತ್ತು.  ಈ ವೇಳೆ ತಾರೆಯರು ಅಬ್ಬರದ ಪ್ರದರ್ಶನ ನೀಡುವ ಮೂಲಕ ಅಲ್ಲಿದ್ದ ಪ್ರೇಕ್ಷಕರ ಮನ ಗೆದ್ದರು. ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನೆ ಕಾರ್ಯಕ್ರಮದಲ್ಲಿ ವರುಣ್ ಧವನ್ ಮಾತ್ರವೇ ಅಲ್ಲದೆ ಹಲವರು ವೇದಿಕೆ ಮೇಲೆ ನೃತ್ಯ ಪ್ರದರ್ಶನ ನೀಡಿ ರಂಜಿಸಿದರು. ಸ್ವತಃ ನೀತಾ ಅಂಬಾನಿ ಮೊದಲಿಗೆ ನೃತ್ಯ ಪ್ರದರ್ಶನ ನೀಡಿದರು. ಅದಾದ ಬಳಿಕ ಶಾರುಖ್ ಖಾನ್, ರಣ್ವೀರ್ ಸಿಂಗ್, ವರುಣ್ ಧವನ್ ಇನ್ನೂ ಹಲವರು ತಾರೆಯರು ವೇದಿಕೆ ಏರಿದರು. ಶಾರುಖ್ ಖಾನ್ ತಮ್ಮ ಇತ್ತೀಚೆಗಿನ ಪಠಾಣ್ ಸಿನಿಮಾದ ಸ್ಟೆಪ್ ಹಾಕಿದರು ಅವರ ಜೊತೆಗೆ ವರುಣ್ ಧವನ್ ಹಾಗೂ ರಣ್ವೀರ್ ಸಿಂಗ್ ಸಹ ಸೇರಿಕೊಂಡರು.

 ಆದರೆ ಈ ಸಮಯದಲ್ಲಿ ವರುಣ್ ಧವನ್ (Varun Dhawan) ಮಾಡಿದ ಎಡವಟ್ಟು ಒಂದು ಜಾಲತಾಣದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಈ ಕಾರ್ಯಕ್ಕೆ ವರುಣ್​ ಧವನ್​ ಅವರನ್ನು ಸಿಕ್ಕಾಪಟ್ಟೆ ಟ್ರೋಲ್​  ಮಾಡಲಾಗುತ್ತಿದ್ದು, ಅದರಲ್ಲಿಯೂ ಮಹಿಳೆಯರು ನಟನ ವಿರುದ್ಧ ಕೆಂಡಾಮಂಡಲವಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ವರುಣ್​ ಧವನ್​ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಾಲಿವುಡ್‌ನ ಸೂಪರ್‌ ಮಾಡೆಲ್‌ ಗಿಗಿ ಹಡಿದ್‌ (Gigi Hadid )ಅವರು ಕೆಳಗೆ ಇದ್ದರು. ವರುಣ್​ ಅವರು ಗಿಗಿ ಹಡಿದ್​ ಅವರ ಕೈ ಹಿಡಿದುಕೊಂಡು ವೇದಿಕೆಗೆ ಕರೆತಂದರು. ಉತ್ಸಾಹದ ಭರದಲ್ಲಿ, ವರುಣ್ ಇದ್ದಕ್ಕಿದ್ದಂತೆ ಗಿಗಿಯನ್ನು ತನ್ನ ತೋಳುಗಳಲ್ಲಿ ಎತ್ತಿ ಬಿಗಿದಪ್ಪಿ ಚುಂಬಿಸಿದ್ದಾರೆ. ಮೊದಲಿಗೆ ಗಿಗಿ ನಗುವಂತೆ ಕಾಣುತ್ತಿದ್ದರೂ ಮುಖದಲ್ಲಿ ಆತಂಕ ಕಾಣಿಸಿದೆ. ಆದರೆ ಒಂದು ಕ್ಷಣವನ್ನೂ ಆಕೆ ಸುಧಾರಿಸಿಕೊಳ್ಳಲು ನೀಡದ ನಟ ವರುಣ್​,  ತೋಳುಗಳಿಂದ ಹಿಡಿದು ಕಿಸ್​ ಮಾಡಿ ಕೆಳಗೆ ಇಳಿಸಿದ್ದಾರೆ.

Neetu Shetty: 'ಮದುವೆ ವಿಡಿಯೋ' ಶೇರ್​ ಮಾಡಿ ಅಭಿಮಾನಿಗಳ ತಬ್ಬಿಬ್ಬು ಮಾಡಿದ ನಟಿ

ವರುಣ್​ರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವರುಣ್ ಧವನ್​ರ ಈ ನಡೆಗೆ ನೆಟ್ಟಿಗರಿಂದ ಟೀಕೆ ವ್ಯಕ್ತವಾಗಿದೆ. ವರುಣ್ ಧವನ್, ಗೀಗಿಯನ್ನು ಎತ್ತಿಕೊಂಡಿದ್ದು ನೃತ್ಯದ ಭಾಗವಾಗಿರಲಿಲ್ಲ, ಬದಲಿಗೆ ಗೀಗಿಯನ್ನು ವೇದಿಕೆಗೆ ಆಹ್ವಾನಿಸಿ ಆಕೆಯನ್ನು ಎತ್ತಿಕೊಂಡು ಮುತ್ತುಕೊಟ್ಟಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ವರುಣ್ ಧವನ್ ತಮ್ಮನ್ನು ತಾವು ನಿಯಂತ್ರದಲ್ಲಿಟ್ಟುಕೊಳ್ಳಬೇಕು, ಆನ್​ಸ್ಕ್ರೀನ್ ಹೀಗೆ ಮಾಡಿದರೆ ಸರಿ ಎನ್ನಬಹುದು, ಆದರೆ ವೇದಿಕೆಯ ಮೇಲೆ ಹೀಗೆ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇನ್ನು ಕೆಲವರು ನಟನ ಪರವಾಗಿ ಕಮೆಂಟ್​ ಮಾಡಿದ್ದು, ಮಾಡೆಲ್​ ಖುಷಿಯಾಗಿಯೇ ಇದ್ದಳು. ಇದರಿಂದ ಆಕೆಗೆ ಸಮಸ್ಯೆಯಾದಂತೆ ಕಾಣಿಸುತ್ತಿಲ್ಲ, ನೀವೇಕೆ ರೊಚ್ಚಿಗೇಳುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ.  

ಆದರೆ ಜಾಲತಾಣದಲ್ಲಿ ಚರ್ಚೆ ಮಹಿಳೆಯರ ರಕ್ಷಣೆಯ ಮಟ್ಟಿಗೆ ಹೋಗಿದೆ. ಹಲವರು ವರುಣ್​ ಧವನ್​ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಒಂದು ವೇಳೆ ನಿಮ್ಮ ಹೆಂಡತಿಯನ್ನು ಹೀಗೆ ಯಾರೋ ಒಬ್ಬ ಪರಪುರುಷ ತೋಳಿನಲ್ಲಿ ಎತ್ತಿಕೊಂಡು ಬಿಗಿದಪ್ಪಿ ಚುಂಬಿಸಿದರೆ ಸುಮ್ಮನೆ ಇರುತ್ತಿದ್ರಾ ಎಂದು ಪ್ರಶ್ನಿಸಿದ್ದಾರೆ. ಗೀಗಿ ಹದೀದಿಯ ಒಪ್ಪಿಗೆ ಇಲ್ಲದೆ ವರುಣ್ ಧವನ್ ಹೀಗೆ ಮುತ್ತುಕೊಟ್ಟಿರುವುದು (Kissing) ಸರಿಯಲ್ಲ ಎಂದಿದ್ದಾರೆ.  ಮಹಿಳೆ ಎಲ್ಲಿಯೂ ಸುರಕ್ಷಿತಳಲ್ಲ, ವರುಣ್ ಧವನ್ ತಮ್ಮ ಹೀರೋತನ ತೋರಿಸಲು ಮಹಿಳೆಯನ್ನು ಹೀಗೆ ಕೀಳಾಗಿ ಬಳಸಿಕೊಂಡಿರುವುದು ಸರಿಯಲ್ಲವೆಂದು ಕೆಲವರು ಆಕ್ರೋಶ ಹೊರಹಾಕಿದ್ದಾರೆ.   ಹಿಂದೊಮ್ಮೆ  ವರುಣ್ ಧವನ್, ಪತ್ರಿಕಾಗೋಷ್ಠಿಯೊಂದರಲ್ಲಿ ಆಲಿಯಾ ಭಟ್​ರ ಅನುಮತಿ ಇಲ್ಲದೆ ಅವರ ಸೊಂಟ ಹಿಚುಕಿದ್ದ ಘಟನೆಯನ್ನು ಕೆಲವು ನೆಟ್ಟಿಗರು ನೆನಪಿಸಿದ್ದಾರೆ.

ಅಜಯ್​ ದೇವಗನ್ ಈ ಮೂವಿ​ ರಿಜೆಕ್ಟ್​ ಮಾಡಿದ್ರು, ಶಾರುಖ್​ ಸೂಪರ್​ಸ್ಟಾರ್​ ಆದ್ರು!

ಅವಳು ಹಿಂತಿರುಗಿದ ದಾರಿಯನ್ನು ನೋಡಿದರೆ, ಅವಳು ಮತ್ತೆ ಭಾರತಕ್ಕೆ (India) ಬರುವುದಿಲ್ಲ ಎಂದು ತೋರುತ್ತದೆ ಎಂದಿದ್ದಾರೆ ಬಳಕೆದಾರರೊಬ್ಬರು. ತಮ್ಮ ವಿರುದ್ಧ ಭಾರಿ ವಿರೋಧ ವ್ಯಕ್ತವಾಗುತ್ತಲೇ ಅತ್ತ ವರುಣ್​ ಅವರೂ ಗರಂ ಆಗಿದ್ದಾರೆ.  ಬಹುಷಃ ಇಂದು ಬೆಳಿಗ್ಗೆ ನೀವು ಎದ್ದ ಕೂಡಲೇ ಜಾಗೃತಗೊಳ್ಳಲು ನಿರ್ಧರಿಸಿದಂತಿದೆ ಎಂದು ಟ್ರೋಲಿಗರಿಗೆ ಟಾಂಗ್​ ಕೊಟ್ಟಿರುವ ನಟ,  'ನಿಮ್ಮ ತಪ್ಪು ಕಲ್ಪನೆ ಇದಾಗಿದೆ.  ಗೀಗಿ ಹದೀದ್ ವೇದಿಕೆ ಮೇಲೆ ಬರಬೇಕೆಂಬುದು ಮೊದಲೇ ನಿಶ್ಚಿತವಾಗಿತ್ತು, ಆ ಕಾರ್ಯ ಯೋಜನೆಯಂತೆಯೇ ನಡೆದಿದೆ. ಹಾಗಾಗಿ ನಿಮ್ಮ ಮೂಗು ತೂರಿಸಲು ಬೇರೆ ಯಾವುದಾದರೂ ವಿಷಯವನ್ನು ಹುಡುಕಿಕೊಳ್ಳಿ, ಹೊರಗೆ ಹೋಗಿ ನಿಜವಾದ ಕೆಲಸ ಮಾಡದೆ ಇಂಥಹುದರಲ್ಲೇ ಸಮಯ ವ್ಯರ್ಥ ಮಾಡಿಕೊಂಡಿರಿ' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ