ಇನ್ಸ್ಟಾಗ್ರಾಮ್‌ನಲ್ಲಿ ದಳಪತಿ ದರ್ಬಾರ್; ವಿಜಯ್ ಎಂಟ್ರಿ ಕೊಡುತ್ತಿದ್ದಂತೆ ಮುಗಿಬಿದ್ದ ಫ್ಯಾನ್ಸ್

By Shruthi KrishnaFirst Published Apr 3, 2023, 10:52 AM IST
Highlights

ದಳಪತಿ ವಿಜಯ್ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ಸ್ಟಾಗ್ರಾಮ್‌ಗೆ ಪದಾರ್ಪಣೆ ಮಾಡುತ್ತಿದ್ದಂತೆ 4 ಮಿಲಿನಿಯನ್‌ಗೂ ಅಧಿಕ ಫಾಲೋರ್ಸ್ ಹೊಂದಿದ್ದಾರೆ.  

ದಳಪತಿ ವಿಜಯ್ ತಮಿಳು ಸಿನಿಮಾರಂಗದಲ್ಲಿ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ನಟರಲ್ಲಿ ಒಬ್ಬರು. ತಮಿಳಿನಲ್ಲಿ ಕ್ರೇಸ್‌ಗೆ ಮತ್ತೊಂದು ಹೆಸರೇ ವಿಜಯ್ ಎಂದರೆ ತಪ್ಪಾಗಲ್ಲ. ಅಷ್ಟು ದೊಡ್ಡ ಅಭಿಮಾನಿ ಬಳಗಹೊಂದಿದ್ದಾರೆ. ವಿಜಯ್ ಸಿನಿಮಾ ಬರುತ್ತೆ ಅಂದರೆ ಸಾಕು ಅಭಿಮಾನಿಗಳು ಮುಗಿಬಿದ್ದ ವೀಕ್ಷಿಸುತ್ತಾರೆ, ಸಂಭ್ರಮಿಸುತ್ತಿದ್ದಾರೆ, ಕುಣಿದು ಕುಪ್ಪಳಿಸುತ್ತಾರೆ. ವಿಜಯ್ ಕೊನೆಯದಾಗಿ ವಾರಿಸು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿ ಕೊಳ್ಳುವಷ್ಟು ಮಟ್ಟಕ್ಕೆ ಸದ್ದು ಮಾಡದಿದ್ದರೂ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡಿತ್ತು. ಇದೀಗ ವಿಜಯ್ ಮತ್ತೊಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ. ದಳಪತಿ ವಿಜಯ್ ಸಾಮಾಜಿಕ ಜಾಲತಾಣದಿಂದ ತುಂಬಾ ದೂರ. ಟ್ವಿಟ್ಟರ್‌ನಲ್ಲಿ ಇದ್ದರೂ ಹೆಚ್ಚು ಆಕ್ಟೀವ್ ಆಗಿಲ್ಲ. ಇದೀಗ ದಳಪತಿ ವಿಜಯ್ ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. 

ದಳಪತಿ ವಿಜಯ್  ಇನ್ಸ್ಟಾಗ್ರಾಮ್‌ಗೆ ಲಗ್ಗೆ ಎಡುತ್ತಿದ್ದಂತೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇನ್ಸ್ಟಾಗ್ರಾಮ್‌ ಖಾತೆ ತೆರೆಯುತ್ತಿದ್ದಂತೆ ಮಿಲಿಯನ್ ಗಟ್ಟಲೇ ಅಭಿಮಾನಿಗಳು ಫಾಲೋ ಮಾಡಲು ಶುರುಮಾಡಿದ್ದಾರೆ. ಅಂದಹಾಗೆ ವಿಜಯ್ ಏಪ್ರಿಲ್ 2ರಂದು ಇನ್ಸ್ಟಾಗ್ರಾಮ್‌ಗೆ ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ಎಂಟ್ರಿ ಕೊಡುತ್ತಿದ್ದೆತೆ 4 ಮಿಲಿಯನ್‌ಗೂ ಅಧಿಕ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಮ್‌ ಖಾತೆ ತೆರೆಯುತ್ತಿದ್ದಂತೆ ವಿಜಯ್ ತನ್ನದೇ ಫೋಟೋ ಶೇರ್ ಮಾಡಿದ್ದಾರೆ. 

Latest Videos

ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ವಿಜಯ್ ಫೋಟೋ ಅಭಿಮಾನಿಗಳ ಹೃದಯ ಗೆದ್ದಿದೆ. ಫೋಟೋಗೂ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದು ಬಂದಿದೆ. 4 ಮಿಲಿಯನ್‌ಗೂ ಅಧಿಕ ಮಂದಿ ಲೈಕ್ಸ್ ಒತ್ತಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳು ದಳಪತಿಯನ್ನು ಹಾಡಿಹೊಗಳಿದ್ದಾರೆ.  ಅಂದಹಾಗೆ ದಳಪತಿ ಶೇರ್ ಮಾಡಿರುವ ಫೋಟೋ ಲಿಯೋ ಸಿನಿಮಾದಾಗಿದೆ. ಲಿಯೋ ಸಿನಿಮಾ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಒಂದಿಷ್ಟು ಫೋಟೋಗಳು ವೈರಲ್ ಆಗಿತ್ತು. 

ಕೊನೆಗೂ ದಳಪತಿ ವಿಜಯ್ 'ಲಿಯೋ' ಸೆಟ್ ಸೇರಿದ ಸಂಜಯ್ ದತ್; ಫೋಟೋ ವೈರಲ್

ಮಾಸ್ಟರ್ ಸಿನಿಮಾ ಬಳಿಕ ಲೋಕೇಶ್ ಮತ್ತು ವಿಜಯ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಬಹು ನಿರೀಕ್ಷೆಯ ಲಿಯೋ ಸಿನಿಮಾ ಅಕ್ಟೋಬರ್ 19ರಂದು ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ತ್ರಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅನೇಕ ವರ್ಷಗಳ ತ್ರಿಷಾ ಮತ್ತು ವಿಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜೋಡಿಯನ್ನು ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

 
 
 
 
 
 
 
 
 
 
 
 
 
 
 

A post shared by Vijay (@actorvijay)

Thalapathy vijay: ಬಿಡುಗಡೆಗೆ ಮುನ್ನವೇ 413 ಕೋಟಿ ರೂ. ಬಾಚಿಕೊಂಡ LEO

ಲಿಯೋ ಸಿನಿಮಾ ಮತ್ತೊಂದು ಹೈಲೆಟ್ ಅಂದರೆ ಬಾಲಿವುಡ್ ಸ್ಟಾರ್ ಸಂಜಯ್ ದತ್. ವಿಜಯ್ ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ನಟಿಸುತ್ತಿದ್ದಾರೆ. ಕೆಜಿಎಫ್-2 ಸೂಪರ್ ಸಕ್ಸಸ್ ಬಳಿಕ ದತ್ ದಳಪತಿ ಜೊತೆ ನಟಿಸುತ್ತಿದ್ದಾರೆ. ಇಬ್ಬರ ಕಾದಾಟ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಉಳಿದಂತೆ ಸಿನಿಮಾದಲ್ಲಿ ಅರ್ಜುನ್ ಸರ್ಜಾ ಗೊತಮ್ ವಾಸುದೇವ್ ಮೆನನ್ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ.  

click me!