Tip Tip Barsa Pani: ಸೀರೆ ಬಿಚ್ಬಾರ್ದು, ಕಿಸ್ ಕೊಡ್ಬಾರ್ದು.... ಮಳೆ ಸೀನ್​ಗೆ ರವೀನಾ ಟಂಡನ್​ ಕಂಡೀಷನ್​!

Published : Jun 01, 2023, 04:11 PM IST
Tip Tip Barsa Pani: ಸೀರೆ ಬಿಚ್ಬಾರ್ದು, ಕಿಸ್ ಕೊಡ್ಬಾರ್ದು.... ಮಳೆ ಸೀನ್​ಗೆ ರವೀನಾ ಟಂಡನ್​ ಕಂಡೀಷನ್​!

ಸಾರಾಂಶ

ಮೊಹ್ರಾ ಚಿತ್ರದಲ್ಲಿನ ಟಿಪ್​ ಟಿಪ್​ ಬರಸಾ ಪಾನಿ ಹಾಡಿನ ಚಿತ್ರೀಕರಣದ ವೇಳೆ ನಟಿ ರವೀನಾ ಟಂಡನ್​ ವಿಧಿಸಿದ್ದ ಷರತ್ತುಗಳೇನು?   

ರವೀನಾ ಟಂಡನ್ (Raveena Tondon) ಅವರು ತಮ್ಮ ವೃತ್ತಿ ಜೀವನದಲ್ಲಿ ಅನೇಕ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಅವರ ಮೇಲೆ ಚಿತ್ರಿಸಲಾದ ಅನೇಕ ಹಾಡುಗಳು ಅಪ್ರತಿಮವೆಂದು ಸಾಬೀತಾಗಿದೆ ಮತ್ತು ಇವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು 'ಟಿಪ್ ಟಿಪ್ ಬರಸಾ ಪಾನಿ, ಪಾನಿ ಮೇ ಆಗ್​ ಲಗಾಯೆ'. ಇದು 'ಮೊಹ್ರಾ' ಚಿತ್ರದ ಹಾಡು.  ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಅವರ ಜೊತೆ  ರವೀನಾ ಟಂಡನ್ ಮೈ ಚಳಿಬಿಟ್ಟು ನಟಿಸಿದ್ದಾರೆ. ಈ ಹಾಡಿನಲ್ಲಿ ರವೀನಾ ಮೋಡಿ ಮಾಡಿದ್ದಾರೆ, ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಬಿಳಿಯ ಪಾರದರ್ಶಕ ಸೀರೆಯಲ್ಲಿ ಮಳೆಯಲ್ಲಿ ನೆನೆಯುವ ಹಾಡುಗಳೆಂದರೆ ಹಾಗೆನೇ. ಇದು ಚಿತ್ರರಂಗದಲ್ಲಿ ಮಳೆಯ ಸೀನ್​ನಲ್ಲಿ (Rain shot) ಸಿದ್ಧಹಸ್ತದಂತಿದೆ. ಅಂಥದೇ ದೃಶ್ಯದಲ್ಲಿ ಬಹುತೇಕ ನಾಯಕಿರು ಯಾವುದೇ ಮುಲಾಜು ಇಲ್ಲದೆಯೇ ನಟಿಸುವುದು ಇದೆ. ಅದೇ ರೀತಿ  ರವೀನಾ ಟಂಡನ್ ಕೂಡ ನಟಿಸಿದ್ದಾರೆ. ಆದರೆ  ಕುತೂಹಲದ ಸಂಗತಿಯೊಂದು ಇದೀಗ ಹೊರ ಬಂದಿದೆ. ವಾಸ್ತವವಾಗಿ, ಇತ್ತೀಚಿನ ಸಂದರ್ಶನವೊಂದರಲ್ಲಿ, ರವೀನಾ ಟಂಡನ್ ಅವರಿಗೆ ಈ ಹಾಡಿನ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಸೀರೆಯಲ್ಲಿ ಚಿತ್ರೀಕರಿಸಿದ 'ಟಿಪ್ ಟಿಪ್ ಬರ್ಸಾ ಪಾನಿ' (ಮೊಹ್ರಾ) ಮತ್ತು 'ಜುಬಾನ್ ಪೆ ಜೋ ನಹಿ ಆಯೆ' (ಸಲಾಖಾನ್) ಹಾಡುಗಳಿಗೆ ಪ್ರತಿಕ್ರಿಯಿಸುವಂತೆ ಕೇಳಲಾಗಿತ್ತು.  ಈ ಸಮಯದಲ್ಲಿ ರವೀನಾ ಅದನ್ನು ಸ್ವಲ್ಪ ಅಳುಕಿನಿಂದಲೇ ಉತ್ತರಿಸಿದರು.  ಈ ಪ್ರಶ್ನೆಯನ್ನು ಗಂಭೀರವಾಗಿ ಕೇಳುತ್ತಿದ್ದೀರಾ ಎಂದು ಪ್ರಶ್ನಿಸಿದರು. ನಂತರ ವಾಸ್ತವಾಂಶವನ್ನು ಬಿಚ್ಚಿಟ್ಟಿದ್ದಾರೆ.

ಅದೇನೆಂದರೆ ಈ ಹಾಡನ್ನು ಚಿತ್ರೀಕರಿಸುವಾಗ, ರವೀನಾ  ಕೆಲವು ಷರತ್ತುಗಳನ್ನು ಚಿತ್ರ ನಿರ್ಮಾಪಕರ (Producer) ಮುಂದೆ ಹಾಕಿದ್ದರು ಎಂಬ ವಿಷಯವನ್ನು ತಿಳಿಸಿದ್ದಾರೆ. ಮಳೆಯಲ್ಲಿ ತಾವು ಪಾರದರ್ಶಕ ಸೀರೆಯುಟ್ಟು ನಟನ ಜೊತೆ ನರ್ತಿಸಲು ರೆಡಿ ಇದ್ದರೂ, ಕೆಲ ಕಂಡೀಷನ್​ ಅದರಲ್ಲಿ ಇತ್ತು ಎಂದು ನಟಿ ರವೀನಾ ಇದೀಗ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಅವರು ಹಾಕಿದ್ದ ಕಂಡೀಷನ್​ ಏನೆಂದರೆ, ಹಾಡಿನಲ್ಲಿ ಯಾವುದೇ ಕಾರಣಕ್ಕೂ ಸೀರೆ ತೆಗೆಯಬಾರದು ಮತ್ತು ಚುಂಬಿಸಬಾರದು ಎಂಬುದು. ಆ ಹಾಡು ಉನ್ಮಾದದಂತೆ ತೋರುತ್ತಿತ್ತು. ಅದನ್ನು ಚಿತ್ರೀಕರಿಸಲು ನನಗೆ ಹಿಂಜರಿಕೆ ಆಯಿತು. ಆದರೆ ಅಸಲಿಗೆ ಆ ಹಾಡಿನಲ್ಲಿ ಬಹಿರಂಗವಾಗಿ ಲೈಂಗಿಕತೆ ಏನೂ ಇರಲಿಲ್ಲ. ಲೈಂಗಿಕತೆ (Sexuality) ಮತ್ತು ಉನ್ಮಾದದ ನಡುವೆ ತೆಳುವಾದ ಗೆರೆ ಇದೆ. ಎಂದು ನಾನು ಯಾವಾಗಲೂ ನಂಬುತ್ತೇನೆ. ಅದರಂತೆಯೇ ಷರತ್ತು ವಿಧಿಸಿಯೇ ಈ ಹಾಡಿನ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದೆ ಎಂದಿದ್ದಾರೆ. 

Shobana: ಮಳೆ ಸೀನ್​ ಮಾಡುವಾಗ ಒಳಗೆ ಬಟ್ಟೆ ಇರಲಿಲ್ಲ... ರಜನೀ ಸರ್​ ಎತ್ತಿಕೊಂಡೇ ಬಿಟ್ರು...

 ಅಕ್ಷಯ್​ ಕುಮಾರ್​ (Akshay Kumar) ಜೊತೆ ನಟಿಸುವಾಗ ನನ್ನ ಸೀರೆ ಮಳೆಯಲ್ಲಿ ನೆನೆಯುವಾಗ ಯಾವುದೇ ಕಾರಣಕ್ಕೂ ಬಿಚ್ಚುವಂತೆ ಮಾಡಬಾರದು. ಕಿಸ್​ ಗಿಸ್​ ಎನ್ನೋ ಸೀನ್​ ಇರಬಾರದು ಎಂದೆ. ಇದಕ್ಕೆ ನಿರ್ದೇಶಕರೂ ಒಪ್ಪಿಕೊಂಡರು. ಅದರಂತೆಯೇ ಚಿತ್ರೀಕರಣ ನಡೆದು ಅದು ಸಕತ್​ ಹಿಟ್​ ಆಯಿತು. ಅಂದುಕೊಂಡದ್ದಕ್ಕಿಂತಲೂ ಹೆಚ್ಚಿನದಾಗಿ ಹಿಟ್ಸ್​ ಬಂದಿತು. ಜನರು ಅದನ್ನು ಸಿಕ್ಕಾಪಟ್ಟೆ ಇಷ್ಟಪಟ್ಟರು ಎಂದು ನಟಿ ರವೀನಾ ಹೇಳಿದ್ದಾರೆ.  

ಇನ್ನು 'ಮೊಹ್ರಾ' (Mohra) ಕುರಿತು ಹೇಳುವುದಾದರೆ,  ಇದು ಅಕ್ಷಯ್ ಕುಮಾರ್ ಅವರ ಅತ್ಯಂತ ಜನಪ್ರಿಯ ಚಲನಚಿತ್ರಗಳಲ್ಲಿ ಒಂದಾಗಿದೆ, ಇದು ಜುಲೈ 1, 1994 ರಂದು ಬಿಡುಗಡೆಯಾಯಿತು. ರಾಜೀವ್ ರೈ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ರವೀನಾ ಟಂಡನ್ ಅವರಲ್ಲದೆ, ಸುನೀಲ್ ಶೆಟ್ಟಿ, ನಾಸಿರುದ್ದೀನ್ ಶಾ ಮತ್ತು ಪರೇಶ್ ರಾವಲ್ ಅವರಂತಹ ನಟರು ಸಹ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರವು ಹಿಟ್ ಆಗಲಿಲ್ಲ, ಅದರ 'ಟಿಪ್ ಟಿಪ್ ಬರ್ಸಾ ಪಾನಿ' ಮತ್ತು 'ತು ಚೀಜ್ ಬಡಿ ಹೈ ಮಸ್ತ್ ಮಸ್ತ್' ಹಾಡುಗಳು ಸಾಕಷ್ಟು ಜನಪ್ರಿಯವಾಗಿವೆ.

ಮಟನ್​, ಸ್ಮೋಕಿಂಗ್​​ ದಾಸನಾಗಿದ್ದೆ... ಕೆಟ್ಟ Lifestyle ದಿನಗಳ ಬಗ್ಗೆ ಮೌನ ಮುರಿದ ರಜನೀಕಾಂತ್​

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?