ಖಾನ್​ ತ್ರಯರಿಗಿಂತ ಮುಂಚೆಯೇ 100 ಕೋಟಿ ಕಲೆಕ್ಷನ್​ ಮಾಡಿ ಇತಿಹಾಸ ಸೃಷ್ಟಿಸಿತ್ತು ಈ ಸಿನಿಮಾ

By Contributor AsianetFirst Published Jun 1, 2023, 4:02 PM IST
Highlights

ಸಲ್ಮಾನ್​, ಆಮೀರ್​, ಶಾರುಖ್​ ಅವರನ್ನು ಮೀರಿಸಿ ಭಾರತದ ಮೊಟ್ಟಮೊದಲು 100 ಕೋಟಿ ಕಲೆಕ್ಷನ್​ ಮಾಡಿದ ಚಿತ್ರದ ಕುರಿತು ಇದೀಗ ಮಾಹಿತಿ ಬಹಿರಂಗಗೊಂಡಿದೆ. ಯಾವ ಚಿತ್ರವದು? 
 

 ಬಾಲಿವುಡ್‌ನ ಮೂವರು ಖಾನ್‌ಗಳಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಆಮೀರ್ ಖಾನ್ ಅವರನ್ನು ಇನ್ನೂ ಬಾಕ್ಸ್ ಆಫೀಸ್ ಹಿಟ್ ಮೆಷಿನ್‌ಗಳು (Box Office Machines) ಎಂದು ಪರಿಗಣಿಸಲಾಗಿದೆ. 100 ಕೋಟಿಗೂ (100 Crores) ಹೆಚ್ಚು ಗಳಿಸಲಿದ್ದ ಈ ಮೂವರ ಅಕೌಂಟ್‌ನಲ್ಲಿ ಇಂತಹ ಎಷ್ಟು ಚಿತ್ರಗಳು ಇರುತ್ತವೋ ಗೊತ್ತಿಲ್ಲ. ಆದರೆ ಈ ಮೂವರಲ್ಲಿ ಯಾರೂ ಮೊದಲ 100 ಕೋಟಿ ಸಿನಿಮಾವನ್ನು ಇಂಡಸ್ಟ್ರಿಗೆ ನೀಡಿಲ್ಲ. ಹೌದು. ಈ ಕುತೂಹಲದ ವಿಷಯವೊಂದು ಇದೀಗ ಬೆಳಕಿಗೆ ಬಂದಿದೆ. ಬಾಲಿವುಡ್​ನಲ್ಲಿ ಖಾನ್​ ತ್ರಯರ ಹವಾ ಜೋರಾಗಿದೆ ಇದೆ. ಕೆಲ ವರ್ಷಗಳಿಂದ ಇವರು ಬಾಲಿವುಡ್​​ ಆಳುತ್ತಿದ್ದಾರೆ.  ಅದರಲ್ಲಿ ಆಮೀರ್​ ಖಾನ್​ ಅವರ ಚಿತ್ರಗಳು ಒಂದರ ಮೇಲೊಂದು ಫ್ಲಾಪ್​ ಆಗಿದ್ದರೆ, ಶಾರುಖ್​ ಖಾನ್​ ಪಠಾಣ್​ ಮೂಲಕ ಮತ್ತೆ ಚಿಗುರಿದ್ದಾರೆ, ಇನ್ನು ಸಲ್ಮಾನ್​ ಆಗಾಗ್ಗೆ ಹಿಟ್​ ಚಿತ್ರಗಳನ್ನು ನೀಡುತ್ತಿದ್ದಾರೆ. ಇನ್ನೂ ಒಂದು ಇಂಟರೆಸ್ಟಿಂಗ್​ ವಿಷಯ ಏನೆಂದರೆ, ಈ ಮೂವರೂ ಹುಟ್ಟಿದ್ದು ಒಂದೇ ಇಸ್ವಿಯಲ್ಲಿ ಅಂದರೆ 1965ರಲ್ಲಿ.  1988 ರಲ್ಲಿ 'ಖಯಾಮತ್ ಸೇ ಖಯಾಮತ್ ತಕ್' ಸಿನಿಮಾದ ಮೂಲಕ ಆಮೀರ್ ಖಾನ್ 'ನಾಯಕ'ನಾದರೆ, 1989 ರಲ್ಲಿ 'ಮೈನೇ ಪ್ಯಾರ್ ಕಿಯಾ' ಚಿತ್ರದ ಮೂಲಕ ಸಲ್ಮಾನ್ 'ಹೀರೋ' ಆದರು. ಇನ್ನೂ ಶಾರುಖ್ (Shah rukh Khan) ಎಂಟ್ರಿಕೊಟ್ಟಿದ್ದು 1992ರಲ್ಲಿ 'ದೀವಾನಾ' ಚಿತ್ರದ ಮೂಲಕ. ಒಟ್ಟಿನಲ್ಲಿ ಖಾನ್​ಗಳ ಹವಾ ಬಾಲಿವುಡ್​ನಲ್ಲಿ ಇಂದಿಗೂ ಮುಂದುವರೆದಿದೆ. 

 ಇವರ ಚಿತ್ರಗಳು 100 ಕೋಟಿ ಕಲೆಕ್ಷನ್​ ಮಾಡುತ್ತವೆ. ಬಾಲಿವುಡ್​ ಅಂಗಳದಲ್ಲಿ ಇಷ್ಟೊಂದು ಸಂಪಾದನೆ ಮಾಡಿದ್ದು ಇವರದ್ದೇ ಚಿತ್ರ ಫಸ್ಟ್​ ಎಂಬ ಮಾತು ಇದೆ.   ಸಲ್ಮಾನ್ ಖಾನ್, ಶಾರುಖ್ ಖಾನ್ (Shah Rukh Khan) ಮತ್ತು ಅಮೀರ್ ಖಾನ್ ಅವರನ್ನು ಇನ್ನೂ ಬಾಕ್ಸ್ ಆಫೀಸ್ ಹಿಟ್ ಮೆಷಿನ್‌ಗಳು ಎಂದು ಪರಿಗಣಿಸಲಾಗಿದೆ. 100 ಕೋಟಿಗೂ ಹೆಚ್ಚು ಗಳಿಸಲಿದ್ದ ಈ ಮೂವರ ಅಕೌಂಟ್‌ನಲ್ಲಿ ಇಂತಹ ಎಷ್ಟು ಚಿತ್ರಗಳು ಇರುತ್ತವೋ ಗೊತ್ತಿಲ್ಲ ಆದರೆ ಈ ಮೂವರಲ್ಲಿ ಯಾರೂ ಮೊದಲ 100 ಕೋಟಿ ಸಿನಿಮಾವನ್ನು ಇಂಡಸ್ಟ್ರಿಗೆ ನೀಡಿಲ್ಲ ಎಂಬ ಒಂದು ವಿಷಯ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ.  ಅದೇನೆಂದರೆ ಇವರೆಲ್ಲರಿಗಿಂತಲೂ ಮೊದಲು ಬೇರೆಯ ನಾಯಕ ಈ ಇತಿಹಾಸ ಸೃಷ್ಟಿಸಿದ್ದಾರೆ ಎನ್ನುವುದು. ಅದೂ ಕೋಟಿಯ ಬೆಲೆ ಈಗಿರುವ ಬೆಲೆಗಿಂತಲೂ ಮೂರು ಪಟ್ಟು ಹೆಚ್ಚಾಗಿದ್ದ ವೇಳೆ. 

ಶಾರುಖ್​, ಆಮೀರ್​, ಸಲ್ಮಾನ್​ರಿಂದ ನಸುಕಿನವರೆಗೆ ಪಾರ್ಟಿ: ಶುರುವಾಯ್ತು ಭಾರಿ ಚರ್ಚೆ!

 ಕೆಲ ದಶಕಗಳ ಹಿಂದೆ.   ಚಿತ್ರವು 25 ವಾರಗಳು, 50 ವಾರಗಳು ಅಥವಾ 75 ವಾರಗಳ ಕಾಲ ಥಿಯೇಟರ್‌ಗಳಲ್ಲಿ ಓಡುವ ಮೂಲಕ ಅದರ ಹಿಟ್ ಮತ್ತು ಸೂಪರ್‌ಹಿಟ್ ಅನ್ನು ತಿಳಿದಿತ್ತು, ಆದರೆ ಇಂದು ಚಿತ್ರದ ಯಶಸ್ಸನ್ನು ಅಳೆಯಲು ಹೊಸ ಮಾರ್ಗವಿದೆ - 100 ಕೋಟಿ ಕ್ಲಬ್. ಹೌದು, 100 ಕೋಟಿ ಕ್ಲಬ್ ಗಳಿಕೆಯನ್ನು ಅಳೆಯುವ ಅನಧಿಕೃತ ವಿಧಾನವಾಗಿದೆ, ಆದರೆ ಈಗ ದೊಡ್ಡ ಸ್ಟಾರ್‌ಗಳು ಮತ್ತು ನಿರ್ದೇಶಕರು ತಮ್ಮ ಚಲನಚಿತ್ರಗಳ ಯಶಸ್ಸನ್ನು ಸಹ ಇದರ ಮೂಲಕ ಅಳೆಯುತ್ತಾರೆ. 100 ಕೋಟಿ ಗಳಿಸಿದ ಮೊದಲ ಬಾಲಿವುಡ್ (Bollywood) ಚಿತ್ರ ಮೂರು ದಶಕಗಳ ಹಿಂದೆ ಬಿಡುಗಡೆಯಾಯಿತು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಹೌದು. ಅದೇ ನಟ ಮಿಥುನ್​ ಚಕ್ರವರ್ತಿ ಅಭಿನಯದ ಚಿತ್ರ. ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ಕಳೆದ 47 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಮಿಥುನ್ ಚಕ್ರವರ್ತಿ 1976 ರಲ್ಲಿ 'ಮೃಗಯಾ' (Mrugaya) ಚಿತ್ರದ ಮೂಲಕ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. 1982 ರಲ್ಲಿ ಅವರ 'ಡಿಸ್ಕೋ ಡ್ಯಾನ್ಸರ್' ಚಿತ್ರ ಗಳಿಕೆಯ ದಾಖಲೆಗಳನ್ನು ಮುರಿದಿದೆ.  1982 ರಲ್ಲಿ ಬಿಡುಗಡೆಯಾದ 'ಡಿಸ್ಕೋ ಡ್ಯಾನ್ಸರ್' ವಿಶ್ವಾದ್ಯಂತ 100 ಕೋಟಿ ವ್ಯವಹಾರ ಮಾಡಿದ ಮೊದಲ ಚಿತ್ರ. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ಚಿನ್ನದ, ಹೊಳಪಿನ ಬಟ್ಟೆಗಳನ್ನು ಧರಿಸಿ ಡಿಸ್ಕೋದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದರೆ, ಫ್ಯಾನ್ಸ್​ ಮೂರ್ಛೆ ಹೋಗಿದ್ದು ಇದೆ. ಅಷ್ಟು ಹುಚ್ಚು ಹಿಡಿಸಿದ ಚಿತ್ರವಿದು. ಅದೂ 1982ರ ದಶಕದಲ್ಲಿ! 

ಬಾಬರ್ ಶಾ 'ಡಿಸ್ಕೋ ಡ್ಯಾನ್ಸರ್' (Disco Dancer) ನ ನಿರ್ದೇಶಕರಾಗಿದ್ದರು ಮತ್ತು ಅದರ ಕಥೆಯನ್ನು ರಾಹಿ ಮಾಸೂಮ್ ರಜಾ ಬರೆದಿದ್ದರು. ಈ ಚಿತ್ರ ರಷ್ಯಾದ ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ವ್ಯಾಪಾರವನ್ನು ಮಾಡಿತು ಮತ್ತು ಅಲ್ಲಿಂದ 90 ಕೋಟಿ ವ್ಯಾಪಾರ ಮಾಡಿದೆ. 'ಡಿಸ್ಕೋ ಡ್ಯಾನ್ಸರ್' ನಂತರ ಈ '100 ಕೋಟಿ' ಕಿರೀಟ ಪಡೆಯಲು ಹಿಂದಿ ಚಿತ್ರರಂಗ ಸುಮಾರು 12 ವರ್ಷಗಳ ಕಾಲ ಕಾಯಬೇಕಾಯಿತು. ನಂತರ 1994 ರ ಚಲನಚಿತ್ರವು ಬಂದಿತು, ಇದು ಮುಂಬರುವ ಹಲವು ತಲೆಮಾರುಗಳಿಗೆ ಮೈಲಿಗಲ್ಲು ಸ್ಥಾಪಿಸಿತು. ಈ ಚಿತ್ರದ ನಂತರ ರಾಜಶ್ರೀ ಪ್ರೊಡಕ್ಷನ್‌ನ 'ಹಮ್ ಆಪ್ಕೆ ಹೈ ಕೌನ್'  100 ಕೋಟಿ ಗಳಿಸಿದ ಭಾರತದ ಎರಡನೇ ಚಿತ್ರ ಎಂದು ಇತಿಹಾಸ ಸೃಷ್ಟಿಸಿತು.  ಇದು1994ರಲ್ಲಿ ಬಿಡುಗಡೆಗೊಂಡಿತ್ತು. ಇದರಲ್ಲಿ ಸಲ್ಮಾನ್​ ಖಾನ್​, ಮಾಧುರಿ ದೀಕ್ಷಿತ್​ (Madhuri Dixit) ನಟಿಸಿದ್ದಾರೆ. ಆದ್ದರಿಂದ 100 ಕೋಟಿ ಬಾಚಿದ್ದ ಮೊದಲ ನಟ ಖಾನ್ ತ್ರಯರು ಅಲ್ಲ, ಬದಲಿಗೆ ಮಿಥುನ್​ ಚಕ್ರವರ್ತಿ. ​ 

ಪುರುಷ ತಾರೆಯರಿಗೆ ಸರಿಸಮಾನವಾಗಿ ಸಂಭಾವನೆ ಪಡೆಯುವ ಏಕೈಕ ಮಹಿಳಾ ನಟಿ ನಾನೇ: ಕಂಗನಾ

click me!