ರವೀನಾ ಟಂಡನ್ ತಮ್ಮ ಎಕ್ಸ್ ಅಕ್ಷಯ್ ಕುಮಾರ್ ವಿರುದ್ಧ ಮಾತನಾಡಲು ಹಿಂದೇಟು ಹಾಕಿದ್ದಾರೆ. ತಮ್ಮ ಈ ಸಂಬಂಧದ ಕುರಿತು ಪತಿಯ ಜೊತೆ ಚರ್ಚಿಸಿಲ್ಲ ಎಂದಿದ್ದಾರೆ.
ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ಅವರ ಸಂಬಂಧದ ಕುರಿತು ಬಹುತೇಕ ಮಂದಿಗೆ ತಿಳಿದದ್ದೇ. ಇವರಿಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಈ ಘಟನೆ ನಡೆದ ಮೂವತ್ತು ವರ್ಷಗಳೇ ಆಗುತ್ತಾ ಬಂದಿದೆ. ಆದರೆ ಇವರಿಬ್ಬರ ಸಂಬಂಧ ಮಾತ್ರ ಇದುವರೆಗೂ ಹಾಟ್ ವಿಷಯವಾಗಿಯೇ ಇದೆ. 1995ರಲ್ಲಿ ಈ ಜೋಡಿಯ ನಿಶ್ಚಿತಾರ್ಥ ಆಗಿತ್ತು. ಇವರು ಮದುವೆಯಾಗಲಿದ್ದಾರೆ ಎಂದು ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದರೆ ಆದದ್ದೇ ಬೇರೆ. ಇಬ್ಬರ ನಿಶ್ಚಿತಾರ್ಥ ಮುರಿದು ಬಿತ್ತು. ಇದೀಗ ಇಬ್ಬರೂ ಬೇರೆ ಬೇರೆ ಮದುವೆಯಾಗಿ ಸಂತೋಷವಾಗಿದ್ದಾರೆ. ಆದರೂ ಇವರಿಬ್ಬರ ಸಂಬಂಧದ ಬಗ್ಗೆ ಚರ್ಚೆಯಾಗುತ್ತಲೇ ಇರುತ್ತದೆ.
ಇದೀಗ ನಟಿ ರವೀನಾ ಅವರು ಅನಿಲ್ ಥಡಾನಿ ಜೊತೆಗೆ ಮದುವೆಯಾಗಿ ಸುಖಿ ಸಂಸಾರ ನಡೆಸುತ್ತಿದ್ದಾರೆ. ಇದೀಗ ಅವರಿಗೆ ಹಳೆಯ ಲವ್ ಕುರಿತು ಪ್ರಶ್ನಿಸಲಾಗಿದೆ. ಆದರೆ ನಾನು ನನ್ನ ಆ ಸಂಬಂಧದ ಕುರಿತು ಎಂದಿಗೂ ಪತಿಯ ಜೊತೆ ಚರ್ಚಿಸಿಲ್ಲ ಎಂದಿದ್ದಾರೆ ನಟಿ ರವೀನಾ. ಇದೇ ವೇಳೆ, ಅಕ್ಷಯ್ ಕುಮಾರ್ ಅವರ ದಾಂಪತ್ಯ ದ್ರೋಹದ ಬಗ್ಗೆಯೂ ಉತ್ತರಿಸಲು ಅವರು ನಿರಾಕರಿಸಿದ್ದಾರೆ. ಅಕ್ಷಯ್ ಮತ್ತು ರವೀನಾ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡರು, ಅಲ್ಲಿ ಅವರು ಪರಸ್ಪರ ಸೌಹಾರ್ದಯುತರಾಗಿದ್ದರು. ಅದೇ ಸಂದರ್ಶನದಲ್ಲಿ, ನೀವು ಮತ್ತು ಪತಿ ಅನಿಲ್ ಥಡಾನಿ ಅವರು ತಮ್ಮ ಹಿಂದಿನ ಸಂಬಂಧಗಳ ಬಗ್ಗೆ ಯಾವಾಗಲಾದರೂ ಪರಸ್ಪರ ಚರ್ಚಿಸಿದ್ದೀರಾ ಎಂದು ಪ್ರಶ್ನೆ ಕೇಳಲಾಯಿತು. ಅದಕ್ಕೆ ರವೀನಾ, ಅವರು ಒಬ್ಬರಿಗೊಬ್ಬರು ವೈಯಕ್ತಿಕವಾಗಿ ತಿಳಿದಿಲ್ಲ. ಅವರಿಬ್ಬರೂ ಈ ವಿಷಯ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ನಾನೆಂದೂ ನನ್ನ ಪತಿಯ ಎದುರು ಆ ವಿಷಯ ಚರ್ಚಿಸಿಲ್ಲ ಎಂದು ನಟಿ ನೇರವಾಗಿ ಹೇಳಿದ್ದಾರೆ.
ಹೆಂಡ್ತಿಗೂ ಮಾತನಾಡಲು ಬಿಡಪ್ಪಾ, ನೀನೆಂಥ ಗಂಡ ಎಂದು ನಟಿ ಸನಾ ಖಾನ್ ಪತಿಗೆ ನೆಟ್ಟಿಗರ ಕ್ಲಾಸ್!
ನಾನು ಮತ್ತು ಅನಿಲ್ ಪ್ರೇಮಿಗಳ ದಿನದ ಪಾರ್ಟಿಯಲ್ಲಿ ಭೇಟಿಯಾಗಿದ್ದೆವು. ಎರಡು ವರ್ಷಗಳ ನಂತರ ಪರಸ್ಪರ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ನಂತರ ಮದುವೆಯಾಗಿದ್ದೇವೆ. ಅವರು ಕೂಡ ನನ್ನ ಹಿಂದಿನ ವಿಷಯ ಕೆದಕಲಿಲ್ಲ, ನಾನೂ ಏನೂ ಹೇಳಲಿಲ್ಲ ಎಂದಿದ್ದಾರೆ. ನನಗೂ ಅಕ್ಷಯ್ ಕುಮಾರ್ ಜೊತೆಗಿನ ವಿಷಯ ಚರ್ಚಿಸಲು ಇಷ್ಟವಿಲ್ಲ. ನನ್ನ ಪ್ರಕಾರ ಪ್ರತಿಯೊಂದು ಸಂಬಂಧವೂ ನಂಬಿಕೆ, ಪ್ರೀತಿ, ಪ್ರಾಮಾಣಿಕತೆ ಮತ್ತು ನಂಬಿಕೆಯ ಮೇಲೆ ಆಧಾರಿತವಾಗಿದೆ. ಈ ನಿಯಮವು ಪ್ರಣಯ ಸಂಬಂಧಗಳಿಗೆ ಮಾತ್ರವಲ್ಲ, ಜೀವನದಲ್ಲಿ ಹೊಂದಿರುವ ಎಲ್ಲಾ ರೀತಿಯ ಸಂಬಂಧಗಳಿಗೆ ಅನ್ವಯಿಸುತ್ತದೆ ಎಂದು ಅವರು ಹೇಳಿದರು.
1994ರಲ್ಲಿ 'ಮೊಹ್ರಾ' ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಈ ಚಿತ್ರ ಹಿಟ್ ಆಯ್ತು. ಅದಾಗಿ 1995ರಲ್ಲಿ ರವೀನಾ ಟಂಡನ್, ಅಕ್ಷಯ್ ಕುಮಾರ್ ಅವರು ಡೇಟ್ ಮಾಡಲು ಆರಂಭಿಸಿದೆವು. ನಮ್ಮಿಬ್ಬರ ನಿಶ್ಚಿತಾರ್ಥ ಮುರಿದೋಯ್ತು. ಆಮೇಲೆ ನಾನು ಬೇರೆಯವರ ಜೊತೆ ಡೇಟ್ ಮಾಡಿದೆ, ಅಕ್ಷಯ್ ಕೂಡ ಬೇರೆಯವರ ಜೊತೆ ಡೇಟ್ ಮಾಡಿದರು. ಆದರೂ ಕೂಡ ಗೂಗಲ್‌ನಲ್ಲಿ ನಮ್ಮ ನಿಶ್ಚಿತಾರ್ಥದ ಬಗ್ಗೆ ಯಾಕೆ ಸರ್ಚ್ ಮಾಡ್ತೀರಿ? ಇಬ್ಬರೂ ಬೇರೆ ಬೇರೆ ದಾರಿ ಕಂಡುಕೊಂಡು ಬಂದಾಗಿದೆ. ಈಗ ಇಬ್ಬರ ಮಧ್ಯೆ ಅಸೂಯೆ, ಹೊಟ್ಟೆಕಿಚ್ಚು ಎಲ್ಲಿಂದ ಬರುತ್ತದೆ?ನಾವಿಬ್ಬರೂ ಭೇಟಿಯಾದ್ರೆ ಮಾತನಾಡುತ್ತೇವೆ. ಎಂದು ರವೀನಾ ಟಂಡನ್ ಹಿಂದೊಮ್ಮೆ ಬೇಸರ ವ್ಯಕ್ತಪಡಿಸಿದ್ದರು.
ಮೂಗಿನ ಸರ್ಜರಿ ಬಳಿಕ ಪ್ರಿಯಾಂಕಾ ಭಯಂಕರವಾಗಿ ಕಾಣ್ತಿದ್ರು- ಅಪ್ಪ ಅಮ್ಮ ಅಳ್ತಾ ಕೂತಿದ್ರು ಎಂದು ನೆನಪಿಸಿಕೊಂಡ ನಿರ್ದೇಶಕ