ಆಕ್ಟಿಂಗ್ ಮಾಡ್ಕೊಂಡು ಹೇಗ್ ಜೀವನ ಮಾಡ್ತೀಯಾ?; ಡಾಕ್ಟರ್ ಆಗಬೇಕು ಎಂದು ಆಸೆ ಪಟ್ಟ ತಂದೆಯನ್ನೇ ವಿಲನ್ ಆಗಿ ನೋಡಿದ ನಟ

By Vaishnavi Chandrashekar  |  First Published Sep 29, 2023, 11:08 AM IST

ತಂದೆಯನ್ನು ವಿಲನ್ ರೀತಿ ನೋಡುತ್ತಿದ್ದ ನಟ ನಾಸಿರುದ್ದೀನ್ ಶಾ. ತಂದೆ ಸ್ಥಾನ ಅರ್ಥ ಮಾಡಿಕೊಳ್ಳಲು ಕಷ್ಟ ಪಟ್ಟಿದ್ದಾರೆ.


ಹಿಂದಿ ಚಿತ್ರರಂಗದ ವರ್ಸಟೈಲ್ ನಟ ನಾಸಿರುದ್ದೀನ್ ಶಾ ಮೊದಲ ಸಲ ತಮ್ಮ ತಂದೆಯನ್ನು ನೆನಪಿಸಿಕೊಂಡು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸ್ಟ್ರಿಕ್ಟ್ ಆಗಿರುವ ತಂದೆಯನ್ನು ನೋಡಿ ವಿಲನ್ ಅಂದುಕೊಂದು ನಾಸಿರುದ್ದೀನ್ ಶಾ ಸದಾ ವಿಲನ್ ರೀತಿ ನೋಡುತ್ತಿದ್ದರಂತೆ. 

'ನಮ್ಮ ತಂದೆಯನ್ನು ನೋಡಿ ನೋಡಿ ಅವರಂತೆ ನನ್ನ ಮಕ್ಕಳ ಜೊತೆ ವರ್ತಿಸಲು ನನಗೆ ಇಷ್ಟವಿರಲಿಲ್ಲ. ನನ್ನ ಮಕ್ಕಳು ಆಗಾಗ ನನ್ನನ್ನು ತಬ್ಬಿಕೊಳ್ಳಬೇಕು ತುಂಬಾ ಫ್ರೀ ಆಗಿರಬೇಕು ಅನ್ನೋದು ನನ್ನ ಆಸೆ. ಇದು ಒಂದು ನಿರ್ದಿಷ್ಟ ಹಂತದಲ್ಲಿ ಸಂಭವಿಸಿದೆ ಏಕೆಂದರೆ ಎಲ್ಲೋ, ಉದ್ದೇಶಪೂರ್ವಕವಾಗಿ, ನಿಮ್ಮಲ್ಲಿ ಬೇರೂರಿರುವ ಅಭ್ಯಾಸಗಳು ಜೆನೆಟಿಕ್ಸ್‌ನಿಂದಲ್ಲ, ಆದರೆ ಮೆಮೆಟಿಕ್ಸ್‌ನಿಂದ. ಆದರೆ ಸಮಯ ಸಂದರ್ಭ ಏನೂ ಮಾಡಲು ಆಗದು ಮಕ್ಕಳು ಜೊತೆ ಸ್ಟ್ರಿಕ್ಟ್ ಇರಲೇ ಬೇಕು. ಕೋಪದಲ್ಲಿ ಮಕ್ಕಳ ಜೊತೆ ಮಾತನಾಡಿರುವೆ ಆದರೆ ಅವರ ಭಾವನೆಗಳನ್ನು ಗೌರವಿಸಿರುವೆ. ಇದನ್ನು ನಮ್ಮ ತಂದೆಯಿಂದಲೇ ಕಲಿತಿರುವುದು. ನನ್ನನ್ನು ನೋಡಿ ಮಕ್ಕಳು ಹೆದರಿಕೊಳ್ಳಬಾರದು. ನಾನು ಆದರ್ಶ ತಂದೆಯಾಗಿರಲು ಸಾಧ್ಯವಿಲ್ಲ ಏಕೆಂದರೆ ಕೆಲವೊಮ್ಮೆ ನನ್ನ ಕೋಪ ನನ್ನ ಕಂಟ್ರೋಲ್‌ನಲ್ಲಿ ಇರುವುದಿಲ್ಲ' ಎಂದು ನಾಸಿರುದ್ದೀನ್ ಶಾ ಮಾತನಾಡಿದ್ದಾರೆ.

Tap to resize

Latest Videos

undefined

ನನ್ನ ಪ್ರಶಸ್ತಿಗಳನ್ನು ಬಾತ್‌ರೂಮ್ ಬಾಗಿಲಿಗೆ ಹಿಡಿಕೆಗಳಾಗಿ ಬಳಸಿದ್ದೀನಿ: ನಾಸಿರುದ್ದೀನ್ ಶಾ ಶಾಕಿಂಗ್ ಹೇಳಿಕೆ

'ನನ್ನ ಜೀವನ ಪೂರ್ತಿ ತಂದೆಯನ್ನು ವಿಲನ್ ರೀತಿ ನೋಡಿದ್ದೀನಿ. ಕೆಲವೊಮ್ಮೆ ಅವರು ತೋರಿಸಿದ ಪ್ರೀತಿಯನ್ನು ಮರೆತಿರುವೆ ಅದರ ಬಗ್ಗೆ ಗಮನ ಕೊಡಬೇಕಿತ್ತು' ಎಂದು ಹೇಳಿದ್ದಾರೆ. ನಾಸಿರುದ್ದೀನ್ ಶಾ ಡಾಕ್ಟರ್ ಆಗಬೇಕು ಎಂದು ತಂದೆ ತುಂಬಾ ಆಸೆ ಪಟ್ಟಿದ್ದರಂತೆ ಆದರೆ ನಾನು ಓದುವುದಿಲ್ಲ ಎಂದು ಹೇಳಿದಾಗ ತಂದೆ ಫುಲ್ ಶಾಕ್ ಆಗಿದ್ದರಂತೆ. ಅಲ್ಲದೆ 9ನೇ ತರಗತಿಯಲ್ಲಿ ಫೇಲ್ ಅಗಿಬಿಟ್ಟರಂತೆ ಆಗ 'ನಟನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಂಡು ಹೇಗೆ ಜೀವನ ನಡೆಸುತ್ತೀಯಾ?' ಎಂದು ತಂದೆ ಪ್ರಶ್ನೆ ಮಾಡಿದ್ದನ್ನು ನಾಸಿರುದ್ದೀನ್ ಶಾ ನೆನಪಿಸಿಕೊಂಡಿದ್ದಾರೆ. 

Onomatomania: ನಾಸಿರುದ್ದೀನ್ ಶಾಗೆ ಈ ವಿಚಿತ್ರ ಕಾಯಿಲೆ ಇದೆಯಂತೆ!

click me!