ಬೆಂಗಳೂರಲ್ಲಿ ಸಿದ್ಧಾರ್ಥ ಸಿನಿಮಾ ಪ್ರಚಾರ: ಕರವೇ ಆಕ್ರೋಶಕ್ಕೆ ಬೆಚ್ಚಿಬಿದ್ದ ತಮಿಳು ನಟ!

Published : Sep 28, 2023, 07:31 PM ISTUpdated : Sep 28, 2023, 07:34 PM IST
ಬೆಂಗಳೂರಲ್ಲಿ ಸಿದ್ಧಾರ್ಥ ಸಿನಿಮಾ ಪ್ರಚಾರ: ಕರವೇ ಆಕ್ರೋಶಕ್ಕೆ ಬೆಚ್ಚಿಬಿದ್ದ ತಮಿಳು ನಟ!

ಸಾರಾಂಶ

ಮಲ್ಲೆಶ್ವರಂನಲ್ಲಿ ತಮಿಳು ನಟ ಸಿದ್ಧಾರ್ಥ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದರು. ಆಗ ಅಲ್ಲಿಗೆ ಬಂದ ಕರವೇ ಸ್ವಾಭಿಮಾನಿ ಬಳಗದವರು "ಕಾವೇರಿ ಕಿಚ್ಚು ಹತ್ತಿರೋ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಏನಿದೆ...? ಈ ಸಮಯದಲ್ಲಿ ಸುದ್ದಿಗೋಷ್ಠಿಗೆ ನಮ್ಮ ವಿರೋಧವಿದೆ. ದಯವಿಟ್ಟು ತಕ್ಷಣವೇ ಸುದ್ದಿಗೋಷ್ಠಿ ನಿಲ್ಲಿಸಿ" ಎಂದಿದ್ದಾರೆ. . 

ಕರ್ನಾಟಕದಲ್ಲಿ ಈಗ 'ಕಾವೇರಿಗಾಗಿ ಹೋರಾಟ'ದ ಕಿಚ್ಚು ಎಲ್ಲೆಡೆ ಹರಡಿಕೊಂಡಿರುವುದು ಗೊತ್ತೇ ಇದೆ. ಈ ಸಮಯದಲ್ಲಿ ತಮಿಳು ಚಿತ್ರವೊಂದರ ಸುದ್ದಿಗೋಷ್ಠಿ ಮಲ್ಲೇಶ್ವರಂನ SRV ಥಿಯೇಟರ್‌ನಲ್ಲಿ ನಡೆಯುತ್ತಿತ್ತು. ತಮಿಳು ನಟ ಸಿದ್ಧಾರ್ಥ ನಟಿಸಿರುವ 'ಚಿತ್ಥ' ಚಿತ್ರದ ಸುದ್ದಿಗೋಷ್ಠಿ ನಡೆಸಲಾಗುತ್ತಿತ್ತು. ಈ ಸಮಯದಲ್ಲಿ ಅಲ್ಲಿಗೆ ಬಂದು 'ಕರವೇ ಸ್ವಾಭಿಮಾನಿ ಸೇನೆ' ಕಡೆಯವರು ಸುದ್ದಿಗೋಷ್ಠಿಗೆ ವಿರೋಧ ವ್ಯಕ್ತಪಡಿಸಿದರು. 

ಕರವೇ ಸ್ವಾಭಿಮಾನಿ ಬಳಗದವರು "ಕಾವೇರಿ ಕಿಚ್ಚು ಹತ್ತಿರೋ ಈ ಸಮಯದಲ್ಲಿ ತಮಿಳು ಚಿತ್ರದ ಪ್ರಚಾರದ ಅವಶ್ಯಕತೆ ಏನಿದೆ...? ಈ ಸಮಯದಲ್ಲಿ ಸುದ್ದಿಗೋಷ್ಠಿಗೆ ನಮ್ಮ ವಿರೋಧವಿದೆ. ದಯವಿಟ್ಟು ತಕ್ಷಣವೇ ಸುದ್ದಿಗೋಷ್ಠಿ ನಿಲ್ಲಿಸಿ.  ಇಲ್ಲಿ ಕಾವೇರಿ ಗಲಾಟೆ ನಡೆಯುತ್ತಿದೆ.. ಈಗ ಇದು ಬೇಕಿತ್ತಾ..? ಸಂಘರ್ಷಕ್ಕೆ ಇದು ದಾರಿ ಮಾಡಿಕೊಡಲ್ಲವಾ..? ಎಂದು ನಿಂಗರಾಜು ಗೌಡ ಮತ್ತು ಕರವೇ ಸ್ವಾಭಿಮಾನಿ ಸೇನೆ ತಂಡ ವಿರೋಧ ವ್ಯಕ್ತಪಡಿಸಿದರು.

ದರ್ಶನ್ ನನ್ನ ಪಾಲಿಗೆ ದೇವರು: ಭಾರೀ ವೈರಲ್ ಆಯ್ತು ನಟ 'ಸೂರ್ಯ' ಮಾತು!

ತಕ್ಷಣವೇ ತಮಿಳು ನಟ ಸಿದ್ಧಾರ್ಥ ಪ್ರೆಸ್‌ಮೀಟ್‌ನಿಂದ ಹೊರನಡೆದರು. "ನಾವು ಆರ್ಡರ್ ಮಾಡ್ತಿಲ್ಲ, ಮನವಿ ಮಾಡ್ತಿದ್ದೀವಿ. ಬೆಂಕಿ ಹೊತ್ತಿಕೊಂಡಿರುವ ಈ ಸಮಯದಲ್ಲಿ ಇಲ್ಲಿ ಸಿನಿಮಾ ಪ್ರಚಾರದ ಅಗತ್ಯವೂ ಇಲ್ಲ. ಈಗ ಬೇಕಾಗಿಲ್ಲ ಅಷ್ಟೇ" ಎಂದು ಹೋರಾಟಗಾರರು ಅಲ್ಲಿರುವ ಎಲ್ಲರಲ್ಲೂ ಮನವಿ ಮಾಡಿಕೊಂಡರು. ನಾಯಕ ನಟ ಸಿದ್ಧಾರ್ಥ ಹೊರನಡೆದ ತಕ್ಷಣ 'ಪ್ರೇಸ್ ಮೀಟ್' ನಿಂತುಹೋಗಿ ಅಲ್ಲಿ ಮೌನ ಆವರಿಸಿತು. ಬಳಿಕ  ಕರವೇ ಸ್ವಾಭಿಮಾನಿ ಸೇನೆ ತಂಡ ಅಲ್ಲಿಂದ ನಿರ್ಗಮಿಸಿತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ನನ್ನ ತಂದೆ ಕೂಡ ಗುಮ್ಮಡಿ ನರಸಯ್ಯ ಅವರಂತೆಯೇ ಜನರ ಸೇವೆ ಮಾಡಿದವರು: ನಟ ಶಿವಣ್ಣ ಹೇಳಿದ್ದೇನು?