100 ಕೋಟಿ ರೂ. ಬಂಗಲೆಯಿಂದ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್; ಅಲ್ಲು ಅರ್ಜುನ್ ಬಳಿ ಇರುವ ಐಷಾರಾಮಿ ಆಸ್ತಿ

Published : Apr 08, 2023, 03:05 PM ISTUpdated : Apr 08, 2023, 03:58 PM IST
100 ಕೋಟಿ ರೂ. ಬಂಗಲೆಯಿಂದ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್; ಅಲ್ಲು ಅರ್ಜುನ್ ಬಳಿ ಇರುವ ಐಷಾರಾಮಿ ಆಸ್ತಿ

ಸಾರಾಂಶ

100 ಕೋಟಿ ರೂ.ಬಂಗಲೆಯಿಂದ 7 ಕೋಟಿ ಮೌಲ್ಯದ ವ್ಯಾನಿಟಿ ವ್ಯಾನ್‌ವರೆಗೆ. ಅಲ್ಲು ಅರ್ಜುನ್ ಬಳಿ ಇರುವ ಐಷಾರಾಮಿ ವಸ್ತುಗಳೇನು?

ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರಿಗೆ ಇಂದು (ಏಪ್ರಿಲ್ 8) ಹುಟ್ಟುಹಬ್ಬದ ಸಂಭ್ರಮ. ಪುಷ್ಪ ಸ್ಟಾರ್‌ಗೆ ಅಭಿಮಾನಿಗಳು, ಸಿನಿಮಾ ಗಣ್ಯರಿಂದ ಶುಭಾಶಯಗಳ ಸುರಿಮಳೆ ಬರುತ್ತಿದೆ. ಅಲ್ಲು ಅರ್ಜುನ್ ವಿಭಿನ್ನ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ತರಹೇವಾರಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದ್ಭುತ ಅಭಿಯನದ ಜೊತೆಗೆ ಸ್ಟೈಲಿಶ್ ಸ್ಟಾರ್ ಉತ್ತಮ ಡಾನ್ಸರ್ ಕೂಡ ಹೌದು. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಟಾಲಿವುಡ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಗಡಿಗೂ ಮೀರಿ ಅಭಿಮಾನಿಗಳನ್ನು ಹೊಂದಿರುವ ಅಲ್ಲು ಅರ್ಜುನ್‌ಗೆ ಶುಭಾಶಯಗಳ ಮಹಾಪೂರ ಬರುತ್ತಿದೆ. 

ಭಾರತದ ಅತ್ಯಂತ ದುಬಾರಿ ನಟರಲ್ಲಿ ಅಲ್ಲು ಅರ್ಜುನ್ ಕೂಡ ಒಬ್ಬರು. ಐಷಾರಾಮಿ ಜೀವನ ನಡೆಸುವ ಅಲ್ಲು ಅರ್ಜುನ್ ನೆಟ್ ವರ್ತ್ ಎಷ್ಟಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಅಲ್ಲು ಅರ್ಜುನ್ ಹೈದರಾಬಾದ್‌ನ ಐಷಾರಾಮಿ ಬಂಗಲೆಯಲ್ಲಿ ಪತ್ನಿ ಸ್ನೇಹಾ ರೆಡ್ಡಿ ಮತ್ತು ಇಬ್ಬರೂ ಮುದ್ದಾದ ಮಕ್ಕಳಾದ ಅಯಾನ್ ಮತ್ತು ಅರ್ಹಾ ಜೊತೆ ವಾಸಿಸುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ದೊಡ್ಡ ಬಂಗಲೆಯಲ್ಲಿ ಈಜುಕೊಳ, ಬೃಹತ್ ಲಾನ್, ಓಪನ್ ಜಿಮ್, ಹೋಮ್ ಥಿಯೇಟರ್, ವಿಶಾಲವಾದ ಲಿವಿಂಗ್ ಏರಿಯಾವಿದೆ. ಈ ಬಂಗಲೆಯ ಬೆಲೆ ಬರೋಬ್ಬರಿ 100 ಕೋಟಿ ರೂಪಾಯಿ ಎನ್ನಲಾಗಿದೆ. 

ಐಷಾರಾಮಿ ವ್ಯಾನಿಟಿ ವ್ಯಾನ್ 

ಅಲ್ಲು ಅರ್ಜುನ್ ಮನೆ ಮಾತ್ರವಲ್ಲದೇ ಅವರು ಬಳಸುವ ವ್ಯಾನಿಟಿ ವ್ಯಾನ್ ಕೂಡ ಅಷ್ಟೇ ದುಬಾರಿಯಾಗಿದೆ. 2019ರಲ್ಲಿ ದುಬಾರಿ ವ್ಯಾನಿಟಿ ವ್ಯಾನ್ ಖರೀದಿಸಿದರು. ಇದರ ಮೇಲೆ AA ಎಂದು ಹೆಸರಿದೆ. ಇದರ ಬೆಲೆ ಬರೋಬ್ಬರಿ 7 ಕೋಟಿ ರೂಪಾಯಿ, ವ್ಯಾನಿಟಿ ವ್ಯಾನ್‌ನ ಫೋಟೋವನ್ನು ಅಲ್ಲು ಅರ್ಜುನ್ ಶೇರ್ ಮಾಡಿದ್ದರು.  ಐಷಾರಾಮಿ ವ್ಯಾಟಿನಿ ವ್ಯಾನ್ ನೋಡಿ ಅಭಿಮಾನಿಗಳು ಕಳೆದೋಗಿದ್ದರು.

ಮಗ ಅಯಾನ್‌ ಹುಟ್ಟುಹಬ್ಬಕ್ಕೆ ಅಲ್ಲು ಅರ್ಜುನ್ ವಿ ಶ್‌ ಮಾಡಿದ್ದು ಹೀಗೆ

ದುಬಾರಿ ಕಾರುಗಳು 

ಅಲ್ಲು ಅರ್ಜುನ್ ಅವರಿಗೆ ಆಟೋಮೊಬೈಲ್ ಮೇಲು ಕ್ರೇಸ್. ದುಬಾರಿ ಕಾರುಗಳ ಕಲೆಕ್ಷನ್ ಅವರ ಬಳಿ ಇದೆ.  75 ಲಕ್ಷ ಮೌಲ್ಯದ ಹಮ್ಮರ್ H2 ಮತ್ತು ಐಷಾರಾಮಿ SUV ಲ್ಯಾಂಡ್ ರೇಂಜ್ ರೋವರ್, ಇದರ ಬೆಲೆ 2.39 ಕೋಟಿ ರೂ.ಗಳಿಂದ ರೂ. 4.17 ಕೋಟಿಯಷ್ಟಿದೆ. ಅದಕ್ಕೆ ಬೀಸ್ಟ್ ಎಂದು ಹೆಸರಿಟ್ಟು ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಸಂಭಾವನೆ 

ಅಲ್ಲು ಅರ್ಜುನ್ ಭರ್ಜರಿ ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದಾರೆ. 2021ರಲ್ಲಿ ರಿಲೀಸ್ ಆದ ಪುಷ್ಪ ದಿ ರೈಸ್ ಸಿನಿಮಾ ಮೂಲಕ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದ್ದು ಸಂಭಾವನೆ ಕೂಡ ಹೆಚ್ಚಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅಲ್ಲು ಅರ್ಜುನ್ 100 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಅಲ್ಲು ಅರ್ಜುನ್ ಅವರ ಒಟ್ಟು ಆಸ್ತಿ ಮೌಲ್ಯ 370 ರಿಂದ 400 ಕೋಟಿ ಎನ್ನಲಾಗಿದೆ. 

Allu Arjun Birthday; ನನ್ನ ಪುಷ್ಪರಾಜ್, ಇಡೀ ಜಗತ್ತು ನಿಮಗಾಗಿ ಕಾಯುತ್ತಿದೆ, ರಶ್ಮಿಕಾ ಸ್ವೀಟ್ ಬರ್ತಡೇ ವಿಶ್

ಸದ್ಯ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಸದ್ಯ ಈ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ವೈರಲ್ ಆಗಿದೆ.   ಅಲ್ಲು ಅರ್ಜುನ್ ಪಾರ್ಟ್-2ನಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌