ನ್ಯಾಷನಲ್‌ ಕ್ರಷ್‌ ರಶ್ಮಿಕಾ ಮಂದಣ್ಣ ಕಿರೀಟಕ್ಕೆ ಮತ್ತೊಂದು ದಾಖಲೆಯ ಗರಿ

By Suvarna News  |  First Published Apr 30, 2023, 5:41 PM IST

ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ ಈಗ ಮತ್ತೊಂದು ದಾಖಲೆ ಬರೆದಿದ್ದಾರೆ. ಏನದು?
 


ನ್ಯಾಷನಲ್ ಕ್ರಷ್​ ಎಂದೆನಿಸಿಕೊಂಡರೂ, ಕಾಂಟ್ರವರ್ಸಿ ಲೇಡಿ ಎಂದೇ ಕರೆಸಿಕೊಳ್ಳುತ್ತಿರುವವರು ನಟಿ ರಶ್ಮಿಕಾ ಮಂದಣ್ಣ (Rashmika Mandanna). ಹೆಚ್ಚಾಗಿ ನೆಗೆಟಿವ್​ ಸುದ್ದಿಗಳಿಂದಲೇ ಇತ್ತೀಚಿನ ದಿನಗಳಲ್ಲಿ ಇವರು ಸುದ್ದಿಯಲ್ಲಿದ್ದಾರೆ.  ಇತ್ತೀಚಿನ ದಿನಗಳಲ್ಲಿ  ಅತ್ಯಂತ ಕಡಿಮೆ ಉಡುಪು ತೊಟ್ಟು, ಒಳ ಉಡುಪು ಧರಿಸದೇ... ಹೀಗೆ ಹಲವು ವೇಷಗಳಲ್ಲಿ ದೊಡ್ಡ ದೊಡ್ಡ ವೇದಿಕೆಯ ಮೇಲೆ ಕಾಣಿಸಿಕೊಂಡು ಟ್ರೋಲ್​ ಆಗುತ್ತಿದ್ದಾರೆ. ಬಾಲಿವುಡ್ (Bollywood) ಅಂಗಳದ ನೀರು ಕುಡಿದ ಮೇಲೆ ಇದೀಗ ರಶ್ಮಿಕಾ ಮತ್ತಷ್ಟು ಬೋಲ್ಡ್ ಆಗಿದ್ದಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ಪಡ್ಡೆಹುಡುಗರ ನಿದ್ದೆ ಕದಿಯುತ್ತಿದ್ದಾರೆ.  ಅಭಿಮಾನಿಗಳ (Fans)ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಒಳ್ಳೊಳ್ಳೆ ಆಫರ್​ಗಳು ಸಿಗುತ್ತಿವೆ. ಅತ್ಯಂತ ಕಡಿಮೆ ಅವಧಿಯಲ್ಲಿ ಸ್ಯಾಂಡಲ್‌ವುಡ್‌, ಟಾಲಿವುಡ್‌, ಕಾಲಿವುಡ್‌, ಬಾಲಿವುಡ್‌... ಹೀಗೆ ವಿಭಿನ್ನ ಭಾಷಾ ಚಿತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ ನಟಿ. ಸ್ಯಾಂಡಲ್‍ವುಡ್ ಸಾನ್ವಿ, ಟಾಲಿವುಡ್ ಶ್ರೀವಲ್ಲಿ (Tollywood Shreevalli) ಎಂದೆಲ್ಲಾ ಕರೆಸಿಕೊಳ್ತಿರೋ ನಟಿ ರಶ್ಮಿಕಾ ಮಂದಣ್ಣ ಅವರು ಬಾಲಿವುಡ್‍ನಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ತೆಲುಗಿನ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ (Maitri Movie) ಮೇಕರ್ಸ್ ತಯಾರಿಸುತ್ತಿರುವ ಮತ್ತೊಂದು ಹೊಸ ಚಿತ್ರಕ್ಕೆ ರಶ್ಮಿಕಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.  


ಇಂತಿಪ್ಪ ರಶ್ಮಿಕಾ, ಇದೀಗ ಇನ್​ಸ್ಟಾಗ್ರಾಮ್​ನಲ್ಲಿ (Instagram) ಹೊಸ ದಾಖಲೆ ಬರೆದಿದ್ದಾರೆ. ಇವರೀಗ ದಕ್ಷಿಣ  ಸಿನಿ ಇಂಡಸ್ಟ್ರಿಯ ಬಹುತೇಕ ಖ್ಯಾತನಾಮ  ಸ್ಟಾರ್ ನಟರನ್ನು ಹಿಂದಿಕ್ಕಿ ದಾಖಲೆ ಬರೆದಿದ್ದಾರೆ.  ಅದೇನೆಂದರೆ, ರಶ್ಮಿಕಾ ಮಂದಣ್ಣ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ದೊಡ್ಡ ದಾಖಲೆ ಬರೆದಿದ್ದಾರೆ. ಇದರೊಂದಿಗೆ ರಶ್ಮಿಕಾ ಮಂದಣ್ಣ ಭಾರತದಲ್ಲಿ ಅತಿ ಹೆಚ್ಚು ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಹೊಂದಿರುವ ನಾಯಕಿಯರಲ್ಲಿ ಒಬ್ಬರು ಎಂಬ ಸೆನ್ಸೇಷನಲ್ ದಾಖಲೆಯನ್ನು ದಾಖಲಿಸಿದ್ದಾರೆ. 

Tap to resize

Latest Videos

ಒಂದ್ ಮಾತಾಡಿದ್ರೆ 2-3 ಕಾಂಟ್ರವರ್ಸಿ ಆಗತ್ತೆ.... ಎಂದು ಅತ್ತ Rashmika Mandanna

ಇತ್ತೀಚೆಗೆ, ರಶ್ಮಿಕಾ ಮಂದಣ್ಣ ತಮ್ಮ Instagram ಖಾತೆಯಲ್ಲಿ ಒಟ್ಟು 38 ಮಿಲಿಯನ್ ಫಾಲೋವರ್ಸ್​ಗಳನ್ನು ಪಡೆಯುವ ಮೂಲಕ ದೊಡ್ಡ ದಾಖಲೆಯನ್ನು ಮಾಡಿದ್ದಾರೆ. ಇದೇ ಕಾರಣಕ್ಕೆ ಅವರ ಅಭಿಮಾನಿಗಳಿಂದ   ಶುಭಾಶಯಗಳ ಸುರಿಮಳೆಯಾಗುತ್ತಿದೆ. ಇತ್ತೀಚೆಗೆ ವಾರಿಸು ಚಿತ್ರದ ಮೂಲಕ ಮತ್ತೊಂದು ಬಂಪರ್ ಹಿಟ್ ಪಡೆದುಕೊಂಡಿರುವ ಈ ನಟಿ ಈಗ ಸೆನ್ಸೇಷನಲ್ ದಾಖಲೆ ಸೃಷ್ಟಿಸಿದ್ದಾರೆ. ರಶ್ಮಿಕಾ ಆಗಾಗ ತಮ್ಮ ಸಿನಿಮಾ ಮತ್ತು ವೈಯಕ್ತಿಕ ಅನುಭವಗಳನ್ನು ತಮ್ಮ ಅಭಿಮಾನಿಗಳು ಮತ್ತು ಪ್ರೇಕ್ಷಕರೊಂದಿಗೆ Instagram ನಲ್ಲಿ ಹಂಚಿಕೊಳ್ಳುತ್ತಾರೆ. ರಶ್ಮಿಕಾ ಮಂದಣ್ಣ ಪುಷ್ಪಾ 2 ಜೊತೆ ಜೊತೆಗೇ ರೈನೋ ಚಿತ್ರದ ಕೆಲಸಗಳಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಹೀಗಿದ್ದರೂ ನಟಿ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ಆ್ಯಕ್ಟಿವ್ ಆಗಿರುವುದನ್ನು ತಪ್ಪಿಸುವುದಿಲ್ಲ. ಏನಾದರೊಂದು ಅಪ್ಡೇಟ್​ ಕೊಡುತ್ತಲೇ ಇರುತ್ತಾರೆ. ಈ ಮೂಲಕ ಫ್ಯಾನ್ಸ್​ಗಳಿಗೆ ಹತ್ತಿರವಾಗಿದ್ದು, ಈ ದಾಖಲೆ ಬರೆಯಲು ಕಾರಣವಾಗಿದೆ.

ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದರು. ಆದರೆ ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ನಂತರ ಬಂದ ಮಿಷನ್ ಮಜ್ನು ಸಿನಿಮಾ ಕೂಡ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಸದ್ಯ ರಣಬೀರ್ ಕಪೂರ್ ಜೊತೆ ಅನಿಮಲ್ (Animal) ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ. ಸತತ ಸೋಲಿನ ಬಳಿಕವೂ ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಮಿತಾಭ್ ಬಚ್ಚನ್, ಸಿದ್ಧಾರ್ಥ್ ಮಲ್ಹೋತ್ರ ಮತ್ತು ರಣಬೀರ್ ಕಪೂರ್ ಬಳಿಕ ಇದೀಗ ರಶ್ಮಿಕಾ ವಿಕ್ಕಿ ಕೌಶಲ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ. ದಿನೇಶ್ ವಿಜನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಹಿಸ್ಟೋರಿಕಲ್ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರಂತೆ. ಈಗಾಗಲೇ ಟೈಟಲ್ ಕೂಡ ಬಾಲಿವುಡ್ ವೈರಲ್ ಆಗಿದೆ. 'ಛಾವಾ' ಎಂದು ಸಿನಿಮಾಗೆ ಟೈಟಲ್ ಇಡಲಾಗಿದೆ. ಇದು ಮರಾಠ ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಮಹಾನ್ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜ್, ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಕುರಿತು ಇರುವ ಸಿನಿಮಾ ಇದಾಗಿದೆ ಎನ್ನಲಾಗಿದೆ. 

ಸತತ ಸೋಲಿನ ನಡುವೆಯೂ ಮತ್ತೊಂದು ಹಿಂದಿ ಸಿನಿಮಾ ಒಪ್ಪಿಕೊಂಡ ರಶ್ಮಿಕಾ; ಈ ಬಾರಿ ಯಾರ ಜೊತೆ ರೊಮ್ಯಾನ್ಸ್?

click me!