
ತೆಲುಗಿನ ಖ್ಯಾತ ನಟ ನಾಗಾರ್ಜುನ ಪುತ್ರ ಅಖಿಲ್ ಅಕ್ಕಿನೇನಿ ಸಕ್ಸಸ್‌ಗಾಗಿ ಕಾಯುತ್ತಿದ್ದಾರೆ. ಅನೇಕ ಸಿನಿಮಾಗಳನ್ನು ಮಾಡಿದರೂ ಸಹ ಯಶಸ್ಸು ಸಿಗದೆ ಪರದಾಡಿತ್ತಿದ್ದಾರೆ. ಸ್ಟಾರ್ ನಟನ ಮಗನಾಗಿದ್ದರೂ ಅಖಿಲ್ ಸಿನಿಮಾರಂಗದಲ್ಲಿ ಗಟ್ಟಿಯಾಗಿ ಬೇರೂರಲು ಕಷ್ಟಪಡುವಂತಾಗಿದೆ. ಸದ್ಯ ಅಖಿಲ್ ಏಜೆಂಟ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಇತ್ತೀಚೆಗಷ್ಟೆ ಏಜೆಂಟ್ ಸಿನಿಮಾ ರಿಲೀಸ್ ಆಗಿದೆ. ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿದೆ. ಸಿನಿಮಾ ನೋಡಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ. ಸಿನಿಮಾದ ಕಥೆಯಲ್ಲಿ ಲಾಜಿಕ್ ಇಲ್ಲ, ಕೇವಲ ಆಕ್ಷನ್ಗಷ್ಟೆ ಮಹತ್ವ ನೀಡಿರುವುದರಿಂದ ತೀವ್ರವಾಗಿ ಸಿನಿಮಾ ಟ್ರೋಲ್ ಆಗುತ್ತಿದೆ.
ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಬೆನ್ನಲ್ಲೇ ಅಖಿಲ್ ತಾಯಿ ಅಮಲಾ ಅಕ್ಕಿನೇನಿ ಮಗರ ಪರ ನಿಲ್ಲುವ ಮೂಲಕ ಟ್ರೇಲಿಗರಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಮಗನ ಬಗ್ಗೆ ಬರೆದುಕೊಂಡಿರುವ ಅಮಲಾ, ಏನನ್ನೂ ಸಾಧಿಸಲು ಸಾಧ್ಯವಾಗದರು ಮಾತ್ರ ಟ್ರೋಲ್ ಮಾಡುತ್ತಾರೆ ಎಂದು ಕಿಡಿ ಕಾರಿದ್ದಾರೆ. 'ಅಭದ್ರತೆ ಅನುಭವಿಸುತ್ತಿರುವವರು ಹಾಗೂ ಏನನ್ನೂ ಸಾಧಿಸಲು ಸಾಧ್ಯವಾಗದವರು ಮಾತ್ರವೇ ಟ್ರೋಲ್ ಮಾಡುತ್ತಾರೆ ಎಂಬ ಅರಿವು ನನಗೆ ಇದೆ. ನಾನು ನಿನ್ನೆಯಷ್ಟೆ ಏಜೆಂಟ್ ಸಿನಿಮಾ ನೋಡಿದೆ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ ಸಿನಿಮಾವನ್ನು ನಾನು ಎಂಜಾಯ್ ಮಾಡಿದೆ. ಯಾವ ಕಲೆಯೂ ಪರಿಪೂರ್ಣವಲ್ಲ, ಅಂತೆಯೇ ಆ ಸಿನಿಮಾದಲ್ಲಿಯೂ ಅದರದ್ದೇ ಆದ ಕೊರತೆಗಳಿವೆ. ಆದರೆ ತೆರೆದ ಮನಸ್ಸಿನಿಂದ ಸಿನಿಮಾ ನೋಡಿದರೆ ಸಿನಿಮಾ ಅದ್ಭುತ ಎನಿಸುತ್ತದೆ' ಎಂದಿದ್ದಾರೆ.
ಹಿರಿಯರು ಟಾಲಿವುಡ್‌ನ ಹೆಮ್ಮೆ; 'ಅಕ್ಕಿನೇನಿ ತೊಕ್ಕಿನೇನಿ' ಎಂದ ಬಾಲಯ್ಯ ವಿರುದ್ಧ ನಾಗಚೈತನ್ಯ ಸಹೋದರರ ಅಸಮಾಧಾನ
'ನಾನು ನಿನ್ನೆ ಏಜೆಂಟ್ ಸಿನಿಮಾ ನೋಡಿದ ಚಿತ್ರಮಂದಿರ ತುಂಬಿತ್ತು. ಅದರಲ್ಲಿಯೂ ಅರ್ಧಕ್ಕಿಂತಲೂ ಹೆಚ್ಚು ಜನ ಮಹಿಳೆಯರು. ಅದರಲ್ಲಿಯೂ ವಯಸ್ಕರು, ಅಜ್ಜಿಯರು ತಮ್ಮ ಪತಿಯರೊಟ್ಟಿಗೆ, ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ ಬಂದಿದ್ದರು. ಆಕ್ಷನ್ ದೃಶ್ಯಗಳು ಬಂದಾಗ ಕಿರುಚುತ್ತಿದ್ದರು, ಚಪ್ಪಾಳೆ ತಟ್ಟುತ್ತಿದ್ದರು. ನನಗೆ ಭರವಸೆ ಇದೆ, ಮುಂದಿನದ್ದು ಇದಕ್ಕಿಂತಲೂ ದೊಡ್ಡದಾಗಿ ಹಾಗೂ ಉತ್ತಮ ಆಗಿ ಇರುತ್ತದೆ' ಎಂದಿದ್ದಾರೆ ಅಮಲಾ.
ಏಜೆಂಟ್ ಬಿಡುಗಡೆಯಾದ ಮೊದಲ ದಿನದಲ್ಲಿ ಸುಮಾರು 7 ಕೋಟಿ ರೂಪಾಯಿ ಗಳಿಸಿದೆ ಎನ್ನಲಾಗಿದೆ. ಇದೇ ಕಲೆಕ್ಷನ್ ಎಲ್ಲಾ ಭಾಷೆಯಲ್ಲೂ ಆಗಲಿದೆ ಎನ್ನುವುದು ಸಿನಿಮಾತಂಡ ನಿರೀಕ್ಷೆಯಲ್ಲಿದೆ. ಸುಮಾರು 80 ಕೋಟಿ ಬಜೆಟ್‌ನಲ್ಲಿ ಏಜೆಂಟ್ ಮಾಡಲಾಗಿದೆ. ಆದರೆ ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯ ಕಲೆಕ್ಷನ್ ಮಾಡಿಲ್ಲ. ಮುಂಬರುವ ದಿನಗಳಲ್ಲಿ ಹೆಚ್ಚಿನ ಕಲೆಕ್ಷನ್ ಮಾಡುತ್ತಾ ಎಂದು ಕಾದುನೋಡಬೇಕಿದೆ. ಈ ಸಿನಿಮಾ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್-2 ಸಿನಿಮಾ ರಿಲೀಸ್ ಆದ ಸಮಯದಲ್ಲೇ ಬಂದಿರುವುದರಿಂದ ದೊಡ್ಡ ಹೊಡೆದ ಬಿದ್ದಿದೆ ಎನ್ನಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಹೆಚ್ಚು ಗಳಿಕೆ ಮಾಡುತ್ತಾ ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.