ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಯುಗಾದಿ ಹಬ್ಬದಂದು ಮುಂಬೈ ಹೋಟೆಲ್‌ನಲ್ಲಿ ಒಟ್ಟಿಗೆ ಸಿಕ್ಕಿಬಿದ್ದಿದ್ದಾರೆ. ಈ ಹಿಂದೆ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರೂ, ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಮೌನವಹಿಸಿದ್ದಾರೆ.
ಕನ್ನಡತಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗು ಚಿತ್ರನಟ ವಿಜಯ್ ದೇವರಕೊಂಡ ಅವರು ಯುಗಾದಿ ಹಬ್ಬದಲ್ಲಿ ಮುಂಬೈನ ಹೋಟೆಲ್ ಒಂದರಲ್ಲಿ ಒಟ್ಟಿಗೆ ಜಾಣಿಸಿಕೊಂಡಿದ್ದಾರೆ. ಈ ಮೂಲಕ ಒಟ್ಟಿಗೆ ಡೇಟಿಂಗ್ ಮಾಡುತ್ತಿರುವುದಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿದ್ದು, ಇಬ್ಬರೂ ಮದುವೆ ಮಾಡಿಕೊಳ್ಳುತ್ತಾರೆ ಎಂಬ ಅನುಮಾನಕ್ಕೆ ಉತ್ತರವಂತೂ ಸಿಕ್ಕಿಲ್ಲ.
ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ರಕ್ಷಿತ್ ಶೆಟ್ಟಿ ಅವರೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಈ ನಿಶ್ಚಿತಾರ್ಥ ಮುರಿದುಬಿದ್ದ ನಂತರ ರಶ್ಮಿಕಾ ಮಂದಣ್ಣ ಅವರಿಗೆ ಲಕ್ ಹೊಡಿದಿದೆ. ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲಿ ಮಿಂಚಿದ್ದಾರೆ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕ್ಯಾಮೆರಾಗಳ ಕಣ್ಣಿಗೆ ಇಬ್ಬರೂ ಹತ್ತಾರು ಬಾರಿ ಸಿಕ್ಕಿಬಿದ್ದಿದ್ದಾರೆ. ಜೊತೆಗೆ, ವಿದೇಶ ಪ್ರವಾಸಕ್ಕೂ ಒಟ್ಟಿಗೆ ಹೋಗಿ ಬಂದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಇಬ್ಬರೂ ತಮ್ಮ ನಡುವಿನ ಸಂಬಂಧವನ್ನು ಮಾತ್ರ ಬಿಚ್ಚಿಟ್ಟಿಲ್ಲ. ಇಬ್ಬರೂ ಪರಸ್ಪರ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಛೀಮಾರಿ ಹಾಕಿದ್ಮೇಲೆ ಎಚ್ಚೆತ್ತುಕೊಂಡ ರಶ್ಮಿಕಾ ಮಂದಣ್ಣ; ಈಗ ಬಂತು ನೋಡಿ ಕನ್ನಡದ ಮೇಲೆ ಪ್ರೀತಿ!
ಇದೀಗ ಪುನಃ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮುಂಬೈನ ಖಾಸಗಿ ಹೋಟೆಲ್ ಒಂದರಲ್ಲಿ ಒಟ್ಟಿಗೆ ಇರುವಾಗಲೇ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಬಿದ್ದಿದ್ದಾರೆ. ಇದೀಗ ಅವರ ವೀಡಿಯೋಗಳು ವೈರಲ್ ಆಗುತ್ತಿವೆ. ಯುಗಾದಿ ಹಬ್ಬದ ವೇಳೆ ಇಬ್ಬರೂ ಸಿನಿಮಾದಿಂದ ಬಿಡುವು ಪಡೆದುಕೊಂಡು ಹೋಟೆಲ್‌ಗೆ ಬಂದಿದ್ದಾರೆ. ಇನ್ನು ಹೋಟೆಲ್ ಒಳಗೆ ಬರುವಾಗ ಮಾಸ್ಕ್ ಧರಿಸಿಕೊಂಡು ಬೇರೆ ಬೇರೆ ಕಾರಿನಲ್ಲಿ ಬಂದಿದ್ದು, ಆಗ ಪಾಪರಾಜಿಗಳನ್ನು ನೋಡಿದ ರಶ್ಮಿಕಾ ಫೋಟೋ ತೆಗೆದು ಪೋಸ್ ಕೊಟ್ಟು ಅವರನ್ನು ಮಾತನಾಡಿಸಿ, ಯುಗಾದಿ ಶುಭಾಶಯಗಳನ್ನು ಹೇಳಿದ್ದಾರೆ. ಆದರೆ, ಮತ್ತೊಂದು ಕಾರಿನಲ್ಲಿ ಬಂದ ವಿಜಯ್ ದೇವರಕೊಂಡ ತಲೆಗೆ ಸ್ಕಾರ್ಫ್ ಹಾಗೂ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಯಾರಿಗೂ ತಾವು ಹೀರೋ ಎಂಬುದನ್ನು ತೋರಿಸಿಕೊಳ್ಳದೇ ಸೀದಾ ಹೋಟೆಲ್ ಒಳಗೆ ಹೋಗಿದ್ದಾರೆ.
ಇನ್ನು ಸಿಕಂದರ್ ಸಿನಿಮಾ ಬಿಡುಗಡೆ ಆಗಿದ್ದು, ಸಿನಿಮಾದ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ. ಇನ್ನು ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಒಟ್ಟಿಗೆ ಗೀತ ಗೋವಿಂದಂ ಹಾಗೂ ಡಿಯರ್ ಕಾಮ್ರೆಡ್ ಸಿನಿಮಾಗಳನ್ನು ಮಾಡಿದ್ದಾರೆ. ಇಬ್ಬರೂ ಒಟ್ಟಿಗೆ ನಟಿಸಿದ ಸಿನಿಮಾಗಳು ಭಾರೀ ಹಿಟ್ ಆಗಿವೆ. ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಒಟ್ಟಿಗೆ ಮಾಡಿದ್ದರಿಂದ ಆಗಿನಿಂದಲೇ ಇಬ್ಬರ ನಡುವೆ ಸಂಬಂಧ ಏರ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ರಶ್ಮಿಕಾ ವೃತ್ತಿಜೀವನದ ಟಾಪ್ 5 ಬೆಸ್ಟ್ ಮೂವೀಸ್: ಗೀತಾ ಗೋವಿಂದಂನಿಂದ ಪುಷ್ಪ 2 ವರೆಗೆ