ಸಿಕಂದರ್ ಸಿನಿಮಾ ಅಬ್ಬರ ಒಂದೆಯಾದರೆ, ಮತ್ತೊಂದಡೆ ಹಿಂದೂ ವಿರೋಧಿ ಹಣೆಪಟ್ಟಿಯಿಂದ ವೇಗವಾಗಿ ಮುನ್ನುಗ್ಗುತ್ತಿದ್ದ ಎಲ್2 ಎಂಪುರಾನ್ ಸಿನಿಮಾಗೆ ಹಿನ್ನಡೆಯಾಗಿದೆ.
ಮುಂಬೈ(ಮಾ.30) ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ ಅಭಿನಯದ ಸಿಕಂದರ್ ಸಿನಿಮಾ ಬಿಡುಗಡೆಯಾಗಿದೆ. ಸಲ್ಮಾನ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಸೂಪರ್ ಹಿಟ್ ಚಿತ್ರಗಳ ನಾಯಕಿ ರಶ್ಮಿಕಾ ಮಂದಣ್ಣ , ಸಲ್ಮಾನ್ ಖಾನ್‌ಗೆ ಜೋಡಿಯಾಗಿದ್ದಾರೆ. ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಲ್ಮಾನ್ ಅಭಿಮಾನಿಗಳು ಇದು ಈದ್‌ಗೆ ನೀಡಿದ ಉತ್ತಮ ಉಡುಗೊರೆ ಎಂದಿದ್ದಾರೆ. ಇದು ಬ್ಲಾಕ್‌ಬಸ್ಟರ್ ಸಿನಿಮಾ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಸಲ್ಮಾನ್ ಖಾನ್ ಸಿಕಂದರ್ ಅಬ್ಬರದಿಂದ ಉತ್ತರ ಭಾರತದ ಪ್ರಮುಖ ಥಿಯೇಟರ್‌ಗಳಲ್ಲಿ ಎಲ್2 ಎಂಪುರಾನ್ ಸಿನಿಮಾಗೆ ಹಿನ್ನಡೆಯಾಗಿದೆ. ಬಿಡುಗಡೆಯಾದ ಬೆನ್ನಲ್ಲೇ ಹಿಂದೂ ವಿರೋಧಿ ಹಣೆ ಪಟ್ಟಿ ಹೊತ್ತುಕೊಂಡ ಎಂಪುರಾನ್ ಸಿನಿಮಾಗೆ ಇದೀಗ ಸಿಕಂದರ್ ಸಿನಿಮಾ ಅಬ್ಬರವೂ ಹೊಡತೆ ನೀಡಿದೆ.
ಮಲಯಾಳ ನಟ ಮೋಹನ್ ಲಾಲ್ ಅಭಿನಯದ ‘ಎಲ್2: ಎಂಪುರಾನ್’ ಚಿತ್ರವನ್ನು ಬಿಡುಗಡೆಯಾದ ಬೆನ್ನಲ್ಲೇ ಆರ್‌ಎಸ್‌ಎಸ್ ಸಂಬಂಧಿತ ಪತ್ರಿಕೆ ‘ಆರ್ಗನೈಸರ್’ ಹಾಗೂ ಬಲಪಂಥೀಯರು ವಿರೋಧಿಸಿದ್ದರು. ಸೋಶಿಯಲ್ ಮೀಡಿಯಾಗಳಲ್ಲೂ ಎಂಪುರಾನ್ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮಲೆಯಾಳಂ ಸಿನಿಮಾ ಗಳಿಕೆಯಲ್ಲಿ ಹಲವು ದಾಖಲೆ ಬರೆದಿದ್ದರೂ ಹಿಂದೂ ವಿರೋಧಿ ಆರೋಪ, ಗಳಿಕೆ ವೇಗವನ್ನು ಕಡಿತಗೊಳಿಸಿತ್ತು. ಈ ಸಿನಿಮಾ ಹಿಂದೂ ವಿರೋಧಿ ಮತ್ತು ಬಿಜೆಪಿ ವಿರೋಧಿ ಯಾಗಿದೆ ಅನ್ನೋ ಗಂಭೀರ ಆರೋಪಗಳು ಕೇಳಿಬಂದಿತ್ತು.
RSS ಟೀಕೆ; ಕೊನೆಗೂ ದೃಶ್ಯ ಬದಲಾಯಿಸಲು ಒಪ್ಪಿದ ಮೋಹನ್‌ಲಾಲ್ L2: Empuraan Movie!
2002ರ ಗೋಧ್ರಾ ಗಲಭೆ ಕಥಾವಸ್ತುವಿನ ಚಿತ್ರ ಇದಾಗಿದೆ. ಈ ಬಗ್ಗೆ ಆರ್‌ಎಸ್‌ಎಸ್ ಸಂಬಂಧಿತ ಆರ್ಗನೈಸರ್ ವಾರಪತ್ರಿಕೆಯ ವೆಬ್‌ಸೈಟ್‌ನಲ್ಲಿ ಲೇಖನ ಮಾ.28ಕ್ಕೆ ಪ್ರಕಟಿಸಿದೆ. ‘ಚಲನಚಿತ್ರವು ಐತಿಹಾಸಿಕ ನಿಜವಾದ ಘಟನೆಗಳ ಬಗ್ಗೆ ಕೇಂದ್ರೀಕರಿಸುವ ಬದಲು 2002ರ ಗೋಧ್ರಾ ನಂತರದ ಗಲಭೆಯ ಹಿನ್ನೆಲೆಯನ್ನು ಬಳಸಿಕೊಂಡು ಸಾಮಾಜಿಕ ಸಾಮರಸ್ಯಕ್ಕೆ ಗಂಭೀರ ಬೆದರಿಕೆಯನ್ನು ಒಡ್ಡುವ ವಿಭಜಕ, ಹಿಂದೂ ವಿರೋಧಿ ನಿರೂಪಣೆ ಮುಂದಿಟ್ಟಿದೆ’ ಎಂದಿದೆ.
‘ಈ ಚಿತ್ರವು ಕೇವಲ ಮತ್ತೊಂದು ಚಲನಚಿತ್ರವಲ್ಲ. ಬದಲಾಗಿ ಈಗಾಗಲೇ ಛಿದ್ರಗೊಂಡಿರುವ ಭಾರತವನ್ನು ಮತ್ತಷ್ಟು ವಿಭಜಿಸುವ ಬೆದರಿಕೆ ಹಾಕುವ ಹಿಂದೂ ವಿರೋಧಿ ಮತ್ತು ಬಿಜೆಪಿ ವಿರೋಧಿ ನಿರೂಪಣೆ ಹರಡುವ ಮಾಧ್ಯಮವಾಗಿದೆ. ಗುಜರಾತಿನಲ್ಲಿ ನಡೆದ ಗೋಧ್ರಾ ಗಲಭೆಯ ಸೂಕ್ಷ್ಮ ವಿಷಯವನ್ನು ಸ್ಪಷ್ಟ ಮತ್ತು ಆತಂಕಕಾರಿ ಪಕ್ಷಪಾತದೊಂದಿಗೆ ಚಿತ್ರೀಕರಿಸಿದೆ’ ಎಂದೂ ದೂರಿದೆ.
ಈ ಆರೋಪಗಳ ಜೊತೆಗೆ ಇದೀಗ ಉತ್ತರ ಭಾರತಗಳಲ್ಲಿ ಸಿಕಂದರ್ ಸಿನಿಮಾಗೆ ಸಿಗುತ್ತಿರುವ ಸ್ಪಂದನೆಯಿಂದ ಎಂಪುರಾನ್ ಚಿತ್ರಕ್ಕೆ ತೀವ್ರ ಹೊಡೆತ ಬಿದ್ದಿದೆ. ಸಿಕಂದರ್ ಸಿನಿಮಾ ಮೊದಲ ದಿನ 70 ಕೋಟಿ ರೂಪಾಯಿಗೂ ಅಧಿಕ ಗಳಿಕೆಮಾಡುವ ಸಾಧ್ಯತೆ ಇದೆ. ಸಿಕಂದರ್ ಚಿತ್ರವನ್ನು ಎ.ಆರ್. ಮುರುಗದಾಸ್ ನಿರ್ದೇಶಿಸಿದ್ದಾರೆ. 2 ವರ್ಷಗಳ ಬಳಿಕ ಸಲ್ಲು ಅಭಿನಯದ ಚಿತ್ರ ಹೊರಬಂದಿದೆ. ಅವರ ಅಭಿಮಾನಿಗಳಲ್ಲಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ. ಈ ಹಿಂದೆಯೂ ರಂಜಾನ್ ದಿನವೇ ಬಿಡುಗಡೆಯಾದ ಅವರ ‘ವಾಂಟೆಡ್’, ‘ಬಾಡಿಗಾರ್ಡ್’, ‘ಕಿಕ್’, ‘ದಬಾಂಗ್’ ಮೊದಲಾದ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿವೆ.
ರಶ್ಮಿಕಾ ಬಗ್ಗೆ ಅಮೀರ್ ಖಾನ್ ಬಳಿ ಸಲ್ಮಾನ್ ಖಾನ್ ಹೀಗೆ ಹೇಳಿದ್ರು.. ಟೀಕೆ ಮಾಡೋರ ಕಥೆ ಗೋವಿಂದ..?!