ರಶ್ಮಿಕಾ ಮಂದಣ್ಣ ಅಭಿನಯದ 'ಸರಿಲೇರು ನೀಕೆವ್ವರು' ಚಿತ್ರದ ಮೂರನೇ ಹಾಡು 'ಹಿ ಈಸ್ ಸೋ ಕ್ಯೂಟ್' ರಿಲೀಸ್ ವಿಚಾರವನ್ನು ವಿಭಿನ್ನವಾಗಿ ಹೇಳಿದ್ದಾರೆ.
ಚಂದನವನದ ಸುಂದರ ಗೊಂಬೆ ರಶ್ಮಿಕಾ ಮಂದಣ್ಣ ಈಗ ಟಾಲಿವುಡ್ ಲೋಕದ ಬಹು ಬೇಡಿಕೆಯ ನಟಿ. ಸ್ಟಾರ್ ನಟರೊಂದಿಗೆ ಮಿಂಚುತ್ತಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ ಪ್ರೇಕ್ಷಕರನ್ನು ಮನರಂಜಿಸುತ್ತಿದ್ದಾರೆ.
ಸಿಹಿ ಮುತ್ತು, ಸಿಹಿ ಮುತ್ತು ಇನ್ನೊಂದು..! ರಶ್ಮಿಕಾ ಕೊಟ್ಟಿದ್ದು ಯಾರಿಗೆ?
ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ' ಸರಿಲೇರು ನೀಕೆವ್ವರು' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಶ್ಮಿಕಾ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದಾರೆ. ಈಗಾಗಲೆ ರಿಲೀಸ್ ಆಗಿರುವ ಟೀಸರ್ ಮತ್ತು ಎರಡು ಹಾಡುಗಳು ಯೂಟ್ಯೂಬ್ ಟ್ರೆಂಡಿಂಗ್ ಲಿಸ್ಟ್ ನಲ್ಲಿದೆ. ಈಗ ಚಿತ್ರದ ಮೂರನೇ ಹಾಡಿನ ರಿಲೀಸ್ ವಿಚಾರವನ್ನು ರಶ್ಮಿಕಾ ಡ್ಯಾನ್ಸ್ ಮಾಡುತ್ತಾ ದಿನಾಂಕ ರಿವೀಲ್ ಮಾಡಿದ್ದಾರೆ.
ರಶ್ಮಿಕಾ ಬಾಲಿವುಡ್ ಸಿನಿಮಾ ರಿಜೆಕ್ಟ್ ಮಾಡಲು ಇದೇ ಕಾರಣ!
ಚಿತ್ರದ ಮೂರನೇ ಹಾಡು 'ಹಿ ಈಸ್ ಸೋ ಕ್ಯೂಟ್' ಸಾಹಿತ್ಯವಿರುವ ಹಾಡು. ಇದೇ ಡಿಸೆಂಬರ್ 16 ರಂದು ರಿಲೀಸ್ ಆಗುತ್ತಿದ್ದು ಟಿಕ್ ಟಾಕ್‌ನಲ್ಲಿ ಹೆಜ್ಜೆ ಹಾಕುತ್ತಾ ಸಂಭ್ರಮಿಸಿದ್ದಾರೆ. ರಶ್ಮಿಕಾ ಡ್ಯಾನ್ಸ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
The third single from is releasing on 16th Dec @ 5:04 PM.
Can’t wait for you guys to hear it 🙈✨ pic.twitter.com/PG5PmxhKvT