
ಮಾನಸಿಕ ಆರೋಗ್ಯದ ಬಗ್ಗೆ ದೀಪಿಕಾ ಪಡುಕೋಣೆ ಆಗಾಗ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಈ ಕೆಲಸಕ್ಕಾಗಿ 26 ನೇ ಕ್ರಿಸ್ಟಲ್ ಅವಾರ್ಡ್‌ಗೆ ಭಾಜನರಾಗಿದ್ದಾರೆ. ಭಾರತದಿಂದ ಆಯ್ಕೆಯಾದ ಮೊದಲ ನಟಿ ಇವರು.
ಸಮಾಜದಲ್ಲಿ ಗುರುತರವಾದ ಬದಲಾವಣೆ ತಂದ ಕಲಾವಿದರು, ಸಾಧಕರಿಗೆ ಕ್ರಿಸ್ಟಲ್ ಅವಾರ್ಡನ್ನು ನೀಡಲಾಗುತ್ತದೆ. ಪ್ರಶಸ್ತಿ ಬಂದಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ದೀಪಿಕಾ ಕ್ರಿಸ್ಟಲ್ ಅವಾರ್ಡ್ ನನಗೆ ಬಂದಿರುವುದು ತುಂಬಾ ಸಂತೋಷ. ಈ ಪ್ರಶಸ್ತಿಯನ್ನು ಸ್ಟ್ರೆಸ್, ಡಿಪ್ರೆಶನ್, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸಮರ್ಪಿಸುತ್ತಿದ್ದೇನೆ' ಎಂದು ಹೇಳಿದರು.
'ಚಪಕ್' ಟ್ರೇಲರ್ ನೋಡಿ ವೇದಿಕೆ ಮೇಲೆ ಕಣ್ಣೀರಿಟ್ಟ ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ ಸದ್ಯ ಮೇಘನಾ ಗುಲ್ಜಾರ್ ಅವರ 'ಚಪಕ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆfಯಸಿಡ್ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಜೀವನಾಧಾರಿತ ಕಥೆಯಿದು. ಈಗಾಗಲೇ 'ಚಪಕ್' ಟೀಸರ್ ರಿಲೀಸ್ ಅಗಿದ್ದು ಭಾರೀ ಮೆಚ್ಚುಗೆ ಪಡೆದುಕೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.