ಹಸಿಬಿಸಿ ಸೀನ್‌ಗಳಲ್ಲಿ ನಟಿಸುವಾಗ ಈ ನಟನಿಗೆ ಕೈ ಕಾಲು ನಡುಗುತ್ತಂತೆ!

By Suvarna News  |  First Published Dec 15, 2019, 11:32 AM IST

ಸಿನಿಮಾಗಳಲ್ಲಿ ತೆರೆ ಮೇಲೆ ಹಸಿಬಿಸಿ ದೃಶ್ಯಗಳನ್ನು ನೋಡುವುದು ಸುಲಭ. ಆದರೆ ಅದನ್ನು ಮಾಡುವುದು ನಿಜಕ್ಕೂ ಒಂದು ಟಾಸ್ಕ್. ಇಂಟಿಮೇಟ್ ಸೀನ್‌ಗಳ ಬಗ್ಗೆ ನಟರೊಬ್ಬರು ಮಾತನಾಡಿರುವುದು ಗಮನ ಸೆಳೆದಿದೆ. 


'ಕಾರ್ವಾನ್' ಸಿನಿಮಾ ಮೂಲಕ ಬಾಲಿವುಡ್‌ಗೆ ಕಾಲಿಟ್ಟ  ದುಲ್ಕರ್ ಸಲ್ಮಾನ್  ಭರವಸೆಯನ್ನು ಮೂಡಿಸಿದ ನಟ.  ಮಲಯಾಳಂನಲ್ಲಿ ಉಸ್ತಾದ್ ಹೋಟೆಲ್, ನಜಾನ್, ವಯಾಯಿ ಮೋದಿ ಪೇಸಾವಂ, ಓ ಕಾದಲ್ ಕಣ್ಮಣಿ ಹಾಗೂ ಚಾರ್ಲಿ ಸಿನಿಮಾಗಳಲ್ಲಿ ನಟಿಸಿ ಒಂದು ಮಟ್ಟಿಗೆ ಹೆಸರು ಮಾಡಿದ್ದಾರೆ. 

ಐರಾ ಬರ್ತಡೇ ವಿಡಿಯೋ ರಿಲೀಸ್ ಮಾಡಿದ ಯಶ್

Tap to resize

Latest Videos

undefined

ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ಇವರು ಹೇಳಿರುವ ಹೇಳಿಕೆ ಗಮನ ಸೆಳೆದಿದೆ.  

ಸಿನಿಮಾಗಳಲ್ಲಿ Intimate seen ಮಾಡುವಾಗ ನನ್ನ ಕೈ ಕಾಲುಗಳು ನಡುಗುತ್ತವೆ. ಸ್ವಲ್ಪ ಭಯವಾಗುತ್ತದೆ. ನಮ್ಮ ಹೆಂಡತಿ, ತಂಗಿ, ಮಗಳು, ಅಮ್ಮ ಆದರೆ ಪ್ರೀತಿ ತೋರಿಸುವುದು ಸುಲಭ. ಅದೇ ತೆರೆ ಮೇಲೆ ಬೇರೆಯವರ ಜೊತೆ ಪ್ರೀತಿಯಿಂದ ನಟಿಸೋದು ಕಷ್ಟ. ಅವರು ಏನಂದುಕೊಳ್ಳುತ್ತಾರೋ ಎಂಬ ಭಯ ಇದ್ದೇ ಇರುತ್ತದೆ' ಎಂದು ಹೇಳಿದ್ದಾರೆ. 

 

click me!