ಈ ಹಿಂದೆಯೇ ನಟಿ ರಶ್ಮಿಕಾ ಮಂದಣ್ಣ ದಕ್ಷಿಣ ಚಿತ್ರರಂಗದವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದಾಗಲೇ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಹೆಸರುವಾಸಿಯಾಗಿರೋ ಇವರು ನಿಧಾನವಾಗಿ ಬಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದಾಗಲೇ ನ್ಯಾಷನಲ್ ಕ್ರಶ್ ಎಂಬ ಪಟ್ಟ ಕೂಡ ಸಿಕ್ಕಿದೆ. ಅನಿಮಲ್ ಚಿತ್ರದ ಬಳಿಕ ಇವರಿಗೆ ಡಿಮ್ಯಾಂಡ್ ಕೂಡ ಜಾಸ್ತಿಯಾಗಿದೆ. ಆದರೆ ಈ ಹಿಂದೆ ಕನ್ನಡ ಚಿತ್ರೋದ್ಯಮದ ಜೊತೆ ಕಿರಿಕ್ ಮಾಡಿಕೊಂಡಿದ್ದ ರಶ್ಮಿಕಾಗೆ ಇದಾಗಲೇ ಕನ್ನಡ ಚಲನಚಿತ್ರೋದ್ಯಮವು ನಿಷೇಧಿಸಿದೆ. ಈಗ ಟಾಲಿವುಡ್ ಕೂಡ ಇದೇ ರೀತಿ ಮಾಡಬೇಕು. ಈಕೆ ವಿರುದ್ಧ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ದಕ್ಷಿಣವೇ ಈಕೆಯ ಬೇರು. ಆದರೆ ತನ್ನ ಸಕ್ಸಸ್ ಅಡಿಪಾಯವನ್ನು ಈಕೆ ಗೌರವಿಸುತ್ತಿಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೂಗು ಜೋರಾಗುತ್ತಿದೆ.
ಅಷ್ಟಕ್ಕೂ ರಶ್ಮಿಕಾ ಸೌತ್ನವರ ಕೆಂಗಣ್ಣಿಗೆ ಗುರಿಯಾಗುತ್ತಿರುವುದಕ್ಕೆ ಕಾರಣವೂ ಇದೆ. ಬಾಲಿವುಡ್‌ಗೆ ಕಾಲಿಡುತ್ತಿದ್ದಂತೆಯೇ ಮತ್ತೆ ದಕ್ಷಿಣ ಭಾರತದ ಚಲನಚಿತ್ರಗಳ ಬಗ್ಗೆ ಕಿರಿಕ್ ಮಾಡಿಕೊಂಡಿದ್ದಾರೆ ನಟಿ. ಇದು ನೆಟ್ಟಿಗರನ್ನು ಹಾಗೂ ಸೌತ್ ಇಂಡಸ್ಟ್ರಿಯನ್ನು ಕೆರಳಿಸಿದೆ. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ, ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮಿಷನ್ ಮಜ್ನು ಸಿನಿಮಾದ ಕುರಿತು ಮಾತನಾಡುತ್ತಿದ್ದ ವೇಳೆ ಅವರು ಆಡಿರುವ ಮಾತುಗಳಿಗೆ ಜನರು ಕಿಡಿಕಿಡಿಯಾಗುತ್ತಿದ್ದಾರೆ. ಅಷ್ಟಕ್ಕೂ ನಟಿ ಹೇಳಿದ್ದೇನೆಂದರೆ, ಬಾಲಿವುಡ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳಿಗೆ ಅವಕಾಶವಿದೆ. ಇದೊಂದು ಒಳ್ಳೆಯ ಸಂಪ್ರದಾಯ ಕೂಡ. ಆದರೆ ದಕ್ಷಿಣದಲ್ಲಿ ಹಾಗಿಲ್ಲ. ಅಲ್ಲಿ ಏನಿದ್ದರೂ ಕೇವಲ ಮಸಾಲೆ ಹಾಡುಗಳು ಮತ್ತು ಐಟಂ ಸಾಂಗ್ಗಳು. ಇವೇ ಹೆಚ್ಚಾಗಿವೆ ಎಂದಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸುತ್ತಲೇ ಅಭಿಮಾನಿಯ ಮೇಲೆ ರಶ್ಮಿಕಾ ಮಂದಣ್ಣ ಗರಂ ಆಗಿದ್ದೇಕೆ?
ಮಿಷನ್ ಮಜ್ನು ಚಿತ್ರದಲ್ಲಿ ನನ್ನ ಇಷ್ಟದ ರೊಮ್ಯಾಂಟಿಕ್ ಹಾಡಿಗೆ ಅವಕಾಶ ಸಿಕ್ಕಿದೆ. ಆದರೆ ದಕ್ಷಿಣದಲ್ಲಿ ಇಂಥ ಹಾಡುಗಳೇ ಇಲ್ಲ. ಅಲ್ಲಿ ಏನಿದ್ದರೂ ಮಾಸ್ ಮಸಾಲಾ ಹಾಡುಗಳು, ಐಟಂ ಸಾಂಗ್ಗಳು ಮತ್ತು ಡ್ಯಾನ್ಸ್ಗಳೇ ಹೆಚ್ಚಾಗಿವೆ. 'ಮಿಷನ್ ಮಜ್ನು' ಚಿತ್ರದ ನನ್ನ ಮೊದಲ ಬಾಲಿವುಡ್ ರೊಮ್ಯಾಂಟಿಕ್ ಹಾಡಿಗೆ ನರ್ತಿಸಲು ನಾನು ಉತ್ಸುಕಳಾಗಿದ್ದೇನೆ. ಏಕೆಂದರೆ ಇದು ನನಗೆ ತುಂಬಾ ಇಷ್ಟ. ಸೌತ್ನಲ್ಲಿ ಇಂಥ ಅವಕಾಶಗಳೇ ಸಿಗಲಿಲ್ಲ ಎಂದಿದ್ದಾರೆ ರಶ್ಮಿಕಾ.
ರಶ್ಮಿಕಾ ಈ ಹಿಂದೆ 'ಕಾಂತಾರ' ಚಿತ್ರದ ಮೂಲಕ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿ ನಿರ್ದೇಶನದ 'ಕಿರಿಕ್ ಪಾರ್ಟಿ' ಕನ್ನಡ ಚಲನಚಿತ್ರದ ಮೂಲಕ ತನ್ನನ್ನು ಬಿಡುಗಡೆ ಮಾಡಿದ ಪ್ರೊಡಕ್ಷನ್ ಹೌಸ್‌ಗೆ ಅಸಮ್ಮತಿ ವ್ಯಕ್ತಪಡಿಸಿ ವಿವಾದಕ್ಕೆ ಸಿಲುಕಿದ್ದರು.ಈಗ ಮತ್ತೊಮ್ಮೆ ವಿವಾದ ಹುಟ್ಟಿಸಿಕೊಂಡಿದ್ದಾರೆ.
ವಿಮಾನದಲ್ಲಿ ತಾಂತ್ರಿಕ ಸಮಸ್ಯೆ: ಸಾವಿನ ಬಾಯಿಗೆ ಹೋಗಿ ಬಂದ ಅನುಭವ ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.