ಮೆಟ್ರೋ ರೈಲಿನಲ್ಲಿ ಬಾಲಿವುಡ್ ನಟಿ ನೋರಾ ಫತೇಹಿ ಸಕತ್ ಡ್ಯಾನ್ಸ್ ಮಾಡಿದ್ದಾರೆ. ಅಷ್ಟಕ್ಕೂ ನಟಿಗೆ ಏಕಾಏಕಿ ಏನಾಯ್ತು ಅಂತೀರಾ?
ಬಾಲಿವುಡ್ನ ಹಾಟ್ ಬ್ಯೂಟಿ ಎಂದೇ ಫೇಮಸ್ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್ನೆಸ್ನಿಂದಲೇ ಫೇಮಸ್ ಆಗಿರೋ ನಟಿ ಈಕೆ. ಕಳೆದ ತಿಂಗಳು ಈ ನಟಿಗೆ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ನೋರಾ ಫತೇಹಿ ಐಟಂ ಗರ್ಲ್ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ. ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್ ಮಾಡಿದರೆ ಕಣ್ ಕಣ್ ಬಿಟ್ಟು ನೋಡಬೇಕು ಹಾಗಿರುತ್ತದೆ!
ಅಂದಹಾಗೆ ಈಗ ಮೆಟ್ರೋ ರೈಲು ಹತ್ತಿ ಅಲ್ಲಿ ಕುಣಿದು ಕುಪ್ಪಳಿಸಿದ್ದಾರೆ ನೋರಾ. ಇವರ ಈ ಡ್ಯಾನ್ಸ್ಗೆ ಪ್ರಯಾಣಿಕರು ಫುಲ್ ಸುಸ್ತಾಗಿದ್ದಾರೆ. ಅಷಟಕ್ಕೂ ನಟಿ ರೈಲಿನಲ್ಲಿ ಒಬ್ಬರೇ ಕುಣಿಯಲಿಲ್ಲ. ಬದಲಿಗೆ ತಂಡದ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ರೀತಿ ಅವರು ನರ್ತಿಸಿದ್ದು, ಮುಂಬೈ ಮೆಟ್ರೋ ರೈಲಿನಲ್ಲಿ. ಹಾಗಂತ ಈಕೆಯನೂ ಸುಮ್ಮನೇ ಕುಣಿದಿಲ್ಲ. ಬದಲಿಗೆ ತಮ್ಮ ಮುಂಬರುವ ‘ಮಡ್ಗಾಂವ್ ಎಕ್ಸ್ ಪ್ರೆಸ್’ ಸಿನಿಮಾದ ಪ್ರಚಾರಕ್ಕಾಗಿ ಡ್ಯಾನ್ಸ್ ಮಾಡಿದ್ದಾರೆ. ಚಿತ್ರ ತಾರೆಯರು ತಮ್ಮ ಚಿತ್ರದ ಪ್ರಮೋಷನ್ಗಾಗಿ ಈಗೀಗ ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ. ‘ಮಡ್ಗಾಂವ್ ಎಕ್ಸ್‌ಪ್ರೆಸ್’ನ ತಂಡ ಈ ರೀತಿಯ ಮಾರ್ಗ ಆಯ್ದುಕೊಂಡಿದೆ ಅಷ್ಟೇ.
ಶೂಟಿಂಗ್ನಲ್ಲಿ ಜಾರಿಬಿದ್ದ ಹಾಟ್ ಬ್ಯೂಟಿ ನೋರಾ ಫತೇಹಿ: ಛೇ... ಹೀಗೆಲ್ಲಾ ನಟಿಯ ಕಾಲೆಳೆಯೋದಾ ನೆಟ್ಟಿಗರು?
‘ಮಡ್ಗಾಂವ್ ಎಕ್ಸ್‌ಪ್ರೆಸ್’ ಅನ್ನು ಕುನಾಲ್ ಖೇಮು ನಿರ್ದೇಶಿದ್ದಾರೆ. ಇದರ ಮೊದಲ ಹಾಡು ‘ಬೇಬಿ ಬ್ರಿಂಗ್ ಇಟ್ ಆನ್’ ಕೂಡ ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಹಾಡಿಗೆ ನೋರಾ ಫತೇಲಿ ಮತ್ತವರ ತಂಡ ಡ್ಯಾನ್ಸ್ ಮಾಡಿದೆ. ನೋರಾ ಜೊತೆಗೆ ‘ಮಡ್ಗಾಂವ್ ಎಕ್ಸ್‌ಪ್ರೆಸ್’ನ ಇಡೀ ತಂಡ ಮುಂಬೈ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ನೋರಾ ಬ್ಲ್ಯಾಕ್ ಕಲರ್ ಫುಲ್ ಬಾಡಿಕಾನ್ ಡ್ರೆಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಬಹುಶಃ ಅವರು ಈ ರೀತಿ ಫುಲ್ ಡ್ರೆಸ್ನಲ್ಲಿ ಕಾಣಿಸಿಕೊಳ್ಳುವುದು ತೀರಾ ಅಪರೂಪ. ಆ ಮಟ್ಟಿಗೆ ಈಗ ಘನತೆ ಕಾಯ್ದುಕೊಂಡಿದ್ದಾರೆ. ಹೇಳಿ ಕೇಳಿ ಅದು ಮುಂಬೈ ಮೆಟ್ರೊ. ಕೇಳಬೇಕೆ? ಕಿಕ್ಕಿರಿದ ಜನರ ನಡುವೆ ಮೆಟ್ರೋದಲ್ಲಿ ನಟಿ ಡ್ಯಾನ್ಸ್ ಮಾಡಿದ್ದಾರೆ. ಈ ವೇಳೆ ಅಭಿಮಾನಿಗಳು ಸೆಲ್ಫಿಗೆ ಮುಗಿಬಿದ್ದರೆ, ಇನ್ನು ಹಲವು ಪ್ರಯಾಣಿಕರು ಹೈರಾಣಾಗಿ ಹೋದರು. ಸದ್ದಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯ ಫ್ಯಾನ್ಸ್ ಶ್ಲಾಘನೆ ವ್ಯಕ್ತಪಡಿಸುತ್ತಿದ್ದರೆ, ತಮ್ಮ ಚಿತ್ರದ ಪ್ರಮೋಷನ್ಗಾಗಿ ಈ ರೀತಿ ಜನರಿಗೆ ತೊಂದರೆ ಕೊಡುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಬಾಲಿವುಡ್‌ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡುತ್ತಿರುವ ನೋರಾ, ಮೂಲತಃ ಕೆನಡಾದವರು. ಹಿಂದಿ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಅವರು ನರ್ತಿಸಿದ ಹಾಡುಗಳು ಯೂಟ್ಯೂಬ್‌ನಲ್ಲಿ ಕೋಟ್ಯಂತರ ಬಾರಿ ವೀಕ್ಷಣೆ ಕಾಣುತ್ತವೆ. ಹಿಂದಿ ಮಾತ್ರವಲ್ಲದೆ ದಕ್ಷಿಣ ಭಾರತದ ಚಿತ್ರರಂಗದಲ್ಲೂ ನೋರಾ ನಟಿಸಿದ್ದಾರೆ. ಬಾಹುಬಲಿ ಸಿನಿಮಾದ 'ಮನೋಹರಿ..' ಹಾಡಿನ ಮೂಲಕ ನೋರಾಗೆ ದೊಡ್ಡ ಬ್ರೇಕ್ ಸಿಕ್ಕಿತ್ತು. ಕನ್ನಡ ಕೆಡಿ ಸಿನಿಮಾದಲ್ಲಿಯೂ ನೋರಾ ಫತೇಹಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ನಡುವೆಯೇ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜೊತೆ ನಟಿಯ ಹೆಸರು ಥಳಕು ಹಾಕಿಕೊಂಡಿದೆ. ಆರ್ಯನ್ಗಿಂತ ಐದು ವರ್ಷ ದೊಡ್ಡವಳಾಗಿರುವ ನೋರಾ, ಆರ್ಯನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಹಲವು ಫೋಟೋಗಳು ವೈರಲ್ ಆಗಿವೆ.
ಐದು ವರ್ಷ ಹಿರಿಯ ಬಾರ್ ಡ್ಯಾನ್ಸರ್, ನೈಟ್ ಗರ್ಲ್ ಜೊತೆ ಆರ್ಯನ್ ಡೇಟಿಂಗ್? ಈಕೆ ಬಾಲಿವುಡ್ ಹಾಟ್ ನಟಿ!