ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ರಾಜ್​ ಕುಂದ್ರಾರಲ್ಲಿ ಅಂಥದ್ದೇನು ಕಂಡ್ರು ಶಿಲ್ಪಾ? ಅವರೇ ಹೇಳಿದ್ದಾರೆ ಕೇಳಿ...

By Suvarna News  |  First Published Mar 8, 2024, 8:57 PM IST

ಆಗರ್ಭ ಶ್ರೀಮಂತರು ಕ್ಯೂನಲ್ಲಿದ್ದಾಗ ರಾಜ್​ ಕುಂದ್ರಾರಲ್ಲಿ ಅಂಥದ್ದೇನು ಕಂಡ್ರು ಶಿಲ್ಪಾ? ಮದುವೆ ಕುರಿತು ಟ್ರೋಲ್ ಬಗ್ಗೆ ಮೌನ ಮುರಿದ ನಟಿ ಹೇಳಿದ್ದೇನು?
 


ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್​ ಕುಂದ್ರಾ ಅವರು ಸದ್ಯ ನಿರಾಳರಾಗಿದ್ದಾರೆ.  ಅಷ್ಟಕ್ಕೂ,  2021ರಲ್ಲಿ ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿದ್ದು ಎಲ್ಲರಿಗೂ ತಿಳಿದಿರುವ ವಿಷಯವೇ.  ಇವರ ಪತಿ,  ರಾಜ್​ ಕುಂದ್ರಾ ನೀಲಿ ಚಿತ್ರ (porn film) ಕೇಸ್​ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್​ಗಳನ್ನು ಬಳಸಿಕೊಂಡು ರಾಜ್​ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು.  ಬ್ಲೂ ಫಿಲ್ಮ್​ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ  ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್​ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ.   ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್​ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್​ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.  

ಈ ಕೇಸ್​ನಲ್ಲಿ ರಾಜ್​ ಕುಂದ್ರಾ ಜೈಲುವಾಸ ಅನುಭವಿಸಿದ್ದರು. ಇದಾದ ಬಳಿಕ ಕೆಲ ತಿಂಗಳು ರಾಜ್​ ಕುಂದ್ರಾ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ನಂತರ ಗಣೇಶೋತ್ಸವದ ವೇಳೆ ಕಾಣಿಸಿಕೊಂಡರೂ ಮಾಸ್ಕ್​ ಧರಿಸಿಯೇ ಓಡಾಡುತ್ತಿದ್ದರು. ಇದೀಗ ಮೊದಲೇ ಬಾರಿಗೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದು ಆಗಲೂ ಮಾಸ್ಕ್​ ಧರಿಸಿ ಬಂದಿದ್ದಾರೆ. ಈ ವಿಡಿಯೋದಲ್ಲಿ  ಅವರು ಸ್ಟ್ಯಾಂಡ್-ಅಪ್ ಕಾಮಿಡಿ ಮಾಡುತ್ತಿದ್ದಾರೆ.  ಕಪ್ಪು ಬಣ್ಣದ ಜಂಪ್​ಸ್ಯೂಟ್ ಹಾಕಿ ಶೋಗೆ ಬಂದ ರಾಜ್​ ಕುಂದ್ರಾ ಜೊತೆ ಸಾಕಷ್ಟು ಬಾಡಿಗಾರ್ಡ್ಸ್ ಇದ್ದರು. ಮುಖಕ್ಕೆ ಮಾಸ್ಕ್ ಹಾಕಿದ್ದರಿಂದ ತಮ್ಮನ್ನು ತಾವು ಅವರು ಪರಿಚಯಿಸಿಕೊಂಡರು. ‘ನಾನು ರಾಜ್​ ಕುಂದ್ರಾ. ಮಾಸ್ಕ್​ ಮ್ಯಾನ್ ಎಂದೇ ಫೇಮಸ್. ಶಿಲ್ಪಾ ಶೆಟ್ಟಿ ಪತಿ ಅಂತಲೂ ಜನಪ್ರಿಯತೆ ಪಡೆದಿದ್ದೇನೆ’ ಎಂದಿದ್ದರು.

Tap to resize

Latest Videos

ಚಿಕ್ಕ ವಯಸ್ಸಲ್ಲೇ ಪ್ಲಾಸ್ಟಿಕ್​ ಸರ್ಜರಿ ಮಾಡಿಸಿಕೊಂಡ್ರಾ ಆರಾಧ್ಯ ಬಚ್ಚನ್​? ಐಶ್​ ಪುತ್ರಿಯ ಕುರಿತು ಏನಿದು ಸುದ್ದಿ?

ಅಷ್ಟಕ್ಕೂ ನಟಿ ಶಿಲ್ಪಾ ಶೆಟ್ಟಿ ಸೂಪರ್​ಸ್ಟಾರ್​ ಪಟ್ಟದಲ್ಲಿ ಇದ್ದ ಸಮಯದಲ್ಲಿಯೇ, ಉದ್ಯಮಿ ರಾಜ್​ ಕುಂದ್ರಾ ಅವರನ್ನು ವಿವಾಹವಾಗಿದ್ದರು. ಅಷ್ಟಕ್ಕೂ ರಾಜ್​ ಕುಂದ್ರಾ ಅವರೇನೂ ಕಡಿಮೆ ಶ್ರೀಮಂತರಾಗಿರಲಿಲ್ಲ. ಶಿಲ್ಪಾ ಶೆಟ್ಟಿಯನ್ನು ಮದುವೆಯಾಗುವ ಸಂದರ್ಭದಲ್ಲಿ ಅವರು, 108ನೇ ಶ್ರೀಮಂತ ಬ್ರಿಟೀಷ್ ಭಾರತೀಯ ಎನಿಸಿಕೊಂಡಿದ್ದರು. ಶ್ರೀಮಂತ ವ್ಯಕ್ತಿ ಎನ್ನುವ ಕಾರಣಕ್ಕೆ ಶಿಲ್ಪಾ ಶೆಟ್ಟಿ ಅವರನ್ನು ಮದುವೆಯಾಗಿದ್ದಾರೆ ಎಂದು ಆಗಲೂ ಹೇಳಲಾಗಿತ್ತು, ನಂತರ ಬ್ಲೂಫಿಲ್ಮ್​ನಲ್ಲಿ ಸಿಲುಕಿದ ಬಳಿಕ ಮತ್ತೆ ಶಿಲ್ಪಾ ಅವರ ಮದುವೆ ಮುನ್ನೆಲೆಗೆ ಬಂದಿತ್ತು.

ಅಷ್ಟಕ್ಕೂ ಈ ದಂಪತಿ ಮದುವೆಯಾಗಿ ಈಗ 15 ವರ್ಷ್ಗಳು ಆಗಿವೆ. ಈಗ ನಟಿ ಮದುವೆಯ ಕುರಿತು ಮೌನ ಮುರಿದಿದ್ದಾರೆ.  ‘ನಾನು ರಾಜ್ ಕುಂದ್ರಾರನ್ನು ಮದುವೆಯಾದಾಗ ಅವರು ಶ್ರೀಮಂತರಾಗಿದ್ದರು ಎನ್ನುವುದು ನಿಜವೇ. ಆದರೆ ಆ ಸಮಯದಲ್ಲಿ ನಾನೆಷ್ಟು ಶ್ರೀಮಂತ ಆಗಿದ್ದೆ ಎನ್ನುವುದನ್ನು ಜನ ಗೂಗಲ್ ಮಾಡಿದಂತೆ ಕಾಣುತ್ತಿಲ್ಲ.  ನಾನು ಆಗಲೂ ಆಗರ್ಭ ಶ್ರೀಮಂತೆನೇ ಆಗಿದ್ದೆ.  ನನ್ನ ಎಲ್ಲ ಅವಶ್ಯಕತೆಗಳನ್ನು ನಾನೇ ಪೂರೈಸಿಕೊಳ್ಳುತ್ತೇನೆ. ಆಗ ಮತ್ತು ಈಗ ನನ್ನ ಎಲ್ಲ ತೆರಿಗೆಗಳನ್ನು ನಾನೇ ಕಟ್ಟುತ್ತೇನೆ ಎಂದಿದ್ದಾರೆ. ಯಶಸ್ವೀ ಮಹಿಳೆಯರು ತಮ್ಮ ಪತಿಯಿಂದ ಹಣವನ್ನು ನಿರೀಕ್ಷೆ ಮಾಡುವುದಿಲ್ಲ. ನಾನು ಮದುವೆಯಾಗುವ ಸಮಯದಲ್ಲಿ  ರಾಜ್​ಗಿಂತಲೂ ಶ್ರೀಮಂತರಾಗಿದ್ದ ಕೆಲವರು ನನ್ನನ್ನು ವರಿಸಲು ಕೇಳಿದ್ದರು. ಆದರೆ ನಾನು ಯಾವತ್ತೂ ಹಣಕ್ಕೆ ಪ್ರಾಮುಖ್ಯತೆ ಕೊಟ್ಟವಳಲ್ಲ. ನನಗೆ ಅವರು ಇಷ್ಟವಾದರು, ಅವರ ನಡತೆ ಇಷ್ಟವಾಯಿತು. ಅದಕ್ಕೇ ಮದುವೆಯಾದೆ ಎಂದಿದ್ದಾರೆ.  

ರಾಖಿ ಜೊತೆ ಆದಿಲ್‌ನ ಮದ್ವೆನೇ ಆಗಿರಲಿಲ್ವಾ? ಹಾಗಿದ್ರೆ ಮತಾಂತರ ಆಗಿದ್ಯಾಕೆ? ಇದೇನಿದು ಹೊಸ ಟ್ವಿಸ್ಟ್‌?

click me!