ರಶ್ಮಿಕಾ ಮಂದಣ್ಣರನ್ನು ಈ ಒಬ್ಬ ಸ್ಟಾರ್ ನಟ ಮಾತ್ರ 'ಮೇಡಮ್' ಎಂದು ಕರೆಯುತ್ತಾರಂತೆ

Published : Jun 11, 2022, 05:30 PM IST
 ರಶ್ಮಿಕಾ ಮಂದಣ್ಣರನ್ನು ಈ ಒಬ್ಬ ಸ್ಟಾರ್ ನಟ ಮಾತ್ರ 'ಮೇಡಮ್' ಎಂದು ಕರೆಯುತ್ತಾರಂತೆ

ಸಾರಾಂಶ

ನಟಿ ರಶ್ಮಿಕಾ ಮಂದಣ್ಣ ಹಿಂದಿ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ, ಬಾಲಿವುಡ್‌ನಲ್ಲಿ ಒಬ್ಬರೇ ಒಬ್ಬರು ಸ್ಟಾರ್ ತನ್ನನ್ನು ಮೇಡಮ್ ಎಂದು ಕರೆಯುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ. ಅಲ್ಲದೆ ಅದು ತನಗೆ ಇಷ್ಟವಾಗುವುದಿಲ್ಲ ಎಂದಿದ್ದಾರೆ.  

ನಟಿ ರಶ್ಮಿಕಾ ಮಂದಣ್ಣ(Rashmika Mandanna) ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು ಸಿನಿಮಾರಂಗದ ಮೂಲಕ ಸಿಕ್ಕಾಪಟ್ಟೆ ಖ್ಯಾತಿಗಳಿಸಿದ್ದ ರಶ್ಮಿಕಾ ಬಳಿಕ ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಸದ್ಯ ಬಾಲಿವುಡ್‌ನಲ್ಲೂ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಶ್ಮಿಕಾ ನಟಿಸಿರುವ ಮೊದಲ ಹಿಂದಿ ಸಿನಿಮಾ ರಿಲೀಸ್ ಆಗುವ ಮೊದಲೇ ಅನೇಕ ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಇತ್ತೀಚಿಗಷ್ಟೆ ರಶ್ಮಿಕಾ ಹಿಂದಿ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಆಂಗ್ಲ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ, ಬಾಲಿವುಡ್‌ನಲ್ಲಿ ಒಬ್ಬರೇ ಒಬ್ಬರು ಸ್ಟಾರ್ ತನ್ನನ್ನು ಮೇಡಮ್ ಎಂದು ಕರೆಯುತ್ತಾರೆ ಎಂದು ಬಹಿರಂಗ ಪಡಿಸಿದ್ದಾರೆ. 

ರಶ್ಮಿಕಾರನ್ನು ಮೇಡಮ್ ಎಂದು ಕರೆಯುತ್ತಿರುವ ಬಾಲಿವುಡ್ ಸ್ಟಾರ್ ನಟ ಯಾರಿರಬಹುದು ಎಂದು ಯೋಚಿಸತ್ತಿದ್ದೀರಾ? ಅದು ಮತ್ಯಾರು ಅಲ್ಲ ಬಾಲಿವುಡ್ ಸ್ಟಾರ್ ನಟ ರಣಬೀರ್ ಕಪೂರ್. ಹೌದು, ಬಾಲಿವುಡ್‌ನಲ್ಲಿ ರಣಬೀರ್ ಕಪೂರ್ ಮಾತ್ರ ಮೇಡಮ್ ಎಂದು ಕರೆಯುತ್ತಾರೆ ಎಂದು ರಶ್ಮಿಕಾ ಹೇಳಿದ್ದಾರೆ. 

ಅಂದಹಾಗೆ ರಶ್ಮಿಕಾ ಸದ್ಯ ರಣಬೀರ್ ಕಪೂರ್( Ranbir Kapoor) ಜೊತೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಅರ್ಜುನ್ ರೆಡ್ಡಿ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಮನಾಲಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಮನಾಲಿ ಚಿತ್ರೀಕರಣದ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು.   

ರಣಬೀರ್ ಕಪೂರ್ ಜೊತೆ ನಟನೆಯ ಅನುಭವ ಬಿಚ್ಚಿಟ್ಟ ರಶ್ಮಿಕಾ, 'ಅವರು ತುಂಬಾ ಲವಿಂಗ್ ವ್ಯಕ್ತಿ. ಅವರನ್ನು ಮೊದಲು ಭೇಟಿಯಾದಾಗ ತುಂಬಾ ನರ್ವಸ್ ಆಗಿದ್ದೆ. ಬಳಿಕ ಆರಾಮಾದೆ. ಈಗ ಯೋಚಿಸುತ್ತೇನೆ ರಣಬೀರ್ ಮತ್ತು ಸಂದೀಪ್ ರೆಡ್ಡಿ ಜೊತೆ ಕೆಲಸ ಮಾಡುವುದು ತುಂಬಾ ಸುಲಭ' ಎಂದು ಹೇಳಿದ್ದಾರೆ.

777 ಚಾರ್ಲಿ, ರಕ್ಷಿತ್ ನಟನೆ ನೋಡಿ ರಶ್ಮಿಕಾ ಕಾಲೆಳೆದ ನೆಟ್ಟಿಗರು..!

ಇನ್ನು ಇದೇ ಸಮಯದಲ್ಲಿ ರಶ್ಮಿಕಾ ಇಡೀ ಇಂಡಸ್ಟ್ರಿಯಲ್ಲಿ ನನ್ನನ್ನು ಮೇಡಮ್ ಎಂದು ಕರೆಯುವುದು ಏಕೈಕ ವ್ಯಕ್ತಿ ರಣಬೀರ್. ನನಗೆ ಅದು ಇಷ್ಟ ಆಗಲ್ಲ. ಆದರೆ ಈ ಬಗ್ಗೆ ನಾನು ಅವರಿಗೆ ಹೇಳುತ್ತೇನೆ' ಎಂದು ಹೇಳಿದರು. 

ಮಾತು ಮುಂದುವರೆಸಿದ ರಶ್ಮಿಕಾ ಭಾಷೆಗಳ ಬಗ್ಗೆ ಮತ್ತು ಪ್ಯಾನ್ ಇಂಡಿಯಾ ಬಗ್ಗೆ ಮಾತನಾಡಿದ್ದಾರೆ. 'ನಾನು ಯಾವಾಗಲು ಬೇರೆ ಬೇರೆ ಭಾಷೆ ಕಲಿಯಲು ಪ್ರಯತ್ನಿಸುತ್ತೇನೆ ಯಾಕೆಂದರೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ಸಾಧ್ಯವಾಗುತ್ತದೆ. ಪ್ಯಾನ್ ಇಂಡಿಯಾ ಸ್ಟಾರ್ ಎನ್ನುವ ಪರಿಕಲ್ಪನೆ ಈಗಷ್ಟೆ ಬಂದಿದೆ. ನಾನು ಪ್ರಪಂಚದಾದ್ಯಂತ ಪ್ರೇಕ್ಷಕರ ಹೃದಯ ತಲುಪುವರೆಗೂ ನಾನು ಇದನ್ನು ಮಾಡುತ್ತೇನೆ. ಇನ್ನಷ್ಟು ಭಾಷೆ ಕಲಿಯುವುದಾದರು ಸರಿ' ಎಂದು ಹೇಳಿದರು. 

Rap ಮೇಲೆ ಮುಜಗರ ಮೂಡಿಸಿದ ರಶ್ಮಿಕಾ ಡ್ರೆಸ್, ಟ್ರೋಲ್ ಆದ್ರು ಕಿರಿಕ್ ಬೆಡಗಿ!

ರಶ್ಮಿಕಾ ಮಿಷನ್ ಮಜ್ನು ಸಿನಿಮಾ ಮೂಲಕ ಹಿಂದಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾದಲ್ಲಿ ಸಿದ್ಧಾರ್ಥ ಮಲ್ಹೋತ್ರಾ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ರಿಲೀಸ್‌ಗೂ ಮೊದಲೇ ರಶ್ಮಿಕಾ ಮತ್ತೊಂದು ಸಿನಿಮಾಗೆ ಸಹಿ ಮಾಡಿದರು. ಅಮಿತಾಬ್ ಬಚ್ಚನ್ ಜೊತೆ ಗುಡ್‌ಬೈ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದು ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾ ಬಳಿಕ ರಶ್ಮಿಕಾ, ರಣಬೀರ್ ಜೊತೆ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಹಿಂದಿ ಸಿನಿಮಾಗಳ ಜೊತೆಗೆ ರಶ್ಮಿಕಾ ತೆಲುಗಿನಲ್ಲಿ ಪುಷ್ಪ-2ಗಾಗಿ ಸಜ್ಜಾಗುತ್ತಿದ್ದಾರೆ. ಮೊದಲ ಭಾಗದ  ಸೂಪರ್ ಸಕ್ಸಸ್‌ನ ಖುಷಿಯಲ್ಲಿರುವ ರಶ್ಮಿಕಾ ಎರಡನೇ ಭಾಗದ ಚಿತ್ರೀಕರಣಕ್ಕಾಗಿ ಕಾಯುತ್ತಿದ್ದಾರೆ. ತೆಲುಗು ಜೊತೆಗೆ ರಶ್ಮಿಕಾ ತಮಿಳು ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ. ತಮಿಳಿನಲ್ಲಿ ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ. ಮೊದಲ ಬಾರಿಗೆ ರಶ್ಮಿಕಾ ವಿಜಯ್ ಜೊತೆ ತೆರೆಹಂಚಿಕೊಳ್ಳುತ್ತಿದ್ದಾರೆ.   

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಸ್ಲಿಂ ಆಗಿ ಮತಾಂತರವಾದ್ರಾ ಬಾಲಿವುಡ್‌ನ ಪ್ರಖ್ಯಾತ ನಟಿಯ ಸಹೋದರಿ? ಬುರ್ಖಾ, ಹಿಜಾಬ್‌ ಧರಿಸಿ ಮಸೀದಿ ಪ್ರವೇಶ!
'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!