
ದಾರಿ ತಪ್ಪಿಸುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನುವ ಆರೋಪದಡಿ ಟಾಲಿವುಡ್ ಸ್ಟಾರ್ ನಟ ಅಲ್ಲು ಅರ್ಜುನ್(Allu Arjun) ವಿರುದ್ಧ ದೂರು ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತರೊಬ್ಬರು ಆಕ್ರೋಶ ಹೊರಹಾಕಿ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ್ದಾರೆ. ಶೈಕ್ಷಣಿಕ ಸಂಸ್ಥೆಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅಲ್ಲು ಅರ್ಜುನ್ ತಪ್ಪು ಮಾಹಿತಿ ರವಾನಿಸುತ್ತಿದ್ದಾರೆ, ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಕೋತ ಉಪೇಂದ್ರ ರೆಡ್ಡಿ ಆರೋಪ ಮಾಡಿದ್ದಾರೆ.
ಇಂಡಿಯಾ ಟುಡೇ ವರದಿ ಮಾಡಿರುವ ಪ್ರಕಾರ, ದಾರಿ ತಪ್ಪಿಸುವ ಇಂಥ ಜಾಹೀರಾತಿನಲ್ಲಿ ಕಾಣಿಸಿಕೊಂಡವರ ವಿರುದ್ಧ ಕ್ರಮ ಕೈಗೊಳಬೇಕು ಎಂದು ಗುಡುಗಿರುವ ಉಪೇಂದ್ರ ರೆಡ್ಡಿ, ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ. ಜಾಹೀರಾತಿನಲ್ಲಿ ಕಾಣಿಸಿಕೊಂಡ ಅಲ್ಲು ಅರ್ಜುನ್ ಮತ್ತು ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆ ವಿರುದ್ಧ ಅಂಬರ್‌ಪೆಟ್ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಿದ್ದಾರೆ.
ಅಲ್ಲು ಅರ್ಜುನ್ ಫುಡ್ ಡೆಲಿವರಿ ಜಾಹೀರಾತು ವಿವಾದ
ಅಲ್ಲುಅರ್ಜುನ್ ಜಾಹೀರಾತಿನಿಂದ ಸಂಕಷ್ಟಕ್ಕೆ ಸಿಲುಕುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಆಹಾರ ಜಾಹೀರಾತಿಗಾಗಿ ಅಲ್ಲು ಅರ್ಜುನ್ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಫುಡ್ ಡೆಲಿವರಿ ಆಪ್‌ನಲ್ಲಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್ ಸರ್ಕಾರಿ ಸಾರಿಗೆಯನ್ನು ಅವಹೇಳನ ಮಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಅನೇಕರು ಅಲ್ಲು ಅರ್ಜುನ್ ವಿರುದ್ಧ ಕಂಡ ಕಾರಿದ್ದರು. ಅಲ್ಲದೇ ಜಾಹೀರಾತು ಬ್ಯಾನ್ ಮಾಡಬೇಕೆಂದು ಅನೇಕರು ಆಕ್ರೋಶ ಹೊರಹಾಕಿದ್ದರು.
ಇದೀಗ ಅಲ್ಲು ಅರ್ಜುನ್ ಶೈಕ್ಷಣಿಕ ಸಂಸ್ಥೆಯ ಜಾಹೀರಾತಿಕಾಮಿಸಿಕೊಳ್ಳುವ ಮೂಲಕ ಜನರನ್ನು ವಂಚಿಸುತ್ತಿದ್ದಾರೆ, ದಾರಿತಪ್ಪಿಸುತ್ತಿದ್ದಾರೆ ಎನ್ನುವ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ.
ದಯವಿಟ್ಟು ಒಡೆದು ಆಳುವ ನೀತಿ ನಿಲ್ಲಿಸಿ, ಅಲ್ಲು ಅರ್ಜುನ್ ನನ್ನ ಸಿನಿಮಾದಲ್ಲಿ ನಟಿಸ್ತಾರೆ; ಅಕ್ಷಯ್ ಕುಮಾರ್
ಪಾನ್ ಮಸಾಲ ಜಾಹೀರಾತು ರಿಜೆಕ್ಟ್ ಮಾಡಿದ್ದ ಸ್ಟೈಲಿಶ್ ಸ್ಟಾರ್
ಅಂದಹಾಗೆ ಇತ್ತೀಚಿಗಷ್ಟೆ ಅಲ್ಲು ಅರ್ಜುನ್ ಪಾನ್ ಮಸಾಲ ಮತ್ತು ಟೊಬ್ಯಾಕೊ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳುವ ಮೂಲಕ ಮಾದರಿಯಾಗಿದ್ದರು. ಅಭಿಮಾನಿಗಳನ್ನು ದಾರಿ ತಪ್ಪಿಸುವ ಮತ್ತು ಆರೋಗ್ಯಕ್ಕೆ ಹಾನಿಯಾಗುವಂತ ಜಾಹೀತುಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಹೇಳಿ ಬಹುಕೋಟಿ ಮೊತ್ತದ ಜಾಹೀರಾತು ರಿಜೆಕ್ಟ್ ಮಾಡುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೀಗ ಶೈಕ್ಷಣಿಕ ಸಂಸ್ಥೆಯ ಜಾಹೀರಾತಿನಲ್ಲಿ ಅಲ್ಲು ಅರ್ಜುನ್ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಲ್ಲು ಅರ್ಜುನ್ 'ಪುಷ್ಪ-2' ಸಿನಿಮಾದ ಸ್ಕ್ರಿಪ್ಟ್ ಸಂಪೂರ್ಣ ಬದಲಾವಣೆ; ಕಾರಣವೇನು?
ಪುಷ್ಪ-2ಗಾಗಿ ಅಲ್ಲು ಅರ್ಜುನ್ ತಯಾರಿ
ಅಲ್ಲು ಅರ್ಜುನ್ ಸದ್ಯ ಪುಷ್ಪಾ-2 ಸಿನಿಮಾಗಾಗಿ ಸಜ್ಜಾಗುತ್ತಿದ್ದಾರೆ. ಈಗಾಗಲೇ ಪುಷ್ಪಾ ಸಿನಿಮಾ ಮೂಲಕ ಸದ್ದು ಮಾಡಿರುವ ಅಲ್ಲು ಅರ್ಜುನ್ ದೊಡ್ಡ ಮಟ್ಟದ ಸಕ್ಸಸ್ ಕಂಡರು. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವ ಅಲ್ಲು ಅರ್ಜುನ್‌ನನ್ನು ಪಾರ್ಟ್ -2ನಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ. ಅಂದುಕೊಂಡಂತೆ ಆಗಿದ್ದಾರೆ ಪುಷ್ಪ-2 ಈಗಾಗಲೇ ಪ್ರಾರಂಭವಾಗಬೇಕಿತ್ತು. ಆದರೆ ಕೆಲವು ಕಾರಣದಿಂದ ಚಿತ್ರೀಕರಣ ಮುಂದಕ್ಕೆ ಹೋಗುತ್ತಿದೆ. ಅಲ್ಲು ಅರ್ಜುನ್ ಸದ್ಯ ಸಕ್ಸಸ್ ಎಂಜಾಯ್ ಮಾಡುತ್ತಿದ್ದಾರೆ. ಪತ್ನಿ ಮತ್ತು ಮಕ್ಕಳ ಜೊತೆ ಅಲ್ಲು ಅರ್ಜುನ್ ವಿದೇಶಿ ಪ್ರವಾಸ ಎಂಜಾಯ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.