ಅನಿಮಲ್ನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡು ಫೇಮಸ್ ಆಗಿರೋ ರಶ್ಮಿಕಾ ಮಂದಣ್ಣಗೆ ಇದೀಗ ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಸಿಕ್ಕಿದೆ. ಏನಿದು ವಿಷಯ?
ಅನಿಮಲ್ ಚಿತ್ರದ ಹಸಿಬಿಸಿ ದೃಶ್ಯದ ಬಳಿಕ ನಟಿ ರಶ್ಮಿಕಾ ಮಂದಣ್ಣ ಸಕತ್ ಸುದ್ದಿಯಲ್ಲಿದ್ದಾರೆ. ನಟ ರಣಬೀರ್ ಕಪೂರ್ ಜೊತೆಗಿನ ಲಿಪ್ಲಾಕ್ ಸೇರಿದಂತೆ ಈ ಚಿತ್ರದಲ್ಲಿ ಇಂಟಿಮೇಟ್ ಸೀನ್ನಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಬೇಡಿಕೆ ಇನ್ನಷ್ಟು ಹೆಚ್ಚಾಗುತ್ತಿದೆ. ಯಾವ ಪಾತ್ರಕ್ಕಾದರೂ ಸೈ ಎನ್ನುವಂಥ ನಟನೆ ಮಾಡಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ನಡುವೆ ಕುಚ್ ಕುಚ್ ನಡೆಯುತ್ತಿದೆ ಎನ್ನುವ ಸುದ್ದಿ ಹಳೆಯದ್ದಾಗಿದೆ. ಡೇಟಿಂಗ್ ಸುದ್ದಿಯನ್ನು ಅಲ್ಲಗಳೆಯುತ್ತಲೇ ಜೋಡಿ ಮಾತ್ರ ಆಗಾಗ್ಗೆ ವಿದೇಶಗಳಿಗೆ ಜಾಲಿ ಟ್ರಿಪ್ ಮಾಡುತ್ತಲೇ ಇದೆ.
ಅದೇನೇ ಇದ್ದರೂ ರಶ್ಮಿಕಾ ಪಾಲಿಗೆ ಈಗ ಇನ್ನೊಂದು ಕಿರೀಟ ಬಂದಿದೆ. ಅದೇನೆಂದರೆ, ಪ್ರತಿಷ್ಠಿತ ಫೋರ್ಬ್ಸ್ ಪಟ್ಟಿಯಲ್ಲಿ ರಶ್ಮಿಕಾ ಅವರ ಹೆಸರು ಸೇರ್ಪಡೆಗೊಂಡಿದ್ದು, ನಟಿ ಖುಷಿಯಲ್ಲಿ ತೇಲಾಡುತ್ತಿದ್ದಾರೆ. ಹೌದು! ಪ್ರತಿವರ್ಷವೂ ಫೋರ್ಬ್ಸ್ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. 30 ವರ್ಷ ವಯಸ್ಸಿನ ಒಳಗಿನವರ ಸಾಧಕರ ಪಟ್ಟಿಯನ್ನೂ ಅದು ಬಿಡುಗಡೆ ಮಾಡುತ್ತದೆ. ಅದರಲ್ಲಿ ಅನಿಮಲ್ ಹಸಿಬಿಸಿ ನಟಿ ರಶ್ಮಿಕಾ ಹೆಸರೂ ಸೇರ್ಪಡೆಗೊಂಡಿದೆ. ಈ ಮೂಲಕ ನ್ಯಾಷನಲ್ ಕ್ರಷ್ ಎನಿಸಿಕೊಂಡಿರುವ ರಶ್ಮಿಕಾಗೆ ಅಂತರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಏಕೆಂದರೆ ಈ ಪಟ್ಟಿಯಲ್ಲಿ ವಿಶ್ವದ ಸಾಧಕರ ಹೆಸರು ಇರುತ್ತದೆ. ಇದರಲ್ಲಿ 30 ಜನರು ಇರುತ್ತಾರೆ. ಮನೊರಂಜನಾ ಕ್ಷೇತ್ರದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸ್ಥಾನ ಸಿಕ್ಕಿದೆ. ಈಚೆಗಷ್ಟೇ ಮೀಡಿಯಾ ಕನ್ಸೆಲೆಟಿಂಗ್ ಫರ್ಮ್ ಅರ್ಮೋಕಸ್ ಮೀಡಿಯಾ ಜನವರಿ 2024ರ ಜನಪ್ರಿಯ ಬಾಲಿವುಡ್ ತಾರೆಯರ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ರಶ್ಮಿಕಾ ಎಂಟನೇ ಸ್ಥಾನ ಪಡೆದುಕೊಂಡಿದ್ದರು. ಇದೀಗ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.
ನಟಿ ಸೌಂದರ್ಯರ ಬಯೋಪಿಕ್ನಲ್ಲಿ ನಟಿಸುವ ಆಸೆ ರಶ್ಮಿಕಾಗೆ! ಅಷ್ಟಕ್ಕೂ ಇವರಿಬ್ಬರ ಸಂಬಂಧವೇನು?
ಕೃಷಿ, ತಂತ್ರಜ್ಞಾನ, ಕಲೆ, ಉದ್ಯಮ, ಪರಿಸರ ಸಂರಕ್ಷಣೆ, ಫ್ಯಾಷನ್, ಸಂಗೀತ, ಕಂಟೆಂಟ್ ಕ್ರಿಯೇಷನ್, ಶಿಕ್ಷಣ, ಕ್ರೀಡೆ, ಉತ್ಪಾದನೆ, ಮಾರುಕಟ್ಟೆ, ಸಮಾಜ ಸೇವೆ, ಆರೋಗ್ಯ ಸೇವೆ, ಹಣಕಾಸು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮಿಂಚುತ್ತಿರುವ 30ಕ್ಕಿಂತಲೂ ಕಡಿಮೆ ವಯಸ್ಸಿನ ಸಾಧಕರನ್ನು ಗುರುತಿಸಿ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ರಶ್ಮಿಕಾ ಅವರಿಗೆ ಈಗ 27 ವರ್ಷ ವಯಸ್ಸು. ಇದೇ ಲಿಸ್ಟ್ನಲ್ಲಿ ನಟಿ ರಾಧಿಕಾ ಮದನ್ ಅವರ ಹೆಸರು ಕೂಡ ಇದೇ ಕ್ಷೇತ್ರದ ಸಾಧಕರ ಪಟ್ಟಿಯಲ್ಲಿದೆ. ದಿ ಆರ್ಚೀಸ್’ ಸಿನಿಮಾದಲ್ಲಿಯೂ ನಟಿಸಿದ್ದ ಅದಿತಿ ಸೈಗಲ್ ಅಲಿಯಾಸ್ ಡಾಟ್ ಹೆಸರು ಸಂಗೀತ ಕ್ಷೇತ್ರದಲ್ಲಿ ದಾಖಲಾಗಿದೆ.
ಇನ್ನು ರಶ್ಮಿಕಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ ಅನಿಮಲ್ ಯಶಸ್ಸಿನ ಬಳಿಕ ಬೇರೆ ಬೇರೆ ಭಾಷೆಗಳ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ತೆಲುಗಿನಲ್ಲಿ ಪುಷ್ಪ 2 ಹಾಗೂ ಗರ್ಲ್ಫ್ರೆಂಡ್ ಸಿನಿಮಾ ಅವರ ಕೈಯಲ್ಲಿದೆ. ವಿಜಯ್ ದೇವರಕೊಂಡ ಜೊತೆಗೆ ‘ಗೀತಾ ಗೋವಿಂದಮ್ 2’ ಸಿನಿಮಾದ ಶೂಟಿಂಗ್ ಕೂಡ ನಡೆಯುತ್ತಿದೆ. ಟೈಗರ್ ಶ್ರಾಫ್ ಜೊತೆಗೆ ನಾಯಕಿಯಾಗಲಿದ್ದಾರೆ. ಜೊತೆಗೆ ತಮಿಳು ಹಾಗೂ ಮಲಯಾಳಂ ಚಿತ್ರಗಳೂ ಕೈಯಲ್ಲಿವೆ ಎನ್ನಲಾಗಿದೆ. ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ದಾಖಲಾಗುತ್ತಿದ್ದಂತೆಯೇ ವಿಜಯ್ ದೇವರಕೊಂಡ ಅವರು ಎಷ್ಟೊಂದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.
ಅವಾರ್ಡ್ ಫಂಕ್ಷನ್ನಲ್ಲಿ ರಣಬೀರ್-ಆಲಿಯಾ ಇದೆಂಥ ರೊಮ್ಯಾನ್ಸ್! ಆಕೆ ತೃಪ್ತಿ ಡಿಮ್ರಿ ಅಲ್ಲಪ್ಪಾ ಎಂದ ಫ್ಯಾನ್ಸ್