ಐಎಎಸ್ ಪತ್ನಿ ವಿರುದ್ಧ ಮಾನಸಿಕ ದೌರ್ಜನ್ಯ ಕೇಸ್ ದಾಖಲಿಸಿದ ಮಹಾಭಾರತ ಖ್ಯಾತಿಯ ನಿತೀಶ್ ಭಾರದ್ವಾಜ್

By Suvarna News  |  First Published Feb 15, 2024, 4:47 PM IST

ಮಹಾಭಾರತ ಧಾರಾವಾಹಿಯಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತಿ ಗಳಿಸಿದ ನಿತೀಶ್ ಭಾರದ್ವಾಜ್ ತಮ್ಮ ಐಎಎಸ್ ಪತ್ನಿ ಸ್ಮಿತಾ ಘಾಟೆ ವಿರುದ್ಧ ಮಾನಸಿಕ ದೌರ್ಜನ್ಯ ಕೇಸ್ ದಾಖಲಿಸಿದ್ದಾರೆ. 


ಮಹಾಭಾರತದಲ್ಲಿ ಶ್ರೀ ಕೃಷ್ಣನ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತಿ ಗಳಿಸಿದ ನಿತೀಶ್ ಭಾರದ್ವಾಜ್ ಇತ್ತೀಚಿನ ದಿನಗಳಲ್ಲಿ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಸ್ಮಿತಾ ಘಾಟೆ ವಿರುದ್ಧ ನಟ ದೂರು ದಾಖಲಿಸಿದ್ದಾರೆ.

ನಿತೀಶ್ ಅವರು ಬುಧವಾರ ಭೋಪಾಲ್ ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ಅವರ ಸಹಾಯವನ್ನು ಕೋರಿದ್ದಾರೆ. ನಿತೀಶ್ ಪತ್ನಿ ವಿರುದ್ಧ ಲಿಖಿತ ದೂರು ದಾಖಲಿಸಿದ್ದಾರೆ. ಸ್ಮಿತಾ ಅವರೊಂದಿಗಿನ ಸುದೀರ್ಘ ದಾಂಪತ್ಯದ ನಂತರ, ಅವರು ಮತ್ತು ಅವರ ಪತ್ನಿ ಸ್ಮಿತಾ 2019ರಲ್ಲಿ ಮುಂಬೈ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು ಪ್ರಕರಣ ಇನ್ನೂ ವಿಚಾರಣೆಯಲ್ಲಿದೆ ಎಂದು ದೂರಿನಲ್ಲಿ ಬರೆದಿದ್ದಾರೆ.

Tap to resize

Latest Videos

ಮಕ್ಕಳನ್ನು ಭೇಟಿಯಾಗಲು ಬಿಡುತ್ತಿಲ್ಲ
ತಮ್ಮ ಐಎಎಸ್ ಪತ್ನಿ ಸ್ಮಿತಾ, ಪುತ್ರಿಯರಾದ ದೇವಯಾನಿ ಮತ್ತು ಶಿವರಂಜನಿ ಅವರನ್ನು ಭೇಟಿಯಾಗಲು ಅಥವಾ ಅವರೊಂದಿಗೆ ಮಾತನಾಡಲು ಅನುಮತಿಸುವುದಿಲ್ಲ. ನನ್ನ ಜೊತೆ ಸಂಪರ್ಕವಿರಬಾರದು ಎಂದು ಹೆಣ್ಣುಮಕ್ಕಳ ಶಾಲೆಗಳನ್ನು ಬದಲಾಯಿಸುತ್ತಲೇ ಇರುತ್ತಾಳೆ. ಇದರಿಂದ ನನ್ನ ಮಾನಸಿಕ ಸ್ಥಿತಿಗೆ ಧಕ್ಕೆಯಾಗುತ್ತಿದೆ ಎಂದು ನಿತೀಶ್ ದೂರುದ್ದಾರೆ. 

ಎರಡು ಮದುವೆ
ನಿತೀಶ್‌ಗೆ ಎರಡು ಮದುವೆಯಾಗಿದೆ. ಆದರೆ ದುರದೃಷ್ಟವೆಂದರೆ ಅವರ ಎರಡೂ ಮದುವೆಗಳು ಉಳಿಯಲಿಲ್ಲ. 1991ರಲ್ಲಿ ಮೊದಲ ಮದುವೆಯಾದ ಅವರು ವೈವಾಹಿಕ ಜೀವನವನ್ನು ಮೊನಿಶಾ ಪಾಟೀಲ್ ಅವರೊಂದಿಗೆ ಪ್ರಾರಂಭಿಸಿದರು. ಆದರೆ ಈ ಮದುವೆಯು 2005ರಲ್ಲಿ ಮುರಿದು ಬಿತ್ತು. ಇದಾದ ನಂತರ ನಿತೀಶ್ ಸ್ಮಿತಾ ಅವರನ್ನು ವಿವಾಹವಾದರು. ನಿತೀಶ್ ಮತ್ತು ಸ್ಮಿತಾ 2009ರಲ್ಲಿ ವಿವಾಹವಾದರು. ಇಬ್ಬರಿಗೂ ಅವಳಿ ಹೆಣ್ಣು ಮಕ್ಕಳಿದ್ದಾರೆ.

ಸಾವಿಗಿಂತ ಹೆಚ್ಚು ನೋವು
ಹಿಂದೊಮ್ಮೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡುವಾಗ 'ಕೆಲವೊಮ್ಮೆ ವಿಚ್ಛೇದನವು ಸಾವಿಗಿಂತ ಹೆಚ್ಚು ನೋವಿನಿಂದ ಕೂಡಿದೆ. ಕುಟುಂಬ ಒಡೆದು ಹೋದಾಗ ಹೆಚ್ಚು ತೊಂದರೆ ಅನುಭವಿಸುವುದು ಮಕ್ಕಳೇ. ಹಾಗಾಗಿ ಪೋಷಕರಾದ ನಾವು ಕೂಡ ಅವರು ಹೆಚ್ಚು ಆತಂಕಕ್ಕೆ ಒಳಗಾಗದಂತೆ ಎಚ್ಚರ ವಹಿಸಬೇಕು' ಎಂದು ನಿತೀಶ್ ಹೇಳಿದ್ದರು.

ಒಟಿಟಿಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಈಕೆ; ಎಷ್ಟು ಚಾರ್ಜ್ ಮಾಡ್ತಾರೆ ಗೊತ್ತಾ?

ಕೆಲಸದ ವಿಷಯಕ್ಕೆ ಬಂದರೆ, ನಿತೀಶ್ ಶ್ರೀ ಕೃಷ್ಣನ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. ನಿತೀಶ್ ಅವರು ಬಿಆರ್ ಚೋಪ್ರಾ ಅವರ ಮಹಾಭಾರತದಲ್ಲಿ ಕಾಣಿಸಿಕೊಂಡು ಖ್ಯಾತಿ ಗಳಿಸಿದರು. ಕಳೆದ ಬಾರಿ ಅವರು 'ಕೇದಾರನಾಥ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದರಲ್ಲಿ ಅವರು ನಟಿ ಸಾರಾ ಅಲಿ ಖಾನ್ ಅವರ ತಂದೆಯ ಪಾತ್ರವನ್ನು ನಿರ್ವಹಿಸಿದ್ದಾರೆ.

click me!