ಸೋತರೂ ಕಮ್ಮಿಯಾಗಿಲ್ಲ ರಶ್ಮಿಕಾ ಹವಾ; ರಿಜೆಕ್ಟ್ ಮಾಡಿದ್ದ ಸ್ಟಾರ್‌ ಜೊತೆಯೇ ಮಂದಣ್ಣ ರೊಮ್ಯಾನ್ಸ್

By Shruthi KrishnaFirst Published May 14, 2023, 4:40 PM IST
Highlights

ಸೋತರೂ ಕಮ್ಮಿಯಾಗಿಲ್ಲ ರಶ್ಮಿಕಾ ಹವಾ. ರಿಜೆಕ್ಟ್ ಮಾಡಿದ್ದ ಸ್ಟಾರ್‌ ಜೊತೆಯೇ ಮಂದಣ್ಣ ರೊಮ್ಯಾನ್ಸ್ ಮಾಡುತ್ತಿದ್ದಾರೆ. 

ಸೌತ್ ಸಿನಿಮಾರಂಗ ಮತ್ತು ಬಾಲಿವುಡ್ ಎರಡೂ ಕಡೆ ನಟಿ ರಶ್ಮಿಕಾ ಮಂದಣ್ಣ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡಿರುವ ರಶ್ಮಿಕಾ ಹಿಂದಿಯಲ್ಲಿ ಸಕ್ಸಸ್ ಕಾಣಲು ಸಾಧ್ಯವಾಗಿಲ್ಲ. ಈಗಾಗಲೇ ರಶ್ಮಿಕಾ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿದ್ದು ಹಿಂದಿ ಅಭಿಮಾನಿಗಳನ್ನು ಸೆಳೆಯುವಲ್ಲಿ ವಿಫಲವಾಗಿದ್ದಾರೆ. ಗುಡ್‌ಬೈ ಸಿನಿಮಾ ಮೂಲಕ ಮೊದಲ ಬಾರಿಗೆ ರಶ್ಮಿಕಾ ಬಾಲಿವುಡ್‌ನಲ್ಲಿ ಮಿಂಚಿದರು. ಮೊದ ಸಿನಿಮಾನೇ ಬಾಕ್ಸ್ ಆಫೀಸ್ ನಲ್ಲಿ ಸೋಲು ಕಂಡಿತು. ನಂತರ ಬಂದ ಮಿಷನ್ ಮಜ್ನು ಕೂಡ ಅಭಿಮಾನಿಗಳ ಹೃದಯ ಗೆಲ್ಲುವಲ್ಲಿ ವಿಫಲವಾಯಿತು. ಇದೀಗ ಮತ್ತೊಂದು ಹಿಂದಿ ಸಿನಿಮಾಗೆ ಸಹಿ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸೋತರು ರಶ್ಮಿಕಾ ಹವಾ ಹಿಂದಿಯಲ್ಲಿ ಕಡಿಮೆಯಾಗಿಲ್ಲ ಎನ್ನುವುದಕ್ಕೆ ಅವರಿಗೆ ಸಿಗುತ್ತಿರುವ ಅವಕಾಶಗಳೇ ಸಾಕ್ಷಿ. 

ರಶ್ಮಿಕಾ ಸದ್ಯ ಹಿಂದಿಯಲ್ಲಿ ರಣಬೀರ್ ಕಪೂರ್ ಅನಿಮಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಅನಿಮಲ್ ಸಿನಿಮಾ ರಿಲೀಸ್ಗೆ ಸಿದ್ಧವಾಗುತ್ತಿದೆ. ಆಗಲೇ ರಶ್ಮಿಕಾ ಮತ್ತೆಡರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿಗಷ್ಟೆ ವಿಕ್ಕಿ ಕೌಶಲ್ ಜೊತೆ ಛಾವಾ ಸಿನಿಮಾದಲ್ಲಿ ರೊಮ್ಯಾನ್ಸ್ ಮಾಡುತ್ತಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮತ್ತೊಂದು ಸುದ್ದಿ ಕೇಳಿ ಬರುತ್ತಿದ್ದು ಮತ್ತೋರ್ವ ಹಿಂದಿ ಸ್ಟಾರ್ ಜೊತೆ ರಶ್ಮಿಕಾ ನಟಿಸುತ್ತಿದ್ದಾರೆ ಎನ್ನುವ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಯಾವಾಗ್ಲೂ ಸುಳ್ಳು ಹೇಳೋದೇ ಆಯ್ತು: ಮಾಂಸಾಹಾರ ಮುಟ್ಟಲ್ಲ ಎಂದು ತಿಂದು ತಗಲಾಕೊಂಡ ರಶ್ಮಿಕಾಗೆ ನೆಟ್ಟಿಗರ ತರಾಟೆ

Latest Videos

ರಶ್ಮಿಕಾ ಮತ್ತೊಂದು ಹಿಂದಿ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದು ಶಾಹಿದ್ ಕಪೂರ್ ಜೊತೆ ನಟಿಸುತ್ತಿದ್ದಾರೆ ಎನ್ನಲಾಗಿದೆ. ಅಂದಹಾಗೆ ಈ ಮೊದಲು ಜರ್ಸಿ ಸಿನಿಮಾದ ಹಿಂದಿ ರಿಮೇಕ್‌ನಲ್ಲಿ ಶಾಹಿದ್ ಕಪೂರ್ ಜೊತೆ ರಶ್ಮಿಕಾ ನಟಿಸಬೇಕಿತ್ತು. ಆದರೆ ರಶ್ಮಿಕಾ ರಿಮೇಕ್ ಸಿನಿಮಾದಲ್ಲಿ ನಟಿಸಲು ಹಿಂದೇಟು ಹಾಕಿ ರಿಜೆಕ್ಟ್ ಮಾಡಿದ್ದರು. ಇದರಿಂದ ಶಾಹಿದ್ ಜೊತೆ ನಟಿಸುವ ಅವಕಾಶ ಮಿಸ್ ಮಾಡಿಕೊಂಡರು. ಇದೀಗ ಮತ್ತೊಮ್ಮೆ ಶಾಹಿದ್ ಕಪೂರ್ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ರಶ್ಮಿಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದೆ. ಒಂದು ವೇಳೆ ನಿಜವೇ ಆಗಿದ್ದರೆ ಮತ್ತೊಂದು ಹಿಂದಿ ಸಿನಿಮಾ ರಶ್ಮಿಕಾ ಲಿಸ್ಟ್‌ಗೆ ಸೇರಲಿದೆ. 

ತನ್ನ ಫೇವರೆಟ್ ಕ್ರಿಕೆಟರ್ ಹಾಗೂ IPL ತಂಡ ಯಾವುದೆಂದು ಬಹಿರಂಗ ಪಡಿಸಿದ ರಶ್ಮಿಕಾ ಮಂದಣ್ಣ

ವಿಕ್ಕಿ ಕೌಶಲ್ ಜೊತೆ ರಶ್ಮಿಕಾ ರೊಮ್ಯಾನ್ಸ್  

ಛಾವಾ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಮಹಾನ್ ಯೋಧ ರಾಜ ಛತ್ರಪತಿ ಶಿವಾಜಿ ಮಹಾರಾಜ್, ಹಿರಿಯ ಪುತ್ರ ಛತ್ರಪತಿ ಸಂಭಾಜಿ ಮಹಾರಾಜ್ ಕುರಿತು ಇರುವ ಸಿನಿಮಾ ಇದಾಗಿದೆ ಎನ್ನಲಾಗಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ಕಾಣಿಸಿಕೊಳ್ಳುತ್ತಿದ್ದಾರೆ. ಪತ್ನಿಯ ಪಾತ್ರಕ್ಕೆ ರಶ್ಮಿಕಾ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಈಗಾಗಲೇ ರಶ್ಮಿಕಾ ಈ ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸಿನಿಮಾದಲ್ಲಿ 'ಸಂಭಾಜಿ ಮಹಾರಾಜರ ಶೌರ್ಯ, ತ್ಯಾಗ ಮತ್ತು ಯುದ್ಧಗಳನ್ನು ಗೆಲ್ಲುವ ತಂತ್ರಗಳ ಬಗ್ಗೆ ಇದ್ದರೂ ಗಂಡ ಮತ್ತು ಹೆಂಡತಿ ನಡುವಿನ ಭಾವನಾತ್ಮಕ ಪ್ರೇಮಕಥೆಯನ್ನು ಸಹ ಒಳಗೊಂಡಿದೆ' ಎಂದು ಮೂಲಗಳು ತಿಳಿಸಿವೆ.  

click me!